Homeಕರ್ನಾಟಕಅಕ್ಯಾಡೆಮಿ ಅಧ್ವಾನ : ಮನೆಹಾಳರು ಯಾರು?

ಅಕ್ಯಾಡೆಮಿ ಅಧ್ವಾನ : ಮನೆಹಾಳರು ಯಾರು?

ನಾವು ಆ ಹುದ್ದೆಗೆ ಅರ್ಹರೇ ಅಲ್ಲ. ಹುದ್ದೆ ಕೇಳಿ ಅರ್ಜಿಯೂ ಹಾಕಿಲ್ಲ. ನಮ್ಮನ್ನು ಏಕೆ ಆಯ್ಕೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ” ಎಂದು ಅಪಸ್ವರ ಎತ್ತಿದ್ದಾರೆ...

- Advertisement -
- Advertisement -

ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತ್ತೀಚೆಗೆ ತನ್ನ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು 16 ವಿವಿಧ ಅಕಾಡೆಮಿ ಹಾಗೂ ಅಧ್ಯಯನ ಕೇಂದ್ರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಿತ್ತು. ಆದರೆ, ಹೀಗೆ ಸರ್ಕಾರದಿಂದ ಅಕಾಡೆಮಿಗೆ ಆಯ್ಕೆಯಾದ ಸದಸ್ಯರ ಪೈಕಿ ಬಹುತೇಕರು ಬಿಜೆಪಿ ಹಾಗೂ ಆರ್‍ಎಸ್‍ಎಸ್ ಭಟ್ಟಂಗಿಗಳು, ಅಕಾಡೆಮಿ ನೇಮಕಾತಿಯಲ್ಲಿ ಸಾಮಾಜಿಕ ಭೌಗೋಳಿಕ ನ್ಯಾಯ ಪಾಲಿಸಿಲ್ಲ ಎಂಬುದು ಕಾಂಗ್ರೆಸ್ ನಾಯಕರ ಆರೋಪ.

ರಾಜ್ಯದ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು-ಸದಸ್ಯರನ್ನು ನೇಮಕ ಮಾಡುವುದು ಹಾಗೂ ಈ ನೇಮಕಾತಿ ಹಿಂದೆಯೇ ಕೆಲವು ಅಪಸ್ವರಗಳು, ಟೀಕೆಟಿಪ್ಪಣಿಗಳು ಕೇಳಿಬರುವುದು ಸಾಹಿತ್ಯ ವಲಯದಲ್ಲಿ ತೀರಾ ಸಾಂಪ್ರದಾಯಿಕ ಮತ್ತು ವಾಡಿಕೆ. ಅಂತಹದ್ದೇ ವಾಡಿಕೆಯ ಟೀಕೆ ಈ ಬಾರಿಯೂ ಕೇಳಿಬಂದದ್ದು ಅಚ್ಚರಿ ಏನಲ್ಲ.

ಅಸಲಿಗೆ ಅಕಾಡೆಮಿ ಹಂತದ ಅಧ್ಯಕ್ಷರು ಸದಸ್ಯರ ಆಯ್ಕೆ ಕುರಿತ ಕಾಂಗ್ರೆಸ್ ನಾಯಕರ ಇಂತಹ ಟೀಕೆಗಳಿಗೆ ನಿಜಕ್ಕೂ ಅಷ್ಟಾಗಿ ಮಾನ್ಯತೆ ಸಿಕ್ಕಿರಲಿಲ್ಲ. ಅಕ್ಷರಶಃ ಕೆಲವು ದಿನ ಪತ್ರಿಕೆಗಳಲ್ಲಿ ಮಾತ್ರ ಈ ಹೇಳಿಕೆ ಮುದ್ರಣವಾಗಿತ್ತು. ಆ ಮುದ್ರಣವೂ ಕೇವಲ ಮೂರು ಸಾಲುಗಳಿಗಷ್ಟೇ ಮೀಸಲಾಗಿತ್ತು.

ಆದರೆ, ಹೀಗೆ ಮೂರು ಸಾಲಿಗೆ ಮಾತ್ರ ಮೀಸಲಾಗಿದ್ದ ಕಾಂಗ್ರೆಸ್ ನಾಯಕರ ಟೀಕೆಗೆ ಮತ್ತಷ್ಟು ಮೈಲೇಜ್ ಕೊಟ್ಟದ್ದು ಸಚಿವ ಸಿ.ಟಿ. ರವಿ ಅವರ ಆ ಒಂದು ಹೇಳಿಕೆ.

ಅಕಾಡೆಮಿಗಳಿಗೆ ಸದಸ್ಯರ ನೇಮಕ ವಿಚಾರ ಕುರಿತಂತೆ ಮಾಧ್ಯಮಗಳ ಎದುರು ಏಕಾಏಕಿ ಹೇಳಿಕೆ ನೀಡಿದ್ದ ಸಿ.ಟಿ. ರವಿ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಅಕಾಡೆಮಿಗಳಿಗೆ ಸದಸ್ಯರನ್ನು ನೇಮಕ ಮಾಡುವಾಗ ಮನೆಹಾಳು ಜನರನ್ನು ದೂರ ಇಡಲಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಕಟ್ಟಲು ನಾವು ಬದ್ಧರಿದ್ದೇವೆ. ಆದರೆ, ಈ ಕ್ಷೇತ್ರವನ್ನು ಕದಡುವ, ಒಡೆಯುವ ಮನಸ್ಥಿತಿ ಇರುವ ಜನರನ್ನು ನೇಮಕ ಮಾಡಿಲ್ಲ. ಈ ಸಲ ಮನೆಹಾಳು ಮಂದಿಗೆ ಅಧಿಕಾರ ಕೊಟ್ಟಿಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸಚಿವರ ಈ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಕಿಡಿ ಹೊತ್ತಿಸಿದೆ. ಈ ಹೇಳಿಕೆಯ ವಿರುದ್ಧ ಕನ್ನಡ ಸಾಹಿತ್ಯ ಲೋಕ ಇದೀಗ ಮುರಿದುಕೊಂಡು ಬಿದ್ದಿದೆ. ಸಿ.ಟಿ. ರವಿ ಅವರ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಪಡಿಸಲಾಗುತ್ತಿದೆ.

ಬಿಜೆಪಿ ಸರ್ಕಾರ ಪ್ರಸ್ತುತ ಅಕಾಡೆಮಿ ಸದಸ್ಯರ ಆಯ್ಕೆ ವಿಚಾರದಲ್ಲಿ ಮನೆಹಾಳರನ್ನು ಅಧಿಕಾರದ ವ್ಯಾಪ್ತಿಗೆ ಬಿಟ್ಟುಕೊಂಡಿಲ್ಲ ಎಂದಾದರೆ ಈವರೆಗೆ ಅಕಾಡೆಮಿಯಲ್ಲಿ ಕೆಲಸ ನಿರ್ವಹಿಸಿದವರು ಮನೆಹಾಳು ಜನರೇ? ಸರಿ, ಸಚಿವರು ಹೇಳಿದಂತೆ ಹಿಂದೆಲ್ಲ ನೇಮಕಗೊಂಡ ಮನೆಹಾಳರ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ ಅಂತ ನೋಡೋಣ. ಬೇರೆ ಅಕ್ಯಾಡೆಮಿಗಳ ಮಾತಿರಲಿ, ಸಾಹಿತ್ಯ ಅಕಾಡೆಮಿಯನ್ನೇ ಪರಿಗಣಿಸುವುದಾದರೆ ಅ.ನ.ಕೃ, ಕೆ.ವಿ.ಶಂಕರೇಗೌಡ್ರು, ಹಾ.ಮಾ.ನಾಯಕ್, ನಿತ್ಯೋತ್ಸವ ಕವಿ ನಿಸಾರ್ ಅಹಮದ್, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಗಿರಡ್ಡಿ ಗೋವಿಂದರಾಜರು, ಗೀತಾ ನಾಗಭೂಷಣ…. ಇಂತವರೆಲ್ಲ ಅಧ್ಯಕ್ಷರಾಗಿದ್ದಂತವರು. ಇಲ್ಲಿಯವರೆಗೆ ಇವರನ್ನೆಲ್ಲ ಕನ್ನಡದ, ಕರ್ನಾಟಕದ ಹೆಮ್ಮೆ ಎಂದೇ ನಾವೇ ಭಾವಿಸಿದ್ದೆವು. ಆದರೆ ಸಚಿವರ ಗೀತೋಪದೇಶದಿಂದ ಇವರೆಲ್ಲ ಅನಾಮತ್ತು `ಮನೆಹಾಳರ’ ಪಟ್ಟಿಗೆ ಸೇರಿದಂತಾಗಿದೆ. ಇಂತಹ ಹೇಳಿಕೆಗಳ ಮೂಲಕ ಸಚಿವ ಸಿ.ಟಿ. ರವಿ ಕನ್ನಡ ಸಾಹಿತಿಗಳನ್ನು ಅವಮಾನಿಸಿದ್ದಾರೆ ಎಂಬುದು ಟೀಕಾಕಾರದ ಪ್ರಬಲ ವಾದ.

ಆದರೆ, ಸಚಿವ ಸಿ.ಟಿ. ರವಿ ಹಾಗೂ ಅವರ ಟೀಕಾಕಾರರ ನಡುವಿನ ವಾಗ್ಯುದ್ಧ ಜೋರಾಗುತ್ತಿದ್ದಂತೆ ಬ್ಯಾರಿ ಅಕಾಡೆಮಿಯಿಂದ ಕೇಳಿಬರುತ್ತಿರುವ ಮಾತುಗಳು ಸರ್ಕಾರಕ್ಕೆ ಮತ್ತು ಸಚಿವರಿಗೆ ಮತ್ತಷ್ಟು ಇರಿಸುಮುರಿಸಿಗೆ ಕಾರಣವಾಗಿದೆ.

ಅಸಲಿಗೆ ಬ್ಯಾರಿ ಅಕಾಡೆಮಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿರುವ ಡಾ. ಮುನೀರ್ ಬಾವ, ಫಝಲ್ ಆಸೈಗೋಳಿ ಮತ್ತು ಸಿರಾಜುದ್ದೀನ್ ಮುಡಿಪು ಎಂಬ ಮೂವರೂ ಸಾಹಿತಿಗಳಲ್ಲ, ಕವಿಗಳೂ ಅಲ್ಲ, ಅಲ್ಲದೆ ಇವರಿಗೆ ಬ್ಯಾರಿ ಭಾಷೆಯೂ ಬರಲ್ಲ. ಈ ಮೂವರು ಇತ್ತೀಚೆಗೆ ಸ್ವತಃ ಮಾಧ್ಯಮಗಳ ಎದುರು ಬಹಿರಂಗ ಹೇಳಿಕೆ ನೀಡಿದ್ದು, “ನಾವು ಆ ಹುದ್ದೆಗೆ ಅರ್ಹರೇ ಅಲ್ಲ. ಹುದ್ದೆ ಕೇಳಿ ಅರ್ಜಿಯೂ ಹಾಕಿಲ್ಲ. ನಮ್ಮನ್ನು ಏಕೆ ಆಯ್ಕೆ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ” ಎಂದು ಅಪಸ್ವರ ಎತ್ತಿದ್ದಾರೆ. ಅಲ್ಲದೆ, ಈ ಹುದ್ದೆಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವಂತೆಯೂ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದ್ದಾರೆ.

ಬ್ಯಾರಿ ಅಕಾಡೆಮಿಯಿಂದ ಕೇಳಿಬರುತ್ತಿರುವ ಈ ಮಾತುಗಳು ಹಾಗೂ ಗೊಂದಲ ಅಸಲಿಗೆ ಮನೆಹಾಳರು ಯಾರು? ಎಂಬ ಕುರಿತು ಅಕಾಡೆಮಿಗಳಿಗೆ ಸದಸ್ಯರನ್ನು ನೇಮಕ ಮಾಡಿದ ರಾಜ್ಯ ಸರ್ಕಾರ ಕಡೆಗೆ ಬೊಟ್ಟು ಮಾಡುತ್ತಿದೆ. ಅಸಲಿಗೆ ಬ್ಯಾರಿ ಅಕಾಡೆಮಿ ಕೆಲಸವೇನು? ಇತಿಹಾಸವೇನು? ಇಲ್ಲಿದೆ ಡೀಟೈಲ್ಸ್

ಏನದು ಬ್ಯಾರಿ ಅಕಾಡೆಮಿ ರಾದ್ಧಾಂತ?
ಕನ್ನಡ ರಾಜ್ಯದ ನಾಡಭಾಷೆಯಾದರೂ, ಕರ್ನಾಟಕ ಎಂಬುದು ವಿವಿಧ ಭಾಷೆ ಮತ್ತು ಶ್ರೀಮಂತ ಸಂಸ್ಕೃತಿಗಳ ಕಣಜ. ಪ್ರತಿ 40 ಕಿಮಿ ಗೂ ಭಾಷೆ ಮತ್ತು ಸಂಸ್ಕೃತಿಯಲ್ಲಿರುವ ಬದಲಾವಣೆ, ಜನರ ಬದುಕುವ ಕ್ರಮದಲ್ಲಿನ ವಿಭಿನ್ನತೆಯನ್ನು ನಾವಿಲ್ಲಿ ಕಾಣಬಹುದು.ಭಾಗಶಃ ಭಾರತದ ಬೇರೆ ಯಾವ ರಾಜ್ಯಕ್ಕೂ ಇಲ್ಲದಷ್ಟು ವಿವಿಧತೆಯ ಶ್ರೀಮಂತಿಕೆಯನ್ನು ಹೊಂದಿರುವ ರಾಜ್ಯ ಕರ್ನಾಟಕ ಎಂದರೆ ತಪ್ಪಾಗಲಾರದು.

ರಾಜ್ಯದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಅಕಾಡೆಮಿ ರಚಿಸಲಾಗಿದೆ. ಕರ್ನಾಟಕ ಸಾಹಿತ್ಯ ಪರಿಷತ್ ಮೂಲಕ ಭಾಷೆಯ ಅಭಿವೃದ್ಧಿಗೆ, ಸಾಹಿತ್ಯ ಕೃಷಿಗೆ ಸಾಕಷ್ಟು ಪ್ರೇರಣೆ ನೀಡಲಾಗುತ್ತಿದೆ. ಇದೇ ರೀತಿ ಕನ್ನಡದ ಸಹೋದರ ಭಾಷೆಯಾದ ತುಳು, ಕೊಂಕಣಿ, ಕೊಡವ ಭಾಷೆಗಳ ಅಭಿವೃದ್ಧಿಗೂ ಕರ್ನಾಟಕ ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಅಕಾಡೆಮಿ ರಚಿಸಲಾಗಿದೆ.
ಒಂದು ಭಾಷೆಯ ಅಭಿವೃದ್ಧಿಗೆ ಅಕಾಡೆಮಿ ರಚಿಸಲಾಗಿದೆ ಎಂದಾದರೆ ಆ ಭಾಷೆಗೆ ಸರ್ಕಾರದಿಂದ ಮಾನ್ಯತೆ ಸಿಕ್ಕಿದೆ ಎಂದೇ ಅರ್ಥ. ಕೊಂಕಣಿ, ಕೊಡವ ಹಾಗೂ ತುಳು ಭಾಷೆಯಂತೆ ಕರಾವಳಿ ಭಾಗದಲ್ಲಿ ಪ್ರಚಲಿತವಿರುವ ಮತ್ತೊಂದು ಭಾಷೆಯೇ ಬ್ಯಾರಿ. ಉರ್ದು ಬಾಷೆಗೂ ಅಕಾಡೆಮಿ ರಚಿಸಿರುವ ರಾಜ್ಯ ಸರ್ಕಾರ ತೀರಾ ಇತ್ತೀಚೆಗೆ ಬ್ಯಾರಿ ಭಾಷೆಗೂ ಒಂದು ಅಕಾಡೆಮಿ ರಚಿಸಿತ್ತು.
ಕರಾವಳಿ ಹಾಗೂ ಕೊಡಗು ಭಾಗದಲ್ಲಿ ಬಹುಪಾಲು ಇಸ್ಲಾಂ ಜನರಿಂದ ಬಳಕೆಯಾಗುತ್ತಿರುವ ಭಾಷೆಗಳಲ್ಲಿ ಬ್ಯಾರಿ ಎಂಬುದು ಚಿರಪರಿಚಿತ ಭಾಷೆ. ಕನ್ನಡ ಭಾಷೆಯಷ್ಟೇ ಪ್ರಾಚೀನ ಇತಿಹಾಸ ಹೊಂದಿರುವ ಬ್ಯಾರಿ ಭಾಷೆಯಲ್ಲಿ ಜನಪದ ಸಾಹಿತ್ಯದ ಭಂಡಾರವೇ ಇದೆ. ಬ್ಯಾರಿ ಜನರ ಮದುವೆ ಸಮಾರಂಭಗಳಲ್ಲಿ, ಹಬ್ಬದ ದಿನಗಳಲ್ಲಿ, ಧಾರ್ಮಿಕ ದಿನಾಚರಣೆಗಳ ಸಂದರ್ಭದಲ್ಲಿ ಹೆಂಗಸರು, ಮಕ್ಕಳು ಹಾಗೂ ಪುರುಷರು ಬ್ಯಾರಿ ಜನಪದ ಸಾಹಿತ್ಯವನ್ನು ಹಾಡಿ ಕುಣಿದು ಸಂತೋಷ ಪಡುತ್ತಾರೆ. ಆದರೆ, ಇಂತಹ ಬ್ಯಾರಿ ಜನಪದ ಸಾಹಿತ್ಯ ಇಂದು ನವ ನಾಗರಿಕತೆಯ ಸೆಳೆತಕ್ಕೆ ಸಿಲುಕಿ ಅಳಿವಿನ ಅಂಚಿಗೆ ಸರಿದಿದೆ.

 

 

ಹೀಗಾಗಿ ಇಂತಹ ಶ್ರೀಮಂತ ಜನಪದ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಬ್ಯಾರಿ ಸಮಾಜದ ಪ್ರತಿಭಾವಂತ ಲೇಖಕರು, ಲೇಖಕಿಯರ ಪ್ರತಿಭೆಯನ್ನು ಪೋಷಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಈ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಬ್ಯಾರಿ ಅಕಾಡೆಮಿಯನ್ನು ಸ್ಥಾಪಿಸಿತ್ತು. ಇದರ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ.

ಕಳೆದ ಒಂದು ದಶಕದಿಂದ ಬ್ಯಾರಿ ಭಾಷೆ, ಸಾಹಿತ್ಯ ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬ್ಯಾರಿ ಸಂಸ್ಕೃತಿಗೆ ಪೂರಕವಾಗಿ ಬ್ಯಾರಿಗಳ ವಿಶಿಷ್ಟ ಹಬ್ಬಗಳಾದ ಪೆರ್ನಾಲ್, ಸಂದೋಲ ಹಬ್ಬಗಳನ್ನು ಬ್ಯಾರಿ ಜನರ ನಡುವೆ ಸಡಗರದಿಂದ ಆಚರಿಸಲಾಗುತ್ತಿದೆ. ಬ್ಯಾರಿ ಜಾನಪದ ಸಂಗೀತ, ನಾಟಕಗಳಿಗೆ ಸಂಬಂಧಿಸಿದಂತೆ ಉತ್ಸವ, ಸಮಾವೇಶ, ಸಮ್ಮೇಳನ, ದಫ್ ಸ್ಪರ್ಧೆ, ಬ್ಯಾರಿ ನಾಟಕ ಸ್ಪರ್ಧೆ ಮತ್ತು ಬ್ಯಾರಿ ಜಾನಪದ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧೆಡೆಗಳಲ್ಲಿ ಬ್ಯಾರಿ ಅಕಾಡೆಮಿ ವತಿಯಿಂದ ಆಯೋಜಿಸಲಾಗುತ್ತಿದೆ.

ಅಳಿವಿನ ಅಂಚಿನಲ್ಲಿರುವ ಬ್ಯಾರಿ ಸಂಸ್ಕೃತಿಯನ್ನು ಭಾಷೆಯನ್ನು ಉಳಿಸಿಕೊಳ್ಳಲು ಇಂತಹ ಹತ್ತಾರು ಕಾರ್ಯಕ್ರಮಗಳ ಅಗತ್ಯ ಇರುವಂತೆ, ಇಂತಹ ಅಕಾಡೆಮಿಗಳಿಗೆ ಭಾಷೆಯ ಮೇಲೆ ಪ್ರೀತಿ ಇರುವ ಹಾಗೂ ಈ ಕ್ಷೇತ್ರದಲ್ಲಿ ವಿಫುಲ ಕೃಷಿ ಮಾಡಿರುವ ವ್ಯಕ್ತಿಗಳ ಅಗತ್ಯತೆಯೂ ಇದೆ. ಅಧಿಕಾರ ವಲಯದಲ್ಲಿ ಅಂತವರು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಆದರೆ, ಇಂತಹ ಅಕಾಡೆಮಿಗಳ ಜವಾಬ್ದಾರಿಯುತ ಹುದ್ದೆಗೆ ಆಡಳಿತದ ಚುಕ್ಕಾಣಿ ಹಿಡಿದಿರುವವರು ಅಷ್ಟೇ ಬೇಜವಾಬ್ದಾರಿಯಿಂದ ಬ್ಯಾರಿ ಭಾಷೆಯ ಕುರಿತು ಅರಿವಿಲ್ಲದ, ಸಾಹಿತಿಗಳಲ್ಲದ ಹಾಗೂ ಕೊನೆಗೆ ಈ ಹುದ್ದೆಯನ್ನು ಕೋರಿ ಅರ್ಜಿಯನ್ನೂ ಹಾಕದ ಅನಾಮಧೇಯ ಜನರನ್ನು ಆ ಸ್ಥಾನಗಳಿಗೆ ತಂದು ಕೂರಿಸಿರುವುದು ಯಾವ ಪುರುಷಾರ್ಥದ ಮನೆ ಉದ್ಧಾರಕ ಕೆಲಸ? ಎಂಬುದು ಪ್ರಸ್ತುತ ಸಾಹಿತ್ಯ ವಲಯದಲ್ಲಿ ಸಚಿವ ಸಿ.ಟಿ. ರವಿ ವಿರುದ್ಧ ಕೇಳಿಬರುತ್ತಿರುವ ಕಟುಪ್ರಶ್ನೆ. ಆದರೆ, ಈ ಕುರಿತ ಟೀಕೆಗೆ ಅವರು ಉತ್ತರಿಸಬೇಕು ಅಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...