ಪಂಜಾಬ್ ಪೊಲೀಸ್ ಇಲಾಖೆಯಲ್ಲಿ 10,000 ಕ್ಕೂ ಹೆಚ್ಚು ಪೊಲೀಸರನ್ನು ಏಕಕಾದಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ರಾಜ್ಯದ ಉನ್ನತ ಪೊಲೀಸರೊಂದಿಗೆ ಸಭೆ ನಡೆಸಿದ ನಂತರ ಘೋಷಿಸಿದರು.
“ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು ಭ್ರಷ್ಟ ಅಥವಾ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದರೆ ಆ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಮಾನ್ ಇದೆ ಸಂದರ್ಭದಲ್ಲಿ ಹೇಳಿದರು.
“ಮುಖ್ಯಮಂತ್ರಿಯಾಗಿರುವ ನಾನು ಯಾವುದೇ ಜಿಲ್ಲೆಯಲ್ಲಿ ಯಾವುದೇ ಕಾಮಗಾರಿಗೆ ಹಣ ಅಥವಾ ಕಮಿಷನ್‌ಗೆ ಬೇಡಿಕೆ ಇಟ್ಟರೆ, ಯಾವುದೇ ಜಿಲ್ಲೆಯಲ್ಲಿ ಅಕ್ರಮ ಎಸಗಿದರೆ ಅದಕ್ಕೆ ಜಿಲ್ಲಾಧಿಕಾರಿ ಮತ್ತು ಎಸ್‌ಎಸ್‌ಪಿಯನ್ನೇ ಹೊಣೆ ಮಾಡಲಾಗುವುದು. ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ” ಎಂದು ಅವರು ಹೇಳಿದರು.
ರಾಜ್ಯದಲ್ಲಿ ಪೊಲೀಸ್ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು; ಮುಂದಿನ ದಿನಗಳಲ್ಲಿ ಪಂಜಾಬ್ ಪೊಲೀಸರು ವಿವಿಧ ಹಂತಗಳಲ್ಲಿ 10,000 ಹೊಸ ನೇಮಕಾತಿಗಳನ್ನು ಮಾಡಲಿದ್ದೇವೆ ಎಂದು ಅವರು ಹೇಳಿದರು.
ಇನ್ನೂ ಕೆಳಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಲವು ಸ್ಥಳಗಳಿಂದ ದೂರುಗಳು ಬಂದಿವೆ. ಉನ್ನತ ಮಟ್ಟದ ಎಮ್ಮ ‘ಮುನ್ಷಿಗಳು ಮತ್ತು ಹವಾಲ್ದಾರ್’ಗಳನ್ನು ಬದಲಾಯಿಸಲು ಡಿಪಿಜಿಯನ್ನು ಕೇಳಲಾಗಿದೆ ಎಂದು ಅವರು ಹೇಳಿದರು.
ಡ್ರಗ್ ಡೀಲರ್ ಸಿಕ್ಕಿಬಿದ್ದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆದೇಶ ನೀಡಲಾಗಿದೆ ಎಂದು ಹೇಳಿದರು.
“ಪಂಜಾಬ್‌ನಿಂದ ಮಾದಕ ವ್ಯಸನದ ಸಮಸ್ಯೆಯನ್ನು ತೊಡೆದುಹಾಕಲು ಪಂಜಾಬ್ ಪೊಲೀಸರಿಗೆ ಆದೇಶಗಳನ್ನು ನೀಡಲಾಗಿದೆ, ಇದನ್ನು ಒಂದು ಮಿಷನ್ ಆಗಿ ಮಾಡಲಾಗುತ್ತದೆ ಮತ್ತು ಯುದ್ಧದ ಆಧಾರದ ಮೇಲೆ ಕೆಲಸ ಮಾಡಲಾಗುತ್ತದೆ” ಎಂದು ಮಾನ್ ಹೇಳಿದರು.
ಸಾರ್ವಜನಿಕರಿಗೆ ಪಾರದರ್ಶಕ, ಸ್ಪಂದಿಸುವ ಮತ್ತು ಪರಿಣಾಮಕಾರಿ ಆಡಳಿತ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಭಗವಂತ್ ಮಾನ್ ಹೇಳಿದರು.
ಇದನ್ನೂ ಓದಿ; ಇಸ್ರೇಲಿ ಪಡೆಗಳಿಂದ ರಾಫಾ ಮೇಲೆ ಆಕ್ರಮಣ; ನಿರಾಶ್ರಿತರ ಶಿಬಿರಗಳಲ್ಲಿ ತಂಗಿದ್ದ 17 ಜನರ ದುರ್ಮರಣ


