ನಮ್ಮದೆ ಸರ್ಕಾರವನ್ನು ಟೀಕಿಸುವುದು ಯಾವುದೇ ಮುಕ್ತ ಮತ್ತು ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ಲಕ್ಷಣವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಹೇಳಿದ್ದಾರೆ. ಭಾರತ ಪಾಕಿಸ್ತಾನ ಸಂಘರ್ಷದ ನಡುವೆ ನೆರೆಯ ದೇಶದ ಸೇನಾ ಅಧಿಕಾರಿಯ ಹೇಳಿಕೆಗಳನ್ನು ಟೀಕಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ನಮ್ಮದೆ ಸರ್ಕಾರದ ಟೀಕೆ
“ಭಾರತದ ಜನರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂಬ ವಿಚಾರದಲ್ಲಿ ಪಾಕಿಸ್ತಾನ ಸೇನಾ ವಕ್ತಾರರು ಬಹಳ ಖುಷಿ ಪಡುತ್ತಿದ್ದಾರೆ. ನಾಗರಿಕರು ತಮ್ಮದೇ ಸರ್ಕಾರವನ್ನು ಟೀಕಿಸುವುದನ್ನು ನೋಡುವಾಗ ಪಾಕಿಸ್ತಾನಕ್ಕೆ ಆಶ್ಚರ್ಯವಾಗಬಹುದು. ಆದರೆ ಅದು ಯಾವುದೇ ಮುಕ್ತ ಮತ್ತು ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿದೆ. ಅದರ ಬಗ್ಗೆ ಪಾಕಿಸ್ತಾನದ ಪರಿಚಯವಿಲ್ಲದಿರುವುದು ಆಶ್ಚರ್ಯಕರವಲ್ಲ” ಮಿಶ್ರಿ ಶನಿವಾರ ನಡೆದ ಸರ್ಕಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಇಸ್ಲಾಮಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಭಾರತ ಸರ್ಕಾರದ ಕ್ರಮಗಳನ್ನು ಟೀಕಿಸಿದ ಹಲವಾರು ಭಾರತೀಯರ ಹೇಳಿಕೆಗಳನ್ನು ಉಲ್ಲೇಖಿಸಿದ್ದರು. ಈ ಹೇಳಿಕೆಗೆ ಮಿಸ್ರಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡ ಪಾಕ್: ಮಿಸ್ರಿ
ಜಮ್ಮು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡ ಪಾಕಿಸ್ತಾನ ನಡೆಸುತ್ತಿರುವ ದಾಳಿಯಗಳನ್ನು ಮಿಶ್ರಿ ಖಂಡಿಸಿದ್ದಾರೆ. ಭಾರತದಲ್ಲಿ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯವನ್ನು ಬಿತ್ತಲು ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಮಿಶ್ರಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ಜಮ್ಮು ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ನಾಗರಿಕ ಮೂಲಸೌಕರ್ಯ ಮತ್ತು ಜನರನ್ನು ಪಾಕಿಸ್ತಾನ ಗುರಿಯಾಗಿಸಿಕೊಂಡಿದೆ” ಎಂದು ಮಿಶ್ರಿ ಹೇಳಿದ್ದಾರೆ
ಮಾರಣಾಂತಿಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಜಮ್ಮು ಕಾಶ್ಮೀರದ ಶ್ರೀನಗರ ಮತ್ತು ಜಮ್ಮು ನಗರಗಳಲ್ಲಿ ಬೆಳಿಗ್ಗೆ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ. ಮಧ್ಯಾಹ್ನದ ಸುಮಾರಿಗೆ ಶ್ರೀನಗರದಲ್ಲಿ ಮತ್ತೆ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಅದು ಹೇಳಿದೆ.
“ಇಂದು ಬೆಳಿಗ್ಗೆ, ಪಾಕಿಸ್ತಾನವು ರಾಜೌರಿ ಪಟ್ಟಣದ ಮೇಲೆ ಶೆಲ್ ದಾಳಿ ನಡೆಸಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ರಾಜ್ ಕುಮಾರ್ ಥಾಪಾ ಅವರು ಮೃತಪಟ್ಟಿದ್ದಾರೆ. ಅಲ್ಲಿ ನಾಗರಿಕ ಸಾವುನೋವುಗಳು ಮತ್ತು ಹಾನಿಯನ್ನು ಹೆಚ್ಚಿಸಿದೆ” ಎಂದು ಮಿಸ್ರಿ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಭಾರತ ನಾಶಪಡಿಸಿದ ಒಂದು ದಿನದ ನಂತರ ಶುಕ್ರವಾರ ಮತ್ತು ಶನಿವಾರ ಭಾರತ ಡ್ರೋನ್ ದಾಳಿ ಮತ್ತು ಪ್ರತಿದಾಳಿ ನಡೆಸಿದೆ. ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಎರಡು ವಾರಗಳ ನಂತರ ಭಾರತವು ಆಪರೇಷನ್ ಸಿಂಧೂರ್ ಎಂಬ ದಾಳಿ ನಡೆಸಿತ್ತು. ನಮ್ಮದೆ ಸರ್ಕಾರದ ಟೀಕೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಭಾರತ-ಪಾಕ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ | ವೈದ್ಯರ ರಜೆ ರದ್ದುಗೊಳಿಸಿದ ಜಾರ್ಖಂಡ್ ಸರ್ಕಾರ
ಭಾರತ-ಪಾಕ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ | ವೈದ್ಯರ ರಜೆ ರದ್ದುಗೊಳಿಸಿದ ಜಾರ್ಖಂಡ್ ಸರ್ಕಾರ

