Homeಅಂತರಾಷ್ಟ್ರೀಯಕುರ್ದಿಶ್‌ ಪಡೆಗಳ ಜೊತೆ ಕದನ ವಿರಾಮ : ಹಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ ಸಿರಿಯಾ...

ಕುರ್ದಿಶ್‌ ಪಡೆಗಳ ಜೊತೆ ಕದನ ವಿರಾಮ : ಹಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ ಸಿರಿಯಾ ಸೇನೆ

- Advertisement -
- Advertisement -

ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್‌) ಜೊತೆಗಿನ ಎರಡು ವಾರಗಳ ಭಾರೀ ಕಾದಾಟದ ನಂತರ, ಸಿರಿಯಾದ ಸರ್ಕಾರಿ ಪಡೆಗಳು ಉತ್ತರ ಮತ್ತು ಈಶಾನ್ಯ ಸಿರಿಯಾದ ಹಲವಾರು ಪ್ರಮುಖ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿವೆ ಎಂದು ವರದಿಯಾಗಿದೆ.

ಭಾನುವಾರ (ಜ.18) ಎರಡೂ ಪಕ್ಷಗಳು ದೇಶವನ್ನು ಮತ್ತೆ ಒಗ್ಗೂಡಿಸುವ ಗುರಿಯನ್ನು ಹೊಂದಿರುವ ತಕ್ಷಣದ ಕದನ ವಿರಾಮವನ್ನು ಘೋಷಿಸಿವೆ ಎಂದು ವರದಿ ಹೇಳಿದೆ.

ಕದನ ವಿರಾಮಕ್ಕೂ ಮುನ್ನ, ಸಿರಿಯಾ ಸೇನೆಯು ತನ್ನ ಮಿಲಿಟರಿ ವಾಯುನೆಲೆ ಮತ್ತು ತಬ್ಕಾ ಅಣೆಕಟ್ಟು (ಸಿರಿಯಾದ ಅತಿದೊಡ್ಡ) ಒಳಗೊಂಡ ಆಯಕಟ್ಟಿನ ಪಟ್ಟಣವಾದ ತಬ್ಕಾವನ್ನು ವಶಪಡಿಸಿಕೊಂಡಿದೆ. ದೇಶದ ಅತಿದೊಡ್ಡ ಅಲ್-ಒಮರ್ ತೈಲ ಕ್ಷೇತ್ರ ಕೂಡ ಸೇನೆಯ ವಶವಾಗಿದೆ.

ಎಸ್‌ಡಿಎಫ್ ಗುಂಪುಗಳನ್ನು ಯೂಫ್ರಟಿಸ್ ನದಿಯ ಪೂರ್ವಕ್ಕೆ ಹಿಮ್ಮೆಟ್ಟಿಸಿದ ಸರ್ಕಾರಿ ಪಡೆಗಳು, ರಕ್ಕಾ ಮತ್ತು ಅಲೆಪ್ಪೊದ ಪೂರ್ವಕ್ಕೆ ಡೀರ್ ಹಫರ್ ಹಾಗೂ ಮಸ್ಕಾನಾ ಸೇರಿದಂತೆ ಹಲವು ಪಟ್ಟಣಗಳಿಗೆ ಪ್ರವೇಶಿಸಿವೆ.

ಅಧ್ಯಕ್ಷ ಅಹ್ಮದ್ ಅಲ್-ಶರಾ ಮತ್ತು ಎಸ್‌ಡಿಎಫ್‌ ನಾಯಕ ಮಜ್ಲೌಮ್ ಅಬ್ದಿ ಅವರು 14 ಅಂಶಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎಲ್ಲಾ ಎಸ್‌ಡಿಎಫ್‌ ಪಡೆಗಳು ಯೂಫ್ರಟಿಸ್ ನದಿಯ ಪೂರ್ವಕ್ಕೆ ಹಿಂದೆ ಸರಿಯಬೇಕು ಎಂಬುವುದು ಒಪ್ಪಂದದ ಪ್ರಮುಖ ಅಂಶವಾಗಿದೆ.

ದೀರ್ ಎಜ್-ಜೋರ್, ರಖ್ಖಾ ಮತ್ತು ಹಸಾಕಾ ಪ್ರಾಂತ್ಯಗಳ ಸಂಪೂರ್ಣ ಆಡಳಿತವನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು. ಎಸ್‌ಡಿಎಫ್‌ ಸಂಘಟನೆಯನ್ನು ವಿಸರ್ಜಿಸಿ, ಅದರ ಹೋರಾಟಗಾರರನ್ನು ಸಿರಿಯನ್ ರಾಷ್ಟ್ರೀಯ ಸೈನ್ಯಕ್ಕೆ ಸೇರಿಸಿಕೊಳ್ಳಲಾಗುವುದು ಎಂಬುವುದು ಒಪ್ಪಂದಲ್ಲಿದೆ.

ಈ ಬೆಳವಣಿಗೆಯ ಭಾಗವಾಗಿ, ಸಿರಿಯಾ ಸರ್ಕಾರವು ಕುರ್ದಿಶ್ ಭಾಷೆಯನ್ನು ರಾಷ್ಟ್ರೀಯ ಭಾಷೆಯೆಂದು ಅಧಿಕೃತವಾಗಿ ಗುರುತಿಸಿದೆ ಮತ್ತು ಕುರ್ದಿಶ್ ಸಿರಿಯನ್ನರಿಗೆ ನಾಗರಿಕತ್ವವನ್ನು ಮರುಸ್ಥಾಪಿಸಿದೆ ಎಂದು ವರದಿಯಾಗಿದೆ.

ಈ ಒಪ್ಪಂದವು 2024ರಲ್ಲಿ ಅಸ್ಸಾದ್ ಆಡಳಿತದ ಪತನದ ನಂತರ ಸಿರಿಯಾವನ್ನು ಪುನರ್ ಏಕೀಕರಣಗೊಳಿಸುವತ್ತ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ| ಮಹಿಳೆಯಿಂದ ಲೈಂಗಿಕ ಕಿರುಕುಳ ಆರೋಪ; ಅವಮಾನ ಸಹಿಸದೆ ವ್ಯಕ್ತಿ ಆತ್ಮಹತ್ಯೆ

ಮಹಿಳೆಯೊಬ್ಬರಿಗೆ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ವಿಡಿಯೋ ವೈರಲ್ ಆದ ಬಳಿಕ ಮನನೊಂದ ಆರೋಪಿತ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದ ಕೋಝಿಕೋಡ್ ಮೂಲದ ವ್ಯಕ್ತಿಯ ಕುಟುಂಬವು ದೂರುದಾರ ಮಹಿಳೆ ವಿರುದ್ಧ...

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣ : ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತು ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಕೋರಿದ್ದ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ (ಜ.19) ವಜಾಗೊಳಿಸಿದೆ....

ತೆಲಂಗಾಣದಲ್ಲಿ ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಕೆ.ಕವಿತಾ: ಪ್ರಶಾಂತ್ ಕಿಶೋರ್ ಜೊತೆಗೆ ಮಾತುಕತೆ!

ಹೈದರಾಬಾದ್: ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷದಿಂದ ಉಚ್ಛಾಟಿಸಲಾಗಿದ್ದ ಕೆ.ಕವಿತಾ ಅವರು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ ಅವರು ಈ...

ಉತ್ತರ ಪ್ರದೇಶ| ಹಣಕಾಸಿನ ವಿವಾದ: ದಲಿತ ವ್ಯಕ್ತಿಗೆ ಸಾರ್ವಜನಿಕವಾಗಿ ತಲೆ ಬೋಳಿಸಿ ಅಪಮಾನ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನವಾಬ್‌ಗಂಜ್ ಪ್ರದೇಶದಲ್ಲಿ, ಪಪ್ಪು ದಿವಾಕರ್ ಎಂಬ ದಲಿತ ವ್ಯಕ್ತಿಯನ್ನು ಶನಿವಾರ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ, ತಲೆ ಬೋಳಿಸಿ ಸಾರ್ವಜನಿಕ ಅವಮಾನಕ್ಕೆ ಒಳಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ...

ಎನ್‌ಡಿಟಿವಿ ಪ್ರಕರಣ : ಪ್ರಣಯ್, ರಾಧಿಕಾ ರಾಯ್‌ಗೆ ನೀಡಿದ್ದ ನೋಟಿಸ್ ರದ್ದುಗೊಳಿಸಿದ ಹೈಕೋರ್ಟ್ ; ಐಟಿ ಇಲಾಖೆಗೆ 2 ಲಕ್ಷ ರೂ. ದಂಡ

ಎನ್‌ಡಿಟಿವಿ ಪ್ರವರ್ತಕರಾದ ಆರ್‌ಆರ್‌ಪಿಆರ್ ಹೋಲ್ಡಿಂಗ್‌ಗೆ ನೀಡಿದ ಕೆಲವು ಬಡ್ಡಿರಹಿತ ಸಾಲಗಳಿಗೆ ಸಂಬಂಧಿಸಿದಂತೆ ಮಾರ್ಚ್ 2016ರಲ್ಲಿ ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರಿಗೆ ನೀಡಲಾಗಿದ್ದ ಆದಾಯ ತೆರಿಗೆ ಮರುಮೌಲ್ಯಮಾಪನ ನೋಟಿಸ್‌ಗಳನ್ನು...

ಖಮೇನಿ ಮೇಲಿನ ದಾಳಿಯು ‘ಸಂಪೂರ್ಣ ಯುದ್ಧ’ಕ್ಕೆ ಕಾರಣವಾಗುತ್ತದೆ: ಇರಾನ್ ಅಧ್ಯಕ್ಷರ ಎಚ್ಚರಿಕೆ

ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮೇಲಿನ ಯಾವುದೇ ದಾಳಿಯನ್ನು ಇರಾನ್ ರಾಷ್ಟ್ರದ ವಿರುದ್ಧ "ಸಂಪೂರ್ಣ ಯುದ್ಧ" ಘೋಷಣೆ ಎಂದು ಪರಿಗಣಿಸಲಾಗುತ್ತದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಎಚ್ಚರಿಸಿದ್ದಾರೆ. "ಇರಾನ್‌ನಲ್ಲಿ ಹೊಸ ನಾಯಕತ್ವವನ್ನು...

ಬೆಂಗಳೂರು: ವಿವೇಕನಗರದಲ್ಲಿ ಕಾಲೇಜು ಬಸ್‌ಗೆ ಸಿಲುಕಿ ತಾಯಿ ಮತ್ತು 8 ವರ್ಷದ ಮಗ ಸಾವು: ವಾಹನ ಬಿಟ್ಟು ಪರಾರಿಯಾದ ಚಾಲಕ 

ಬೆಂಗಳೂರಿನ ಮಧ್ಯಭಾಗ ವಿವೇಕನಗರ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಖಾಸಗಿ ಕಾಲೇಜು ಬಸ್ ಡಿಕ್ಕಿ ಹೊಡೆದ ಪರಿಣಾಮ 37 ವರ್ಷದ ಮಹಿಳೆ ಮತ್ತು ಅವರ ಎಂಟು ವರ್ಷದ ಮಗ...

ವಿವಾದಾತ್ಮಕ ‘ಶಾಂತಿ ಮಂಡಳಿ’ಗೆ ಭಾರತವನ್ನು ಆಹ್ವಾನಿಸಿದ ಟ್ರಂಪ್ : ವಿಶ್ವಸಂಸ್ಥೆ ವಿರುದ್ದ ಅಮೆರಿಕ ಅಧ್ಯಕ್ಷರ ಹೊಸ ತಂತ್ರ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಝಾ ಪ್ರದೇಶಕ್ಕೆ ಸಂಬಂಧಿಸಿದಂತೆ ರಚಿಸಿರುವ ವಿವಾದಾತ್ಮಕ "ಬೋರ್ಡ್ ಆಫ್ ಪೀಸ್" (ಶಾಂತಿ ಮಂಡಳಿ) ಎಂಬ ಉಪಕ್ರಮಕ್ಕೆ ಭಾರತ ಸೇರಿದಂತೆ ಹಲವು ದೇಶಗಳನ್ನು ಆಹ್ವಾನಿಸಿದ್ದಾರೆ. ಈ ಉಪಕ್ರಮವು ವಿಶ್ವಸಂಸ್ಥೆಯನ್ನು...

ಹಿಂದಿಯೇತರ 7 ಭಾಷೆಗಳಿಗೆ ಸಾಹಿತ್ಯ ಪ್ರಶಸ್ತಿ ಘೋಷಿಸಿದ ತಮಿಳುನಾಡು ಸಿಎಂ ಸ್ಟಾಲಿನ್

ತಮಿಳು, ಬಂಗಾಳಿ ಮತ್ತು ಮರಾಠಿ ಸೇರಿದಂತೆ 7 ಭಾಷೆಗಳಿಗೆ ವಾರ್ಷಿಕ ಸಾಹಿತ್ಯ ಪ್ರಶಸ್ತಿಯನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾನುವಾರ ಘೋಷಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂದು ಕೇಂದ್ರ ಸರ್ಕಾರವನ್ನು...

ರೈಲುಗಳು ಮುಖಾಮುಖಿ ಢಿಕ್ಕಿಯಾಗಿ 21 ಮಂದಿ ಸಾವು

ಅತಿ ವೇಗದ ರೈಲು ಹಳಿತಪ್ಪಿ ಎದುರುಗಡೆಯಿಂದ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 21 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಸ್ಪೇನ್‌ನಲ್ಲಿ ಭಾನುವಾರ (ಜ.18) ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ...