Homeಮುಖಪುಟದುಬಾರಿ ದುನಿಯಾ: ಟೊಮೆಟೋ ಕಳ್ಳತನಕ್ಕೆ ಹೆದರಿ ಬೌನ್ಸರ್‌ಗಳನ್ನು ನೇಮಿಸಿಕೊಂಡ ತರಕಾರಿ ವ್ಯಾಪಾರಿ!

ದುಬಾರಿ ದುನಿಯಾ: ಟೊಮೆಟೋ ಕಳ್ಳತನಕ್ಕೆ ಹೆದರಿ ಬೌನ್ಸರ್‌ಗಳನ್ನು ನೇಮಿಸಿಕೊಂಡ ತರಕಾರಿ ವ್ಯಾಪಾರಿ!

- Advertisement -
- Advertisement -

ದೇಶದಲ್ಲಿ ಟೊಮೆಟೋ ಬೆಲೆ ಗಗನಕ್ಕೇರಿದೆ. ಈ ಮಧ್ಯೆ ತರಕಾರಿ ಮಾರಾಟಗಾರರು ಗ್ರಾಹಕರನ್ನು ನಿರ್ವಹಿಸಲು ಬೌನ್ಸರ್‌ಗಳನ್ನು ನೇಮಿಸಿಕೊಳ್ಳುವಂತಹ ಅಸಾಮಾನ್ಯ ವಿಧಾನಗಳನ್ನು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಕಾಂಪ್ಲಿಮೆಂಟರಿಯಾಗಿ ಟೊಮೆಟೊಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಟೊಮೆಟೋ ಬೆಲೆ ಏರಿಕೆಯಾಗಿರುವುದರಿಂದ ಉತ್ತರ ಪ್ರದೇಶದ ವಾರಣಾಸಿಯಲ್ಲಿ, ಅಜಯ್ ಫೌಜಿ ಎಂಬ ತರಕಾರಿ ಮಾರಾಟಗಾರ ಟೊಮೇಟೊ ಕಳ್ಳತನಕ್ಕೆ ಹೆದರಿ ಬೌನ್ಸರ್‌ಗಳನ್ನು ನೇಮಿಸಿಕೊಂಡು ಖರೀದಿಗೆ ಬರುವ ಗ್ರಾಹಕರನ್ನು ನಿರ್ವಹಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಅಜಯ್ ಫೌಜಿ, ”ಟೊಮೆಟೋ ಬೆಲೆ ತುಂಬಾ ಹೆಚ್ಚಿರುವುದರಿಂದ ನಾನು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದೇನೆ. ಜನರು ಗಲಾಟೆ ಮಾಡುತ್ತಾ, ಟೊಮೆಟೊಗಳನ್ನು ಕಳ್ಳತನ ಮಾಡುತ್ತಿದ್ದಾರೆ. ನಮ್ಮ ಅಂಗಡಿಯಲ್ಲಿ ಟೊಮೆಟೋಗಾಗಿ ಯಾವುದೇ ವಾದ ವಿವಾದಗಳು ಬೇಡ ಹಾಗಾಗಿ ಇಲ್ಲಿ ಬೌನ್ಸರ್‌ಗಳಿದ್ದಾರೆ. ಟೊಮೆಟೊ ಕೆಜಿಗೆ ₹160ಕ್ಕೆ ಮಾರಾಟವಾಗುತ್ತಿದೆ. ಜನರು 50 ಅಥವಾ 100 ಗ್ರಾಂ ಖರೀದಿಸುತ್ತಿದ್ದಾರೆ” ಎಂದು ಹೇಳಿದರು.

ಮಧ್ಯಪ್ರದೇಶದ ಅಶೋಕ್ ನಗರದಲ್ಲಿ, ಸ್ಮಾರ್ಟ್‌ಫೋನ್ ಅಂಗಡಿ ಮಾಲೀಕರು ಆಸಕ್ತಿದಾಯಕ ಕೊಡುಗೆ ನೀಡುತ್ತಿದ್ದಾರೆ. ಅವರ ಅಂಗಡಿಯಿಂದ ಮೊಬೈಲ್ ಫೋನ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕಾಂಪ್ಲಿಮೆಂಟರಿಯಾಗಿ 2 ಕೆಜಿ ಟೊಮೆಟೋಗಳನ್ನು ನೀಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಂಗಡಿ ಮಾಲೀಕ ಅಭಿಷೇಕ್ ಅಗರ್ವಾಲ್, ”ಟೊಮೆಟೋ ಬೆಲೆ ದುಬಾರಿಯಾಗಿರುವುದರಿಂದ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿದ ಪೈಪೋಟಿಯಿಂದಾಗಿ ಗ್ರಾಹಕರಿಗೆ ನಾವು ಸ್ಮಾರ್ಟ್‌ಫೋನ್‌ಗಳೊಂದಿಗೆ ಕಾಂಪ್ಲಿಮೆಂಟರಿಯಾಗಿ ಬೇರೆ ವಸ್ತಗಳನ್ನು ನೀಡುವ ಬದಲಿಗೆ ಟೊಮೆಟೋಗಳನ್ನು ನೀಡಲು ನಿರ್ಧರಿಸಿದ್ದೇವೆ. ಈ ಆಫರ್ ಅನ್ನು ಪ್ರಾರಂಭಿಸಿದ ನಂತರ ನಮ್ಮ ಅಂಗಡಿಯಲ್ಲಿ ವ್ಯಾಪಾರ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಾರ, ಟೊಮೆಟೋ ಕೆಜಿಗೆ ಸರಾಸರಿ ಬೆಲೆ ₹ 100 ಆಗಿದೆ. ದೆಹಲಿಯಲ್ಲಿ ₹127, ಲಕ್ನೋದಲ್ಲಿ ₹147, ಚೆನ್ನೈನಲ್ಲಿ ₹105 ಮತ್ತು ದಿಬ್ರುಗಢದಲ್ಲಿ ₹115 ಆಗಿದೆ.

ಇದನ್ನೂ ಓದಿ: ಮೋದಿ ಸರ್ಕಾರದ ಲೂಟಿಯಿಂದಾಗಿ ತರಕಾರಿ ಬೆಲೆ ಗಗನಕ್ಕೇರುತ್ತಿದೆ: ಖರ್ಗೆ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...