HomeಮುಖಪುಟCBSC ಪರೀಕ್ಷೆಯಲ್ಲಿ ಬಿಜೆಪಿ ಲಕ್ಷಣಗಳನ್ನು ಬರೆಯುವಂತೆ ಪ್ರಶ್ನೆ: ಡಿವೈಎಫ್ಐ ಖಂಡನೆ

CBSC ಪರೀಕ್ಷೆಯಲ್ಲಿ ಬಿಜೆಪಿ ಲಕ್ಷಣಗಳನ್ನು ಬರೆಯುವಂತೆ ಪ್ರಶ್ನೆ: ಡಿವೈಎಫ್ಐ ಖಂಡನೆ

- Advertisement -
- Advertisement -

ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆಯಲ್ಲಿ ಬಿಜೆಪಿ ಪಕ್ಷದ ಲಕ್ಷಣಗಳನ್ನು ಬರೆಯುವಂತೆ ಕೇಳಲಾಗಿದೆ. ಕೇರಳದ ತಿರುವನಂತಪುರದ ಸಾಮಾಜಿಕ ಅಧ್ಯಯನ ಪ್ರಶ್ನೆಪತ್ರಿಕೆಯ ಕಡ್ಡಾಯ ವಿಭಾಗದಲ್ಲಿ 5 ಅಂಕಗಳನ್ನು ಹೊಂದಿರುವ ಈ ಪ್ರಶ್ನೆ ಹೊಸ ವಿವಾದ ಹುಟ್ಟುಹಾಕಿದೆ.

ಇದು ದೇಶದ ಶಿಕ್ಷಣ ವ್ಯವಸ್ಥೆಯನ್ನು ಕೇಸರಿಕರಣ ಮಾರುತ್ತಿರುವ ಸೂಚನೆಯಾಗಿದೆ ಎಂದು ಡಿವೈಎಫ್‌ಐ ಆರೋಪಿಸಿದೆ. ಸರ್ವಾಧಿಕಾರಿಗಳು ಇತಿಹಾಸವನ್ನು ತಿರುಚುವ ಪ್ರಯತ್ನದಲ್ಲಿದ್ದಾರೆ. ಮೋದಿ ಮತ್ತು ಆರ್‌ಎಸ್‌ಎಸ್ ದೇಶದ ಇತಿಹಾಸದಲ್ಲಿ ಕೇಸರಿಕರಣ ಮಾಡಲು ಹೊರಟಿದ್ದಾರೆ. ದೇಶದ ಜಾತ್ಯತೀತ ಸ್ವರೂಪವನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ತಡೆಯಲು ಎಲ್ಲಾ ಜಾತ್ಯತೀತ ಶಕ್ತಿಗಳು ಒಗ್ಗೂಡುತ್ತವೆ ಎಂದು ಡಿವೈಎಫ್ಐ ಹೇಳಿದೆ.

ನಮ್ಮ ಸಂವಿಧಾನ ಮತ್ತು ಜಾತ್ಯತೀತತೆಯನ್ನು ರಕ್ಷಿಸಲು ದೇಶಾದ್ಯಂತ ಜನರು ತೀವ್ರವಾಗಿ ಪ್ರತಿಭಟಿಸಲು ಸಿದ್ಧರಿರಬೇಕು. ದೇಶದ ಇತಿಹಾಸದ ಬಗ್ಗೆ ಏನೂ ಉತ್ತಮವಾಗಿಲ್ಲ ಎಂದು ಹೇಳುವ ಒಂದು ಬಣವು ತನ್ನದೇ ಆದ ಇತಿಹಾಸವನ್ನು ರಚಿಸುವ ಉದ್ದೇಶದಲ್ಲಿದೆ. ಸಿಬಿಎಸ್‌ಇಯನ್ನು ಆರ್‌ಎಸ್‌ಎಸ್‌ನ ಏಜೆನ್ಸಿಯಾಗಲು ಪ್ರಯತ್ನ ಮಾಡಲಾಗಿದೆ. ಸಿಬಿಎಸ್‌ಇ ಸ್ವೀಕಾರಾರ್ಹವಲ್ಲದ ಪ್ರವೃತ್ತಿಯ ವಿರುದ್ಧ ಪ್ರಬಲವಾಗಿ ಖಂಡಿಸುತ್ತೇವೆ” ಎಂದು ಡಿವೈಎಫ್ಐ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...