HomeದಿಟನಾಗರFact Check: ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬುವುದು ಸುಳ್ಳು

Fact Check: ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬುವುದು ಸುಳ್ಳು

- Advertisement -
- Advertisement -

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಯವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬ ಪೋಸ್ಟ್‌ ಅನ್ನು Manipur Banner ಎಂಬ ಫೇಸ್‌ಬುಕ್ ಗ್ರೂಪ್‌ನಲ್ಲಿ ಹಾಕಲಾಗಿದೆ. ಜೊತೆಗೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ಪೋಸ್ಟ್‌ ಲಿಂಕ್ ಇಲ್ಲಿದೆ

ಇದೇ ರೀತಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಭಿಮಾನಿಗಳ ಎಕ್ಸ್‌ ಖಾತೆಯಲ್ಲಿ “ಕೇರಳದ ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಮುಸಲ್ಮಾನರ ಬಾವುಟ. ಕಾಂಗ್ರೆಸ್ ಸಾಬ್ರು ಪಕ್ಷ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಭಾರತದಲ್ಲಿ ಕಾಂಗ್ರೆಸ್ ಅನ್ನು ಬಹಿಷ್ಕರಿಸದ ಹೊರತು ಹಿಂದೂಗಳಿಗೆ ಇಲ್ಲಿ ಉಳಿಗಾಲವಿಲ್ಲ ಅನ್ನಿಸ್ತಿದೆ. ಹಿಂದೂಗಳೇ ಎಚ್ಚೆತ್ತುಕೊಳ್ಳಿ” ಎಂದು ಬರೆಯಲಾಗಿದೆ. ಅಲ್ಲೂ ನಾವು ಮೇಲ್ಗಡೆ ಉಲ್ಲೇಖಿಸಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ

ಫ್ಯಾಕ್ಟ್‌ಚೆಕ್ : ನಾವು ಮೇಲೆ ಉಲ್ಲೇಖಿಸಿದ ಎರಡೂ ಪೋಸ್ಟ್‌ಗಳ ವಿಡಿಯೋದಲ್ಲಿರುವ ಹಸಿರು ಧ್ವಜಗಳು ಪಾಕಿಸ್ತಾನದ್ದಾಗಲಿ, ಮುಸ್ಲಿಮರದ್ದಾಗಲಿ ಅಲ್ಲ. ಕೇರಳದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ (ಐಯುಎಂಎಲ್‌) ಪಕ್ಷದ ಧ್ವಜಗಳಾಗಿವೆ. ಮುಸ್ಲಿಂ ಲೀಗ್ ಭಾರತದ ಅಧಿಕೃತ ರಾಜಕೀಯ ಪಕ್ಷಗಳಲ್ಲಿ ಒಂದು. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್‌) ಮೈತ್ರಿಕೂಟದ ಪ್ರಮುಖ ಪಕ್ಷವಾಗಿದೆ.

ಈ ಸುದ್ದಿಯಲ್ಲಿ ನಾವು ಉಲ್ಲೇಖಿಸಿದ್ದು ಮಾತ್ರವಲ್ಲದೆ, ಅನೇಕ ಬಾರಿ ಹಸಿರು ಧ್ವಜ ಹಿಡಿದರೆ ಅದು ಪಾಕಿಸ್ತಾನದ್ದು ಎಂದು ಬಿಂಬಿಸುವ ಪರಿಪಾಠವಿದೆ. ಮುಸ್ಲಿಂ ಲೀಗ್ ಪಕ್ಷದ ಧ್ವಜ, ಮುಸಲ್ಮಾನರು ವಿಶೇಷ ಕಾರ್ಯಕ್ರಮಗಳಲ್ಲಿ ಬಳಸುವ ಧಾರ್ಮಿಕ ಧ್ವಜ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಧ್ವಜಕ್ಕೆ ವ್ಯತ್ಯಾಸಗಳಿವೆ.

ಎರಡೂ ಧ್ವಜಗಳ ಫೋಟೋಗಳ ಕೆಳಗಡೆ ಕೊಡಲಾಗಿದೆ. ವ್ಯತ್ಯಾಸ ಗಮನಿಸಬಹುದು.

ಕೆಲ ದಿನಗಳ ಹಿಂದೆ ಕೇರಳದ ತ್ರಿಶ್ಶೂರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಮುರಳೀಧರನ್ ಅವರು ಹಸಿರು ಧ್ವಜಗಳೊಂದಿಗೆ ಚುನಾವಣೆ ಪ್ರಚಾರ ನಡೆಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಬಿಜೆಪಿ ನಾಯಕರು ಮತ್ತು ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರು, ‘ಪಾಕಿಸ್ತಾನದ ಧ್ವಜಗಳೊಂದಿಗೆ ಮುರಳೀಧರನ್ ಚುನಾವಣೆ ಪ್ರಚಾರ ನಡೆಸಿದ್ದಾರೆ’ಎಂಬರ್ಥದಲ್ಲಿ ಸುದ್ದಿ ಹಬ್ಬಿದ್ದರು.

ಈ ಕುರಿತು ನಾನುಗೌರಿ.ಕಾಂ ಫ್ಯಾಕ್ಟ್‌ಚೆಕ್ ಮಾಡಿದೆ. ಅದರ ಲಿಂಕ್ ಕೆಳಗಡೆ ಇದೆ.

Fact Check: ಕೇರಳದ ಕಾಂಗ್ರೆಸ್ ಅಭ್ಯರ್ಥಿ ಪಾಕಿಸ್ತಾನದ ಧ್ವಜಗಳೊಂದಿಗೆ ಚುನಾವಣಾ ಪ್ರಚಾರ ಮಾಡಿದ್ರಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...