Homeಮುಖಪುಟರಜಪೂತರ ಬಗ್ಗೆ ಕೇಂದ್ರ ಸಚಿವರಿಂದ ಅವಹೇಳನ: ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ರಾಜ್ ಶೇಖಾವತ್...

ರಜಪೂತರ ಬಗ್ಗೆ ಕೇಂದ್ರ ಸಚಿವರಿಂದ ಅವಹೇಳನ: ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ರಾಜ್ ಶೇಖಾವತ್ ಬಂಧನ

- Advertisement -
- Advertisement -

ಗುಜರಾತ್ ಕರ್ಣಿ ಸೇನೆಯ ನಾಯಕ ರಾಜ್ ಶೇಖಾವತ್ ಅವರನ್ನು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ  ರಾಜ್ಯ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡುವ ಮುನ್ನ ಪೊಲೀಸರು ಬಂಧಿಸಿದ್ದು, ರಜಪೂತರ ಬಗ್ಗೆ ಕೇಂದ್ರ ಸಚಿವರ ಹೇಳಿಕೆಯ ವಿರುದ್ಧದ ಪ್ರತಿಭಟನೆ ಕಿಚ್ಚು ಮುಂದುವರಿದಿದೆ.

ರಜಪೂತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಕೇಂದ್ರ ಸಚಿವ ಪುರ್ಷೋತ್ತಮ್ ರೂಪಾಲಾ ವಿರುದ್ಧ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ರಾಜ್ ಶೇಖಾವತ್ ಗಾಂಧಿನಗರದಲ್ಲಿರುವ ಬಿಜೆಪಿಯ ಗುಜರಾತ್ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕುವ ಉದ್ದೇಶದಿಂದ ತೆರಳುತ್ತಿದ್ದರು.

ರಜಪೂತ ಸಮುದಾಯದ ಸಂಘಟನೆಯಾದ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶೇಖಾವತ್ ಅವರು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಅವರ ಸಮುದಾಯದ ಬಗ್ಗೆ ಹೇಳಿಕೆ ಖಂಡಿಸಿ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಘೇರಾವ್‌ಗೆ ಕರೆ ನೀಡಿದ್ದರು. ಪರಶೋತ್ತಮ್ ರೂಪಾಲಾ ಅವರನ್ನು ರಾಜ್‌ಕೋಟ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಿಂದ ಕೈಬಿಡುವಂತೆ ಅವರು ಆಗ್ರಹಿಸಿದ್ದರು.

ನಾವು ರಾಜ್ ಶೇಖಾವತ್ ಅವರನ್ನು ವಿಮಾನ ನಿಲ್ದಾಣದಿಂದ ಬಂಧಿಸಿದ್ದೇವೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿ.ಎನ್. ಯಾದವ್ ಹೇಳಿದ್ದಾರೆ.

ಮಾರ್ಚ್ 22ರಂದು ರಾಜ್‌ಕೋಟ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರೂಪಾಲಾ,  ಹಿಂದಿನ ‘ಮಹಾರಾಜರು’ ವಿದೇಶಿ ಆಡಳಿತಗಾರರು ಮತ್ತು ಬ್ರಿಟಿಷರ ಕಿರುಕುಳಕ್ಕೆ ಬಲಿಯಾದರು. ಈ ‘ಮಹಾರಾಜರು’ ಬ್ರಿಟಿಷ್‌ ಆಡಳಿತಗಾರರೊಂದಿಗೆ ಸಹಕರಿಸಿದ್ದರು ಮತ್ತು ಅವರಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಸಿಕೊಟ್ಟಿದ್ದರು ಎಂದು ಹೇಳಿದ್ದರು.

ಇದಾದ ಬಳಿಕ ವ್ಯಾಪಕವಾದ ಪ್ರತಿಭಟನೆ ಭುಗಿಲೆದ್ದಿದ್ದವು, ಕರ್ಣಿ ಸೇನಾ ರಾಷ್ಟ್ರೀಯ ಮುಖ್ಯಸ್ಥ ರಾಜ್ ಶೇಖಾವತ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ರೂಪಾಲಾ ಅವರಿಗೆ ನೀಡಿರುವ ಲೋಕಸಭೆ ಟಿಕೆಟ್‌ ಹಿಂಪಡೆಯುವಂತೆ ಆಗ್ರಹಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪಾಲಾ ಅವರು ಈಗಾಗಲೇ ಮೂರು ಬಾರಿ ಕ್ಷಮೆಯಾಚಿಸಿರುವುದರಿಂದ ಅವರಿಗೆ ಕ್ಷಮೆ ನೀಡುವಂತೆ ಗುಜರಾತ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ಮಂಗಳವಾರ ಮನವಿ ಮಾಡಿದ್ದರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಮ್ಮುಖದಲ್ಲಿ ರಜಪೂತ ಸಮುದಾಯದ ಮುಖಂಡರೊಂದಿಗೆ ಪಾಟೀಲ್ ಸಭೆ ನಡೆಸಿದ್ದರು.

ಇದನ್ನು ಓದಿ: ಲೆಬನಾನ್‌ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ: ಹೆಚ್ಚಿದ ಪ್ರಾದೇಶಿಕ ಸಂಘರ್ಷದ ಭೀತಿ

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...