Homeಮುಖಪುಟ12 ಗಂಟೆಗೆ ಪತ್ರಿಕಾಗೋಷ್ಠಿ ಕರೆದ ಕಮಲ್‌ನಾಥ್‌: ರಾಜೀನಾಮೆ ಸಾಧ್ಯತೆ

12 ಗಂಟೆಗೆ ಪತ್ರಿಕಾಗೋಷ್ಠಿ ಕರೆದ ಕಮಲ್‌ನಾಥ್‌: ರಾಜೀನಾಮೆ ಸಾಧ್ಯತೆ

- Advertisement -
- Advertisement -

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ರವರು ವಿಶ್ವಾಸಮತ ಯಾಚನೆಗೆ ಎರಡು ಗಂಟೆಗಳ ಮುನ್ನ ಪತ್ರಿಕಾಗೋಷ್ಠಿ ಕರೆದಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸುವ ಗೋಜಿಗೆ ಹೋಗದೇ ರಾಜೀನಾಮೆ ನೀಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂ ಆದೇಶದಂತೆ ಇಂದು 2 ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಿಗಧಿಯಾಗಿದೆ. ಆದರೆ ಸ್ಪೀಕರ್‌ ಒಟ್ಟು 22 ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿರುವುದರಿಂದ 206 ಸದಸ್ಯರ ವಿಧಾನಸಭಾ ಬಲಾಬಲದಲ್ಲಿ ಕಾಂಗ್ರೆಸ್‌ ಬಲ 92ಕ್ಕೆ ಕುಸಿದಿದ್ದು ಏಳು ಇತರ ಸದಸ್ಯರ ಬೆಂಬಲದೊಂದಿದೆ 99ಕ್ಕೆ ಬಂದು ನಿಂತಿದೆ. ಬಹುಮತಕ್ಕೆ ಇನ್ನು ಐವರು ಸದಸ್ಯರ ಕೊರತೆಯನ್ನು ಕಾಂಗ್ರೆಸ್‌ ಎದುರಿಸುತ್ತಿದೆ.

ಇನ್ನೊಂದೆಡೆ 107 ಸದಸ್ಯರನ್ನೊಳಗೊಂಡ ಬಿಜೆಪಿ ಪಕ್ಷವು ಸರಳ ಬಹುಮತ ಹೊಂದಿದ್ದು ಅಧಿಕಾರಕ್ಕೇರಲು ಬಕಪಕ್ಷಿಯಂತೆ ಕಾದು ಕುಳಿತಿದೆ. ಆದರೂ ಕೊನೆಕ್ಷಣದವರೆಗೂ ರಾಜಕೀಯ ಆಗುಹೋಗುಗಳನ್ನು ಹತ್ತಿರದಿಂದ ವೀಕ್ಷಿಸಲು ಕಾಂಗ್ರೆಸ್‌ ಸಜ್ಜುಗೊಂಡಿದೆ.

ಕಳೆದ ವರ್ಷ ರಾಜ್ಯ ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಮಸೂದೆಯ ಪರವಾಗಿ ಇಬ್ಬರು ಬಿಜೆಪಿ ಶಾಸಕರಾದ ನಾರಾಯಣ್ ತ್ರಿಪಾಠಿ ಮತ್ತು ಶರದ್ ಕೋಲ್ ಅವರು ಮತದಾನವನ್ನು ಉಲ್ಲೇಖಿಸಿ ಕಾನೂನು ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ಪಿಸಿ ಶರ್ಮಾ ಮಾತನಾಡಿ “ಆಗ ಇಬ್ಬರು ಶಾಸಕರು ಇದ್ದರು. ಆದರೆ ಈ ಬಾರಿ ಬಿಜೆಪಿಯ ಕಡೆಯಿಂದ ಕನಿಷ್ಠ ಎಂಟು ಶಾಸಕರು ನಮಗೆ ಮತ ಚಲಾಯಿಸುತ್ತಾರೆ.” ಎಂದಿದ್ದಾರೆ. ಆ ಮೂಲಕ ಸರ್ಕಾರ ಉಳಿಸಿಕೊಳ್ಳುವ ತಮ್ಮ ಆಶಾವಾದವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ.

ಆದರೆ, ಮತ್ತೊಬ್ಬ ಕಾಂಗ್ರೆಸ್ ಮುಖಂಡರೊಬ್ಬರು, “ಪ್ರತಿಪಕ್ಷದ ಕಡೆಯಿಂದ ಐದು ಶಾಸಕರನ್ನು ಪಡೆಯುವುದು ಅಸಂಭವವಾಗಿದೆ, ಈಗ ತಕ್ಕಡಿ ಬಿಜೆಪಿಯ ಪರವಾಗಿ ಓರೆಯಾಗುತ್ತಿದೆ. ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ ಯಾವುದೇ ಬಿಜೆಪಿ ಶಾಸಕರು ನಮ್ಮ ಕಡೆಗೆ ಬರಲು ಇಷ್ಟಪಡುವುದಿಲ್ಲ. ವಿಶೇಷವಾಗಿ ಬಿಜೆಪಿ ಬಲವಾದ ಕೇಂದ್ರ ನಾಯಕತ್ವವನ್ನು ಹೊಂದಿರುವಾಗ ಈ ಸಮಯದಲ್ಲಿ ದಂಗೆ ಏಳುವುದು ಅವರ ರಾಜಕೀಯ ಜೀವನವನ್ನು ಅಪಾಯಕ್ಕೆ ತಳ್ಳುವ ಸಂಭವವಿದೆ. ದುರದೃಷ್ಟವಶಾತ್, ನಾವು ಕರ್ನಾಟಕದಂತಹ ಪರಿಸ್ಥಿತಿಯತ್ತ ಸಾಗುತ್ತಿದ್ದೇವೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...