ಮಾರಣಾಂತಿಕ ಕರೋನ ವೈರಸ್ ವಿಶ್ವಾದಾದ್ಯಂತ ತನ್ನ ಪ್ರಬಾವ ಬೀರುತ್ತಿದೆ. ಜಗತ್ತಿನಾದ್ಯಂತ ಮೂರು ಸಾವಿರಕ್ಕಿಂತಲೂ ಹೆಚ್ಚು ಜನರು ಸಾವಿಗೀಡಾಗಿದ್ದರೆ ತೊಂಬತ್ತೈದು ಸಾವಿರಕ್ಕಿಂತಲೂ ಜನರು ವೈರಸ್ ಭಾದಿತರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈಗ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ವೈರಸ್ ಬಗ್ಗೆ ಸರ್ಕಾರಗಳು ಜಾಗೃತಿಯನ್ನು ಕೂಡಾ ಮಾಡುತ್ತಿದೆ. ಹಾಸ್ಯ ಪ್ರವೃತ್ತಿಯ ಜನರೂ ಕೂಡ ಜಾಲತಾಣದಲ್ಲಿ ಹಾಸ್ಯವಾಗಿಯೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
‘ವುಹಾನ್ ಶೇಕ್’ ನ ವೈರಲ್ ವೀಡಿಯೊಗಳು ಕೂಡ ಹಾಸ್ಯವನ್ನು ಸೃಷ್ಟಿಸುತ್ತಾ ಜನರಿಗೆ ಜಾಗೃತಿಯನ್ನು ಮೂಡಿಸುತ್ತಿದೆ. ಜನರು ಪರಸ್ಪರ ಭೇಟಿಯಾಗುವಾಗ ಹಸ್ತಲಾಘವ ಮಾಡುವ ಬದಲಿಗೆ ಕಾಲುಗಳನ್ನು ಪರಸ್ಪರ ಮುಟ್ಟುವ ಮೂಲಕ ಶುಭಾಶಯ ವಿನಿಮಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
The 'Wuhan shake' or the elbow bump?
How people around the world are avoiding shaking hands because of coronavirushttps://t.co/xSx2U94Fcr pic.twitter.com/FJepMv6puO
— BBC News (World) (@BBCWorld) March 3, 2020
ಭಾರತದಲ್ಲೂ ಹಾಸ್ಯಮಿಳಿತ ವಿಡಿಯೋ ಟಿಕ್ ಟಾಕ್ ನಲ್ಲಿ ಹಾಕಿ ಜಾಗೃತಿಯನ್ನು ಮೂಡಿಸುವ ಕೆಲಸವೂ ಮಾಡುತ್ತಿದ್ದಾರೆ. ವೈರಸ್ ತಗಲದಂತೆ ಹೇಗಿರಬೇಕು ಎನ್ನುವ ವಿಡಿಯೋ ಹರಿದಾಡುತ್ತಿದೆ.
There are lots of misconceptions about #CoronaOutbreak
Here are some FUN FACTS!
Bollywood is the best way to learn! #COVID19 #CoronaVirusUpdates pic.twitter.com/jtchXfj9g6
— Dr Amir Khan GP (@DrAmirKhanGP) March 2, 2020
ಹಾಗೆಯೇ ವ್ಯಂಗ್ಯ ಚಿತ್ರಗಾರರು ಕೂಡ ತಮ್ಮ ಗೆರೆಗಳಿಂದ ಕರೋನ ವಿರುದ್ದ ಸಮರ ಸಾರಿದ್ದಾರೆ.

(ಕೃಪೆ:ಕಾರ್ಟೂನಿಸ್ಟ್ ಪಿ.ಮಹಮ್ಮದ್)
ಕರೋನ ವೈರಸ್ ತಗುಲಿದ 2 ರಿಂದ 14 ದಿನಗಳ ನಡುವೆ ಯಾವುದೇ ಸಮಯದಲ್ಲಿ ಅದರ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದರ ಲಕ್ಷಣಗಳಾಗಿವೆ.


