ತೆಲಂಗಾಣ/ಗದ್ವಾಲ: ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ 4:40 ರ ಸುಮಾರಿಗೆ ದ್ವಿಚಕ್ರದ ಮೇಲೆ ಹೋಗುತ್ತಿದ್ದಾಗ ಹಿಂದಿನಿಂದ ಆಂದ್ರ ಪ್ರದೇಶದ ಬುಲೋರಾ ವಾಹನ ಬಂದು ಡಿಕ್ಕಿ ಹೊಡೆದು ದಾರುಣ ಅಪಘಾತ ನಡೆದಿದ್ದು ಈಗ ಸುಪಾರಿ ಕೊಲೆ ಎಂದು ಸುದ್ದಿಯಾಗುತ್ತಿದೆ.
ಕೊಲೆ ಮಾಡಲು ಕಳೆದ ಒಂದು ವಾರದಿಂದ ಪ್ರಯತ್ನಿಸುತ್ತಿದ್ದು ಒಬ್ಬಂಟಿಯಾಗಿ ಸಿಕ್ಕಿರಲಿಲ್ಲ ಸರಿಯಾದ ಸಮಯ ನೋಡಿ ಒಬ್ಬರು ಹೋಗುತ್ತಿದ್ದಾಗ ಫಾಲೋ ಮಾಡಿ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಲಾಗಿದೆ ಎಂದು ಕೇಳಿ ಬರುತ್ತಿದೆ. ಈ ವ್ಯಕ್ತಿಯ ಕೊಲೆ ಮಾಡಲು 40 ಲಕ್ಷ ರೂಪಾಯಿಗೆ ಡೀಲಿಂಗ್ ನಡೆದಿದೆ ಎನ್ನಲಾಗುತ್ತಿದೆ. ಒಂದು ವಾರದಿಂದ ಒಂದು ತಂಡವಾಗಿ ಕೆಲಸ ಮಾಡುತಿತ್ತು ಎನ್ನುವುದು ತಿಳಿದು ಬಂದಿದ್ದು ಈ ಕೊಲೆಯನ್ನು ಅದೇ ಊರಿನ ನಂದಿನ್ನಿ ಗ್ರಾಮದ ಮಿಲ್ ಈರಣ್ಣ ಎಂಬುವ ವ್ಯಕ್ತಿ ಮಾಡಿಸಿದ್ದಾನೆ ಎನ್ನಲಾಗುತ್ತಿದೆ ಈಗ ಅ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.
ಆಕ್ಸಿಡೆಂಟ್ ಆದ ಬಳಿಕ ಪೊಲೀಸರು ಬುಲೋರಾ ವಾಹನ ಚಾಲಕನನ್ನು ಹಿಡಿದು ವಿಚಾರಣೆ ನಡೆಸಿದಾಗ ಈ ಕೊಲೆಯ ಹಿಂದಿರುವ ವ್ಯಕ್ತಿಗಳ ಹೆಸರು ತಿಳಿದು ಬಂದಿದೆ. ಆಂಧ್ರದ ರಾಯಲಸೀಮಾ ಸುಪಾರಿ ಗ್ಯಾಂಗ್ 6 ಜನರ ತಂಡ ಇದ್ದು ಅದರಲ್ಲಿ ಮೂರು ಜನ ಪೋಲೀಸರಿಗೆ ಸಿಕ್ಕಿದ್ದು ಇನ್ನೂ ಮೂರು ಜನ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಶನಿವಾರದಂದು ಗದ್ವಾಲದಿಂದ ಮೃತ ದೇಹ ಗ್ರಾಮಕ್ಕೆ ಬರುತ್ತಿದ್ದಾಗ ಭಾರೀ ಜನಸ್ತೋಮ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದರೆ, ಹಿತೈಷಿಗಳು, ಕುಟುಂಬದವರು, ಅಭಿಮಾನಿಗಳಿಂದ ಗ್ರಾಮದ ರೈಸ್ ಮಿಲ್ಲಿನ ಮೇಲೆ ದಾಳಿ ಪ್ರಾರಂಭವಾಗುತ್ತಿದ್ದಂತೆ ಪೋಲೀಸರು ತಡೆದಿದ್ದಾರೆ. ಭಾರಿ ಪೊಲೀಸರ ತಂಡವೇ ಇಲ್ಲಿ ಬಂದು ನೆಲೆಸಿದೆ. ಈಗ ನಂದಿನ್ನಿ ಗ್ರಾಮ ಬೂದಿ ಮುಚ್ಚಿದ ಕೆಂಡದಂತಾಗಿ,
ಉದ್ವಿಗ್ನ ಸ್ಥಿತಿ ಏರ್ಪಟ್ಟಿದ್ದು ಗಲಾಟೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟು ಮಿಲ್ಲಿನ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
#Murder #Telangana #NaanuGauri


