Homeಮುಖಪುಟಕಾಂಗ್ರೆಸ್ ವಿವಿಪ್ಯಾಟ್‌ ಸುಧಾರಣೆ ನಿಲುವು ಹೊಂದಿದೆ ಹೊರತು ಇವಿಎಂಗಳನ್ನು ತಿರಸ್ಕರಿಸಿಲ್ಲ: ಪಿ ಚಿದಂಬರಂ ಸ್ಪಷ್ಟನೆ

ಕಾಂಗ್ರೆಸ್ ವಿವಿಪ್ಯಾಟ್‌ ಸುಧಾರಣೆ ನಿಲುವು ಹೊಂದಿದೆ ಹೊರತು ಇವಿಎಂಗಳನ್ನು ತಿರಸ್ಕರಿಸಿಲ್ಲ: ಪಿ ಚಿದಂಬರಂ ಸ್ಪಷ್ಟನೆ

- Advertisement -
- Advertisement -

ಕಾಂಗ್ರೆಸ್‌ ಪಕ್ಷವು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಎಂದಿಗೂ ತಿರಸ್ಕರಿಸಿಲ್ಲ.  ವಿವಿಪ್ಯಾಟ್ ಸುಧಾರಣೆಗಾಗಿ ಆಗ್ರಹಿಸಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.

ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿಇವಿಎಂಗಳ ಬಗ್ಗೆ ಪ್ರತಿಪಕ್ಷಗಳ ಮೌನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚಿದಂಬರಂ, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನಾವು ಇವಿಎಂಗಳನ್ನು ತಿರಸ್ಕರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ದಯವಿಟ್ಟು ಪ್ರಣಾಳಿಕೆಯನ್ನು ಓದಿ, ನಾವು ಹೇಳುವುದೇನೆಂದರೆ, ವಿವಿಪಿಎಟಿ ಸ್ಲಿಪ್ ನಾವು ಓದುವ ಸಲುವಾಗಿ ಸುಮಾರು 4-5 ಸೆಕೆಂಡುಗಳ ಕಾಲ ಪ್ರದರ್ಶನಗೊಂಡು ಮತ್ತೆ ಸ್ಲಿಪ್ ಪೆಟ್ಟಿಗೆಯೊಳಗೆ ಬೀಳುತ್ತದೆ. VVPAT ಬಾಕ್ಸ್‌ನಲ್ಲಿ ಸ್ವಯಂಚಾಲಿತವಾಗಿ ಸ್ಲಿಪ್ ಬೀಳುವ ಬದಲು, ಮತದಾರರು ಅದನ್ನು ಸ್ವೀಕರಿಸಿ, ಅದನ್ನು ನೋಡಿ ನಂತರ ಅದನ್ನು ಮತ್ತೆ ಪೆಟ್ಟಿಗೆಗೆ ಹಾಕಬೇಕು. ಈ ಸುಧಾರಣೆಯಿಂದ ಇವಿಎಂ-ವಿವಿಪ್ಯಾಟ್ ವ್ಯವಸ್ಥೆಯ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಲೂ ಇವಿಎಂಗಳ ಬಗ್ಗೆ ಅಭಿಪ್ರಾಯ ಕೇಳಿದರೆ, ಹತ್ತರಲ್ಲಿ ನಾಲ್ವರು ಅಥವಾ ಹತ್ತರಲ್ಲಿ ಮೂವರು ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ ಮತ್ತು ಈ ಅನುಮಾನ ನ್ಯಾಯೋಚಿತವೋ ಅಲ್ಲವೋ ಎಂದು ನಾನು ಹೇಳುತ್ತಿಲ್ಲ, ನನ್ನ ಮಟ್ಟಿಗೆ, ನಾನು ಎಂದಿಗೂ ಇವಿಎಂಗಳನ್ನು ದೂಷಿಸಿಲ್ಲ ಎಂದು ಹೇಳಿದ್ದಾರೆ.

ಇವಿಎಂ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವುದು ಕಾಂಗ್ರೆಸ್ ಪಕ್ಷದ ನಿಲುವು. ಪಕ್ಷದ ಕೆಲ ನಾಯಕರು ಇವಿಎಂ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ, ಆದರೆ ಅದು ಪಕ್ಷದ ನಿಲುವಲ್ಲ ಎಂದು ಚಿದಂಬರಂ ಹೇಳಿದ್ದಾರೆ.

ದೆಹಲಿಯಲ್ಲಿ ಹೊಸದಾಗಿ ಚುನಾಯಿತ ಸಂಸದರು ಮತ್ತು ಎನ್‌ಡಿಎ ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಚುನಾವಣಾ ವೇಳೆ ಇವಿಎಂಗಳು ಮತ್ತು ಚುನಾವಣಾ ಆಯೋಗದ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಫಲಿತಾಂಶಗಳು ಅವರು ನಿರೀಕ್ಷಿಸಿದಂತೆ ಬರದಿದ್ದರೆ ಅವರು ದೇಶಾದ್ಯಂತ ಬೆಂಕಿ ಹಚ್ಚಲು ಬಯಸುತ್ತಿದ್ದಾರೆ. ಜೂನ್ 4ರ ಸಂಜೆಯ ವೇಳೆಗೆ ಇವಿಎಂಗಳು ಅವುಗಳನ್ನು ನಿಶ್ಯಬ್ದಗೊಳಿಸಿದ್ದವು ಎಂದು ಪ್ರತಿಪಕ್ಷಗಳ ನಿರೀಕ್ಷಿತ ಪ್ರದರ್ಶನಕ್ಕಿಂತ ಉತ್ತಮವಾದ ಪ್ರದರ್ಶನವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಪ್ರಧಾನಿ ಹೇಳಿದ್ದಾರೆ.

ಇದನ್ನು ಓದಿ: ‘ತಾಯಿಯ ಗೌರವಕ್ಕಾಗಿ ಸಾವಿರ ಉದ್ಯೋಗಗಳನ್ನಾದರೂ ಕಳೆದುಕೊಳ್ಳುತ್ತೇನೆ..’ ಕಂಗನಾ ಕಪಾಳಮೋಕ್ಷದ ಕುರಿತು ಕೌರ್ ಪ್ರತಿಕ್ರಿಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು| ಜಾತಿ ತಾರತಮ್ಯಕ್ಕೆ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಶಿಕ್ಷಕನ ಬಂಧನ; ಸಹಪಾಠಿಗಳ ವಿರುದ್ಧ ಕೇಸ್‌ ದಾಖಲು

ಕೊಯಮತ್ತೂರಿನ ಸರ್ಕಾರಿ ಅನುದಾನಿತ ಶಾಲೆಯೊಂದರಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, ಸಹಪಾಠಿಗಳಿಂದ ಜಾತಿ ಆಧಾರಿತ ಕಿರುಕುಳಕ್ಕೆ ಒಳಗಾದ ನಂತರ, ಅಕ್ಟೋಬರ್ 21, ಬುಧವಾರದಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ...

ತಮಿಳುನಾಡು ಮುಖ್ಯ ಚುನಾವಣಾಧಿಕಾರಿಯ ಸರ್ವಪಕ್ಷ ಸಭೆಯಿಂದ ಹೊರನಡೆದ ಟಿವಿಕೆ, ಡಿಎಂಕೆ ಸೇರಿದಂತೆ ಒಂಬತ್ತು ಪಕ್ಷಗಳು : ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಪ್ರಮುಖ ವಿರೋಧ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದಂತೆ ಒಂಬತ್ತು ರಾಜಕೀಯ ಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...

ಉತ್ತರ ಪ್ರದೇಶ: ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆ ವೀಕ್ಷಿಸುತ್ತಿದ್ದ ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; ಆರು ಜನರ ವಿರುದ್ಧ ಪ್ರಕರಣ

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ದಲಿತ ಸಮುದಾಯದ ಪುರುಷರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ನಾಲ್ವರು...

‘ಮತ್ತೊಂದು ಗಾಲ್ವಾನ್ ಸಂಭವಿಸುತ್ತಿದೆಯೇ?’: ಅರುಣಾಚಲದಲ್ಲಿ ಚೀನಾ ಸೇನೆ ಜೊತೆಗಿನ ಮುಖಾಮುಖಿ ವರದಿ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಅರುಣಾಚಲ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಮುಖಾಮುಖಿ ಮುಂದುವರಿದಿರುವ ವರದಿಗಳ ಕುರಿತು ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಶುಕ್ರವಾರ (ಅ.23) ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಗಡಿ ಭದ್ರತೆ ಮತ್ತು...

ಎಸ್‌ಐಆರ್ ವಿರುದ್ಧ ಒಂದಾದ ದಲಿತ, ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳು: ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರಾಷ್ಟ್ರಧ್ವಜದೊಂದಿಗೆ ಜಾಥಾ

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ; ಬೆಂಗಳೂರಿನಲ್ಲಿ ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಗ್ಗಟ್ಟಿನ ಹೋರಾಟ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರದ್ದುಗೊಳಿಸಬೇಕು, ಮುಖ್ಯ ಚುನಾವಣಾ...

ಎಸ್‌ಐಆರ್ ವಿರುದ್ಧ ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ: ಚುನಾವಣಾ ಆಯೋಗದತ್ತ ಮೆರವಣಿಗೆ, ಹಲವರನ್ನು ವಶಕ್ಕೆ ಪಡೆದ ಪೊಲೀಸರು 

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂದು ಆರೋಪಿಸಿ, ದೆಹಲಿಯಲ್ಲಿ ಶುಕ್ರವಾರ ನಡೆದ ‘ಪೀಪಲ್ ಅಗೇನ್ಸ್ಟ್ ಎಸ್‌ಐಆರ್’ ಪ್ರತಿಭಟನಾ...

“ಭಿನ್ನಾಭಿಪ್ರಾಯ ಅಪರಾಧವಲ್ಲ”: ಬಾಬರಿ ಮಸೀದಿ ತೀರ್ಪಿನ ವಿರುದ್ಧ ಪೋಸ್ಟರ್ ಹಾಕಿದ್ದ 13 ಜನರ ಮೇಲಿನ ದೇಶದ್ರೋಹ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಮಂಗಳೂರು: ಸುಪ್ರೀಂ ಕೋರ್ಟ್‌ನ ಬಾಬರಿ ಮಸೀದಿ ತೀರ್ಪಿನ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪೋಸ್ಟರ್‌ಗಳನ್ನು ಹಾಕಿದ್ದ ಆರೋಪದ ಮೇಲೆ 13 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಸರ್ಕಾರದ ಅಥವಾ ನ್ಯಾಯಾಲಯದ...

ಯುಪಿ ಎಂಎಲ್‌ಸಿ ಚುನಾವಣೆ: ‘ಕಳ್ಳಮತದಾನ’ ಹಾಗೂ ‘ಬೂತ್ ಕ್ಯಾಪ್ಚರಿಂಗ್’ ರಂಪಾಟ; ಬಿಜೆಪಿ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಎಸ್‌ಪಿ ಗಂಭೀರ ಆರೋಪ!

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಎಂಎಲ್‌ಸಿ (ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ) ಚುನಾವಣೆಯ ಮತದಾನದ ವೇಳೆ ಆಡಳಿತಾರೂಢ ಬಿಜೆಪಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳು ಸಾಲು ಸಾಲು ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ...

ತಮಿಳುನಾಡು| ದಲಿತ ವಿದ್ಯಾರ್ಥಿ ಸಾವು; ಶಾಲೆಯಲ್ಲಿ ಜಾತಿ ತಾರತಮ್ಯ ಎಂದು ಆರೋಪಿಸಿದ ಪೋಷಕರು

ತಮಿಳುನಾಡಿನ ಕೊಯಮತ್ತೂರಿನಲ್ಲಿ 11ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬ ಶಾಲೆಯ ಪೂಜಾ ರಜೆ ಮುಗಿಸಿ ಮರಳಿ ಶಾಲೆಗೆ ತೆರಳಿದ ದಿನವೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶಾಲೆಯಲ್ಲಿ ತನ್ನ ಮಗ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದ...

ಅರುಣಾಚಲ ಪ್ರದೇಶದಲ್ಲಿ ಚೀನಾ ಜೊತೆ ಮುಂದುವರಿದ ಮುಖಾಮುಖಿ: ಮೋದಿ ಸರ್ಕಾರದ ‘ಕಿವುಡಗೊಳಿಸುವ ಮೌನ’ವನ್ನು ಟೀಕಿಸಿದ ಕಾಂಗ್ರೆಸ್

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾದ ಸೈನಿಕರೊಂದಿಗೆ ಹಲವು ಸ್ಥಳಗಳಲ್ಲಿ ಮುಖಾಮುಖಿ ಮುಂದುವರಿದಿದೆ ಎಂಬ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರ ಹೇಳಿಕೆಯ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ...