- Advertisement -
- Advertisement -
ಪಂಜಾಬ್‌ನ ಫಿರೋಜ್‌ಪುರ ಕೇಂದ್ರ ಕಾರಾಗೃಹದ ಹೊರಗೆ ಶುಕ್ರವಾರ (ಜೂನ್ 21) ನಡೆದ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ನಾಯಕ ಲಲಿತ್ ಪಸ್ಸಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಕೂಡಲೇ ಪಸ್ಸಿ ಅವರನ್ನು ಲೂಧಿಯಾನದ ದಯಾನಂದ್ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಫಿರೋಝ್ ಪುರ್ ಪೊಲೀಸ್ ವರಿಷ್ಠಾಧಿಕಾರಿ ರಣಧೀರ್ ಕುಮಾರ್, “ಫಿರೋಝ್ ಪುರ್ ನಗರದಲ್ಲಿ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಲಲಿತ್ ಕುಮಾರ್ ಗಾಯಗೊಂಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಒಡಿಶಾ ಕಾಂಗ್ರೆಸ್ ಕಚೇರಿಗೆ ದಾಳಿ: ರಾಜ್ಯಾಧ್ಯಕ್ಷರ ಮೇಲೆ ಮಸಿ ಎರಚಿದ ದುಷ್ಕರ್ಮಿಗಳು


