Homeಅಂತರಾಷ್ಟ್ರೀಯಲೆಬನಾನ್‌ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ: ಹೆಚ್ಚಿದ ಪ್ರಾದೇಶಿಕ ಸಂಘರ್ಷದ ಭೀತಿ

ಲೆಬನಾನ್‌ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ: ಹೆಚ್ಚಿದ ಪ್ರಾದೇಶಿಕ ಸಂಘರ್ಷದ ಭೀತಿ

- Advertisement -
- Advertisement -

ಇಸ್ರೇಲ್‌- ಲೆಬನಾನ್‌ ಮೇಲೆ ರಾತ್ರೋ ರಾತ್ರಿ ವೈಮಾನಿಕ ದಾಳಿಯನ್ನು ನಡೆಸಿದೆ. ದಾಳಿಯಲ್ಲಿ ಹೆಜ್ಬೊಲ್ಲಾ ಕಮಾಂಡರ್‌ನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದು, ವಿಶ್ವಸಂಸ್ಥೆಯು ಯುದ್ಧ ವ್ಯಾಪಿಸುತ್ತಿರುವ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಗಾಝಾ ನಡುವಿನ ಯುದ್ಧದ ಮಧ್ಯೆ ಇಸ್ರೇಲ್‌ ಇರಾನ್‌ ಮತ್ತು ಲೆಬನಾನ್‌ ಮೇಲೆ ದಾಳಿ ನಡೆಸುತ್ತಿದ್ದು, ಪ್ರಾದೇಶಿಕ ಸಂಘರ್ಷದ ಭೀತಿಯನ್ನು ಹೆಚ್ಚಿಸಿದೆ.

ದಕ್ಷಿಣ ಲೆಬನಾನ್‍ನ ಅಸ್-ಸುಲ್ತಾನಿಯಾ ಪ್ರದೇಶದಲ್ಲಿ ಇಸ್ರೇಲ್‍ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ  `ರದ್ವಾನ್ ಪಡೆ’ಯ ಕಮಾಂಡರ್ ಅಲಿ ಅಹ್ಮದ್ ಹುಸೈನ್ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಇತರ ಮೂವರು ಹಿಜ್ಬುಲ್ಲಾ ಗುಂಪಿನ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ, ಲೆಬನಾನ್‍ನಿಂದ ಇಸ್ರೇಲ್ ಆಕ್ರಮಿತ ಗೊಲಾನ್ ಹೈಟ್ಸ್‍ಗೆ 10ಕ್ಕೂ ಅಧಿಕ ಕ್ಷಿಪಣಿ ದಾಳಿ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಲ್‍ಜಝೀರಾ ವರದಿ ಮಾಡಿದೆ. ಈ ಪ್ರದೇಶದಲ್ಲಿ ಸೇನಾ ನೆಲೆ ಮತ್ತು ವಾಯು ರಕ್ಷಣಾ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹಿಜ್ಬುಲ್ಲಾ ಹೋರಾಟಗಾರರು ತಿಳಿಸಿದ್ದಾರೆ.

ಹಿಜ್ಬುಲ್ಲಾ ಮತ್ತು ಇಸ್ರೇಲ್‌ ಮಿಲಿಟರಿಯು ಲೆಬನಾನ್‌ನ ದಕ್ಷಿಣ ಗಡಿಯಲ್ಲಿ ಗಾಝಾ ಯುದ್ಧದ ಮಧ್ಯೆ  ದಾಳಿಯನ್ನು ನಡೆಸುತ್ತಿದೆ. ಇದು ವಿಶಾಲವಾದ ಪ್ರಾದೇಶಿಕ ಸಂಘರ್ಷದ ಭಯವನ್ನು ಹೆಚ್ಚಿಸಿದೆ.

ಇಸ್ರೇಲ್‌ ದಾಳಿಗೆ ಕಳೆದ ಆರು ತಿಂಗಳಲ್ಲಿ ಸುಮಾರು 270 ಹೆಜ್ಬೊಲ್ಲಾ ಹೋರಾಟಗಾರರು ಬಲಿಯಾಗಿದ್ದಾರೆ. ಮಕ್ಕಳು, ವೈದ್ಯರು ಮತ್ತು ಪತ್ರಕರ್ತರು ಸೇರಿದಂತೆ ಸುಮಾರು 50 ನಾಗರಿಕರ ಹತ್ಯೆ ಕೂಡ ನಡೆದಿದೆ. ಹಿಜ್ಬುಲ್ಲಾದ ರಾಕೆಟ್ ದಾಳಿಗೆ 12 ಮಂದಿ ಇಸ್ರೇಲ್‌ ಸೈನಿಕರು ಮತ್ತು 6 ಮಂದಿ ನಾಗರಿಕರು ಹತ್ಯೆಯಾಗಿದ್ದಾರೆ. ಶೆಲ್ ದಾಳಿಯು ಗಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಕ್ಕೆ ಕಾರಣವಾಗಿದೆ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ಕೃಷಿ ಆರ್ಥಿಕತೆಯ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ.

ಇತ್ತೀಚೆಗೆ ಇರಾನ್‌ನಲ್ಲಿ ರಾಯಭಾರಿ ಕಚೇರಿಯ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿತ್ತು. ದಾಳಿಯಲ್ಲಿ ಐಆರ್‌ಜಿಸಿಯ ಎಲೈಟ್ ಕುಡ್ಸ್ ಫೋರ್ಸ್‌ನ ಹಿರಿಯ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ ಮತ್ತು ಉಪ ಜನರಲ್ ಮೊಹಮ್ಮದ್ ಹಾದಿ ಹಜ್ರಿಯಾಹಿಮಿ ಅವರು ಸಾವನ್ನಪ್ಪಿದ್ದರು. ಇಸ್ರೇಲ್‌ನ ಈ ಭಯೋತ್ಪಾದಕ ದಾಳಿಯನ್ನು ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್, ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ, ಸಿರಿಯಾದ ವಿದೇಶಾಂಗ ಸಚಿವ ಫೈಸಲ್ ಮೆಕ್ದಾದ್ ಸೇರಿ ಹಲವುರು ಖಂಡಿಸಿದ್ದರು. ಇಸ್ರೇಲ್‌ ವಿರುದ್ಧ ಪ್ರತಿಕಾರ ತೀರಿಸುವುದಾಗಿ ಹೇಳಿದ್ದರು.

ಇಬ್ಬರು ಉನ್ನತ ಕಮಾಂಡರ್‌ಗಳ ಹತ್ಯೆಯಿಂದ ಆಕ್ರೋಶಗೊಂಡಿರುವ ಇರಾನ್‌, ಇಸ್ರೇಲ್‍ನ ಯಾವುದೇ ರಾಯಭಾರಿ ಕಚೇರಿಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದೆ. ಇರಾನ್‌ ಮೇಲಿನ ದಾಳಿಯಲ್ಲಿ ಇಸ್ರೇಲ್ ನೇರವಾಗಿ ತನ್ನ ಒಳಗೊಳ್ಳುವಿಕೆಯನ್ನು ಒಪ್ಪಿಕೊಂಡಿಲ್ಲ. ಇಸ್ರೇಲ್ ಯಾವುದೇ ಪ್ರತಿಕ್ರಿಯೆಗೆ ಸಿದ್ಧವಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಕಳೆದ 6 ತಿಂಗಳಿನಿಂದ ಗಾಝಾದಲ್ಲಿ ಹತ್ಯಾಕಾಂಡವನ್ನು ನಡೆಸುತ್ತಿರುವ ಇಸ್ರೇಲ್‌ 33,000ಕ್ಕೂ ಅಧಿಕ ಮಂದಿಯನ್ನು ಹತ್ಯೆ ಮಾಡಿತ್ತು. ಆದರೂ ಯುದ್ಧ ದಾಹವನ್ನು ಮುಂದುವರಿಸಿರುವ ಇಸ್ರೇಲ್‌ ದೇಶವು ಇರಾನ್‌, ಲೆಬನಾನ್‌ ಮೇಲೆ ದಾಳಿಯನ್ನು ನಡೆಸುತ್ತಿದ್ದು, ಪ್ರತಿದಾಳಿ, ಪ್ರತಿರೋಧಗಳು ಕೂಡ ನಡೆಯುತ್ತಿದೆ. ಇದು ಇಸ್ರೇಲ್‌-ಗಾಝಾ ಯುದ್ಧದ ಮಧ್ಯೆ ಪ್ರಾದೇಶಿಕ ಸಂಘರ್ಷದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನು ಓದಿ:  ಬಿಜೆಪಿ ಕೊಟ್ಟ ಪಟ್ಟಿಯಂತೆ ಟಿಎಂಸಿ ನಾಯಕರನ್ನು ಟಾರ್ಗೆಟ್ ಮಾಡುತ್ತಿರುವ ಎನ್‌ಐಎ: ಸಾಕೇತ್ ಗೋಖಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...