Homeಕರ್ನಾಟಕತುಮಕೂರಿನಲ್ಲಿ ಗಬ್ಬೆದ ರಸ್ತೆಗಳಿಗೆ ಟಾರು.. : ತಿಂಗಳಿಗೊಮ್ಮೆ ಬರ್ಲಿ ಮೋದಿ ಎನ್ನುತ್ತಿದ್ದಾರೆ ಜನ...

ತುಮಕೂರಿನಲ್ಲಿ ಗಬ್ಬೆದ ರಸ್ತೆಗಳಿಗೆ ಟಾರು.. : ತಿಂಗಳಿಗೊಮ್ಮೆ ಬರ್ಲಿ ಮೋದಿ ಎನ್ನುತ್ತಿದ್ದಾರೆ ಜನ…

- Advertisement -
- Advertisement -

ತುಮಕೂರೆಂಬೋ ದೂಳುನಗರವನ್ನು ಸ್ಮಾರ್ಟ್ ಸಿಟಿ ಎಂದು ಘೋಷಣೆ ಮಾಡಿ ಮೂರು ತಿಂಗಳು ಕಳೆದರೆ ನಾಲ್ಕು ವರ್ಷ ಪೂರ್ಣಗೊಳ್ಳಲಿದೆ. 2016 ಮಾರ್ಚ್ 11 ರಂದು ಸ್ಮಾರ್ಟ್ ಸಿಟಿಯಾಗಿ ಘೋಷಣೆ ಮಾಡಿದ್ದರೂ ನಗರ ಅಭಿವೃದ್ಧಿಯನ್ನೇ ಕಂಡಿಲ್ಲ. ಅಮಾನಿಕೆರೆಯಂಗಳವನ್ನು ಬಿಟ್ಟರೆ ಇನ್ನೆಲ್ಲಿ ನೋಡಿದರೂ ದೂಳು, ಗುಂಡಿಗಳು. ಜನರ ರಸ್ತೆಗಿಳಿದರೆ ಸಾಕು ನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳಿಗೆ ಪಕ್ಷಾತೀತವಾಗಿ ಬೈಗುಳದ ಮಳೆಯನ್ನೇ ಸುರಿಸುತ್ತಾರೆ. ಆದರೆ ಕೆಲವೊಮ್ಮೆ ಭಕ್ತರು ಹೇಳಿಕೊಳ್ಳುವಂತಿಲ್ಲ. ಬಿಡುವಂತಿಲ್ಲ. ಆದರೂ ತುಮಕೂರಿನ ಜನ ಮಾತ್ರ ಸ್ಮಾರ್ಟ್ ಆಗದೇ ಇರುವ ಸಿಟಿಯ ಬಗ್ಗೆ ಆಕ್ರೋಶವನ್ನು ಹೊರಹಾಕುತ್ತಾರೆ. ಸ್ಮಾರ್ಟ್ ಸಿಟಿಯ ಕುರಿತು ಬರೆಯಲು ತುಮಕೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವುದೇ ಕಾರಣ.

ಜನವರಿ 2ರಂದು ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನಕ್ಕೆ ಮೋದಿ ಬರುತ್ತಿದ್ದಾರೆ. ಈಗ ಬಂದರೆ ಇದು ಮೂರನೇ ಭೇಟಿ. ಪ್ರಧಾನಿ ತುಮಕೂರು ಭೇಟಿಗೆ ಕಾರಣಗಳೇನು ಎಂಬ ಬಗ್ಗೆ ಮೇಲ್ನೋಟಕ್ಕೆ ಹೇಳುತ್ತಿರುವ ಅಂಶಗಳು ಪ್ರಮುಖ ಕಾರಣಗಳೇ ಅಲ್ಲ. ಮುಖ್ಯಮಂತ್ರಿಗಳಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡುವುದು, ಕೃಷಿ ಸನ್ಮಾನ್ ನಿಧಿ ಯೋಜನೆಯ ನಾಲ್ಕನೇ ಕಂತು ಹಣವನ್ನು ಬಿಡುಗಡೆ ಮಾಡುವುದು, 42 ಕೃಷಿಕರಿಗೆ ಪ್ರಶಸ್ತಿ ನೀಡುವುದು ಪ್ರಮುಖ ಆದ್ಯತೆಗಳಲ್ಲ ಎಂಬುದು ಯಾರು ಬೇಕಾದರೂ ಊಹಿಸಬಹುದು. ಆದರೆ  ಪ್ರಧಾನಿ ಕಾರ್ಯಕ್ರಮಕ್ಕೆ ಬರುತ್ತಿರುವ ಹಿಂದಿನ ಉದ್ದೇಶದ ಬಗ್ಗೆ  ಆಯೋಜಕರಾಗಲೀ, ಬಿಜೆಪಿಯ ಮುಖಂಡರಾಗಲೀ ಸ್ಪಷ್ಟ ಕಾರಣ ನೀಡುತ್ತಿಲ್ಲ.

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮಿಗಳು ಲಿಂಗೈಕ್ಯರಾದಾಗಲೂ ಬರಲಿಲ್ಲ. ಹೆಚ್ಚು ಜನರು ಸೇರುವ ಮತ್ತು ಭದ್ರತೆಯ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿ ಮಾಡಲಿಲ್ಲ ಎಂಬ ಸಬೂಬು ಬೇರೆ. ಈಗ ಆ ವಿಷಯ ಮುನ್ನೆಲೆಗೆ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಇದೀಗ ಸಿದ್ದಗಂಗಾ ಮಠದಲ್ಲಿ ಒಂದೂವರೆ ಗಂಟೆ ಕಾಲ ಕಳೆಯಲಿದ್ದಾರೆ. ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಭೇಟಿ ನೀಡುವುದು, ಧ್ಯಾನದಲ್ಲಿ ತೊಡಗುವ ಕಾರ್ಯಕ್ರಮಗಳು ಪೂರ್ವನಿಗದಿಯಾಗಿವೆ. ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಧ್ಯಾನ ಮಾಡಿ ದೇಶದ ಗಮನ ಸೆಳೆದ ಪ್ರಧಾನಿ ಇದೀಗ ಸಿದ್ದಗಂಗಾ ಮಠದ ಧ್ಯಾನಮಂದಿರದಲ್ಲೂ ಧ್ಯಾನ ಮಾಡಿ ದೇಶದಲ್ಲಿ ಸುದ್ದಿಯಾಗಲಿದ್ದಾರೆ. ಧ್ಯಾನದ ನಂತರವೂ ಕಾರ್ಯಕ್ರಮಕ್ಕೆ ಹಾಜರಾಗುವುದು. ಹೀಗಾಗಿ ಧ್ಯಾನಮುಖಿ ನರೇಂದ್ರ ಮೋದಿ ಮತ್ತೆ ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯಾಗಲಿದ್ದಾರೆ.

ಮಠದಲ್ಲೇ ಹೆಚ್ಚು ಸಮಯ ಕಳೆಯುವ ಮೂಲಕ ರಾಜ್ಯದ ಬಹುದೊಡ್ಡ ಲಿಂಗಾಯತ ಸಮುದಾಯದ ಪ್ರೀತಿ ಗಿಟ್ಟಿಸಿಕೊಳ್ಳುವ ಉದ್ದೇಶವೂ ಇದರಿಂದೆ ಇರಬಹುದು. ಹಿರಿಯ ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಮಠದ ಭಕ್ತರು ಪ್ರಧಾನಿ ಭೇಟಿ ನೀಡಲಿಲ್ಲವೆಂದು ಮುನಿಸಿಕೊಂಡಿದ್ದರು. ಆ ಮುನಿಸನ್ನು ಹೋಗಲಾಡಿಸುವುದು ಮಠದಲ್ಲಿ ಹೆಚ್ಚು ಕಾಲ ಕಳೆಯುವುದರ ಹಿಂದಿನ ಉದ್ದೇಶವೆಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದಗಂಗಾ ಮಠದ ಮೂಲಕ ಪ್ರಧಾನಿ ಮೋದಿ ಏನು ಸಂದೇಶಗಳನ್ನು ರವಾನಿಸಬಹುದು ಎಂಬ ಕುತೂಹಲ ಜನರಲ್ಲಿದೆ. ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂಬ ಒತ್ತಾಯ ಹಲವು ವರ್ಷಗಳದ್ದು. ಆದರೆ ಕೇಂದ್ರದ ಯಾವ ಸರ್ಕಾರವೂ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಉತ್ಸಾಹ ತೋರಿಸಲಿಲ್ಲ. ನರೇಂದ್ರ ಮೋದಿ ಎರಡು ಬಾರಿ ಪ್ರಧಾನಿಯಾದರೂ ಇದರ ಬಗ್ಗೆ ಕಿವಿಗೆ ಹಾಕಿಕೊಳ್ಳಲಿಲ್ಲ. ಸಿಟ್ಟಿಗೆದ್ದ ಜನರ ಮನಸ್ಸನ್ನು ಸೆಳೆಯುವುದು ಭೇಟಿಯ ಹಿಂದಿನ ಉದ್ದೇಶವೇ? ಇರಬಹುದು.

ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮಿಸಿದರೆ ತುಮಕೂರು ಚಿತ್ರದುರ್ಗ ರಾಜಕೀಯವಾಗಿ (ಸಂಸತ್ ಚುನಾವಣೆಯಲ್ಲಿ) ಬಿಜೆಪಿ ತೆಕ್ಕೆಗೆ ಹೋಗಿರುವುದು ಪ್ರಮುಖ ಕಾರಣ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿದಿರುವುದು ಮಗದೊಂದು ಕಾರಣ. ಕೆಲವೇ ದಿನಗಳ ಹಿಂದೆ ಆರ್‌ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ತುಮಕೂರು ಜಿಲ್ಲೆಯ ಪಾವಗಡಕ್ಕೆ ಭೇಟಿ ನೀಡಿರುವುದು ಕೂಡ ಗಮನಾರ್ಹ ಸಂಗತಿ. ಪ್ರಧಾನಿ ಸುಮ್ಮಸುಮ್ಮನೆ ತುಮಕೂರಿಗೆ ಭೇಟಿ ನೀಡುತ್ತಿಲ್ಲ. ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರವನ್ನು ಹಾಕಿಯೇ ಭೇಟಿ ನೀಡುತ್ತಿರುವುದು ಎನ್ನಲಾಗುತ್ತಿದೆ.

ಮೇಲೆಯೇ ಹೇಳಿದಂತೆ ತುಮಕೂರು ಸ್ಮಾರ್ಟ್ ಸಿಟಿ ಆಗಿದ್ದರೂ ಇದುವರೆಗೂ ಸ್ಮಾರ್ಟ್ ಅಂತೂ ಆಗಿಲ್ಲ. ರಸ್ತೆಗಳು ಗುಂಡಿ ಗುದ್ರಗಳಿಂದ ಕೂಡಿವೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆಂಬ ಕಾರಣಕ್ಕೆ ತೇಪೆ ಹಚ್ಚುವ ಕೆಲಸ ಬಿರುಸಿನಿಂದ ನಡೆಯುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಸೇರಿಕೊಂಡಿದ್ದ ದೂಳನ್ನು ಹೊಡೆದು ಟಾರು ಹಾಕುವ ಕಾರ್ಯ ಭರದಿಂದ ನಡೆಯುತ್ತಿದೆ. ರಸ್ತೆಗಳಿಗೆ ನೀರು ಸಿಂಪಡಿಸಲಾಗುತ್ತಿದೆ. ನಗರದಲ್ಲಿ ಹಾದುಹೋಗಿರುವ ಬಿ.ಎಚ್.ರಸ್ತೆಯ ಡಾಂಬರೀಕಣ ಕಾರ್ಯ ಹಗಲಿರುಳು ನಡೆಯುತ್ತಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಪಕ್ಕದ ಸರ್ವೀಸ್ ರಸ್ತೆ ಹಲವು ದಿನಗಳಿಂದ ಕುಂಠಿತಗೊಂಡಿತ್ತು. ಈಗ ಆ ಸರ್ವೀಸ್ ರಸ್ತೆಯನ್ನು ಹೊಳೆಯುವಂತೆ ಮಾಡಲಾಗಿದೆ. ಆಟೋ ಚಾಲಕರು, ಬೈಕ್ ಸವಾರರು, ಸಾರ್ವಜನಿಕರು ನಗರದಲ್ಲಿ (ಪ್ರಮುಖ ರಸ್ತೆ) ನಡೆಯುತ್ತಿರುವ ಕೆಲಸ ನೋಡಿ, “ಮೋದಿ ತಿಂಗಳಿಗೊಮ್ಮೆಯಾದರೂ ಬರ್ಲಪ್ಪ” ಅಂತ ಮನವಿ ಮಾಡುತ್ತಿದ್ದಾರೆ.

ಜನರ ನೋವು ಮನವಿಯಾಗಿ ಪರಿವರ್ತನೆಯಾಗಿದೆ. ರಸ್ತೆಗಳಲ್ಲಿನ ಗುಂಡಿ ಗುದ್ರೆಗಳು ದೂಳು ಇರುವದನ್ನು ಯಾರಿಗೆ ಹೇಳಿದರೂ ಸ್ವಚ್ಚಗೊಳಿಸುವ ಗೋಜಿಗೆ ಹೋಗದೇ ಇರುವುದರಿಂದ ಮೋದಿ ಮತ್ತೆ ಮತ್ತೆ ಬರ್ಲಪ್ಪ ಎನ್ನುವ ಮನವಿ ಮಾಡುತ್ತಿದ್ದಾರೆ ಜನ. ಹಾಗಾಗಿವೆ ತುಮಕೂರು ನಗರದ ರಸ್ತೆಗಳು. ಸಿದ್ದಗಂಗಾ ಮಠ, ಕ್ಯಾತ್ಸಂದ್ರದಿಂದ ಹಿಡಿದು ಟೌನ್ ಹಾಲ್ ವರೆಗಿನ ಬಿ.ಎಚ್.ರಸ್ತೆಯನ್ನು ಶುಚಿಗೊಳಿಸಿ ಡಾಂಬರು ಹಾಕಲಾಗುತ್ತಿದೆ. ಆದರೆ ಒಳಗಿನ ರಸ್ತೆಗಳಲ್ಲಿ ಅದೇ ದೂಳು, ದಡಕ್ಕೆನ್ನುವ ಗುದ್ರಗಳು, ಅಗೆದ ರಸ್ತೆಗಳು, ಡಾಂಬರ್ ಕಾಣದ ರಸ್ತೆ ಬದಿಗಳು, ಜಿಯೋ, ನೀರು, ಗ್ಯಾಸ್ ಗಾಗಿ ಅಗೆದಿರುವ ಜಾಡುಗಳು ಎದ್ದು ಕಾಣುತ್ತಿವೆ. ಅವುಗಳು ಯಾವಾಗ ರಿಪೇರಿ ಕಾಣತ್ತವೋ ಎಂದು ಜನ ಕಾಯುತ್ತಿದ್ದಾರೆ.

ಸ್ಮಾರ್ಟ್ ಸಿಟಿಯ ಕೆಲಸಗಳು ಕುಂಟುತ್ತಾ ಸಾಗಿವೆ. ದೊಡ್ಡದೊಡ್ಡ ಗುಂಡಿಗಳು ಜನರ ಗಮನ ಸೆಳೆಯುತ್ತವೆ. ಕಾಮಗಾರಿ ಚಾಲ್ತಿಯಲ್ಲಿದೆ ಎಂಬ ಬೋರ್ಡುಗಳ ಕಾಣಸಿಗುತ್ತವೆ. ರೆಡ್ ಟೇಪ್ ಗಳು ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರಿಗೆ ರಾಚುತ್ತಿವೆ. ಬೀದಿ ದೀಪಗಳಿಲ್ಲದ ವೇಳೆಯಲ್ಲಿ ರಸ್ತೆಯಲ್ಲಿ ಬೈಕ್ ಸವಾರರು ಪ್ರಯಾಣಿಸಿದರೆ ಬೀಳುವುದು ಗ್ಯಾರೆಂಟಿ. ಹೆಲ್ಮೆಟ್ಟಿದ್ದರೆ ತಲೆಗೆ ಪಟ್ಟಿಲ್ಲ. ಕೈಕಾಲು ಮರಿದರೆ ಕೇಳೋರಿಲ್ಲ ಅನ್ನುವಂತಹ ಪರಿಸ್ಥಿತಿ ಇದೆ. ತುಮಕೂರು ನಗರದ ಜನರ ಗೋಳು ಸಾಕಷ್ಟಿವೆ. ಸ್ಮಾರ್ಟ್ ಸಿಟಿಯ ಅವಾಂತರಗಳಿಗೆ ಜನ ರೋಸಿ ಹೋಗಿದ್ದಾರೆ. ಜನ ಕೇಳುವ ಪ್ರಶ್ನೆಗಳಿಗೆ ಮೋದಿ ಸಾಹೇಬರು ಉತ್ತರಿಸುತ್ತಾರೆಯೇ. ಸ್ಮಾರ್ಟ್ ಸಿಟಿಯಲ್ಲಿ ಆಗಿರುವ ಅವ್ಯವಹಾರದ ವಿರುದ್ದ ಕ್ರಮ ಕೈಗೊಳ್ಳುತ್ತಾರೆಯೇ? ಮೌನವಹಿಸುತ್ತಾರೆ? ನಾನು ತಿನ್ನುವುದಿಲ್ಲ. ತಿನ್ನಲೂ ಬಿಡುವುದಿಲ್ಲ ಎಂಬ ಮಾತನ್ನು ಉಳಿಸಿಕೊಳ್ಳುತ್ತಾರೆಯೇ ನೋಡಬೇಕು.

ಪುಸ್ತಕದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ಪ್ರಶಸ್ತಿಗಳು ಬರುತ್ತಲೇ ಇವೆ. ಪತ್ರಿಕೆಗಳು ಅದನ್ನು ಪ್ರಕಟಿಸುತ್ತಲೇ ಇವೆ. ಆದರೆ ಸ್ಮಾರ್ಟ್ ಸಿಟಿಯಿಂದ ಜನರಿಗೆ ಯಾವ ಪ್ರಯೋಜವಾಗಿದೆ ಎಂಬುದನ್ನು ಇದುವರೆಗೂ ಪ್ರಕಟಿಸಿಲ್ಲ. ಪಾರದರ್ಶಕತೆ, ಬದ್ದತೆ ಅಂದರೆ ಇದೇ ಇರಬೇಕು. ಪಾರದರ್ಶಕತೆ ಇಲ್ಲದ ಕಾಮಗಾರಿ ಬದ್ದತೆ ಇಲ್ಲದ ಕೆಲಸ ಎರಡೂ ವ್ಯರ್ಥ. ಹೀಗಾಗಿ ಪ್ರಧಾನಿಗಳಿಂದ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳಿಗೆ ಮನ್ನಣೆ ಸಿಗಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...