ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಕೊರೊನ ವೈರಸ್ ವಿರುದ್ಧ ಹೋರಾಡಲು ಕೇರಳ ಸರ್ಕಾರ ಪಣತೊಟ್ಟಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರು ತಕ್ಷಣವೇ 20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ.
ಕೇರಳದಲ್ಲಿ ಸುಮಾರು 25 ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಎದುರಾಗಬಹುದಾದ ಬಿಕ್ಕಟ್ಟನ್ನು ತಗ್ಗಿಸಲು 20000 ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿದ್ದಾರೆ.
2018 ರಲ್ಲಿ ಎದುರಾದ ಭೀಕರ ಪ್ರವಾಹ ಮತ್ತು 2019 ರಲ್ಲಿ ಅದರ ವಿನಾಶಕಾರಿ ಪುನರಾವರ್ತನೆಯ ನಂತರ ಘೋಷಿಸಲಾದ ಪರಿಹಾರ ಪ್ಯಾಕೇಜ್‌ಗಿಂತ ಈ ಕೊರೊನಾ ಹಣಕಾಸಿನ ಪ್ಯಾಕೇಜ್ ದೊಡ್ಡದಾಗಿದೆ. ಏಕೆಂದರೆ ಕೊರೊನ ವೈರಸ್ ಪರಿಣಾಮವು ವ್ಯಾಪಕವಾಗಲಿದೆ ಎಂದು ವಿಜಯನ್ ಹೇಳಿದ್ದಾರೆ.
ಇದರಲ್ಲಿ 2000 ಕೋಟಿಯನ್ನು ಉದ್ಯೋಗ ಖಾತರಿ ಕಾರ್ಯಕ್ರಮದಡಿ ಹೆಚ್ಚಿನ ಗ್ರಾಮೀಣ ಉದ್ಯೋಗಗಳಿಗೆ ಬಳಸಲಾಗುವುದು ಮತ್ತು ಇನ್ನೊಂದು 100 ಕೋಟಿಯನ್ನು ಈ ತಿಂಗಳವರೆಗೆ ಉಚಿತ ಪಡಿತರಕ್ಕಾಗಿ ಬಳಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಪರಿಸ್ಥಿತಿ ಹದಗೆಡುವ ಸಾಧ್ಯತೆಯಿದೆ. ಆದ್ದರಿಂದ ನಾವು ಅತ್ಯಂತ ಕೆಟ್ಟ ಪರಿಸ್ಥಿತಿಗೆ ಯೋಜಿಸುತ್ತಿದ್ದೇವೆ “ಎಂದು ಸಿಎಂ ನಿಕಟವರ್ತಿಯೊಬ್ಬರು ತಿಳಿಸಿದ್ದಾರೆ. ಪ್ಯಾಕೇಜ್ ಹಣದ ವಿಂಗಣಡಣೆ ಇನ್ನು ಅಧಿಕೃತ ಪತ್ರಿಕಾ ಪ್ರಕಟಣೆಯಾಗಿ ಹೊರಬಂದಿಲ್ಲ. ಆದರೆ ಅಂದಾಜು ಈ ಕೆಳಕಂಡಂತಿದೆ.
- ರಾಜ್ಯದ ಪ್ರತಿಯೊಬ್ಬರಿಗೂ (ಎಪಿಎಲ್ ಮತ್ತು ಬಿಪಿಎಲ್) ಒಂದು ತಿಂಗಳ ಕಾಲ ಉಚಿತ ಪಡಿತರ ಪೂರೈಕೆ.
- ಏಪ್ರಿಲ್-ಮೇ ಎರಡು ತಿಂಗಳ ಎಲ್ಲಾ ಜನಕಲ್ಯಾಣ ನಿವೃತ್ತಿ ವೇತನಗಳನ್ನು ಮಾರ್ಚ್ ತಿಂಗಳಲ್ಲೇ ಮನೆ ಬಾಗಿಲಿಗೆ ತಲುಪಿಸಲಾಗುವುದು.
- ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 2000 ಕೋಟಿ ರೂಪಾಯಿ ವಿಶೇಷ ಹೂಡಿಕೆ ಮೂಲಕ ಅರ್ಹರಿಗೆ ಎರಡು ತಿಂಗಳ ಕೂಲಿ ನೀಡಲಾಗುವುದು.
- ಕುಟುಂಬಶ್ರೀ ಯೋಜನೆಯ ಸಾಲಸೌಲಭ್ಯಕ್ಕಾಗಿ 2000 ಕೋಟಿ ರೂಪಾಯಿ ನೀಡಲಾಗುವುದು.
- 1000 ಸುಭಿಕ್ಷ ರೆಸ್ಟೋರೆಂಟ್ ಗಳನ್ನು ಏಪ್ರಿಲ್ ತಿಂಗಳಿನಲ್ಲೇ ತೆರೆದು ರೂ.20
ಬೆಲೆಯಲ್ಲಿ ಊಟ ಪೂರೈಸಲಾಗುವುದು. - ಕೋವಿಡ್-19ರ ಅವಧಿಗೆ 500 ಕೋಟಿ ರೂಪಾಯಿ ಆರೋಗ್ಯ ಯೋಜನೆ ಜಾರಿ.
- ವಿದ್ಯುಚ್ಛಕ್ತಿ ಮತ್ತು ನೀರಿನ ಶುಲ್ಕ ಸಂದಾಯ ಒಂದು ತಿಂಗಳ ಕಾಲ ಮುಂದೂಡಲಾಗಿದೆ.


