Homeಎಕಾನಮಿಜಿಡಿಪಿ ಕುಸಿತ: ಕೇಂದ್ರದ ನೀತಿಗಳ ವಿರುದ್ಧ ಎನ್‌ಡಿಎ ಮತ್ತು ಬಿಜೆಪಿಯಿಂದಲೇ ಭಾರೀ ವಿರೋಧ!

ಜಿಡಿಪಿ ಕುಸಿತ: ಕೇಂದ್ರದ ನೀತಿಗಳ ವಿರುದ್ಧ ಎನ್‌ಡಿಎ ಮತ್ತು ಬಿಜೆಪಿಯಿಂದಲೇ ಭಾರೀ ವಿರೋಧ!

ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಯಲ್ಲಿ ತಮ್ಮ ಪಕ್ಷದ ಕಳಪೆ ಪ್ರದರ್ಶನವೇ ಆರ್ಥಿಕ ಕುಸಿತಕ್ಕೆ ಕಾರಣ ಎಂದು ಹಲವಾರು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

ಭಾರತದ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯು ಆರು ವರ್ಷಗಳಲ್ಲಿಯೇ ಕನಿಷ್ಠ 4.5% ಕ್ಕೆ ಇಳಿದ ದಿನ, ಪ್ರತಿಪಕ್ಷದ ಸದಸ್ಯರು, ಆಡಳಿತ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಸಹ ಒಗ್ಗೂಡಿ ಆರ್ಥಿಕ ಕುಸಿತವನ್ನು ನಿಗ್ರಹಿಸಲು ವಿಫಲವಾದ ಕೇಂದ್ರದ ಅಸಮರ್ಥತೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಮಿತ್ರಪಕ್ಷಗಳೇ ಬಿಜೆಪಿಯನ್ನು ಪ್ರಶ್ನಿಸುತ್ತಿವೆ!

ಕೇಂದ್ರ ಸರ್ಕಾರವನ್ನು ಮೊದಲು ಪ್ರಶ್ನಿಸಿದವರು ಬಿಜೆಪಿಯ ಸ್ವಂತ ಮಿತ್ರರು. “ಆರ್ಥಿಕತೆಯ ಸ್ಥಿತಿ ಆತಂಕಕಾರಿಯಾಗಿದೆ, ಆರ್ಥಿಕ ಬೆಳವಣಿಗೆಯ ಕೊರತೆಯು ನಿರುದ್ಯೋಗಕ್ಕೆ ಕಾರಣವಾಗುತ್ತಿರುವುದರಿಂದ ನಾವೆಲ್ಲರೂ ಕಳವಳ ಹೊಂದಿದ್ದೇವೆ. ಜಿಡಿಪಿ ಕುಸಿತ ನಮಗೆ ದೊಡ್ಡ ಎಚ್ಚರಿಕೆಯಾಗಿದೆ ಎಂದು ಶಿರೋಮಣಿ ಅಕಾಲಿ ದಳದ ಮುಖಂಡ ನರೇಶ್ ಗುಜ್ರಾಲ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.]

ನರೇಶ್ ಗುಜ್ರಾಲ್‌

ಎನ್‌ಡಿಎ ಪಕ್ಷಗಳಲ್ಲಿಯೇ ಅಸಮಾಧಾನವಿದೆ ಮತ್ತು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಒಂದೇ ಒಂದು ಸಭೆ ಕರೆದಿಲ್ಲ ಎಂದು ಗುಜ್ರಾಲ್ ಹೇಳಿದ್ದಾರೆ. “ಮಿತ್ರಪಕ್ಷಗಳು ಸಾಕಷ್ಟು ಅತೃಪ್ತಿ ಹೊಂದಿದ್ದಾರೆ. ಹಳೆಯ ಮಿತ್ರಪಕ್ಷ ಶಿವಸೇನೆ ಈಗಾಗಲೇ ಎನ್‌ಡಿಎಯಿಂದ ಹೊರನಡೆದಿದೆ ಮತ್ತು ಇತರರು ನಿರ್ಗಮನಕ್ಕೆ ಕಾಯುತ್ತಿದ್ದಾರೆ. ಮಿತ್ರಪಕ್ಷಗಳು ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿಲ್ಲ, ಆದರೆ ಅವರೊಂದಿಗೆ ಕನಿಷ್ಠ ಸಮಾಲೋಚನೆ ನಡೆಸಬೇಕಾಗಿದೆ” ಎಂದು ಗುಜ್ರಾಲ್ ಹೇಳಿದ್ದಾರೆ.

ಇದೇ ರೀತಿಯ ಧಾಟಿಯಲ್ಲಿ, ಜನತಾದಳ (ಯುನೈಟೆಡ್) ನಾಯಕ ಕೆ.ಸಿ ತ್ಯಾಗಿ ಕೂಡ ಭಾರತದ ಸಾರ್ವಜನಿಕ ಕಂಪನಿಗಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಕ್ಕಾಗಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. ಕುಸಿಯುತ್ತಿರುವ ಬೆಳವಣಿಗೆಯ ದರ, ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಯೋಜನೆ ಮತ್ತು ಎಲ್ಲೆಡೆ ವ್ಯಾಪಿಸಿರುವ ಕೃಷಿ ಬಿಕ್ಕಟ್ಟಿನ ಬಗ್ಗೆ ತಮ್ಮ ಪಕ್ಷವು ಚಿಂತಿತವಾಗಿದೆ ಎಂದು ಹಿರಿಯ ನಾಯಕ ಕೆ.ಸಿ ತ್ಯಾಗಿ ಹೇಳಿದ್ದಾರೆ.

“ಅರ್ಥಶಾಸ್ತ್ರಜ್ಞರು ಅಥವಾ ಮಾಜಿ ಆರ್‌ಬಿಐ ಗವರ್ನರ್‌ಗಳ ಎಚ್ಚರಿಕೆಗಳನ್ನು ಸರ್ಕಾರ ನಿರ್ಲಕ್ಷಿಸಬಾರದು ಅಥವಾ ಅಪಹಾಸ್ಯ ಮಾಡಬಾರದು. ಅವರೊಂದಿಗೆ ಸಂಪರ್ಕವಿರಬೇಕು. ರಾಜಕೀಯ ನಾಯಕರು ಮತ್ತು ಅರ್ಥಶಾಸ್ತ್ರಜ್ಞರ ಸಭೆ ನಡೆಯಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಂತಹ ತಜ್ಞರನ್ನು ಕರೆದು ಚರ್ಚಿಸಬೇಕು. ಏಕೆಂದರೆ ಇದು ಗುದ್ದಾಟದ ವಿಷಯವಲ್ಲ, ಇದು ಸಮಾಲೋಚನೆಯ ವಿಷಯವಾಗಿದೆ ”ಎಂದು ತ್ಯಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಕೆ.ಸಿ ತ್ಯಾಗಿ

“ಸಮಾಜವಾದಿ ಪಕ್ಷವಾಗಿರುವುದರಿಂದ, ಜೆಡಿಯು ಸಾರ್ವಜನಿಕ ಸ್ವತ್ತುಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವ ಕೇಂದ್ರದ ವೇಗದ ಬಗ್ಗೆ ಗಂಭೀರ ಕಳವಳವನ್ನು ಹೊಂದಿದೆ. ಆದಾಯ ಸಂಗ್ರಹಕ್ಕಾಗಿ ಸಾರ್ವಜನಿಕ ಸ್ವತ್ತುಗಳನ್ನು ಮಾರಾಟ ಮಾಡುವುದು ಆರ್ಥಿಕ ಬಿಕ್ಕಟ್ಟನ್ನು ಎದುರಿಸುವ ತಪ್ಪು ವಿಧಾನವೆಂದು ಈಗಾಗಲೇ ಸಾಬೀತಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಸಮಯದಲ್ಲಿ, ಅದಕ್ಕಾಗಿ ಒಂದು ಸಚಿವಾಲಯವಿತ್ತು, ಆದರೆ ಅದು ಫಲಿತಾಂಶವನ್ನು ನೀಡಲಿಲ್ಲ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿಯೂ ಅದು ಸಂಭವಿಸಿದೆ ಆದರೆ ಯಾವುದೇ ಫಲಿತಾಂಶಗಳಿಲ್ಲ” ಅರ್ಥಶಾಸ್ತ್ರಜ್ಞರು ಮತ್ತು ಮಾಜಿ ಆರ್‌ಬಿಐ ಗವರ್ನರ್‌ಗಳ ಎಚ್ಚರಿಕೆಗಳನ್ನು ಸರ್ಕಾರ ನಿರ್ಲಕ್ಷಿಸಬಾರದು ಅಥವಾ ಅಪಹಾಸ್ಯ ಮಾಡಬಾರದು ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ, ನರೇಶ್ ಗುಜ್ರಾಲ್, ಮೋದಿಯವರ ಸಂಪುಟದಲ್ಲಿ “ಪ್ರತಿಭಾ ಕೊರತೆ” ಯನ್ನು ಗಮನಸೆಳೆದರು. “ಸಮರ್ಥ ಮಂತ್ರಿಗಳಿಂದ ನಿರ್ವಹಿಸಲ್ಪಡುವ” ಎಲ್ಲಾ ಸಚಿವಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಹೆಚ್ಚಿನ ಇಲಾಖೆಗಳು ಸಮರ್ಥ ಮಂತ್ರಿಗಳನ್ನು ಹೊಂದಿಲ್ಲ ಎಂದು ಅವರು ಹೇಳಿದರು. ಗುಜರಾಲ್ ಯಾವ ಮಂತ್ರಿಗಳನ್ನು ಗಮನದಲ್ಲಿಟ್ಟುಕೊಂಡು ಈ ಹೇಳಿಕೆ ನೀಡಿದ್ದಾರೆ ಎಂಬುದಿನ್ನು ಸ್ಪಷ್ಟವಾಗಿಲ್ಲ.

ಇನ್ನೊಬ್ಬ ಹಿರಿಯ ಬಿಜೆಪಿ ಸಂಸದರು, “ಈ ದಿನಗಳಲ್ಲಿ ಉದ್ಯಮ / ವ್ಯವಹಾರದಲ್ಲಿ ಕೊಳ್ಳುವ ಶಕ್ತಿ ತೀವ್ರ ಕಡಿಮೆಯಾಗಿದೆ. ಜಿಎಸ್ಟಿ ಸಂಗ್ರಹ ಕೂಡ ಕಡಿಮೆಯಾಗಿದೆ. ಇದು ಕಳವಳಕಾರಿ ವಿಷಯ. ನಾವು ಅದರ ಬಗ್ಗೆ ಮಾತನಾಡುತ್ತೇವೆ. ಆದರೆ ದಯವಿಟ್ಟು ಫೋನ್‌ನಲ್ಲಿ ಬೇಡ” ಎಂದಿದ್ದಾರೆ.

ಇದನ್ನೂ ಓದಿ: ಆರ್ಥಿಕ ಕುಸಿತದ ಸರಳ ಚಿತ್ರಣ: ಸಮಸ್ಯೆ ಹೂಡಿಕೆಯದ್ದಲ್ಲ, ಬೇಡಿಕೆಯದ್ದು

ಬಿಜೆಪಿ ಪಕ್ಷದ ಮತ್ತೊಬ್ಬರು ಆರ್ಥಿಕತೆಯು ಸರ್ಕಾರದ ಕೇಂದ್ರಬಿಂದುವಾಗಿರಬೇಕು. ಆದರೆ “ಪರಿಸ್ಥಿತಿ ಭರವಸೆಯಂತೆ ಕಾಣುವುದಿಲ್ಲ” ಎಂದು ಹೇಳಿದರು. ಹಣಕಾಸು ಸಚಿವರ ಬಜೆಟ್ ಪ್ರಕಟಣೆಗಳು ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಸಕಾರಾತ್ಮಕ ಪರಿಣಾಮ ಬೀರಿಲ್ಲ ಎಂದು ಅವರ ಅಭಿಪ್ರಯಪಟ್ಟಿದ್ದಾರೆ.

ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಯಲ್ಲಿ ತಮ್ಮ ಪಕ್ಷದ ಕಳಪೆ ಪ್ರದರ್ಶನವೇ ಆರ್ಥಿಕ ಕುಸಿತಕ್ಕೆ ಕಾರಣ ಎಂದು ಹಲವಾರು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...