Homeಅಂತರಾಷ್ಟ್ರೀಯಉತ್ತರ ಪ್ರದೇಶ: ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಪಾಕಿಸ್ತಾನದ ಪ್ರಜೆ!- ತನಿಖೆಗೆ ಆದೇಶ

ಉತ್ತರ ಪ್ರದೇಶ: ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಪಾಕಿಸ್ತಾನದ ಪ್ರಜೆ!- ತನಿಖೆಗೆ ಆದೇಶ

ಸುಮಾರು 35-40 ವರ್ಷಗಳ ಹಿಂದೆ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಪಾಕಿಸ್ತಾನದಿಂದ ಬಂದಿದ್ದ ಬಾನೋ ಬೇಗಂ, ನಂತರ ಸ್ಥಳೀಯ ನಿವಾಸಿ ಅಖ್ತರ್ ಅಲಿ ಎಂಬುವವರನ್ನು ವಿವಾಹವಾಗಿ, ಅಂದಿನಿಂದ ದೀರ್ಘವಾದಿ ವೀಸಾದಲ್ಲೇ ವಾಸಿಸುತ್ತಿದ್ದರು.

- Advertisement -
- Advertisement -

ಪಾಕಿಸ್ತಾನದ ಪ್ರಜೆಯಾಗಿರುವ ಮಹಿಳೆಯೊಬ್ಬರು ಉತ್ತರ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಹಂಗಾಮಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು, ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಪಾಕಿಸ್ತಾನದ ಪೌರತ್ವವವನ್ನು ಹೊಂದಿರುವ ಕರಾಚಿಯ ಬಾನೋ ಬೇಗಂ ಇಟಾ ಜಿಲ್ಲೆಯ ಜಲೇಶರ್‌ ಬ್ಲಾಕ್‌ನ ಗ್ರಾಮ ಪಂಚಾಯಿತಿಯ ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 40 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಬಾನೋ ಬೇಗಂ, ಜಿಲ್ಲೆಯ ಸ್ಥಳೀಯ ವ್ಯಕ್ತಿಯನ್ನು ಮದುವೆಯಾಗಿದ್ದಾರೆ.

“ಬಾನೋ ಬೇಗಂ ಅವರನ್ನು ಅಧ್ಯಕ್ಷೆ ಸ್ಥಾನದಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶಿಸಲಾಗಿದೆ. ಬಾನೋ ಬೇಗಂ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಇಟಾ ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ (DPRO) ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾಮ ಪಂಚಾಯತ್‌‌‌‌ ಚುನಾವಣೆ: ಮತ ಎಣಿಕೆಯಲ್ಲಿ ಲೋಪ ಅಭ್ಯರ್ಥಿ ರಾಜಣ್ಣ ಅವರಿಂದ ಜಿಲ್ಲಾಧಿಕಾರಿಗೆ ದೂರು

ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಲು, ಪಂಚಾಯಿತಿಯ ಹಂಗಾಮಿ ಅಧ್ಯಕ್ಷರಾಗಲು ಮಹಿಳೆಗೆ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳು ಹೇಗೆ ದೊರೆತವು ಎಂದು ಕಂಡುಹಿಡಿಯಲು ಇಟಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಖ್ಲಾಲ್ ಭಾರತಿ ತನಿಖೆಗೆ ಆದೇಶಿಸಿದ್ದಾರೆ. ಬಾನೋ ಬೇಗಂಗೆ ಸಹಾಯ ಮಾಡಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

65 ವರ್ಷದ ಬಾನೋ ಬೇಗಂ ಸುಮಾರು 35-40 ವರ್ಷಗಳ ಹಿಂದೆ ಇಟಾದಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಪಾಕಿಸ್ತಾನದಿಂದ ಬಂದಿದ್ದರು. ನಂತರ ಆಕೆ ಸ್ಥಳೀಯ ನಿವಾಸಿ ಅಖ್ತರ್ ಅಲಿ ಎಂಬುವವರನ್ನು ವಿವಾಹವಾಗಿ, ಅಂದಿನಿಂದ ದೀರ್ಘವಾದಿ ವೀಸಾದಲ್ಲೇ ವಾಸಿಸುತ್ತಿದ್ದರು. ಅಲ್ಲದೇ ಭಾರತದ ಪೌರತ್ವ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದರು ಎನ್ನಲಾಗಿದೆ.

ಬಾನೋ ಬೇಗಂ ಪಾಕಿಸ್ತಾನಿ ಪ್ರಜೆ ಎಂದು ಆರೋಪಿಸಿ ಗ್ರಾಮಸ್ಥರೊಬ್ಬರು ಆಕೆಯ ವಿರುದ್ಧ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

’2015 ರ ಸ್ಥಳೀಯ ಸಂಸ್ಥೆಯ ಚುನಾವಣೆಯ ಸಮಯದಲ್ಲಿ, ಬಾನೊ ಬೇಗಂ ಅವರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶೆಹ್ನಾಜ್ ಬೇಗಂ ಕಳೆದ ಜನವರಿ 9, 2020 ರಂದು ನಿಧನರಾಗಿದ್ದರು. ಶೆಹ್ನಾಜ್ ಅವರ ಮರಣದ ನಂತರ, ಬಾನೋ ಬೇಗಂ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದರು’ ಎಂದು DPRO ಅಲೋಕ್ ಪ್ರಿಯದರ್ಶಿ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ರಸ್ತೆಗಳಿಗೆ ಮುಸ್ಲಿಮರ ಹೆಸರಿಟ್ಟರೆ ಕೋಮು ಸಾಮರಸ್ಯ ಹಾಳಾಗುತ್ತದೆ: ಅನಂತಕುಮಾರ್ ಹೇಳಿಕೆಗೆ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...