Homeಚಳವಳಿ’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ...

’ನಾವು ನೋಡುತ್ತೇವೆ’ ಫೈಜ್ ಕಾವ್ಯದಾಗ ತಪ್ಪು ಕಾಣೂವಲ್ದುರಿ…

- Advertisement -
- Advertisement -

ಈಗ ನಮ್ಮ ದೇಶದಾಗ ಹಿಂದೂ ಅನ್ನೋ ಪದ ಎನ್ನುವುದು ಟ್ರೆಂಡಿಂಗ್ ಆಗೇದ. ಒಂದ ಏನಪಾ ಅಂದರ ಹಿಂದೆಲ್ಲಾ ‘ನಾವೆಲ್ಲ ಹಿಂದೂ ಅಂತ ಅಂತಿದ್ದವರು ಈಗ ನಾವಷ್ಟ ಹಿಂದೂ’ ಅಂತ ಅನ್ನಲಿಕ್ಕೆ ಹತ್ಯಾರ.

ಭಾರತ- ಪಾಕಿಸ್ತಾನ ಎರಡೂ ದೇಶಗಳ ಸಾಂಸ್ಕೃತಿಕ ಕೊಂಡಿಯಾಗಿದ್ದ ಜನಪ್ರಿಯ ಕವಿ ಫೈಜ್ ಅಹಮದ್ ಫೈಜ್ ಅವರ ‘ಹಮ್ ದೇಖೇಂಗೆ’ ಅನ್ನೋ ಹಾಡು ಹಿಂದೂ ವಿರೋಧಿ ಅಂತ ಕೆಲವರು ದೂರು ಕೊಟ್ಟಾರ. ಅದು ಹೌದೋ ಅಲ್ಲೋ ಅಂತ ನೋಡಲಿಕ್ಕೆ ಐಐಟಿ ಯವರು ಒಂದು ಸಮಿತಿ ನೇಮಕ ಮಾಡ್ಯಾರ. ವಿಧಾನಸೌಧದ ಮೂರನೇ ಮಹಡಿಯೊಳಗ ಒಂದು ಜೋಕ್ ಅದ. ಯಾವುದರೇ ವಿಷಯಕ್ಕ ಯಾವ ನಿರ್ಧಾರಕ್ಕ ಬರಬೇಕು ಅಂತ ತಿಳೀದೇ ಇದ್ದಾಗ ಒಂದು ಸಮಿತಿ ನೇಮಕ ಮಾಡ್ರಿ.

ಹಿಂಗ ಮಾಡಬಹುದು ಅಂತ ಗೊತ್ತಾದನಂತರ ಅದನ್ನ ಈಗ ಸದ್ಯ ಜಾರಿ ಮಾಡಬಾರದು ಅಂತ ಇದ್ದರ ಅದರ ಪರಾಮರ್ಶೆಗೆ ಇನ್ನೊಂದು ಸಮಿತಿ ನೇಮಿಸಿರಿ ಅಂತ.

ನಾಲ್ಕು ಪ್ಯಾರಾದ ಆ ಹಾಡಿನ್ಯಾಗ ಬಳಸಿದ ಕೆಲವು ಶಬ್ದ ಕೆಲವರಿಗೆ ಕಿರಿಕಿರಿ ಆಗ್ಯಾವು.

ಇದರಾಗಿನ ಒಂದು ಸಾಲು ಇದು- “ದೇವ ಭೂಮಿ ಕಾಬಾದಾಗಿನ ಎಲ್ಲಾ ಮೂರ್ತಿಗಳನ್ನು ತೆಗೆಯಲಾಗತದ”. ಇದು ಇಸ್ಲಾಮಿನ ಇತಿಹಾಸಕ್ಕೆ ಸಂಬಂಧಪಟ್ಟದ್ದು. ಇಸ್ಲಾಂ ಪೂರ್ವ ಅರೇಬಿಯಾದಲ್ಲಿ ಮೂರ್ತಿ ಪೂಜೆ ಇತ್ತು. ಪ್ರವಾದಿ ಮಹಮ್ಮದರು ಮೂರ್ತಿ ಪೂಜೆಯ ವಿರೋಧಿ. ಅವರು ಬದ್ರದ ಯುದ್ಧ ಗೆದ್ದು ಮೆಕ್ಕಾಗೆ ಬಂದನಂತರ ಕಾಬಾದಾಗ ಸುಮಾರು 360 ಮೂರ್ತಿಗಳನ್ನ ಇಟ್ಟದ್ದನ್ನ ನೋಡಿದರು. ಅದರಾಗ ಅಂದಿನ ಪ್ರಮುಖ ದೇವತೆ ಹುಬಾಲನ ವಿಗ್ರಹವೂ ಇತ್ತು.

ಅವನ್ನೆಲ್ಲಾ ಅವರು ಅಲ್ಲಿಂದ ತೆಗೆದರು.
ಫೈಜ್ ಅವರ ಕವನದಲ್ಲಿ ಇದು ಮೂರ್ತಿ ಪೂಜೆಯ ವಿರೋಧದಂತೆ ಕಂಡರೂ, ಅದು ಅಸಲಿಗೆ ಆಧುನಿಕ ಕಾಲದ ವ್ಯಕ್ತಿ ಪೂಜೆಯ ವಿರೋಧವಾಗಿರೋದು.

ಇನ್ನ ಅದರಾಗ “ಎಲ್ಲಾ ಕಡೆ ಅನಲ್ ಹಕ್‍ನ ಘೋಷಣೆ ಹೊಮ್ಮಲಿದೆ” ಅನ್ನೋ ಇನ್ನೊಂದು ಸಾಲು ಅದ. ಇದು “ಅಹಂ ಬ್ರಹ್ಮಾಸ್ಮಿ”ಗೆ ಹತ್ತಿರವಾದದ್ದು.

“ನಾನೇ ದೇವರು, ನಾನೇ ಸತ್ಯ” ಅನ್ನೋದು ಇಸ್ಲಾಂನ ಮೂಲತತ್ವ ಅಲ್ಲ ಅಂತ ವಾದಿಸುವವರು ಇರಬಹುದು. ಆದರೆ ಅದನ್ನೇ ನಂಬಿ ಬದುಕಿದ. ಆ ಘೋಷಣೆ ಕೂಗಿದ್ದಕ್ಕೆ ಫಾಸಿ ಶಿಕ್ಷೆ ಅನುಭವಿಸಿದ ಸೂಫಿ ಮನ್ಸೂರ ಅಂಥವರೂ ಇಲ್ಲೇ ದೆಹಲಿಯೊಳಗ ಇದ್ದರು ಅನ್ನೋದು ನಾವು ಮರೆಯಬಾರದು.

ಅದು ಇರಲಿ ಬಿಡಲಿ. ಅಹಂ ಬ್ರಹ್ಮಾಸ್ಮಿ ಅನ್ನೋದಂತೂ ಚೊಕ್ಕ ಹಿಂದೂ ಧರ್ಮದ ತತ್ವ. ಅದನ್ನು ಯಾರಿಗೂ ನೆನಪು ಮಾಡೋದು ಬ್ಯಾಡ.
ಹಂಗಾರ ಇದರಾಗ ಹಿಂದೂ ವಿರೋಧಿ ಅನ್ನೋದು ಏನು ಐತಿ?
ಹೋಗಲಿ ಬಿಡ್ರಿ. ಹಿಂದೂ ಅಂದರರ ಏನು?

ಇದರ ಬಗ್ಗೆ ತತ್ವಜ್ಞಾನಿಗಳು ತಮ್ಮಳವಿಗೆ ತಿಳಿದಂತೆ ಉತ್ತರ ಕೊಟ್ಟರ ಭಾರತದ ಸರ್ವೋಚ್ಚ ನ್ಯಾಯಾಲಯ ಇನ್ನೊಂದು ಉತ್ತರ ಕೊಟ್ಟದ.

ಇವತ್ತಿಗೆ ಸುಮಾರು 50 ವರ್ಷದ ಹಿಂದೆ ಶಾಸ್ತ್ರಿ ವಿರುದ್ಧ ಮೂಲದಾಸ ಪ್ರಕರಣದಾಗ ನ್ಯಾಯಮೂರ್ತಿ ಪಿ. ಬಿ ಗಜೇಂದ್ರಗಡಕರ ಅವರು ಮತ್ತು ಇತರರು ಇದಕ್ಕೊಂದು ಸರ್ವಮಾನ್ಯ ಅನ್ನೋವಂಥಾ ವ್ಯಾಖ್ಯಾನ ಕೊಟ್ಟಾರ.

“ಹಿಂದೂ ಅಂದರ ಅದು ಒಂದು ಜೀವನಶೈಲಿ ಅಷ್ಟೇ. ಅದಕ್ಕೂ ಹೆಚ್ಚಿನದೇನೂ ಇಲ್ಲ” ಅಂತ ಅಧಿಕಾರಯುತವಾಗಿ ಅವರು ಹೇಳಿದ ಮಾತು ಇವತ್ತಿನವರೆಗೂ ನಮ್ಮ ನ್ಯಾಯಾಲಯಗಳನ್ನ ಕೈಹಿಡಿದು ನಡೆಸುತ್ತಾ ಬಂದದ.

ಆ ತೀರ್ಪಿನೊಳಗ ಕಾಣುವ ಮಾತುಗಳು ಇವು.
“ವೇದಗಳಲ್ಲಿ ವಿಶ್ವಾಸ ಹಾಗೂ ಪುನರ್‍ಜನ್ಮದಲ್ಲಿ ನಂಬಿಕೆ ಮತ್ತು ಜನನಮರಣದ ಚಕ್ರದಿಂದ ಬಿಡುಗಡೆಯೇ ಹಿಂದೂ ಧರ್ಮದಲ್ಲಿ ಜೀವನದ ಅಂತಿಮ ಗುರಿ.

ಇದು ಸಾಧ್ಯವಾಗುವುದು ಅನೇಕ ವಿಧಗಳಿಂದ, ಅನೇಕ ರೀತಿ ರಿವಾಜುಗಳಿಂದ. ಇದಕ್ಕ ಒಂದ ದಾರಿ, ಒಂದ ರೀತಿ, ಒಂದ ಧರ್ಮಸಿಂಧು ಅಂತ ಇಲ್ಲ.

ಕೆಲವರು ಇದು ಜ್ಞಾನದಿಂದ ಸಾಧ್ಯ ಎಂದರೆ ಕೆಲವರು ಕರ್ಮ ಹಾಗೂ ಇನ್ನು ಕೆಲವರು ಭಕ್ತಿಯಿಂದ ಅಂತಾರ. ಸತ್ಯಕ್ಕೆ ಹಲವು ಮುಖ. ಅವುಗಳನ್ನು ಯಾರೂ ಸಂಪೂರ್ಣವಾಗಿ ತಿಳಿಸಲು ಸಾಧ್ಯ ಇಲ್ಲ. ಆದ್ದರಿಂದ ಅವೆಲ್ಲವೂ ಖರೆ.”

“ಇದು ಸತ್ಯ ಅಂತ ಎಲ್ಲರಿಗೂ ಗೊತ್ತು. ಎಲ್ಲರೂ ಅದನ್ನು ಅರ್ಥಮಾಡಿಕೊಂಡಾರ. ಆದ್ದರಿಂದನ ಎಲ್ಲಾರಿಗೂ ಹಿಂದೂ ಧರ್ಮದ ಯಾವುದೇ ಮುಖ ಅಪರಿಚಿತ ಅನ್ನಿಸೋದಿಲ್ಲ. ಯಾರು ಯಾವ ಅಭಿಪ್ರಾಯ ಮಂಡಿಸಿದರೂ ಅದನ್ನು ಒಪ್ಪುವುದು ಸಹಜ. ನಂದ ಖರೇ ಅಂತ ಯಾರಾದರೂ ವಾದಾ ಮಾಡಿದರ ಇರಲೆಪ್ಪ, ನನಗ ನಂದ ಖರೇ ನಿನಗ ನಿಂದ ಖರೇ, ಅಂತ ಹೇಳಿ ಸುಮ್ಮನೇ ಆಗತಾರ. ಸತ್ಯದ ಕಡೆ ಹೋಗೋ ದಾರಿ ಪ್ರತಿಯೊಬ್ಬರದೂ ಬ್ಯಾರೆ ಇರಬಹುದು. ಆದರ ಈ ದಾರಿಯೊಳಗ ಬಂದವರಷ್ಟ ನಮ್ಮವರು, ಆ ದಾರಿಯೊಳಗ ಬಂದವರು ನಮ್ಮವರಲ್ಲಾ ಅಂತ ಹೇಳಲಿಕ್ಕೆ ಬರೋದಿಲ್ಲ. ಇದೇ ಸತ್ಯ. ಹಿಂದೂ ಧರ್ಮದ ಪರಂಪರೆಯೊಳಗ ಇರುವ ಅಗಣಿತ ತಾತ್ವಿಕ ಪರಂಪರೆಗಳು ಎಲ್ಲವೂ ಮಾನ್ಯ. ಯಾವುವೂ ತಿರಸ್ಕಾರಕ್ಕೆ ಯೋಗ್ಯ ಅಲ್ಲ.”

“ಯಾಕೆ ಇಷ್ಟೋಂದು ಪಂಥಗಳು ಆದವು ಅನ್ನೋದು ಸಹಿತ ಆಸಕ್ತಿಕರ ವಿಷಯ. ಅದು ಈ ಧಾರ್ಮಿಕ ಪರಂಪರೆಯೊಳಗಿನ ಸೃಜನಶೀಲ ಚಲನೆಯ ಕುರುಹು. ಸಂತರು, ದಾರ್ಶನಿಕರು, ಈ ಧರ್ಮ ಭ್ರಷ್ಟತೆಯನ್ನ, ಅಂಧ ವಿಶ್ವಾಸವನ್ನ ಎದುರಿಸಿದರು. ಪುರೋಹಿತಶಾಹಿಯ ವಿರುದ್ಧ, ವಿಚಾರಕ್ಕಿಂತ ಆಚರಣೆಯ ಹೆಚ್ಚು ಮಹತ್ವ ಪಡೆಯುವುದರ ವಿರುದ್ಧ, ಸಮರ ಸಾರಿದರು. ಇದರಿಂದಾಗಿಯೇ ನಮಗೆ ಬೇರೆ ಬೇರೆ ಪಂಥ ಅಂತ ಅನ್ನಿಸತಾವು. ಆದರ ಇವು ಎಲ್ಲವೂ ಸತ್ಯವನ್ನು ಕಂಡುಕೊಳ್ಳುವ ವಿವಿಧ ದಾರಿಗಳು ಅಷ್ಟ. ಮೇಲುನೋಟಕ್ಕ ಇವು ಬ್ಯಾರೆ ಅಂತ ಅನ್ನಿಸಿದರೂ ಇವು ಒಳಗೆಲ್ಲಾ ಒಂದೇ.”

“ಈ ಎಲ್ಲಾ ಸಂತರ ವಿಚಾರದ ಮೂಲ ನೋಡಿದಾಗ ಅವು ವೇದಗಳಿಂದ ಬಂದದ್ದವು ಅಂತ ಸ್ಪಷ್ಟವಾಗಿ ಗೊತ್ತಾಗತದ. ವೇದ ಎಂಬ ವೈಚಾರಿಕ ಜಲಾಶಯದಿಂದನ ಇವರಿಗೆಲ್ಲಾ ಸ್ಫೂರ್ತಿ ಸಿಕ್ಕದ. ಅವರ ವಿಚಾರದ ಮೂಲಗಳ ಆಕರ ವೇದ ಎಂಬ ಝರಿ. ಹಿಂದೂ ಧರ್ಮ ಅಪೌರುಶೇಯ. ಇದಕ್ಕೆ ಯಾರೋ ಒಬ್ಬ ಮೂಲ ಪುರುಷ, ಜನಕ ಅಥವಾ ಸ್ಥಾಪಕ ಅಂತ ಇಲ್ಲ. ಒಂದೇ ಸಿದ್ಧಾಂತ ಅಂತ ಇಲ್ಲ. ಹಿಂದೂಗಳು ಒಬ್ಬ ದೇವರನ್ನೇ ಪೂಜಿಸುತ್ತಾರೆ ಅಂತೇನೂ ಇಲ್ಲ. ಒಂದೇ ಕಟ್ಟುಪಾಡುಗಳು, ರೀತಿ ರಿವಾಜುಗಳು ಇಲ್ಲ. ಖರೇ ಹೇಳಬೇಕಂದರ ಧರ್ಮ ಅಂದರ ಹಿಂಗ ಇರಬೇಕು ಅಂತ ನಾವು ಯಾವುದಕ್ಕ ಹೇಳತೇವೋ ಅವು ಯಾವ ಗುಣಗಳೂ ಇದಕ್ಕೆ ಇಲ್ಲ. ಇದೊಂದು ಜೀವನ ಶೈಲಿ ಅಷ್ಟ”.
ನಂತರ ಅಪ್ಪಾ ಬಾಳು ಇಂಗಳೆ ಪ್ರಕರಣದಾಗ ಅಸ್ಪøಶ್ಯತೆ ಎನ್ನುವುದು ಹಿಂದೂ ಧರ್ಮವನ್ನು ನಾವು ಅಪಾರ್ಥ ಮಾಡಿಕೊಂಡಿದ್ದರಿಂದ ಬಂದ ಕೆಡುಕು. ಇದು ಹಿಂದು ಧರ್ಮದ ಭಾಗ ಅಂತ ವಾದ ಮಾಡೋರು ಹಿಂದೂ ಧರ್ಮ ಅರ್ಥಮಾಡಿಕೊಂಡೇ ಇಲ್ಲ ಅನ್ನೋ ಮಾತು ಬಂತು.

ಹಿಂದೂ ಧರ್ಮ ಅನ್ನೋದು ಇಷ್ಟು ಸರಳ ಅಂತಾದರ, ಹಿಂದೂ ವಿರೋಧಿ ಅನ್ನೋದು ಯಾಕ ನಮಗ ಅಷ್ಟ ಕಠಿಣ ಆಗೇದ? ತಿಳಿಯಲಾರದವರೇ ತಿಳಿ ಹೇಳಬೇಕು.

ಅಷ್ಟಕ್ಕೂ ಆಳುವವರು ಕಾವ್ಯ ವಿರೋಧಿಗಳಾಗಿರೋದು ಯಾಕ?
ಅದರ ಉತ್ತರ ಕವಿ ಹಬೀಬ್ ಜಾಲಿಬ್‍ರ ಶಾಯರಿಯೊಳಗ ಐತಿ.

“ಶೇರು ಶಾಯರಿಗಳಿಗೆ ಹೆದರತಾರೋ ಇವರು
ಇರುಳುಗಣ್ಣಿನವರು ಬೆಳಕಿಗೆ ಹೆದರತಾರೋ”…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...

‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್ 

ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಮ್ಮದೇ ಆದ ವಿಕಿಪೀಡಿಯಾ ಪುಟದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂಬ ಹುದ್ದೆಯನ್ನು ಹೊಂದಿರುವ ಅವರ ಚಿತ್ರವಿದೆ. ಪೋಸ್ಟ್‌ನಲ್ಲಿ ಟ್ರಂಪ್...

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...