ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 ನಲ್ಲಿ ಛಾವಣಿಯ ಒಂದು ಭಾಗದ ರಾಡ್‌ಗಳು ಕುಸಿದು ಬಿದ್ದಾಗ ಏನೂ ಮುರಿಯುವ ದೊಡ್ಡ ಶಬ್ದವಿರಲಿಲ್ಲ ಎಂದು ಘಟನೆಯ ಸ್ಥಳದಲ್ಲಿದ್ದ ಕ್ಯಾಬ್ ಚಾಲಕ ಶುಕ್ರವಾರ ತಿಳಿಸಿದ್ದಾರೆ.
ಸ್ಥಳದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ರಾಡ್‌ಗಳು ಬಿದ್ದ ನಂತರವೆ ಘಟನೆ ನಡೆದಿರುವ ಬಗ್ಗೆ ಜನರಿಗೆ ತಿಳಿಯಿತು. ಸ್ಥಳದಲ್ಲಿದ್ದವರು ಸಹಾಯಕ್ಕಾಗಿ ಕೂಗಿಕೊಂಡಿದ್ದರಿಂದ ಗೊಂದಲ ಉಂಟಾಯಿತು ಎಂದು ಅವರು ಹೇಳಿದರು.
ಶುಕ್ರವಾರ ದೆಹಲಿಯಲ್ಲಿ ಭಾರೀ ಮಳೆಯ ನಡುವೆ, ಟರ್ಮಿನಲ್-1 ನಿರ್ಗಮನ ಪ್ರದೇಶದಲ್ಲಿನ ಮೇಲ್ಛಾಣವಣಿಯು ಮುಂಜಾನೆ 5 ಗಂಟೆಯ ಸುಮಾರಿಗೆ ಕುಸಿದು, ಆರು ಮಂದಿ ಗಾಯಗೊಂಡಿದ್ದು; ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೇಲ್ಛಾವಣಿ ಕುಸಿದಿದ್ದರಿಂದ ಟರ್ಮಿನಲ್‌ನ ಪಿಕ್-ಅಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ನಿಲ್ಲಿಸಿದ ಕಾರುಗಳಿಗೆ ಹಾನಿಯಾಗಿದೆ.
ಘಟನೆ ನಡೆದಾಗ ಕಡಿಮೆ ಜನರು ಮತ್ತು ಕಡಿಮೆ ದಟ್ಟಣೆಯಿದ್ದರು ಎಂದು ಸ್ಥಳದಲ್ಲಿದ್ದ ಇನ್ನೊಬ್ಬ ಕ್ಯಾಬ್ ಚಾಲಕ ಹೇಳಿದರು.
ಕರ್ತವ್ಯದಲ್ಲಿದ್ದ ಹಲವಾರು ಸಿಆರ್‌ಪಿಎಫ್ ಸಿಬ್ಬಂದಿ ಕೂಡಲೇ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದ್ದ ಸ್ಥಳೀಯ ಪೊಲೀಸರಿಗೆ ಮತ್ತು ಅಗ್ನಿಶಾಮಕ ಇಲಾಖೆಗೆ ಎಚ್ಚರಿಕೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬೀಮ್‌ಗಳು ತುಂಬಾ ಭಾರವಾಗಿರುವುದರಿಂದ, ನಾವು ಅಗ್ನಿಶಾಮಕ ಇಲಾಖೆಯನ್ನು ತಕ್ಷಣವೇ ‘ಅರ್ಥ್ ಮೂವರ್ಸ್’ ಕಳುಹಿಸಲು ಹೇಳಿದೆವು. ಅಗ್ನಿಶಾಮಕ ಟೆಂಡರ್‌ಗಳು ಮತ್ತು ಅವರ ಅಧಿಕಾರಿಗಳು ಸಹ 5.30 ರ ಸುಮಾರಿಗೆ ಯಂತ್ರಗಳೊಂದಿಗೆ ಸ್ಥಳಕ್ಕೆ ತಲುಪಿದರು” ಎಂದು ಘಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಹೇಳಿದರು.
ಉಪ ಪೊಲೀಸ್ ಕಮಿಷನರ್ (ಐಜಿಐ) ಉಷಾ ರಂಗಣ್ಣಿ ಮಾತನಾಡಿ, ಛಾವಣಿ ಕುಸಿದ ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ಘಟನಾ ಸ್ಥಳದ ಬಳಿ ಯಾರೂ ನಿಲ್ಲದಂತೆ ಖಚಿತಪಡಿಸಿಕೊಳ್ಳಲು ತಂಡಗಳನ್ನು ನಿಯೋಜಿಸಲಾಗಿದೆ.
“ಪೊಲೀಸ್ ಮತ್ತು ಸರ್ಕಾರದ ವಿವಿಧ ತಂಡಗಳು ತನಿಖೆಗಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತವೆ. ನಾವು ಉದ್ದೇಶಕ್ಕಾಗಿ ಪ್ರದೇಶವನ್ನು ಸುತ್ತುವರೆದಿದ್ದೇವೆ. ನಮ್ಮ ಪೊಲೀಸ್ ಸಿಬ್ಬಂದಿ, ಭದ್ರತಾ ಪಡೆಗಳು ಮತ್ತು ಡಿಎಫ್‌ಎಸ್‌ಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು” ಎಂದು ಡಿಸಿಪಿ ಹೇಳಿದರು.
ಪ್ರಸ್ತುತ, ಎಲ್ಲ ಎಲಿವೇಟರ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಪ್ರಯಾಣಿಕರಿಗೆ ಮೆಟ್ಟಿಲುಗಳನ್ನು ಬಳಸಲು ಸೂಚಿಸಲಾಗಿದೆ ಎಂದು ಡಿಸಿಪಿ ರಂಗಾನಿ ತಿಳಿಸಿದ್ದಾರೆ.
ಗಾಯಗೊಂಡವರನ್ನು ಆರಂಭದಲ್ಲಿ ಹರಿಯಾಣದ ಗುರುಗ್ರಾಮ್‌ನಲ್ಲಿರುವ ಮೇದಾಂತ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಅವರನ್ನು ಇಲ್ಲಿನ ಸಫ್ದರ್‌ಜಂಗ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ; ‘ಕಳಪೆ ಮೂಲಸೌಕರ್ಯಕ್ಕೆ ಕ್ರಿಮಿನಲ್ ನಿರ್ಲಕ್ಷ್ಯ ಕಾರಣ..’; ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತಕ್ಕೆ ಖರ್ಗೆ ಕಿಡಿ


