ಕಾಂಗ್ರೆಸ್ ಪಕ್ಷವು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಎಂದಿಗೂ ತಿರಸ್ಕರಿಸಿಲ್ಲ. ವಿವಿಪ್ಯಾಟ್ ಸುಧಾರಣೆಗಾಗಿ ಆಗ್ರಹಿಸಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.
ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿಇವಿಎಂಗಳ ಬಗ್ಗೆ ಪ್ರತಿಪಕ್ಷಗಳ ಮೌನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚಿದಂಬರಂ, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನಾವು ಇವಿಎಂಗಳನ್ನು ತಿರಸ್ಕರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದಯವಿಟ್ಟು ಪ್ರಣಾಳಿಕೆಯನ್ನು ಓದಿ, ನಾವು ಹೇಳುವುದೇನೆಂದರೆ, ವಿವಿಪಿಎಟಿ ಸ್ಲಿಪ್ ನಾವು ಓದುವ ಸಲುವಾಗಿ ಸುಮಾರು 4-5 ಸೆಕೆಂಡುಗಳ ಕಾಲ ಪ್ರದರ್ಶನಗೊಂಡು ಮತ್ತೆ ಸ್ಲಿಪ್ ಪೆಟ್ಟಿಗೆಯೊಳಗೆ ಬೀಳುತ್ತದೆ. VVPAT ಬಾಕ್ಸ್‌ನಲ್ಲಿ ಸ್ವಯಂಚಾಲಿತವಾಗಿ ಸ್ಲಿಪ್ ಬೀಳುವ ಬದಲು, ಮತದಾರರು ಅದನ್ನು ಸ್ವೀಕರಿಸಿ, ಅದನ್ನು ನೋಡಿ ನಂತರ ಅದನ್ನು ಮತ್ತೆ ಪೆಟ್ಟಿಗೆಗೆ ಹಾಕಬೇಕು. ಈ ಸುಧಾರಣೆಯಿಂದ ಇವಿಎಂ-ವಿವಿಪ್ಯಾಟ್ ವ್ಯವಸ್ಥೆಯ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗಲೂ ಇವಿಎಂಗಳ ಬಗ್ಗೆ ಅಭಿಪ್ರಾಯ ಕೇಳಿದರೆ, ಹತ್ತರಲ್ಲಿ ನಾಲ್ವರು ಅಥವಾ ಹತ್ತರಲ್ಲಿ ಮೂವರು ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ ಮತ್ತು ಈ ಅನುಮಾನ ನ್ಯಾಯೋಚಿತವೋ ಅಲ್ಲವೋ ಎಂದು ನಾನು ಹೇಳುತ್ತಿಲ್ಲ, ನನ್ನ ಮಟ್ಟಿಗೆ, ನಾನು ಎಂದಿಗೂ ಇವಿಎಂಗಳನ್ನು ದೂಷಿಸಿಲ್ಲ ಎಂದು ಹೇಳಿದ್ದಾರೆ.
ಇವಿಎಂ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವುದು ಕಾಂಗ್ರೆಸ್ ಪಕ್ಷದ ನಿಲುವು. ಪಕ್ಷದ ಕೆಲ ನಾಯಕರು ಇವಿಎಂ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ, ಆದರೆ ಅದು ಪಕ್ಷದ ನಿಲುವಲ್ಲ ಎಂದು ಚಿದಂಬರಂ ಹೇಳಿದ್ದಾರೆ.
ದೆಹಲಿಯಲ್ಲಿ ಹೊಸದಾಗಿ ಚುನಾಯಿತ ಸಂಸದರು ಮತ್ತು ಎನ್‌ಡಿಎ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಚುನಾವಣಾ ವೇಳೆ ಇವಿಎಂಗಳು ಮತ್ತು ಚುನಾವಣಾ ಆಯೋಗದ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಫಲಿತಾಂಶಗಳು ಅವರು ನಿರೀಕ್ಷಿಸಿದಂತೆ ಬರದಿದ್ದರೆ ಅವರು ದೇಶಾದ್ಯಂತ ಬೆಂಕಿ ಹಚ್ಚಲು ಬಯಸುತ್ತಿದ್ದಾರೆ. ಜೂನ್ 4ರ ಸಂಜೆಯ ವೇಳೆಗೆ ಇವಿಎಂಗಳು ಅವುಗಳನ್ನು ನಿಶ್ಯಬ್ದಗೊಳಿಸಿದ್ದವು ಎಂದು ಪ್ರತಿಪಕ್ಷಗಳ ನಿರೀಕ್ಷಿತ ಪ್ರದರ್ಶನಕ್ಕಿಂತ ಉತ್ತಮವಾದ ಪ್ರದರ್ಶನವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಪ್ರಧಾನಿ ಹೇಳಿದ್ದಾರೆ.
ಇದನ್ನು ಓದಿ: ‘ತಾಯಿಯ ಗೌರವಕ್ಕಾಗಿ ಸಾವಿರ ಉದ್ಯೋಗಗಳನ್ನಾದರೂ ಕಳೆದುಕೊಳ್ಳುತ್ತೇನೆ..’ ಕಂಗನಾ ಕಪಾಳಮೋಕ್ಷದ ಕುರಿತು ಕೌರ್ ಪ್ರತಿಕ್ರಿಯೆ


