Homeಮುಖಪುಟಬುಡಕಟ್ಟು ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಗ್ರಾಮದ ಮುಖ್ಯಸ್ಥ

ಬುಡಕಟ್ಟು ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಗ್ರಾಮದ ಮುಖ್ಯಸ್ಥ

- Advertisement -
- Advertisement -

ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ದುಮಾರಿಯಾ ಬ್ಲಾಕ್‌ನಲ್ಲಿರುವ ಹಲವಾರು ಬುಡಕಟ್ಟು ಕುಟುಂಬಗಳು ತಮಗೆ ಗ್ರಾಮದ ಮುಖ್ಯಸ್ಥರು ಬಹಿಷ್ಕಾರ ಹಾಕಿದ್ದು, ಸರ್ಕಾರಿ ಯೋಜನೆಗಳಡಿಯಲ್ಲಿನ ಪ್ರಯೋಜನಗಳನ್ನು ಪಡೆಯುವುದನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾವು ‘ಸೊಹ್ರೈ’ ಹಬ್ಬವನ್ನು ಆಚರಿಸಿದ್ದೇವೆ ಎಂದು ಆದಿವಾಸಿ ಸಮುದಾಯದ ಜನರು ಹೇಳಿಕೊಂಡಿದ್ದು,  ಅ ಬಳಿಕ ಗ್ರಾಮದ ಮುಖ್ಯಸ್ಥ ರುಪಾಯಿ ಹಂಸಡಾ ಅವರು ಆದೇಶ ಹೊರಡಿಸಿದ್ದು, ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವುದನ್ನು ತಡೆಯುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಚೋಟಾ ಆಸ್ತಿಯ ಸುಮಾರು ಹನ್ನೆರಡು ಕುಟುಂಬಗಳು ಶುಕ್ರವಾರ ಜಿಲ್ಲಾಧಿಕಾರಿ ಮಂಜುನಾಥ ಭಜಂತ್ರಿ ಅವರನ್ನು ಸಂಪರ್ಕಿಸಿದ್ದು, ವಿಷಯದ ಬಗ್ಗೆ ತಿಳಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾವು ‘ಸೊಹ್ರೈ’ ಹಬ್ಬವನ್ನು ಆಚರಿಸಿದ್ದೇವೆ. ಅದರ ನಂತರ ಗ್ರಾಮ ಪ್ರಧಾನ ರುಪಾಯಿ ಹಂಸಡಾ ಅವರು ಆದೇಶ ಹೊರಡಿಸಿ  ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವುದನ್ನು ತಡೆಯುವುದಾಗಿ ಹೇಳಿದ್ದಾರೆ ಎಂದು ಆರೋಪಿಸಿದರು.

ಅವರು ಬಯಸಿದಂತೆ ನಾವು ಹಬ್ಬವನ್ನು ಆಚರಿಸಲಿಲ್ಲ. ಅದರ ನಂತರ ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಅಥವಾ ಹತ್ತಿರದ ಆಟದ ಮೈದಾನಕ್ಕೆ ಭೇಟಿ ನೀಡಲು ಅನುಮತಿಸಲಿಲ್ಲ ಎಂದು ಆದಿವಾಸಿ ಸಮುದಾಯದ ಜನರು ಆರೋಪಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಮಂಜುನಾಥ ಭಜಂತ್ರಿ ಮಾದ್ಯಮಗಳ ಜೊತೆ ಮಾತನಾಡಿದ್ದು, ಗ್ರಾಮದ ಪ್ರಧಾನ ಮತ್ತು ನೊಂದ ಕುಟುಂಬಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಈ ವಿಷಯವನ್ನು ಇತ್ಯರ್ಥಪಡಿಸಲು ಸಭೆಯನ್ನು ಕರೆಯುವಂತೆ ನಾನು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಮತ್ತು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಗ್ರಾಮದ ಮುಖ್ಯಸ್ಥ ನೀಡಿದ ಆದೇಶವು ಕಾನೂನು ಬಾಹಿರವಾಗಿದೆ ಮತ್ತು ಅಗತ್ಯವಿದ್ದರೆ ಗ್ರಾಮದ ಮುಖ್ಯಸ್ಥನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದನ್ನು ಓದಿ: ಅಯೋಧ್ಯೆಯಲ್ಲಿ ‘ರಾಮ’ನಿಗಿಂತ ‘ಮೋದಿ’ಯೇ ಹೆಚ್ಚು ಗೋಚರಿಸುತ್ತಿದ್ದಾರೆ: ಆರ್‌ಜೆಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...