ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಎರಡು ವಿಶೇಷ ವಿಮಾನಗಳು ವಾರಾಂತ್ಯದಲ್ಲಿ ಪಂಜಾಬ್‌ನ ಅಮೃತಸರದಲ್ಲಿ ಇಳಿಯಲಿವೆ ಎಂದು ವಿದೇಶಾಂಗ ಸಚಿವಾಲಯವು ನಾಗರಿಕ ವಿಮಾನಯಾನ ಬ್ಯೂರೋಗೆ ಕಳುಹಿಸಿದ ಲಿಖಿತ ಸಂವಹನದಲ್ಲಿ ತಿಳಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿ, ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ‘ಪರಿಶೀಲಿಸಲಾದ’ ನಾಗರಿಕರನ್ನು ಮರಳಿ ಕರೆತರಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಒತ್ತಿ ಹೇಳಿದ್ದಾರೆ.
119 ಭಾರತೀಯ ಗಡೀಪಾರುದಾರರನ್ನು ಹೊತ್ತ ಮೊದಲ ವಿಮಾನ ಫೆಬ್ರವರಿ 15 ರಂದು ರಾತ್ರಿ 10.05 ಕ್ಕೆ ಅಮೃತಸರದಲ್ಲಿ ಇಳಿಯಲಿದ್ದರೆ, ಎರಡನೆಯದು ಫೆಬ್ರವರಿ 16 ರ ರಾತ್ರಿ ಇಳಿಯಲಿದೆ. ಮೊದಲ ವಿಮಾನದಲ್ಲಿ ಪಂಜಾಬ್‌ನಿಂದ 67 ಪ್ರಯಾಣಿಕರು, ಹರಿಯಾಣದಿಂದ 33 ಮತ್ತು ಗುಜರಾತ್, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ 19 ಪ್ರಯಾಣಿಕರು ಸೇರಿದ್ದಾರೆ.
ಗಡೀಪಾರುದಾರರಿಗೆ ವಿಮಾನ ನಿಲ್ದಾಣ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತವು ಎಲ್ಲ ವ್ಯವಸ್ಥೆಗಳನ್ನು ಮಾಡಿದೆ ಎಂದು ಮೂಲಗಳು ತಿಳಿಸಿವೆ.


