Homeಕರ್ನಾಟಕಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ 'ಪುನೀತ್‌ ರಾಜ್‌ಕುಮಾರ್‌' ಅವರದಲ್ಲ

ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್‌ ರಾಜ್‌ಕುಮಾರ್‌’ ಅವರದಲ್ಲ

- Advertisement -
- Advertisement -

ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌(45) ಅವರು ಶುಕ್ರವಾರ ನಿಧನರಾಗಿದ್ದಾರೆ. ಬೆಳಿಗ್ಗೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ನಂತರ ಆಸ್ಪತ್ರೆಗೆ ಕೊಂಡೊಯ್ಯುವಾಗ ಕೂಡಾ ಅವರಿಗೆ ಮತ್ತೊಮ್ಮೆ ಹೃದಯಾಘಾತ ಸಂಭವಿಸಿದೆ. ಅವರನ್ನು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಾಕಾರಿಯಾದೇ ಮೃತಪಟ್ಟಿದ್ದಾರೆ.

ಪ್ರತಿಭಾವಂತ ನಟನ ನಿಧನಕ್ಕೆ ದೇಶದಾದ್ಯಂತ ಸಂತಾಪ ವ್ಯಕ್ತವಾಗಿದೆ. ಆದರೆ, ಈ ನಡುವೆ ಪುನೀತ್‌ ರಾಜ್‌ಕುಮಾರ್‌ ಅವರು ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ದೃಶ್ಯ ಎಂದು ಪ್ರತಿಪಾದಿಸಿ ವಿಡಿಯೊವೊಂದು ವೈರಲ್‌ ಆಗುತ್ತಿದೆ. ವೈರಲ್‌ ವಿಡಿಯೊದಲ್ಲಿ, ವ್ಯಕ್ತಿಯೊಬ್ಬರು ಸುಸ್ತಾಗಿ ಬಂದು ಮೆಟ್ಟಿಲ ಮೇಲೆ ಕೂರುತ್ತಾರೆ. ನೋಡು ನೋಡುತ್ತಿದ್ದಂತೆ ಅವರು ಕೂತಲ್ಲಿಂದಲೇ ಕುಸಿದು ಬೀಳುತ್ತಾರೆ.

ಇದನ್ನೂ ಓದಿ: ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್‌ ಇನ್ನಿಲ್ಲ

ವಾಸ್ತವ ಏನು? ಈ ವಿಡಿಯೊ ನಿಜವೇ?

ವೈರಲ್‌ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಇರುವ ವ್ಯಕ್ತಿಯು ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ಹೋಲುವುದಿಲ್ಲ. ಈ ವ್ಯಕ್ತಿಗೂ ಪುನೀತ್‌ ರಾಜ್‌ಕುಮಾರ್‌ ಅವರಿಗೂ ಯಾವುದೇ ಹೋಲಿಕೆ ಇಲ್ಲ.

ಅಲ್ಲದೆ ವೈರಲ್ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಡಿಯೊವಾಗಿದೆ. ಸಾಮಾನ್ಯವಾಗಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ವಿಡಿಯೊದಲ್ಲಿ ಅದು ಸೆರೆಯಾಗಿರುವ ದಿನಾಂಕ ಕೂಡಾ ದಾಖಲಾಗಿರುತ್ತದೆ. ಅದರಂತೆ ಪ್ರಸ್ತುತ ವೈರಲ್ ವಿಡಿಯೊದಲ್ಲಿ ಆಗಸ್ಟ್‌‌ 28(25/08) ಎಂದು ಬರೆದಿರುವುದು ಕಾಣುತ್ತದೆ.

ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ ನಿಧನ: ಗಣ್ಯರ ಕಂಬನಿ, ಚಿತ್ರನಟ-ನಟಿಯರ ನುಡಿನಮನ

ವಿಡಿಯೊ ಸ್ಕ್ರೀನ್‌ ಶಾರ್ಟ್‌ ಇಟ್ಟುಕೊಂಡು ನಾವು ರಿವರ್ಸ್ ಸರ್ಚ್ ಮೂಲಕ ಇಂಟರ್‌ನೆಟ್‌ನಲ್ಲಿ ಹುಡುಕಾಡಿದ್ದು, ಈ ವಿಡಿಯೊ ಸೆಪ್ಟೆಂಬರ್‌ 2 ರಂದು ಫೇಸ್‌ಬುಕ್ ಮತ್ತು ಟ್ವಿಟರ್‌‌‌ನಲ್ಲಿ ಹಂಚಿಕೊಳ್ಳಲಾಗಿದೆ.

ಅಂದರೆ, ಪ್ರಸ್ತುತ ವೈರಲ್ ವಿಡಿಯೊ ಸುಮಾರು ಎರಡು ತಿಂಗಳ ಹಿಂದಿನ ವಿಡಿಯೊವಾಗಿದೆ. ಜೊತೆಗೆ ಸೆಪ್ಟೆಂಬರ್‌ ಎರಡರಂದು ‘ಸೋಷಿಯಲ್ ದಿಶಾ ಚಾನೆಲ್’ ಎಂಬ ಪೇಜ್‌ ಈ ವಿಡಿಯೋದ ಸುದೀರ್ಘ ದೃಶ್ಯವನ್ನೂ ಅಪ್ಲೋಡ್ ಮಾಡಿದೆ. ಅದರಲ್ಲಿ ಇದು 2021 ಆಗಸ್ಟ್‌‌ 28 ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೆ ಈ ಘಟನೆ ನಡೆದಿರುವುದು ಸಂಜೆ 07: 37 (19:37) ಕ್ಕೆ ಎಂದು ಸ್ಪಷ್ಟವಾಗಿ ವಿಡಿಯೊ ಮೂಲಕ ಕಾಣಬಹುದು.

ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ ನಿಧನ: ಗಣ್ಯರ ಕಂಬನಿ, ಚಿತ್ರನಟ-ನಟಿಯರ ನುಡಿನಮನ

ಅಷ್ಟೇ ಅಲ್ಲದೆ ಈ ವಿಡಿಯೊ ಬಗ್ಗೆ ಟಿವಿ9 ಭರತ್‌‌ವರ್ಷ ಸೆಪ್ಟೆಂಬರ್‌ 1 ರಂದು ವರದಿ ಕೂಡಾ ಮಾಡಿದೆ. ವರದಿ ಹೇಳುವಂತೆ, “ಘಟನೆಯು ಸೂರತ್‌ನ ಗೋಲ್ಡ್ ಜಿಮ್‌ನ ವೀಡಿಯೊವಾಗಿದ್ದು, 33ರ ಹರೆಯದ ವ್ಯಕ್ತಿಗೆ ಅತಿಯಾದ ವರ್ಕೌಟ್‌ನಿಂದ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಇಡೀ ಘಟನೆ ಜಿಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ” ಎಂದು ಹೇಳಿದೆ.

 

ಈ ಎಲ್ಲಾ ಆಧಾರದ ಮೂಲಕ ಪ್ರಸ್ತುತ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊ ನಟ ಪುನೀತ್‌ ರಾಜ್‌ಕುಮಾರ್‌ ಅವರದ್ದಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.

ಇದನ್ನೂ ಓದಿ: ಚಿತ್ರರಂಗದ ’ಯುವರತ್ನ’ ಪುನೀತ್ ರಾಜ್‌ಕುಮಾರ್‌ ಅವರ ಅಪರೂಪದ ಚಿತ್ರಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...