ಮೇ 10 ರಂದು ಭಾರತ ಮತ್ತು ಪಾಕಿಸ್ತಾನವು ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಂದ ಮಾಡಿಕೊಂಡ ನಂತರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಅವರ ಕುಟುಂಬ ಮತ್ತು ವಿಶೇಷವಾಗಿ ಅವರ ಮಗಳ ಮೇಲೆ ಬಿಜೆಪಿ ಮತ್ತು ಬಲಪಂಥೀಯ ಬೆಂಬಲಿಗರು ನಡೆಸುತ್ತಿರುವ ಆನ್‌ಲೈನ್ ಟ್ರೋಲಿಂಗ್ ಅನ್ನು ರಾಷ್ಟ್ರೀಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ಕಾರ್ಯದರ್ಶಿ ಮಿಸ್ರಿ
ಆಯೋಗದ ಅಧ್ಯಕ್ಷೆ ವಿಜಯ ರಹತ್ಕರ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಮಿಸ್ರಿ ಅವರ ಮಗಳ ವೈಯಕ್ತಿಕ ಸಂಪರ್ಕ ವಿವರಗಳನ್ನು ಹಂಚಿಕೊಳ್ಳುವುದನ್ನು ಖಂಡಿಸಿದ್ದಾರೆ. ಇದು “ತೀವ್ರ ಬೇಜವಾಬ್ದಾರಿ ಕೃತ್ಯ” ಮತ್ತು ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡುವ “ಗೌಪ್ಯತೆಯ ಗಂಭೀರ ಉಲ್ಲಂಘನೆ” ಎಂದು ಕರೆದಿದೆ.
ಮಿಸ್ರಿಯಂತಹ ಹಿರಿಯ ನಾಗರಿಕ ಸೇವಕರ ಕುಟುಂಬ ಸದಸ್ಯರ ಮೇಲಿನ ವೈಯಕ್ತಿಕ ದಾಳಿಗಳು ಸ್ವೀಕಾರಾರ್ಹವಲ್ಲ ಮಾತ್ರವಲ್ಲದೆ ನೈತಿಕವಾಗಿಯೂ ಸಮರ್ಥನೀಯವಲ್ಲ ಎಂದು ರಹತ್ಕರ್ ಒತ್ತಿ ಹೇಳಿದ್ದಾರೆ. ಆನ್‌ಲೈನ್ ಮತ್ತು ಆಫ್‌ಲೈನ್ ಸ್ಥಳಗಳಲ್ಲಿ ಸಂಯಮ ಮತ್ತು ಗೌರವಕ್ಕಾಗಿ ಕರೆ ನೀಡಿರುವ ಅವರು, ನಾಗರಿಕರು ಅಂತಹ ನಡವಳಿಕೆಯನ್ನು ಮೀರಿ ನಿಲ್ಲುವಂತೆ ಒತ್ತಾಯಿಸಿದ್ದಾರೆ. “ನಾವು ಘನತೆ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಆರಿಸಿಕೊಳ್ಳೋಣ” ಎಂದು ರಹತ್ಕರ್ ಹೇಳಿದ್ದಾರೆ.
ಈ ನಡುವೆ ಮಿಸ್ರಿ ಅವರ ಕುಟುಂಬದ ಪರವಾಗಿ ಹಿರಿಯ ರಾಜತಾಂತ್ರಿಕ ನಿರುಪಮಾ ಮೆನನ್ ರಾವ್ ಮತ್ತು ರಾಜಕಾರಣಿಗಳಾದ ಅಸಾದುದ್ದೀನ್ ಓವೈಸಿ ಮತ್ತು ಅಖಿಲೇಶ್ ಯಾದವ್ ಧ್ವನಿಯೆತ್ತಿದ್ದಾರೆ.
“ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಸಂಬಂಧಿಸಿದಂತೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಅವರ ಕುಟುಂಬವನ್ನು ಟ್ರೋಲ್ ಮಾಡುವುದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ ಎಂದು ನಿರುಪಮಾ ಮೆನನ್ ರಾವ್ ಅವರು ಹೇಳಿದ್ದಾರೆ.
ಒಬ್ಬ ಸಮರ್ಪಿತ ರಾಜತಾಂತ್ರಿಕರಾಗಿರುವ ಮಿಶ್ರಿ ಅವರು ವೃತ್ತಿಪರತೆ ಮತ್ತು ದೃಢಸಂಕಲ್ಪದಿಂದ ಭಾರತಕ್ಕೆ ಸೇವೆ ಸಲ್ಲಿಸಿದ್ದಾರೆ ಮತ್ತು ಅವರನ್ನು ದೂಷಣೆ ಮಾಡುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ಅವರು ಹೇಳಿದ್ದಾರೆ.
“ಅವರ ಮಗಳ ವೈಯಕ್ತಿಕ ಮಾಹಿತಿಯನ್ನು ಹುಡುಕುವುದು ಮತ್ತು ಅವರ ಪ್ರೀತಿಪಾತ್ರರನ್ನು ನಿಂದಿಸುವುದು ಎಲ್ಲಾ ಸಭ್ಯತೆಯ ಗೆರೆಯನ್ನು ಮೀರುತ್ತದೆ. ಈ ವಿಷಕಾರಿ ದ್ವೇಷದ ನಡುವೆ, ನಮ್ಮ ರಾಜತಾಂತ್ರಿಕ ಮಿಸ್ತಿ ಅವರ ಹಿಂದೆ ಒಗ್ಗಟ್ಟಾಗಿ ನಿಲ್ಲಬೇಕು, ಅವರನ್ನು ಕೆಡವಬಾರದು. #StopTrollingMisri #SupportDiplomats #VikramMisri #IndianDiplomacy #NoToDoxxing,” ಎಂದು ರಾವ್ ಪೋಸ್ಟ್ ಮಾಡಿದ್ದರು. ವಿದೇಶಾಂಗ ಕಾರ್ಯದರ್ಶಿ ಮಿಸ್ರಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಭಾರತ ಪಾಕಿಸ್ತಾನ ಕದನ ವಿರಾಮ | 32 ವಿಮಾನ ನಿಲ್ದಾಣಗಳು ಪುನರಾರಂಭ

