ಒಬ್ಬ ವ್ಯಕ್ತಿ ಮತ್ತು ಆತನ ನಾಲ್ವರು ಪುತ್ರಿಯರು ದೆಹಲಿಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ತಂದೆ ಮೊದಲು ಮಕ್ಕಳನ್ನು ಕೊಂದು ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಶುಕ್ರವಾರ ಕಟ್ಟಡದ ಮಾಲೀಕರಿಂದ ಕರೆ ಬಂದಿದ್ದು, ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಮಾಹಿತಿ ನೀಡಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.ತನ್ನ 4 ಹೆಣ್ಣು ಮಕ್ಕಳನ್ನು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನೆರೆಹೊರೆಯವರು ಅವರನ್ನು ಕೊನೆಯದಾಗಿ ಸೆಪ್ಟೆಂಬರ್ 24 ರಂದು ನೋಡಿದ್ದರು. ಹೀಗಾಗಿ ಕಟ್ಟಡದ ಮಾಲೀಕ ಅವರ ಮನೆಯ ಬಾಗಿಲು ತಟ್ಟಿದ್ದು ತೆರೆಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಾವಿಗೀಡಾದವರ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಮತ್ತು ಅವರ ಮನೆಯಲ್ಲಿ ಮೂರು ಪ್ಯಾಕೆಟ್ ವಿಷ, ಐದು ಗ್ಲಾಸ್ ಮತ್ತು ಅನುಮಾನಾಸ್ಪದ ದ್ರವವನ್ನು ಹೊಂದಿರುವ ಚಮಚ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಣ್ಣು ಮಕ್ಕಳ ಸೊಂಟ ಮತ್ತು ಕುತ್ತಿಗೆಗೆ ಕೆಂಪು ದಾರವನ್ನು ಕಟ್ಟಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿಗೀಡಾದ ವ್ಯಕ್ತಿಯನ್ನು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಹೀರಾಲಾಲ್ ಶರ್ಮಾ (46) ಮತ್ತು ಅವರ ಪುತ್ರಿಯರಾದ ನೀತು(26), ನಿಕ್ಕಿ(24), ನೀರು(23) ಮತ್ತು ನಿಧಿ (20) ಎಂದು ಗುರುತಿಸಲಾಗಿದೆ. ಇಬ್ಬರು ಹೆಣ್ಣುಮಕ್ಕಳು ವಿಕಲಚೇತನರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂಓದಿ: FACT CHECK : ಸಾವರ್ಕರ್ ಸಿನಿಮಾ ಆಸ್ಕರ್‌ಗೆ ಪ್ರವೇಶ ಪಡೆದಿಲ್ವಾ? ನಿರ್ಮಾಪಕರು ಸುಳ್ಳು ಹೇಳಿದ್ರಾ?
“ಬಾಗಿಲು ಒಳಗಿನಿಂದ ಚಿಲಕ ಹಾಕಲಾಗಿತ್ತು ಮತ್ತು ಅಗ್ನಿಶಾಮಕ ದಳದ ತಂಡದ ಸಹಾಯದಿಂದ ಪೊಲೀಸರು ತೆರೆಯಲು ಸಾಧ್ಯವಾಯಿತು. ಫ್ಲಾಟ್‌ನಲ್ಲಿ ಎರಡು ಕೊಠಡಿಗಳಿವೆ. ಮೊದಲ ಕೊಠಡಿಯಲ್ಲಿಯೇ ಒಬ್ಬ ಪುರುಷ ಶವವಾಗಿ ಬಿದ್ದಿರುವುದು ಕಂಡುಬಂದರೆ ನಾಲ್ಕು ಹೆಣ್ಣುಗಳು ಇನ್ನೊಂದು ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೆರೆಹೊರೆಯವರು ಮತ್ತು ಹತ್ತಿರದ ಸಂಬಂಧಿಕರೊಂದಿಗೆ ತನಿಖೆಯ ವೇಳೆ ಸಾವಿಗೀಡಾ ವ್ಯಕ್ತಿಯ ಪತ್ನಿ ಸುಮಾರು ಒಂದು ವರ್ಷದ ಹಿಂದೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ತನ್ನ 4 ಹೆಣ್ಣು ಮಕ್ಕಳನ್ನು
ಪತ್ನಿಯ ಮರಣದ ನಂತರ ಕುಟುಂಬ ವ್ಯವಹಾರಗಳಲ್ಲಿ ಆಸಕ್ತಿ ವಹಿಸುವುದನ್ನು ಸಾವಿಗೀಡಾದ ಹೀರಾಲಾಲ್ ನಿಲ್ಲಿಸಿದ್ದ ಎಂದು ಅವರ ಸಂಬಂಧಿಕರು ಹೇಳಿದ್ದಾರೆ. ಅವರು ಆಸ್ಪತ್ರೆಯಲ್ಲಿ ತಮ್ಮ ಹೆಣ್ಣುಮಕ್ಕಳ ಚಿಕಿತ್ಸೆಯಲ್ಲಿ ಯಾವಾಗಲೂ ನಿರತರಾಗಿದ್ದರು ಎಂದು ಅವರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ – 104
ವಿಡಿಯೊ ನೋಡಿ: ಅಟ್ರಾಸಿಟಿ ಕಾದಂಬರಿ ಚರ್ಚೆಯಲ್ಲಿ ವಿಕಾಸ್ ಮತ್ತು ಗುರುಪ್ರಸಾದ್ ಪ್ರತಿಕ್ರಿಯೆ


