Homeಮುಖಪುಟ'ಜನರಲ್ ಬೋಗಿ' ಕಡಿಮೆ ಮಾಡಿ, 'ಗಣ್ಯರ ರೈಲು'ಗಳನ್ನು ಪ್ರಚಾರ ಮಾಡುತ್ತಿರುವ ಮೋದಿ: ರಾಹುಲ್ ಗಾಂಧಿ

‘ಜನರಲ್ ಬೋಗಿ’ ಕಡಿಮೆ ಮಾಡಿ, ‘ಗಣ್ಯರ ರೈಲು’ಗಳನ್ನು ಪ್ರಚಾರ ಮಾಡುತ್ತಿರುವ ಮೋದಿ: ರಾಹುಲ್ ಗಾಂಧಿ

- Advertisement -
- Advertisement -

ಕಿಕ್ಕಿರಿದ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಜನರು ಶೌಚಾಲಯದೊಳಗೆ ಮಲಗಿರುವ ವೀಡಿಯೊವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. “ನಾವು ಸಾಮಾನ್ಯ ಜನರನ್ನು ಉಳಿಸಲು ಬಯಸಿದರೆ, ಅವರನ್ನು (ಬಿಜೆಪಿಯನ್ನು) ತೆಗೆದುಹಾಕಬೇಕಾಗಿದೆ” ಎಂದು ಹೇಳಿದರು.

ಈ  ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, “ನರೇಂದ್ರ ಮೋದಿಯವರ ಆಡಳಿತದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವುದು ಒಂದು ಶಿಕ್ಷೆಯಾಗಿದೆ. ಸಾಮಾನ್ಯ ಜನರ ರೈಲುಗಳ ಜನರಲ್ ಕೋಚ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಕೇವಲ ‘ಗಣ್ಯ ರೈಲು’ಗಳನ್ನು ಪ್ರಚಾರ ಮಾಡುತ್ತಿರುವ ಮೋದಿ ಸರ್ಕಾರದಲ್ಲಿ ಪ್ರತಿ ವರ್ಗದ ಪ್ರಯಾಣಿಕರು ಕಿರುಕುಳ ಅನುಭವಿಸುತ್ತಿದ್ದಾರೆ. ದೃಢೀಕೃತ ಟಿಕೆಟ್ ಪಡೆದ ನಂತರವೂ ಜನರು ತಮ್ಮ ಆಸನಗಳಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ; ಸಾಮಾನ್ಯ ಜನರು ನೆಲದ ಮೇಲೆ ಪ್ರಯಾಣಿಸಲು ಮತ್ತು ಶೌಚಾಲಯಗಳಲ್ಲಿ ಅಡಗಿಕೊಳ್ಳಲು ಬಲವಂತ ಪಡಿಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

“ಮೋದಿ ಸರ್ಕಾರವು ತನ್ನ ನೀತಿಗಳ ಮೂಲಕ ರೈಲ್ವೆಯನ್ನು ದುರ್ಬಲಗೊಳಿಸಲು ಮತ್ತು ಅದನ್ನು ‘ಅಸಮರ್ಥ’ ಎಂದು ಸಾಬೀತುಪಡಿಸಲು ಬಯಸುತ್ತದೆ. ಈ ಮೂಲಕ ರೈಲ್ವೆಯನ್ನು ತನ್ನ ಸ್ನೇಹಿತರಿಗೆ ಮಾರಾಟ ಮಾಡಲು ವಿನಾಯಿತಿ ಪಡೆಯಬಹುದು. ನಾವು ಸಾಮಾನ್ಯರ ಪ್ರಯಾಣವನ್ನು ಉಳಿಸಬೇಕಾದರೆ, ರೈಲ್ವೆಯನ್ನು ಹಾಳು ಮಾಡುವಲ್ಲಿ ನಿರತರಾಗಿರುವ ಮೋದಿ ಸರ್ಕಾರವನ್ನು ತೆಗೆದುಹಾಕಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಅಸಹಾಯಕ ಪ್ರಯಾಣಿಕರು ರೈಲಿನ ನೆಲದಲ್ಲಿ ಮಲಗುವ ಅಥವಾ ಟಿಕೆಟ್ ಇಲ್ಲದ ಪ್ರಯಾಣಿಕರು ಹವಾನಿಯಂತ್ರಿತ ಕೋಚ್‌ಗಳನ್ನು ಹೈಜಾಕ್ ಮಾಡುವ ವೀಡಿಯೊಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಅಂತರ್ಜಾಲವು ಅಂತಹ ದೃಶ್ಯಗಳಿಂದ ತುಂಬಿದೆ ಮತ್ತು ಜನರು ಇಂತಹ ಘಟನೆಗಳ ಹಿಂದಿನ ತಾರ್ಕಿಕತೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

2024ರ ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಗೆ ಕೆಲವು ದಿನಗಳ ಮೊದಲು ಪಿಎಂ ಮೋದಿ ವಿರುದ್ಧ ರಾಹುಲ್ ಗಾಂಧಿ ಹೊಸ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ; ಕೇಜ್ರಿವಾಲ್ ದೇಹದಲ್ಲಿ 300 ದಾಟಿದ ಸಕ್ಕರೆ ಮಟ್ಟ: ತಿಹಾರ್ ಜೈಲಿನ ಹೊರಗೆ ‘ಇನ್ಸುಲಿನ್’ ಹಿಡಿದು ಪ್ರತಿಭಟಿಸಿದ ಎಎಪಿ ನಾಯಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...