Homeಮುಖಪುಟಮಧ್ಯಾಹ್ನ ಕಾರ್ಮಿಕ ಸಚಿವರ ಜೊತೆ ಸಭೆ : ಫ್ಯಾಕ್ಟರಿಗಳ ಲಾಕ್‌ಡೌನ್ ಬಹುತೇಕ ಖಚಿತ

ಮಧ್ಯಾಹ್ನ ಕಾರ್ಮಿಕ ಸಚಿವರ ಜೊತೆ ಸಭೆ : ಫ್ಯಾಕ್ಟರಿಗಳ ಲಾಕ್‌ಡೌನ್ ಬಹುತೇಕ ಖಚಿತ

- Advertisement -
- Advertisement -

ರಾಜ್ಯದಲ್ಲಿ ಕೊರೊನ ವೈರಸ್ ವ್ಯಾಪಕವಾಗಿ ಹರಡುವ ಲಕ್ಷಣಗಳು ಗೋಚರಿಸತೊಡಗಿವೆ. ಕೊರೊನ ಪೀಡಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ.  ಕೊರೊನ ವ್ಯಾಪಕತೆ ಪಡೆಯುತ್ತಿರುವ ಪರಿಣಾಮ ಕಾರ್ಖಾನೆಗಳು, ಕಂಪನಿಗಳು ಮತ್ತು ಗಾರ್ಮೆಂಟ್ಸ್ ಗಳಿಗೆ ರಜೆ ನೀಡುವ ಸಂಬಂಧ ಸರ್ಕಾರ ಮಧ್ಯಾಹ್ನ 2.15ಕ್ಕೆ ಬೆಂಗಳೂರಿನ ಕೌಶಲ್ಯ ಭವನದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಲಿದೆ.

ಈ ನಡುವೆ ಮಾರ್ಚ್‌ 19ರಂದು ಮಂಡ್ಯದ ಗಾರ್ಮೆಂಟ್ಸ್‌ಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದರು. ತದನಂತರ ಫ್ಯಾಕ್ಟರಿ ಮ್ಯಾನೇಜರ್‌ಗಳು ಒತ್ತಡ ತಂದು ರಜೆಯನ್ನು ರದ್ದುಗೊಳಿಸಿದ್ದರು.


ಇದನ್ನೂ ಓದಿ: ಕೊರೊನಾ ಮುನ್ನೆಚ್ಚರಿಕೆ: ಮಂಡ್ಯದ ಗಾರ್ಮೆಂಟ್ಸ್‌ಗಳಿಗೆ 10ದಿನ ರಜೆ ಘೋಷಿಸಿ, ಏಕಾಏಕಿ ಹಿಂಪಡೆದ ಜಿಲ್ಲಾಡಳಿತ!


ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ ಸೇರಿದಂತೆ ಎಲ್ಲಾ ಕರ್ಮಿಕ ಸಂಘಟನೆಗಳ ಮುಖಂಡರು ಕಾರ್ಮಿಕ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 2.15ಕ್ಕೆ ಕೌಶಲ್ಯ ಭವನದಲ್ಲಿ ಮಾತುಕತೆ ನಡೆಯಲಿದ್ದು ಇಡೀ ರಾಜ್ಯದ್ಯಾಂತ ಇರುವ ಎಲ್ಲಾ ಫ್ಯಾಕ್ಟರಿಗಳು, ಗಾರ್ಮೆಂಟ್ಸ್ ಗಳು ಲಾಕ್‌ಡೌನ್ ಆಗಲಿವೆ. ಮಾತುಕತೆಯ ವೇಳೆ ವೇತನ ಸಹಿತ ರಜೆ ನೀಡಬೇಕೆಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಲಿವೆ.

ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಬಸ್ ಗಳ ಸೇವೆ ಸ್ಥಗಿತಗೊಳಿಸಿದೆ.  ಅಂತರರಾಜ್ಯ ಬಸ್ ಗಳ ಸೇವೆ ರದ್ದುಪಡಿಸಲಾಗಿದೆ.. ಎಲ್ಲಾ ಹೋಟೆಲ್ ಗಳಲ್ಲೂ ಜನರು ಕೂರದಂತೆ ಛೇರ್ ಗಳನ್ನು ತೆಗೆದಿರಿಸಲಾಗಿದೆ. ಹೊಟೆಲ್ ಗಳಲ್ಲಿ ಸ್ವಚ್ಚತೆಗೆ ಆದ್ಯತೆ ವಹಿಸುವಂತೆ ಸೂಚಿಸಲಾಗಿದೆ. ಆರೋಗ್ಯಾಧಿಕಾರಿಗಳು ದಿನಕ್ಕೆ ಮೂರು ಬಾರಿ ಹೋಟೆಲ್ ಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಜನರು ಸೇರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಹೋಟೆಲ್ ನ ಎಲ್ಲಾ ಸಿಬ್ಬಂದಿಯೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.

ಇದರ ನಡುವೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಐ.ಪಿ.ಸಿ ಸೆಕ್ಷನ್ 144ರಡಿ ನಾಲ್ಕು ಜನರಿಗಿಂತ ಹೆಚ್ಚು ಮಂದಿ ಸೇರದಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಹೀಗಾಗಿ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ಕೊರೊನ ಹರಡುತ್ತಿರುವ ನಡುವೆಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಕೂಡ ಭೀತಿಯಿಂದಲೇ ಕೆಲಸ ಮಾಡುತ್ತಿದ್ದು, ಅವರಿಗೂ ರಜೆ ನೀಡುವ ಬಗ್ಗೆ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು. ಕಾರ್ಮಿಕ ಸಂಘಟನೆಗಳು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಒತ್ತಾಯಿಸಲಿದ್ದು ಇದಕ್ಕೆ ಕಾರ್ಮಿಕ ಸಚಿವರು ಯಾವ ತೀರ್ಮಾನ ಕೈಗೊಳ್ಳುವರು ಎಂಬುದನ್ನು ಕಾದುನೋಡಬೇಕಾಗಿದೆ.

ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕರಿಗೂ ವೇತನಸಹಿತ ರಜೆ ನೀಡಬೇಕು. ಕಾರ್ಮಿಕರಿಗೆ ವೇತನ ನೀಡದೆ ರಜೆ ಕೊಟ್ಟರೆ ಅವರ ಜೀವನ ತುಂಬ ಕಷ್ಟಕರವಾಗುತ್ತದೆ. ಕಾರ್ಮಿಕರಿಗೆ ಬೇರೆ ದುಡಿಮೆ ಇಲ್ಲ. ಕಾರ್ಮಿಕರು ಪ್ರಾಣವನ್ನು ಪಣವಿಟ್ಟು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ವೇತನ ಸಹಿತ ರಜೆ ನೀಡಬೇಕು ಎಂದು ಕಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಕಡಿಮೆ ಪ್ರಾತನಿಧ್ಯ ನೀಡಿದ ರಾಜಕೀಯ ಪಕ್ಷಗಳು

0
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ 2019ಕ್ಕೆ ಹೋಲಿಕೆ ಮಾಡಿದರೆ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಕಡಿಮೆ ಪ್ರಾತಿನಿಧ್ಯ ನೀಡಿರುವುದು ಕಂಡು ಬಂದಿದೆ. ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಕೇವಲ ಓರ್ವ ಮುಸ್ಲಿಂ...