ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆ ವೇಳೆ ಯುವಕರ ತಂಡವೊಂದು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ಧರಿಸಿ ಸಂಭ್ರಮಾಚರಣೆ ಮಾಡಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.


ಫ್ಯಾಕ್ಟ್‌ಚೆಕ್ : ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆ ವೇಳೆ ಯುವಕರು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ಧರಿಸಿದ್ದಾರೆ ಎಂಬ ಸುದ್ದಿ ಸುಳ್ಳು. ವೈರಲ್ ವಿಡಿಯೋದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಚೇರಿ ಮುಂದೆ ಯುವಕರು ಆರಂಗಡಿ ಎಂದು ಬರೆಯಲಾದ ಟೀ ಶರ್ಟ್ ಧರಿಸಿದ್ದಾರೆ. ಆರಂಗಡಿ ಎಂಬುವುದು ಕಾಸರಗೋಡಿನ ಒಂದು ಪ್ರಮುಖ ಗ್ರಾಮವಾಗಿದೆ.
ಫೇಸ್‌ಬುಕ್‌ನಲ್ಲಿ ಐಯುಎಂಎಲ್ ಆರಂಗಡಿ (IUML Arangadi) ಎಂಬ ಪುಟದಲ್ಲಿ ವೈರಲ್ ವಿಡಿಯೋ ಸೇರಿದಂತೆ ಎಲ್ಲಾ ವಿಡಿಯೋಗಳು ಲಭ್ಯವಿದ್ದು. ಅವುಗಳಲ್ಲಿ ಯುವಕರು ಮತ್ತು ಬಾಲಕರು ಅದೇ ಹಸಿರು ಬಣ್ಣದ ಮೇಲೆ ಆರಂಗಡಿ ಎಂದು ಊರಿನ ಹೆಸರು ಬರೆದಿರುವ ಜೆರ್ಸಿ ಧರಿಸಿರುವುದು ಕಾಣಬಹುದು. ಹಾಗಾಗಿ, ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ಧರಿಸಿದ್ದಾರೆ ಎಂಬುವುದು ಸುಳ್ಳು ಪ್ರತಿಪಾದನೆಯಾಗಿದೆ.
ಈ ಹಿಂದೆ ಅನೇಕ ಬಾರಿ ಮುಸ್ಲಿಂ ಲೀಗ್ ಪಕ್ಷದ ಕಾರ್ಯಕ್ರಮಗಳ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಕೇರಳದಲ್ಲಿ ಪಾಕಿಸ್ತಾನದ ಧ್ವಜ ಬಳಸಲಾಗಿದೆ ಎಂದು ಸುಳ್ಳು ಸುದ್ದಿ ಹರಿಬಿಡಲಾಗಿತ್ತು. ಅವುಗಳ ಸತ್ಯಾಸತ್ಯತೆಯನ್ನು ಪರೀಶಿಲಿಸಿ ಜನರಿಗೆ ಸತ್ಯ ತಿಳಿಸುವ ಕಾರ್ಯವನ್ನು ನಾನುಗೌರಿ.ಕಾಂ ಮಾಡಿದೆ. ಕೆಲವು ಫ್ಯಾಕ್ಟ್‌ಚೆಕ್ ಸುದ್ದಿಗಳ ಲಿಂಕ್‌ಗಳು ಕೆಳಗಿವೆ.
Fact Check: ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬುವುದು ಸುಳ್ಳು
Fact Check: ಕೇರಳದ ಕಾಂಗ್ರೆಸ್ ಅಭ್ಯರ್ಥಿ ಪಾಕಿಸ್ತಾನದ ಧ್ವಜಗಳೊಂದಿಗೆ ಚುನಾವಣಾ ಪ್ರಚಾರ ಮಾಡಿದ್ರಾ?


