Homeಮುಖಪುಟ'ಒಬಿಸಿ' ಸಮುದಾಯವನ್ನು ಅವಮಾನಿಸಿದ ಬಾಬಾ ರಾಮ್‌ದೇವ್‌

‘ಒಬಿಸಿ’ ಸಮುದಾಯವನ್ನು ಅವಮಾನಿಸಿದ ಬಾಬಾ ರಾಮ್‌ದೇವ್‌

- Advertisement -
- Advertisement -

ಪತಂಜಲಿಯ ಸಂಸ್ಥಾಪಕ, ಯೋಗ ಗುರು ಬಾಬಾ ರಾಮ್‌ದೇವ್ ಹಿಂದುಳಿದ ವರ್ಗಗಳ (ಒಬಿಸಿ) ಬಗ್ಗೆ ಅವಮಾನಕಾರಿಯಾಗಿ ಹೇಳುವ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಬಾಬಾ ರಾಮದೇವ್ ವೇದಿಕೆಯೊಂದರಲ್ಲಿ ಪೂಜೆಯೊಂದನ್ನು ಮಾಡುತ್ತಾ, ನನ್ನ ಮೂಲ ಗೋತ್ರ ಬ್ರಹ್ಮ ಗೋತ್ರ, ನಾನು ಅಗ್ನಿಹೋತ್ರಿ ಬ್ರಾಹ್ಮಣ, ಅವರು ಹೇಳುತ್ತಾರೆ ಬಾಬಾಜಿ ನೀವು ಒಬಿಸಿ ಎಂದು…ಒಬಿಸಿಗಳು ಆ ರೀತಿ ಹೇಳುತ್ತಾರೆ, ನಾನು ಅಗ್ನಿಹೋತ್ರಿ ಬ್ರಾಹ್ಮಣ, ನಾನು ವೇದಿ ಬ್ರಾಹ್ಮಣ, ದ್ವಿವೇದಿ ಬ್ರಾಹ್ಮಣ, ತ್ರಿವೇದಿ ಬ್ರಾಹ್ಮಣ, ಚತುರ್ವೇದಿ ಬ್ರಾಹ್ಮಣ. ನಾನು ನಾಲ್ಕು ವೇದಗಳನ್ನು ಓದಿದ್ದೇನೆ ಎಂದು ಹೇಳಿದ್ದಾರೆ.

ಬಾಬಾ ರಾಮ್‌ ದೇವ್‌ ವೀಡಿಯೊ ವೈರಲ್ ಆದ ಬೆನ್ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ‘#ಬಹಿಷ್ಕಾರಪತಂಜಲಿ’ ಎಂದು ಹ್ಯಾಶ್‌ ಟ್ಯಾಗ್‌ ಬಳಸಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಹಿಂದುಳಿದ ಸಮುದಾಯಕ್ಕೆ ಮಾಡಿದ ಅವಮಾನಕ್ಕಾಗಿ ರಾಮ್‌ ದೇವ್‌ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ವಿವಾದವಾಗುತ್ತಿದ್ದಂತೆ ಉಲ್ಟಾ ಹೊಡೆದ ರಾಮ್‌ದೇವ್, ತಮ್ಮ ಹೇಳಿಕೆಗಳು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರನ್ನು ಉದ್ದೇಶಿಸಿವೆ ಮತ್ತು ಒಬಿಸಿ ಸಮುದಾಯವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ರಾಮ್‌ದೇವ್ ಅವರು ತಮ್ಮ ಬ್ರಾಹ್ಮಣ ಗುರುತನ್ನು ಪ್ರತಿಪಾದಿಸುವುದು ಮತ್ತು ಆ ಮೂಲಕ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಸೂಚಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿತ್ತು.

ಈ ಕುರಿತು ಮಾದ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದ ರಾಮ್‌ದೇವ್, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದು ವಿಚಿತ್ರವಾಗಿ ಸಮಜಾಯಿಸಿ ಕೊಟ್ಟಿದ್ದಾರೆ. ವಿಡಿಯೋದಲ್ಲಿ ಒಬಿಸಿ ಎಂದು ಹೇಳುವುದು ಸ್ಪಷ್ಟವಾಗಿ ದಾಖಲಾಗಿದ್ದರೂ, ನಾನು ಹೇಳಿದ್ದು ಓವೈಸಿಯೇ ಹೊರತು ಒಬಿಸಿ ಅಲ್ಲ. ಅವರ (ಒವೈಸಿ) ಪೂರ್ವಿಕರು ದೇಶವಿರೋಧಿಗಳಾಗಿದ್ದರು. ನಾನು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ರಾಮದೇವ್ ಹೇಳಿದ್ದಾರೆ.

ವೈರಲ್‌ ವೀಡಿಯೊವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ ವಿಡಿಯೋದಲ್ಲಿ ರಾಮ್‌ದೇವ್  ಬ್ರಾಹ್ಮಣ ಗುರುತನ್ನು ಘೋಷಿಸುವುದನ್ನು ತೋರಿಸುತ್ತದೆ ಮತ್ತು “ಅಗ್ನಿಹೋತ್ರಿ ಬ್ರಾಹ್ಮಣ” ಸೇರಿದಂತೆ ವಿವಿಧ ಬ್ರಾಹ್ಮಣ ಗೋತ್ರಗಳನ್ನು ಹೇಳುವುದು ಸೆರೆಯಾಗಿದೆ ಎಂದು ಎನ್‌ಡಿಟಿವಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಟ್ರೈಬಲ್ ಆರ್ಮಿ ಸಂಸ್ಥಾಪಕ ಹಂಸರಾಜ್ ಮೀನಾ, ರಾಮ್‌ದೇವ್, ನೀವು ಬ್ರಾಹ್ಮಣರಾಗಿ, ಠಾಕೂರ್ ಆಗಿರಿ, ವ್ಯಾಪಾರಿಯಾಗಿರಿ.. ನಮಗೆ ಪರವಾಗಿಲ್ಲ ಆದರೆ ನೀವು ಜಾತಿ ಶ್ರೇಷ್ಠತೆಯ ಬೂಟಾಟಿಕೆಯನ್ನು ಹೇಗೆ ವ್ಯಕ್ತಪಡಿಸುತ್ತೀರಿ ಮತ್ತು OBC ಸಮುದಾಯವನ್ನು ಹೇಗೆ ಅವಮಾನಿಸುತ್ತೀರಿ?ಒಬಿಸಿ ಸಮುದಾಯವು ಪತಂಜಲಿಯ ಸರಕುಗಳನ್ನು ಬಹಿಷ್ಕರಿಸುವ ದಿನ ಈ ಅಂಗಡಿಯನ್ನು ಮುಚ್ಚಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ ಎಂದು #BoycottPatanjali ಎಂಬ ಹ್ಯಾಶ್‌ಟ್ಯಾಗ್ ಸೇರಿಸಿ ಪೋಸ್ಟ್‌ ಮಾಡಿದ್ದಾರೆ.

ಇದನ್ನು ಓದಿ: ಬುಡಕಟ್ಟು ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಗ್ರಾಮದ ಮುಖ್ಯಸ್ಥ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...