ಅಸ್ಸಾಂ ಜನರ ರಾಜಕೀಯ, ಭಾಷಿಕ, ಸಾಂಸ್ಕೃತಿ ಮತ್ತು ಭೂಮಿ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಬದ್ದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
ಅಸ್ಸಾಂ ರಾಜ್ಯದ ನನ್ನ ಅಣ್ಣಂದಿರು ಮತ್ತು ಅಕ್ಕಂದಿರಿಗೆ ನಾನು ಖಚಿತ ಭರವಸೆ ನೀಡುತ್ತೇವೆ. ಯಾವುದೇ ಕಾರಣಕ್ಕು ನೀವು ಚಿಂತೆಪಡುವ ಅಗತ್ಯವಿಲ್ಲ.ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿದ್ದರೂ ನಾನು ನಿಮ್ಮ ಹಕ್ಕುಗಳು, ಗುರುತು ಮತ್ತು ಸುಂದರವಾದ ಸಾಂಸ್ಕೃತಿಕತೆಯಿಂದ ಹೊರಗಿಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್ ಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಸ್ಸಾಂ ರಾಜ್ಯದಲ್ಲಿ ಇಂಟರ್ ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ ನಮ್ಮ ಅಣ್ಣಂದಿರು ಮತ್ತು ಅಕ್ಕಂದಿರು ನಿಮ್ಮ ಟ್ವೀಟ್ ಓದಲು ಆಗುತ್ತಿಲ್ಲ ಮೋದೀಜಿ, ಇದನ್ನು ನೀವು ಮರೆತಿದ್ದೀರಾ ಎಂದು ವ್ಯಂಗ್ಯ ಮಾಡಿದೆ.
ಅಸ್ಸಾಂ ಜನರಿಗೆ ಲಭ್ಯವಾಗಬೇಕಿದ್ದ ಇಂಟರ್ ನೆಟ್ ಸೇವೆಗಳನ್ನು ಕಡಿತ ಮಾಡಿರುವುದು. ಇದು ನಿಮಗೆ ಗೊತ್ತಿಲ್ಲವೇ ಎಂದು ಕಾಂಗ್ರೆಸ್ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದೆ.
ಮತ್ತೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಕೇಂದ್ರ ಸರ್ಕಾರ ಮತ್ತು ನಾನು ಅಸ್ಸಾಂ ಜನರ ರಾಜಕೀಯ, ಭಾಷಿಕ, ಸಾಂಸ್ಕೃತಿಕ ಮತ್ತು ಭೂಮಿ ಹಕ್ಕುಗಳನ್ನು ಸಂವಿಧಾನಬದ್ಧವಾಗಿ ರಕ್ಷಿಸಲು ಸಿದ್ದರಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಮಂಡನೆ ಮತ್ತು ಅಂಗೀಕಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಅಸ್ಸಾಂನಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲ ಇಡೀ ಅಸ್ಸೋಂ ರಾಜ್ಯಾದ್ಯಂತ ಎರಡು ದಿನಗಳಿಂದ ಇಂಟರ್ ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ.
ಮತ್ತೊಂದೆಡೆ ರಾಜ್ಯದಲ್ಲಿ ಕರ್ಪ್ಯೂ ಹೇರಲಾಗಿದೆ. ಇದೇ ವೇಳೆ ಕಾಂಗ್ರೆಸ್ ರಾಜ್ಯ ಘಟಕ ಇಂದು ಬಂದ್ ಗೆ ಕರೆ ನೀಡಿದೆ. ಸೇನೆ ಪ್ರಮುಖ ಸ್ಥಳಗಳಲ್ಲಿ ಪಥಸಚಲನ ನಡೆಸಿದೆ. ಬಿಜೆಪಿ ಸಂಸದ ಕ್ವೀನ್ ಓಜಾ ಮಾತನಾಡಿ, ಈಗಿನ ಸನ್ನಿವೇಶದಲ್ಲಿ ಜನ ಚಿಂತಿತರಾಗಿದ್ದಾರೆ. ಗೊಂದಲಕ್ಕೆ ಒಳಗಾಗಿದ್ದಾರೆ. ನಾಳೆ ಏನಾಗೊತ್ತದೊ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಈ ಸಂಬಂಧ ಜನರು ತಪ್ಪಾಗಿ ತಿಳಿದಿದ್ದಾರೆ. ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.


