ವಾಷಿಂಗ್ಟನ್: ಜನವರಿ ಅಂತ್ಯದಲ್ಲಿ ವಾಷಿಂಗ್ಟನ್‌ನಲ್ಲಿ ಪ್ರಯಾಣಿಕರ ಜೆಟ್‌ಗೆ ಡಿಕ್ಕಿ ಹೊಡೆದ ಮಿಲಿಟರಿ ಹೆಲಿಕಾಪ್ಟರ್ ಅನ್ನು ನಾನು ಚಲಾಯಿಸಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಹೇಳಿಕೊಂಡ ಸಂಪ್ರದಾಯವಾದಿ ಪ್ರಭಾವಿ ವ್ಯಕ್ತಿಯ ವಿರುದ್ಧ ಟ್ರಾನ್ಸ್‌ಜೆಂಡರ್ ಯುಎಸ್ ಪೈಲಟ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಕೊಲೊರಾಡೋದ ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾದ ಮೊಕದ್ದಮೆಯ ಪ್ರಕಾರ, ಎರಡೂ ವಿಮಾನಗಳಲ್ಲಿ 67 ಜನರು ಸಾವನ್ನಪ್ಪಿದ ಅಪಘಾತದ ನಂತರ ‘X’ ಖಾತೆಯಲ್ಲಿ 2.2 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಭಾವಿ ಮ್ಯಾಟ್ ವ್ಯಾಲೇಸ್ ಅವರು ವಿನಾಶಕಾರಿ ಮತ್ತು ಬೇಜವಾಬ್ದಾರಿಯುತ ಮಾನನಷ್ಟ ಅಭಿಯಾನವನ್ನು ರೂಪಿಸಿದ್ದಾರೆ ಎಂದು ಆರೋಪಿಸಿ ಟ್ರಾನ್ಸ್‌ಜೆಂಡರ್ ಯುಎಸ್ ಪೈಲಟ್ ಜೋ ಎಲಿಸ್ ಮೊಕದ್ದಮೆ ಹೂಡಿದ್ದಾರೆ.
ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ ವ್ಯಾಲೇಸ್ ಅವರ ಒಂದು ಪೋಸ್ಟ್, ಈ ಪೈಲಟ್ “ಟ್ರಾನ್ಸ್ ಟೆರರ್ ದಾಳಿಯಲ್ಲಿ” ಭಾಗವಹಿಸಿರಬಹುದು ಎಂದು ಹೇಳಿದೆ. ಅವರ “ಖಿನ್ನತೆ” ಮತ್ತು “ಲಿಂಗ ಡಿಸ್ಫೋರಿಯಾ” ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ವಿಮಾನ ಡಿಕ್ಕಿಯನ್ನು ಉಂಟುಮಾಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ನನ್ನ ಮೇಲೆ ಆರೋಪಿಸಲಾಗಿದೆ ಎಂದು ಮೊಕದ್ದಮೆಯಲ್ಲಿ ಜೋ ಎಲಿಸ್ ತಿಳಿಸಿದ್ದಾರೆ.
ವ್ಯಾಲೇಸ್‌ನಿಂದ ಈ ಮೊಕದ್ದಮೆ ಕುರಿತು ತಕ್ಷಣದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ, ನಂತರ ಅವರು ಎಲ್ಲಿಸ್ ಬಗ್ಗೆ ತಮ್ಮ ಪೋಸ್ಟ್‌ಗಳನ್ನು ಅಳಿಸಿ ಹಾಕಿದ್ದರು.
ವ್ಯಾಲೇಸ್ ತನ್ನ ಪ್ರಮುಖ ಸ್ಥಾನಮಾನವನ್ನು ಬಳಸಿಕೊಂಡು ‘X’ ಖಾತೆಯಲ್ಲಿ ಹಣಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ಹತ್ತಾರು ಸಾವಿರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಜೋ ಎಲಿಸ್ ದುರದೃಷ್ಟಕರ ಹೆಲಿಕಾಪ್ಟರ್ ಅನ್ನು ಚಾಲನೆ ಮಾಡಿದ್ದಾರೆ ಎಂದು ತಪ್ಪಾಗಿ ಆರೋಪಿಸುತ್ತಿದ್ದಂತೆ, ಸಾರ್ವಜನಿಕ ದಾಖಲೆಗಳನ್ನು ಬಳಸಿಕೊಂಡು ಯಾರಾದರೂ ತನ್ನ ಮನೆಯನ್ನು ಪತ್ತೆಹಚ್ಚಬಹುದು ಎಂದು ಅವರು ಚಿಂತಿತರಾಗಿದ್ದರು.
ಫೆಬ್ರವರಿಯಲ್ಲಿ AFP ಗೆ ನೀಡಿದ ಸಂದರ್ಶನದಲ್ಲಿ ಜೋ ಎಲಿಸ್ ತಮ್ಮ ಕುಟುಂಬವನ್ನು ತಾತ್ಕಾಲಿಕವಾಗಿ ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ಮತ್ತು ತನಗೆ ಖಾಸಗಿ ಸಶಸ್ತ್ರ ಭದ್ರತೆಯನ್ನು ವ್ಯವಸ್ಥೆ ಮಾಡಲು ಒತ್ತಾಯಿಸಿದ್ದರು.
ವ್ಯಾಲೇಸ್‌ನಿಂದ ಉಂಟಾದ ಹಾನಿ “ಅಪಾರ” ವಾಗಿತ್ತು, ಇದರ ಪರಿಣಾಮವಾಗಿ ಅವರ “ಸುಳ್ಳುಗಳಿಂದ” ಪ್ರೇರಿತವಾದ ದ್ವೇಷದಿಂದಾಗಿ ನನ್ನ ಕುಟುಂಬವು ತೊಂದರೆಯಲ್ಲಿ ಸಿಲುಕಿಕೊಂಡಿದೆ ಎಂದು ಮೊಕದ್ದಮೆಯಲ್ಲಿ ಸೇರಿಸಲಾಗಿದೆ. ಜೊ ಎಲಿಸ್ ಅಂತಿಮವಾಗಿ ಫೇಸ್‌ಬುಕ್‌ನಲ್ಲಿ “ಜೀವನದ ಪುರಾವೆ” ವೀಡಿಯೊವನ್ನು ಪೋಸ್ಟ್ ಮಾಡಿದರು, ಇದು ಕೆಲವು ವದಂತಿಗಳನ್ನು ಮಾತ್ರ ಹತ್ತಿಕ್ಕಿತು.
2009ರಿಂದ ನ್ಯಾಷನಲ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಇರಾಕ್ ಮತ್ತು ಕುವೈತ್‌ಗೆ ನಿಯೋಜಿಸಲ್ಪಟ್ಟಿರುವ ಜೊ ಎಲಿಸ್ ಎದುರಿಸುತ್ತಿರುವ ಬೆದರಿಕೆಗಳು, ಟ್ರಾನ್ಸ್‌ಜೆಂಡರ್‌ಗಳ ವಿರುದ್ಧ ರಾಜಕೀಯ ವಾಕ್ಚಾತುರ್ಯದಲ್ಲಿ ತೀವ್ರ ಏರಿಕೆ ಕಂಡುಬಂದಿರುವ ಸಮಯದಲ್ಲಿ ಅವರ ಕುರಿತ ತಪ್ಪು ಮಾಹಿತಿಯು ಅವರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ.
ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಧ್ಯಕ್ಷ ಟ್ರಂಪ್ ಟ್ರಾನ್ಸ್ ಜೆಂಡರ್ ಗಳನ್ನು ಗುರಿಯಾಗಿಸಿಕೊಂಡು ಹಲವಾರು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಒಂದು ಆದೇಶದಲ್ಲಿ ಸರ್ಕಾರಕ್ಕೆ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲು ಸೂಚನೆ ನೀಡುವುದು ಸೇರಿದೆ.
ವಿಮಾನ ಅಪಘಾತದ ನಂತರ, ಟ್ರಂಪ್ ಯಾವುದೇ ಪುರಾವೆಗಳನ್ನು ನೀಡದೆ ವಾಯುಯಾನ ಪ್ರಾಧಿಕಾರದ ವೈವಿಧ್ಯತೆಯ ನೇಮಕಾತಿ ಪದ್ಧತಿಗಳು ಇದಕ್ಕೆ ಭಾಗಶಃ ಕಾರಣವಾಗಿರಬಹುದು ಎಂದು ಸೂಚಿಸಿದ್ದರು. ಇದರಿಂದಾಗಿ ಟ್ರಾನ್ಸ್‌ಜೆಂಡರ್‌ಗಳು ಆನ್‌ಲೈನ್ ವದಂತಿಗಳಿಗೆ ಬಲಿಯಾದರು.
ಜೊ ಎಲ್ಲಿಸ್ ಅವರ ಮೊಕದ್ದಮೆಯ ಪ್ರಕರಣವು ಮಾನನಷ್ಟ ಮೊಕದ್ದಮೆಗಳು ಯುಎಸ್ ನಾಗರಿಕರು ಮತ್ತು ಪ್ರಜಾಪ್ರಭುತ್ವ ಪರ ಗುಂಪುಗಳು ತಪ್ಪು ಮಾಹಿತಿ ಹರಡುವವರನ್ನು ಆರ್ಥಿಕವಾಗಿ ಮತ್ತು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಲು ಬಳಸುವ ಸಾಧನವಾಗಿ ಹೆಚ್ಚುತ್ತಿರುವ ಪ್ರವೃತ್ತಿಯ ಭಾಗವಾಗಿದೆ.
2023ರಲ್ಲಿ ಡೊಮಿನಿಯನ್ ವೋಟಿಂಗ್ ಸಿಸ್ಟಮ್ಸ್ ತನ್ನ ಯಂತ್ರಗಳು ಮತಗಳನ್ನು ಬದಲಾಯಿಸಿವೆ ಎಂಬ ಸುಳ್ಳು ಹೇಳಿಕೆಗಳ ಮೇಲೆ ಮೊಕದ್ದಮೆ ಹೂಡಿದ ನಂತರ ಫಾಕ್ಸ್ ನ್ಯೂಸ್‌ನಿಂದ $787.5 ಮಿಲಿಯನ್ ಇತ್ಯರ್ಥವನ್ನು ಪಡೆದುಕೊಂಡಿತು.


