ದಕ್ಷಿಣ ಕನ್ನಡ ಜಿಲ್ಲೆಯನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಜಿಲ್ಲೆಯ ಬಂಟ್ವಾಳ ಬಳಿಯ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಮಾಡಬೇಕು ಎಂದು ಒತ್ತಾಯಿಸಿ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ – ಸುರತ್ಕಲ್ ಹಾಗೂ ಸಮಾನ ಮನಸ್ಕ ಸಂಘಟನೆಗಳು ಬುಧವಾರ ಮಂಗಳೂರಿನ ನಂತೂರಿನಲ್ಲಿ ಸಾಮೂಹಿಕ ಧರಣಿ ನಡೆಸಲಿದೆ. ಮತ್ತೊಂದು ಹೋರಾಟ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಹಾಗೂ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಈ ಧರಣಿಯ ನೇತೃತ್ವ ವಹಿಸಿಕೊಂಡಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಮಂಗಳೂರಿನ ಸುರತ್ಕಲ್ ಬಳಿಯಿದ್ದ ಟೋಲ್‌ಗೇಟ್ ವಿರುದ್ಧ ಹಲವು ವರ್ಷಗಳ ಕಾಲ ಹೋರಾಟ ನಡೆಸಿತ್ತು. ಈ ಹೋರಾಟವು ಐತಿಹಾಸಿಕವಾಗಿದ್ದು, ದೇಶದ ಇತಿಹಾಸದಲ್ಲೆ ಮೊದಲ ಬಾರಿಗೆ ಟೋಲ್‌ಗೇಟ್ ಒಂದನ್ನು ತೆರವು ಮಾಡಿಸುವಲ್ಲಿ ಯಶಸ್ವಿಯಾಗಿತ್ತು. ಮತ್ತೊಂದು ಹೋರಾಟ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬುಧವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮಂಗಳೂರಿನ ನಂತೂರು ಜಂಕ್ಷನ್ ಬಳಿ ಸಾಮೂಹಿಕ ಧರಣಿ ನಡೆಯಲಿದ್ದು, ಧರಣಿಯ ಉದ್ಘಾಟನೆ ಮಾಜಿ ಸಚಿವ ರಮಾನಾಥ ರೈ ಅವರು ನಡೆಸಲಿದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ ಟೋಲ್ ಗೇಟ್ ಗಳ ಅಳವಡಿಕೆ ಸಂದರ್ಭ ಅಂತರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಕೂಡಾ ಧರಣಿಯು ಒತ್ತಾಯಿಸಲಿದ್ದು, ಮಂಗಳೂರಿನ ನಂತೂರು ಮೇಲ್ಸೇತುವೆ, ಕೂಳೂರು ನೂತನ ಸೇತುವೆಯ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕೂಡಾ ಆಗ್ರಹಿಸಿ ಈ ಧರಣಿ ನಡೆಯಲಿದೆ.
ನೂತನವಾಗಿ ಟೋಲ್ ಗೇಟ್ ನಿರ್ಮಿಸುವ ಸಂದರ್ಭ ಅಂತರದ ಸಹಿತ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಸಂಘಟನೆಯು ಒತ್ತಾಯಿಸಿದೆ. ಅಲ್ಲದೆ, ನಿರ್ಮಿಸಲು ಉದ್ದೇಶಿಸಿರುವ ಟೋಲ್‌ಗೇಟ್ ಅನ್ನು ಗಂಜಿಮಠದ ಬದಲಿಗೆ ನಿಯಮಗಳ ಅನ್ವಯ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಆಗ್ರಹ ವ್ಯಕ್ತವಾಗಿದ್ದು, ಜೊತೆಗೆ ಸ್ಥಳೀಯರಿಗೆ ವಿನಾಯತಿಯನ್ನು ಖಾತರಿ ಪಡಿಸುವಂತೆ ಒತ್ತಾಯಿಸಲಾಗಿದೆ.
ಧರಣಿಯು ಜಿಲ್ಲೆಯ ಬಿ.ಸಿ. ರೋಡ್ – ಗುಂಡ್ಯ ಹೆದ್ದಾರಿ ಕಾಮಗಾರಿ ವೇಗವಾಗಿ ಪೂರ್ಣಗೊಳಿಸುವಂತೆ ಕೂಡಾ ಆಗ್ರಹಿಸಲಿದ್ದು, ಬ್ರಹ್ಮರ ಕೂಟ್ಲು – ಕಲ್ಲಡ್ಕ – ಮಾಣಿ ಮೇಲ್ಸೇತುವೆ, ಅಂಡರ್ ಪಾಸ್ ಕಾಮಗಾರಿಗಳನ್ನು ಮಳೆಗಾಲಕ್ಕೆ ಮುಂಚಿತವಾಗಿ ಪೂರ್ಣಗೊಳಿಸಿ ಅದನ್ನು ಸಂಚಾರಕ್ಕೆ ಬಿಟ್ಟುಕೊಡುವಂತೆ ಆಗ್ರಹಿಸಲಿದೆ.
ಇದನ್ನೂಓದಿ: ಗೋ ಕಳ್ಳತನ ಆರೋಪಿಗಳಿಗೆ ಸ್ಥಳದಲ್ಲೇ ಗುಂಡು ಹಾರಿಸಲಾಗುವುದು: ಕಾಂಗ್ರೆಸ್ ಸಚಿವ ಮಂಕಾಳ್ ವೈದ್ಯ
ಗೋ ಕಳ್ಳತನ ಆರೋಪಿಗಳಿಗೆ ಸ್ಥಳದಲ್ಲೇ ಗುಂಡು ಹಾರಿಸಲಾಗುವುದು: ಕಾಂಗ್ರೆಸ್ ಸಚಿವ ಮಂಕಾಳ್ ವೈದ್ಯ


