Homeದಿಟನಾಗರಫ್ಯಾಕ್ಟ್‌ ಚೆಕ್‌: ಇಟಲಿಯಲ್ಲಿ ವಿಶ್ವನಾಯಕರನ್ನು ಭೇಟಿ ಮಾಡಲು ಮೋದಿ ಟ್ಯಾಕ್ಸಿಯಲ್ಲಿ ತೆರಳಿದ್ದರೆ?

ಫ್ಯಾಕ್ಟ್‌ ಚೆಕ್‌: ಇಟಲಿಯಲ್ಲಿ ವಿಶ್ವನಾಯಕರನ್ನು ಭೇಟಿ ಮಾಡಲು ಮೋದಿ ಟ್ಯಾಕ್ಸಿಯಲ್ಲಿ ತೆರಳಿದ್ದರೆ?

- Advertisement -
- Advertisement -

ಇಟಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ವಿಶ್ವನಾಯಕರನ್ನು ಭೇಟಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಟ್ಯಾಕ್ಸಿಯಲ್ಲಿ ತೆರಳಿದ್ದಾರೆ. ಅಲ್ಲಿನ ರಾಜಕೀಯ ಮುಖಂಡರು ಕನಿಷ್ಟ ಸರ್ಕಾರಿ ಕಾರುಗಳನ್ನು ಕಳಿಸಿ ಮೋದಿಯವರನ್ನು ಸ್ವಾಗತಿಸಿಲ್ಲ ಎಂಬ ಹೇಳಿಕೆಯೊಂದಿಗೆ ಎರಡು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಮೋದಿ ಅವರು ಇಳಿಯುತ್ತಿರುವ ಕಾರಿನ ಮೇಲ್ಭಾಗದಲ್ಲಿ ಹಳದಿ ಬಣ್ಣದಲ್ಲಿ ಟ್ಯಾಕ್ಸಿ ಚಿಹ್ನೆ ಮತ್ತು ಅದರ ಹಿಂಭಾಗದಲ್ಲಿ ಟ್ಯಾಕ್ಸಿ ಮೊಬೈಲ್‌ ಅಪ್ಲಿಕೇಷನ್‌ ಆಯತಾಕಾರದ ಸ್ಟಿಕ್ಟರ್‌ ಇರುವುದನ್ನು ಗುರುತಿಸಲಾಗಿದೆ. ಇಟಲಿಯಲ್ಲಿ ಪ್ರಧಾನಿಯನ್ನು ಟ್ಯಾಕ್ಸಿಯಲ್ಲಿ ಬರಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿಕೊಂಡು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಎಎನ್‌ಐ ಸುದ್ದಿ ಸಂಸ್ಥೆ ಟ್ವಿಟರ್‌ ಮೂಲಕ ಹಂಚಿಕೊಂಡ ಮೂಲ ಫೋಟೊಗಳಲ್ಲಿ, ಮೋದಿಯವರು ಇಳಿಯುತ್ತಿದ್ದ ಫೋಕ್ಸ್‌ವ್ಯಾಗನ್‌ ಕಾರಿನಲ್ಲಿ ಟ್ಯಾಕ್ಸಿ ಚಿಹ್ನೆ ಅಥವಾ ಟ್ಯಾಕ್ಸಿ ಆಪ್ ಸ್ಟಿಕ್ಕರ್‌ಗಳಿಲ್ಲ ಎಂದು ದಿ ಕ್ವಿಂಟ್‌ ವರದಿ ಮಾಡಿದೆ.

ವಾಸ್ತವದಲ್ಲಿ ಚಿತ್ರಗಳನ್ನು ಫೋಟೊಶಾಪ್‌ ಮಾಡಲಾಗಿದೆ. ಎಎನ್‌ಐ ಪ್ರಕಟಿಸಿದ ಫೋಟೊಗಳನ್ನೇ ತೆಗೆದುಕೊಂಡು ಅದರ ಮೇಲೆ ಟ್ಯಾಕ್ಸಿ ಎಂಬ ಚಿಹ್ನೆಯನ್ನು ಅಂಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ನಿಜ ಎಂದರೆ ಮೋದಿಯವರನ್ನು ಇಟಲಿ ಸರ್ಕಾರ ತಮ್ಮದೇ ಕಾರುಗಳನ್ನು ಕಳಿಸಿ ಬರಮಾಡಿಕೊಳ್ಳಲಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್‌ ರಾಜ್‌ಕುಮಾರ್‌’ ಅವರದಲ್ಲ

ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್‌ ರಾಜ್‌ಕುಮಾರ್‌’ ಅವರದಲ್ಲ | Naanu Gauri

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...