ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಆರು ಜನರನ್ನು ಮೇಘಾಲಯ ಪೊಲೀಸರು ಬಂಧಿಸಿದ್ದಾರೆ, ಶಾಲೆಯ ಆವರಣದಲ್ಲಿ ಹಲವಾರು ಪುರುಷರು ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ಈ ಘಟನೆ ಮಂಗಳವಾರ ಡಬ್ಲ್ಯುಜಿಹೆಚ್‌ನ ದಾಡೆಂಗ್ಗ್ರೆಯಲ್ಲಿರುವ ದಮಲ್ ಅಸಿಮ್ ಪೊಲೀಸ್ ಠಾಣೆ ವ್ಯಾಪ್ತಿಯ ಲೋವರ್ ಟೆಕ್ಸಾಗ್ರೆಯಲ್ಲಿ ನಡೆದಿದೆ.
ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ದಪ್ಪ ಕೋಲುಗಳಿಂದ ಕೆಲ ಪುರುಷರ ಗುಂಪು ಮಹಿಳೆಯನ್ನು ಥಳಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸಿದೆ. ವೀಡಿಯೊದಲ್ಲಿ ಹಲವಾರು ಜನರು ಮೂಕ ಪ್ರೇಕ್ಷಕರಾಗಿದ್ದಾರೆ ಮತ್ತು ಮಹಿಳೆಗೆ ಸಹಾಯ ಮಾಡಲು ಪ್ರಯತ್ನಿಸಲಿಲ್ಲ.
ಈ ಘಟನೆಯ ವೈರಲ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಆರು ಮಂದಿಯನ್ನು ಕೇಸು ದಾಖಲಿಸಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ಪುರುಷರನ್ನು ಬಂಧಿಸಲಾಗಿದೆ ಮತ್ತು ತುರಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಬ್ಲ್ಯುಜಿಹೆಚ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಆರೋಪಿಗಳ ವಿರುದ್ಧ 324/326/34 ಐಪಿಸಿ (ಭಾರತೀಯ ದಂಡ ಸಂಹಿತೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ” ಎಂದು ಎಸ್‌ಪಿ ಹೇಳಿದರು.
ಘಟನೆಯನ್ನು ಸ್ಥಳೀಯ ಶಾಸಕಿ ರೂಪಾ ಎಂ ಮಾರಕ್ ಖಂಡಿಸಿದ್ದು, ಈ ಬಗ್ಗೆ ವಿವರವಾದ ವರದಿಯನ್ನೂ ಕೋರಿದ್ದಾರೆ.
ಇದನ್ನೂ ಓದಿ; ಖ್ಯಾತ ಬರಹಗಾರ್ತಿ ಅರುಂಧತಿ ರಾಯ್ ಅವರಿಗೆ 2024 ನೇ ಸಾಲಿನ ‘ಪೆನ್ ಪಿಂಟರ್’ ಪ್ರಶಸ್ತಿ


