ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಇಂದು ವಾಗ್ದಾಳಿ ನಡೆಸಿದ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್, “ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ (NITI) ಆಯೋಗ್ ಸಭೆಯಲ್ಲಿ ಅವರ ಮೈಕ್ ಅನ್ನು ಮ್ಯೂಟ್ ಮಾಡಿರುವುದು ಅವಮಾನ” ಎಂದು ಹೇಳಿದ್ದಾರೆ.
“ಮುಖ್ಯಮಂತ್ರಿಯ ಮೈಕ್‌ಗಳನ್ನು ಮ್ಯೂಟ್ ಮಾಡುವ ಈ ಅಭ್ಯಾಸವು ಪ್ರಜಾಪ್ರಭುತ್ವದ ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ” ಎಂದು ರಾವತ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ನವದೆಹಲಿಯಲ್ಲಿ ಶನಿವಾರ ನಡೆದ ನೀತಿ ಆಯೋಗದ ಸಭೆಯಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ, “ಇದು ಅವಮಾನಕರವಾಗಿದೆ; ನಾನು ಮುಂದಿನ ಯಾವುದೇ ಸಭೆಗಳಿಗೆ ಹಾಜರಾಗುವುದಿಲ್ಲ” ಎಂದು ಹೇಳಿದರು.
“ನಾನು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿ ಹೊರಬಂದಿದ್ದೇನೆ. ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ ನೀಡಲಾಯಿತು, ಅಸ್ಸಾಂ, ಗೋವಾ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿಗಳು 10-12 ನಿಮಿಷಗಳ ಕಾಲ ಮಾತನಾಡಿದರು. ಕೇವಲ 5 ನಿಮಿಷಗಳ ನಂತರ ನನ್ನನ್ನು ತಡೆದರು; ಇದು ಅನ್ಯಾಯ” ಎಂದು ಮಮತಾ ಸುದ್ದಿಗಾರರಿಗೆ ತಿಳಿಸಿದರು.
ಶಿಂಧೆ ವಿರುದ್ಧ ವಾಗ್ದಾಳಿ
ಕೇಂದ್ರ ಬಜೆಟ್‌ನಲ್ಲಿ ಮಹಾರಾಷ್ಟ್ರಕ್ಕೆ ನೀಡಿರುವ ತೆರಿಗೆ ಹಂಚಿಕೆ ಮತ್ತು ಹಣದ ಬಗ್ಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ವಿರುದ್ಧ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ವಾಗ್ದಾಳಿ ನಡೆಸಿದರು. ಕೇಂದ್ರವು ವಿತರಿಸುವ ಹಣ ಭಾರತದ ಜನತೆಗೆ ಸೇರಿದ್ದು ಎಂದು ಹೇಳಿದರು. ಇದನ್ನು ವಿವಿಧ ತೆರಿಗೆಗಳಾಗಿ ಸಂಗ್ರಹಿಸಲಾಗುತ್ತದೆ. ಮಹಾರಾಷ್ಟ್ರಕ್ಕೆ ಏನು ಸಿಕ್ಕಿತು.. ನಮ್ಮ ಮುಖ್ಯಮಂತ್ರಿ ಬರಿಗೈಯಲ್ಲಿ ಹಿಂತಿರುಗಿದರು ಎಂದರು.
ಬ್ಯಾನರ್ಜಿ ಅವರು ಸಭೆಯಲ್ಲಿ ಭಾಗವಹಿಸಿದ ಏಕೈಕ ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ತಮ್ಮ ಭಾಷಣದ ಐದು ನಿಮಿಷಗಳಲ್ಲಿ ತಮ್ಮ ಮೈಕ್ ಅನ್ನು ಸ್ವಿಚ್ ಆಫ್ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಆದರೆ, ಆಂಧ್ರ ಪ್ರದೇಶ, ಗೋವಾ, ಅಸ್ಸಾಂ ಮತ್ತು ಛತ್ತೀಸ್‌ಗಢದ ಇತರ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಅವಧಿಯವರೆಗೆ ಮಾತನಾಡಲು ಅವಕಾಶ ನೀಡಲಾಯಿತು. ಕೇಂದ್ರ ಸರ್ಕಾರವು “ಸಹಕಾರಿ ಫೆಡರಲಿಸಂ” ಅನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು.
“ಕಳೆದ ಮೂರು ವರ್ಷಗಳಿಂದ ಮನರೇಗಾ ಹಣವನ್ನು ಕೇಂದ್ರವು ವಂಚಿತಗೊಳಿಸುತ್ತಿದೆ” ಎಂದು ಸಂಜಯ್ ಆರೋಪಿಸಿದರು.
ಇದನ್ನೂ ಓದಿ; “ನನಗೆ ಮಾತನಾಡಲು ಬಿಟ್ಟಿಲ್ಲ”: ನೀತಿ ಆಯೋಗದ ಸಭೆಯಿಂದ ಹೊರ ನಡೆದ ಮಮತಾ ಬ್ಯಾನರ್ಜಿ


