ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸಿಟ್ ಪೋಲ್ ಫಲಿತಾಂಶವನ್ನು ತಿರಸ್ಕರಿಸಿದ್ದು, ಇದು ಕಲ್ಪನೆಯ ಸಮೀಕ್ಷೆ ಮತ್ತು ಮೋದಿಯ ಸಮೀಕ್ಷೆ ಎಂದು ಹೇಳಿದ್ದಾರೆ. ಇದು ಎಕ್ಸಿಟ್ ಪೋಲ್ ಅಲ್ಲ, ಇದು ಮೋದಿ ಮೀಡಿಯಾ ಸಮೀಕ್ಷೆ. ಇದು ಅವರ ಕಲ್ಪನೆಯ ಸಮೀಕ್ಷೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ ಐತಿಹಾಸಿಕ ಗೆಲುವಿನ ಬಗ್ಗೆ ಅಂಕಿ-ಅಂಶಗಳನ್ನು ಬಹಿರಂಗಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಇಂಡಿಯಾ ಮೈತ್ರಿಕೂಟಕ್ಕೆ ಎಷ್ಟು ಸೀಟುಗಳು ಸಿಗುತ್ತದೆ ಎಂದು ಕೇಳಿದಾಗ, ನೀವು ಸಿಧು ಮೂಸ್ ವಾಲಾ ಅವರ 295 ಹಾಡು ಕೇಳಿದ್ದೀರಾ? 295 ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
#WATCH | Congress leader Rahul Gandhi says, "It is not exit poll, it is Modi media poll. It is his fantasy poll."
When asked about the number of seats for INDIA alliance, he says, "Have you heard Sidhu Moose Wala's song 295? 295." pic.twitter.com/YLRYfM4xwW
— ANI (@ANI) June 2, 2024
ಶಿವಸೇನಾ (ಉದ್ಧವ್ ಬಣ) ಸಂಸದ ಸಂಜಯ್ ರಾವುತ್ ಎಕ್ಸಿಟ್ ಪೋಲ್ ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಕಾರ್ಪೊರೇಟ್ ಆಟ ಮತ್ತು ವಂಚನೆ’ ಎಂದು ಬಣ್ಣಿಸಿದ್ದು, ಸಮೀಕ್ಷೆ ನಡೆಸುವ ಮಾಧ್ಯಮ ಕಂಪನಿಗಳ ಮೇಲೆ ಒತ್ತಡವಿದೆ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್, ಪ್ರತಿಪಕ್ಷದ ಇಂಡಿಯಾ ಮೈತ್ರಿಕೂಟವು 543 ಸದಸ್ಯ ಬಲದ ಲೋಕಸಭೆಯಲ್ಲಿ 295 ರಿಂದ 310 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ. ಈ ಕಂಪನಿಗಳು ಎಕ್ಸಿಟ್ ಪೋಲ್‌ಗಳನ್ನು ಉಚಿತವಾಗಿ ನಡೆಸುತ್ತವೆಯೇ? ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಇಂಡಿಯಾ ಮೈತ್ರಿಕೂಟವು 543 ಸದಸ್ಯ ಬಲದ ಲೋಕಸಭೆಯಲ್ಲಿ 295 ರಿಂದ 310 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ. ಇದು ಎಕ್ಸಿಟ್ ಪೋಲ್ ಅಲ್ಲ ಜನರ ಸಮೀಕ್ಷೆಯ ಮೂಲಕ ಅಂಕಿಅಂಶಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಕರ್ನಾಟಕ ರಾಜ್ಯಗಳು ಮಹಾರಾಷ್ಟ್ರದೊಂದಿಗೆ ದೇಶದಲ್ಲಿ ಬದಲಾವಣೆ ತರಲಿವೆ. ನಮಗೆ ಎಕ್ಸಿಟ್ ಪೋಲ್‌ಗಳ ಅಗತ್ಯವಿಲ್ಲ, ನಾವು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ನೆಲದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಇಂಡಿಯಾ ಮೈತ್ರಿಕೂಟದ ಯುಪಿಯಲ್ಲಿ 80 ರಲ್ಲಿ 35 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ರಾಷ್ಟ್ರೀಯ ಜನತಾದಳ ಬಿಹಾರದಲ್ಲಿ 40ರಲ್ಲಿ 16 ಸ್ಥಾನಗಳನ್ನು ಗೆಲ್ಲಲಿದೆ ಸಂಜಯ್ ರಾವತ್ ಹೇಳಿದ್ದಾರೆ.
ಎಕ್ಸಿಟ್ ಪೋಲ್‌ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು “ಸಂಯೋಜಿತ” ಮಾಡಿದ್ದಾರೆ. ಇವೆಲ್ಲವೂ ಅವರು ಮಾಸ್ಟರ್ ಮೈಂಡ್ ಮಾಡುತ್ತಿರುವ ಮಾನಸಿಕ ಆಟಗಳಾಗಿವೆ, ಆದರೆ ನಿಜವಾದ ಫಲಿತಾಂಶಗಳು ತುಂಬಾ ಭಿನ್ನವಾಗಿರುತ್ತವೆ ಎಂದು ಎಕ್ಸಿಟ್ ಪೋಲ್ ಫಲಿತಾಂಶಗಳ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಇದನ್ನು ಓದಿ: ಎಕ್ಸಿಟ್ ಪೋಲ್‌ಗಳನ್ನು ಮೋದಿಯೇ ಸಂಯೋಜಿಸಿದ್ದಾರೆ, ಫಲಿತಾಂಶ ಭಿನ್ನವಾಗಿರಲಿದೆ: ಕಾಂಗ್ರೆಸ್


