HomeದಿಟನಾಗರFact Check: ಕೇರಳದ ಕಾಂಗ್ರೆಸ್ ಅಭ್ಯರ್ಥಿ ಪಾಕಿಸ್ತಾನದ ಧ್ವಜಗಳೊಂದಿಗೆ ಚುನಾವಣಾ ಪ್ರಚಾರ ಮಾಡಿದ್ರಾ?

Fact Check: ಕೇರಳದ ಕಾಂಗ್ರೆಸ್ ಅಭ್ಯರ್ಥಿ ಪಾಕಿಸ್ತಾನದ ಧ್ವಜಗಳೊಂದಿಗೆ ಚುನಾವಣಾ ಪ್ರಚಾರ ಮಾಡಿದ್ರಾ?

- Advertisement -
- Advertisement -

ಕೇರಳದ ತ್ರಿಶ್ಶೂರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಮುರಳೀಧರನ್ ಅವರು ಹಸಿರು ಧ್ವಜಗಳೊಂದಿಗೆ ಚುನಾವಣೆ ಪ್ರಚಾರ ನಡೆಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರು, ‘ಪಾಕಿಸ್ತಾನದ ಧ್ವಜಗಳೊಂದಿಗೆ ಮುರಳೀಧರನ್ ಚುನಾವಣೆ ಪ್ರಚಾರ ನಡೆಸಿದ್ದಾರೆ’ ಎಂಬರ್ಥದಲ್ಲಿ ಸುದ್ದಿ ಹಬ್ಬಿದ್ದಾರೆ.

ಬಿಜೆಪಿ ತೆಲಂಗಾಣ ರಾಜ್ಯದ ಕೋಶಾಧಿಕಾರಿ ಶಾಂತಿ ಕುಮಾರ್ ಅವರು ವಿಡಿಯೋ ಹಂಚಿಕೊಂಡಿದ್ದು, “ಇಲ್ಲ! ಇದು ಪಾಕಿಸ್ತಾನವಲ್ಲ. ಕಾಂಗ್ರೆಸ್ ಅಭ್ಯರ್ಥಿ ಕೆ. ಮುರಳೀಧರನ್ ಅವರು ಕೇರಳದ ತಮ್ಮ ತ್ರಿಶೂರ್ ಕ್ಷೇತ್ರದ ಒಂದು ಭಾಗದಲ್ಲಿ ಪ್ರಚಾರ ಮಾಡುತ್ತಿರುವುದು. ಇದರಲ್ಲಿ ಒಂದಾದರು ಭಾರತದ ರಾಷ್ಟ್ರ ಧ್ವಜ ತೋರಿಸಬಹುದೇ? ಇದು ‘ಭಾರತ್ ಜೋಡೋ’ ಸಿದ್ಧಾಂತವೇ? ರಾಹುಲ್ ಗಾಂಧಿಯವರೇ. ಅದು, ಕಾಂಗ್ರೆಸ್‌ನಲ್ಲಿ ಹರಿಯುತ್ತಿದೆಯೇ?” ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಮತ್ತೊಬ್ಬ ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿ ᏙᏦ (@_VK86) ಎಂಬವರು ಕೂಡ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಇದೇ ರೀತಿ ಬರೆದುಕೊಂಡಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ

ಇನ್ನೋರ್ವ ಬಲಪಂಥೀಯ ಎಕ್ಸ್ ಬಳಕೆದಾರ ‘@SharwanKumarBi7’ಎಂಬವರು ಕೂಡ ವಿಡಿಯೋ ಹಂಚಿಕೊಂಡು, ಈಗಾಗಲೇ ಇಬ್ಬರು ಹೇಳಿದಂತೆ ಬರೆದುಕೊಂಡಿದ್ದಾರೆ.

ಪೋಸ್ಟ್ ಲಿಂಕ್ ಇಲ್ಲಿದೆ

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾನುಗೌರಿ. ಕಾಂ ಮೊದಲು ವಿಡಿಯೋದಲ್ಲಿ ಬರೆಯಲಾದ ಮಲಯಾಳಂ ವಾಕ್ಯದ ಅರ್ಥ ತಿಳಿಯುವ ಪ್ರಯತ್ನ ಮಾಡಿದೆ. https://newschecker.in/ಎಂಬ ವೆಬ್‌ಸೈಟ್‌ ಹೇಳಿರುವಂತೆ ವಿಡಿಯೋ ಮೇಲೆ ‘ಕೊಂಡೊಟ್ಟಿ ಪಚ್ಚಪಡ’ (ಕೊಂಡೊಟ್ಟಿ ಹಸಿರುಮಯ) ಎಂದು ಬರೆಯಲಾಗಿದೆ.

ಈ ಅಂಶವನ್ನು ಇಟ್ಟುಕೊಂಡು ನಾವು ಇನ್ನಷ್ಟು ಹುಡುಕಾಟ ನಡೆಸಿದಾಗ ‘ಕೊಂಡೊಟ್ಟಿ ಪಚ್ಚಪಡ’ ಎಂಬ ಫೇಸ್‌ಬುಕ್ ಪೇಜ್ ನಮಗೆ ಸಿಕ್ಕಿದೆ. ಆ ಪೇಜ್ ಪರಿಶೀಲಿಸಿ ನೋಡಿದಾಗ ಏಪ್ರಿಲ್ 19, 2019ರಂದು ವೈರಲ್ ವಿಡಿಯೋ ಪೋಸ್ಟ್ ಆಗಿರುವುದು ಕಂಡು ಬಂದಿದೆ.

ಪೋಸ್ಟ್ ಲಿಂಕ್ ಇಲ್ಲಿದೆ 

ವಿಡಿಯೋ ಜೊತೆಗೆ ಮಲಯಾಳಂನಲ್ಲಿ ವಿವರಣೆ ಬರೆಯಲಾಗಿದೆ. ಅದರ ಅರ್ಥ ಹೀಗಿದೆ… “ಕೋಲರಾಜನ್ ಜೈಲಿಗೆ ಹೋಗಲಿದ್ದಾರೆ, ಮುರಳೀಧರನ್ ವಡಗರದಿಂದ ಸಂಸತ್ತಿಗೆ ಹೋಗಲಿದ್ದಾರೆ. ಕೆ ಮುರಳೀಧರನ್ ಅವರ ಪ್ರಚಾರ ಕಾರ್ಯದಲ್ಲಿ ಯೂತ್ ಲೀಗ್‌ನ ಮಕ್ಕಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ”. ಇಲ್ಲಿ ‘ಕೋಲರಾಜನ್’ ಎಂಬುವುದು ಚುನಾವಣೆಯಲ್ಲಿ ಮುರಳೀಧರನ್ ಅವರ ಎದುರಾಳಿಯಾಗಿದ್ದ ಪಿ ಜಯರಾಜನ್ ಅವರ ಹೆಸರನ್ನು ವ್ಯಂಗ್ಯವಾಗಿ ಬರೆದಿರುವುದಾಗಿದೆ.

ಇದೇ ರೀತಿಯ ಮತ್ತೊಂದು ಪೋಸ್ಟ್ ಅನ್ನು ಏಪ್ರಿಲ್ 19,2019 ರಂದು ಎಂ.ಕೆ ಸವಾದ್ ಎಂಬ ಫೇಸ್‌ಬುಕ್‌ ಖಾತೆಯಲ್ಲೂ ಹಂಚಿಕೊಂಡಿರುವುದು ಕಂಡು ಬಂದಿದೆ. ‘ಕೊಂಡೊಟ್ಟಿ ಪಚ್ಚಪಡ’ ಪೇಜ್‌ನಲ್ಲಿ ಬರೆದುಕೊಂಡಂತೆ ಇಲ್ಲೂ ಬರೆದುಕೊಳ್ಳಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ

ಅಂದ ಹಾಗೆ, ವೈರಲ್ ವಿಡಿಯೋ 2019 ರಲ್ಲಿ ಮುರಳೀಧರನ್ ಅವರು ವಡಗರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ನಡೆಸಿದ ಪ್ರಚಾರ ಜಾಥದ್ದಾಗಿದೆ. ಈ ಚುನಾವಣೆಯಲ್ಲಿ ಮುರಳೀಧರನ್ ಗೆಲುವು ದಾಖಲಿಸಿದ್ದರು.

ಮೇಲೆ ನಾವು ಉಲ್ಲೇಖಿಸಿದ ಮಾಹಿತಿಗಳ ಪ್ರಕಾರ, ಈಗ ವೈರಲ್ ಆಗುತ್ತಿರುವ ವಿಡಿಯೋ 2019ರದ್ದು ಎಂಬುವುದು ಖಚಿತವಾಗಿದೆ.

ಪಾಕಿಸ್ತಾನದ ಧ್ವಜ ಬಳಸಿದ್ದು ನಿಜಾನ?:

ವೈರಲ್ ವಿಡಿಯೋದಲ್ಲಿರುವ ಹಸರು ಬಣ್ಣದ ಧ್ವಜವನ್ನು ಬಲಪಂಥೀಯರು ಪಾಕಿಸ್ತಾನದ ಧ್ವಜ ಎಂಬಂತೆ ಬಿಂಬಿಸಿದ್ದಾರೆ. ಆದರೆ, ಅದು ಪಾಕಿಸ್ತಾನದ ಧ್ವಜವಲ್ಲ. ಕೇರಳದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಪಕ್ಷದ್ದಾಗಿದೆ. ಈ ಧ್ವಜವು ಭಾರತೀಯ ಚುನಾವಣಾ ಆಯೋಗ ಅಂಗೀಕರಿಸಲ್ಪಟ್ಟ ಧ್ವಜವಾಗಿದೆ.

ಈ ಸುದ್ದಿಯಲ್ಲಿ ನಾವು ಉಲ್ಲೇಖಿಸಿದ್ದು ಮಾತ್ರವಲ್ಲದೆ, ಅನೇಕ ಬಾರಿ ಹಸಿರು ಧ್ವಜ ಹಿಡಿದರೆ ಅದು ಪಾಕಿಸ್ತಾನದ್ದು ಎಂದು ಬಿಂಬಿಸುವ ಪರಿಪಾಠವಿದೆ. ಮುಸ್ಲಿಂ ಲೀಗ್ ಪಕ್ಷದ ಧ್ವಜ, ಮುಸಲ್ಮಾನರು ವಿಶೇಷ ಕಾರ್ಯಕ್ರಮಗಳಲ್ಲಿ ಬಳಸುವ ಧಾರ್ಮಿಕ ಧ್ವಜ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಧ್ವಜಕ್ಕೆ ವ್ಯತ್ಯಾಸವಿದೆ.

ಎರಡೂ ಧ್ವಜಗಳ ಫೋಟೋಗಳ ಕೆಳಗಡೆ ಕೊಡಲಾಗಿದೆ. ವ್ಯತ್ಯಾಸ ಗಮನಿಸಬಹುದು.
ಕೊನೆಯದಾಗಿ, ಬಲಪಂಥೀಯರು ಪಾಕಿಸ್ತಾನದಂತೆ ಬಿಂಬಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮುರಳೀಧರನ್ ಅವರ ಚುನಾವಣಾ ಪ್ರಚಾರದಲ್ಲಿ ಕಂಡು ಬಂದಿರುವ ಧ್ವಜ ಪಾಕಿಸ್ತಾನದ್ದಲ್ಲ. ಅದು ಮುಸ್ಲಿಂ ಲೀಗ್‌ ಪಕ್ಷದ ಧ್ವಜ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಯುಡಿಎಫ್ ಮೈತ್ರಿಕೂಟದ ಪಕ್ಷಗಳಾಗಿವೆ. ಹಾಗಾಗಿ, ಕಾಂಗ್ರೆಸ್ ಅಭ್ಯರ್ಥಿ ಮುರಳೀಧರನ್ ಪರ ಪ್ರಚಾರಕ್ಕೆ ಮುಸ್ಲಿಂ ಲೀಗ್‌ನ ಕಾರ್ಯಕರ್ತರು ತಮ್ಮ ಧ್ವಜದೊಂದಿಗೆ ಬೆಂಬಲ ವ್ಯಕ್ತಪಡಿಸಿರುವುದಾಗಿದೆ ವಿಡಿಯೋದಲ್ಲಿರುವುದು. ಅಲ್ಲದೆ, ಅದು ಹಳೆಯ ವಿಡಿಯೋ ಕೂಡ ಹೌದು.

ಇದನ್ನೂ ಓದಿ : Fact Check: ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆ ವೇಳೆ ಸಿಜೆಐ ಡಿವೈ ಚಂದ್ರಚೂಡ್ ನ್ಯಾಯಾಲಯದಿಂದ ಹೊರ ನಡೆದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...