Homeಕರೋನಾ ತಲ್ಲಣಮರೆಯಾಗಿದ್ದು ವರ್ಷ ಮಾತ್ರ; ಕೊರೊನಾವಲ್ಲ: ಹೊಸ ವರ್ಷದಂದು ಕೇಜ್ರಿವಾಲ್ ಎಚ್ಚರಿಕೆ

ಮರೆಯಾಗಿದ್ದು ವರ್ಷ ಮಾತ್ರ; ಕೊರೊನಾವಲ್ಲ: ಹೊಸ ವರ್ಷದಂದು ಕೇಜ್ರಿವಾಲ್ ಎಚ್ಚರಿಕೆ

ದೇಶದಲ್ಲಿ ಕೊರೊನಾ ಲಸಿಕೆ ಬರುವವರೆಗೆ ಕೊರೊನಾ ನಿಯಮಗಳನ್ನು ಪಾಲಿಸಿ, ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸಂದೇಶ ನೀಡಿದ್ದಾರೆ.

- Advertisement -
- Advertisement -

ಹೊಸ ವರ್ಷದ ಶುಭಾಶಯಗಳನ್ನು ಕೋರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜೊತೆಗೆ ಕೊರೊನಾ ಇನ್ನು ಹೋಗಿಲ್ಲ, ಮರೆಯಾಗಿದ್ದು ವರ್ಷ ಮಾತ್ರ, ಕೊರೊನಾ ನಿಯಮಗಳನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ವಿಟರ್‌ನಲ್ಲಿ ಶುಭಾಶಯ ಕೋರಿ ವಿಡಿಯೋ ಪೋಸ್ಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಕೊರೊನಾ ವೈರಸ್ ಸಾಂಕ್ರಾಮಿಕದ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.

“2020 ಕೇವಲ ಭಾರತವನ್ನಲ್ಲ, ಇಡೀ ವಿಶ್ವವನ್ನೇ ಸವಾಲುಗಳಿಗೆ ಒಡ್ಡಿತ್ತು. ಕೊರೊನಾ ಮಹಾಮಾರಿಯನ್ನು ಇಡೀ ಮಾನವ ಕುಲ ಎದುರಿಸಿದೆ. ಜನರ ಸೇವೆಗೆ ನಿಂತ ನಮ್ಮ ವೈದ್ಯಕೀಯ ಸಿಬ್ಬಂದಿಗೆ ನಾನು ಈ ಮೂಲಕ ಧನ್ಯವಾದ ತಿಳಿಸುತ್ತೆನೆ” ಎಂದಿದ್ದಾರೆ. ದೆಹಲಿಯ ಉತ್ತಮ ಆರೋಗ್ಯ ವ್ಯವಸ್ತೆ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 ಇದನ್ನೂ ಓದಿ: ‘ಗೋ ಕೊರೊನಾ ಗೋ’ ಖ್ಯಾತಿಯ ಕೇಂದ್ರ ಸಚಿವರ ಹೊಸ ಘೋಷಣೆ – ‘ನೋ ಕೊರೊನಾ ನೋ’

“ಆದರೆ, ಮರೆಯಾಗಿರುವುದು 2020 ವರ್ಷ ಮಾತ್ರ. ಕೊರೊನಾ ವೈರಸ್ ಅಲ್ಲ. ಆದಷ್ಟು ಬೇಗನೆ ದೇಶದಲ್ಲಿ ಕೊರೊನಾ ಲಸಿಕೆ ಬರುವ ನಂಬಿಕೆ ಇದೆ. ಅಲ್ಲಿಯವರೆಗೆ ಕೊರೊನಾ ನಿಯಮಗಳನ್ನು ಪಾಲಿಸಿ, ನಿಮ್ಮ ನಿಮ್ಮ ಕುಟುಂಬದ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸಂದೇಶ ನೀಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ (ಡಿ.31) 574 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ದೇಶದ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ರಾಹುಲ್ ಗಾಂಧಿ ಈ ವರ್ಷದಲ್ಲೂ ಅನ್ಯಾಯದ ವಿರುದ್ಧ ಹೋರಾಡಯತ್ತಿರುವ ರೈತರು ಮತ್ತು ಕಾರ್ಮಿಕರ ಜೊತೆಗೆ ನಾನಿದ್ದೇನೆ ಎಂದು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.


ಇದನ್ನೂ ಓದಿ: ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಸಿದ ಮಂಗಳಮುಖಿಯರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 4 ಜನ ಆಯ್ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಬಡವರು ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ..’; ಪ್ರಧಾನಿ ಮೋದಿ...

0
'ದೇಶದ ಬಡವರು ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ. 'ಪ್ರತಿಪಕ್ಷಗಳ ಇಂಡಿಯಾ...