Homeಡೇಟಾ ಖೋಲಿಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು.

- Advertisement -
- Advertisement -

ಕೈಲೆ ಆಗಲಾರದಾಗ ಕಥಿ ಹೇಳಿದರೂ ಅನ್ನೋ ಹಂಗ ನಮ್ಮ ಜಾವಡೇಕರ ಅಣ್ಣಾರು ಠೀವಿ ಮ್ಯಾಲೆ ರಾಮಾಯಣ- ಮಹಾಭಾರತ, ಶಕ್ತಿಮಾನು- ವ್ಯೋಮಕೇಶ ಬಕ್ಷಿ ತೋರಸಾಕ ಹತ್ಯಾರು. ಯಾರೂ ಎಲ್ಯೂ ಹೊರಗ ಹೋಗಬ್ಯಾಡ್ರಿ, ಸುಮ್ಮನೆ ಒಂದ ಕಡೆ ಕುತಗೊಂಡು ನೋಡರಿ ಅಂತ ಹೇಳ್ಯಾರು. ಆ ರಾಮಾಯಣದಾಗ ಒಂದು ಕಥಿ ಬರತದ. ಲಕ್ಷ್ಮಣನ ಮ್ಯಾಲೆ ರಾವಣನ ಮಗಾ ಮೇಘನಾಥ ಶಿವನ ಪ್ರಸಾದವಾದ ಪಾಶುಪತ ಅಸ್ತ್ರವನ್ನು ಬಿಡತಾನ. ಅಲ್ಲಿ ತನಕಾ ಎಲ್ಲಾ ಅಸ್ತ್ರಗಳನ್ನ ಎದುರಿಸಿದ ಲಕ್ಷ್ಮಣ ಪಾಶುಪತಕ್ಕ ಮಾತ್ರ ವಿರೋಧ ಮಾಡೋದಿಲ್ಲ. ಅದಕ್ಕ ಶಿರಸಾವಹಿಸಿ ನಮಸ್ಕಾರ ಮಾಡತಾನ. ಅದು ಅವನ ಸುತ್ತ ಹಾಸಿ ಹೋಗಿ ಬಿಡತದ.

ಅವನಿಗೆ ಏನೂ ತೊಂದರೆ ಆಗಂಗಿಲ್ಲ.

ಈ ದುರಿತ ಕಾಲದಾಗ ತ್ರೇತಾಯುಗದ ನೆನಪು ಯಾಕ ಆತಪಾ ಅಂದರ ಈ ಕೊರೊನಾಸುರನ ವಿರುದ್ಧ ನಾವು ಇಟ್ಟಿರೋ ಎಲ್ಲಾ ಹೆಜ್ಜೆಗಳಿಗಿಂತ ಮೀರಿದ್ದು ಒಂದು ಹೆಜ್ಜೆ ಐತಿ. ಅದು ʻಹಿಂಡು ನಿರೋಧʼ. ಈಗಿನ ಕೆಲವು ವಿಜ್ಞಾನಿಗಳು ʻಹೆರ್ಡ ಇಮ್ಯುನಿಟಿʼ ಅಥವಾ ʻಹಿಂಡು ನಿರೋಧʼವೇ ಕೊರೋನಾ ಹೋರಾಟದ ಸುಲಭ ಉಪಾಯ ಅಂತ ಹೇಳಿಕೊಂಡು ಓಡಾಡಲಿಕ್ಕೆ ಹತ್ಯಾರ. ಏನು ಇದು ಹಿಂಡು ನಿರೋಧ?

ಈ ಥಿಯರಿ ಪ್ರಕಾರ ಒಂದು ದೇಶದ 10 ರಿಂದ 40 ಶೇಕಡಾ ಜನರಿಗೆ ಒಂದು ರೋಗದ ಸೋಂಕು ತಗಲಿದರ, ಅವರೂ ಸೇರಿದಂಗ ಇಡೀ ದೇಶ ಗುಣ ಆಗತದ. ಈ ಪ್ರಕ್ರಿಯಾದಾಗ ಕೆಲವರು ಸಾಯಬಹುದು. ಅವರನ್ನ ಕೆರೆಗೆ ಹಾರಕ್ಕ ನಾವು ಬಲಿ ಕೊಟ್ಟ ಸಣ್ಣ ಸೊಸೆ ಅಂತ ತಿಳಕೊಂಡು ಸುಮ್ಮನೇ ಇರಬೇಕು. ಅದನ್ನ ಬಿಟ್ಟು ಈ ಪೀಡೆಗೆ ಬ್ಯಾರೆ ಔಷಧ ಇಲ್ಲ, ಅಂತ ಅವರ ವಾದ.

ಹಂಗ ನೋಡಿದರ ಯಾವುದೇ ವೈರಸ್ಸಿಗೆ ಔಷಧ ಅನ್ನೋದು ಇಲ್ಲ. ವರ್ಷದಾಗ ಮೂರು ಸಲಾ ಬರೋ ನೆಗಡಿಗೂ ಇಲ್ಲ, ಹಣೆಬರಾ ಕೆಟ್ಟಾಗ ಬರೋ ಕರೋನಾಕ್ಕೂ ಇಲ್ಲ.

ಅದರ ವಿರುದ್ಧ ಔಷಧ ಮಾಡಲಿಕ್ಕೆ ಯಾಕ ಬರಂಗಿಲ್ಲ ಅಂದರ ಅದು ತನ್ನ ರೂಪ ತಾನು ಹಗಲೆಲ್ಲಾ ಬದಲಿ ಮಾಡಿಕೋತದ. ಟ್ರಾನ್ಸ್ ಫಾರ್ಮರ್ ಪಿಕ್ಚರನ್ಯಾಗ ಕಾರು ಹೋಗಿ ರೋಬೋಟ್ ಆದಂಗ. ಒಂದು ರೂಪಕ್ಕ ಔಷಧ ಕಂಡು ಹಿಡದರ ಅದು ಬ್ಯಾರೆ ರೂಪ ಧರಿಸಿ ಔಷಧವನ್ನ ನಿರುಪಯೋಗಿ ಮಾಡಿ ಬಿಡತದ.

ಆದರ ವೈರಸ್ಸಿಗೆ ಒಂದು ವರ್ಷದ ನಿರೋಧಕ ಶಕ್ತಿ ಕೊಡೋ ಹಂತಾ ಲಸಿಕೆ ತಯಾರಿಸಬಹುದು. ಲಸಿಕೆ ಅಂದರ ಅದೇ ವೈರಸ್ಸಿನ ನಿರುಪದ್ರವಿ ರೂಪ. ಎಲ್ಲಾರಿಗೂ ಸಣ್ಣ ಪ್ರಮಾಣದಾಗ ಅದೇ ವೈರಸ್ಸಿನ ನಿರುಪದ್ರವಿ ರೂಪವನ್ನು ಕೊಟ್ಟರ ಅವರ ದೇಹ ಅದರ ವಿರುದ್ಧ ನಿರೋಧಕ ಶಕ್ತಿ ಬೆಳಿಸಿಗೋತದ. ಢಿಪ್ತೀರಿಯಾದಂತ ಲಸಿಕೆಯಿಂದ ರೋಗಕ್ಕ ಜೀವನ ಪೂರ್ತಿ ನಿರೋಧಕ ಶಕ್ತಿ ಬರತದ. ವೈರಸ್ಸಿನ ಲಸಿಕೆಗಳಿಂದ ಒಂದು ವರ್ಷ- ಎರಡು ವರ್ಷದ ವರೆಗೆ ನಿರೋಧಕ ಶಕ್ತಿ ಬರತದ.

ಹಿಂಡು ನಿರೋಧದಾಗ ಏನು ಆಗತದ ಅಂದರ ಒಬ್ಬ ಮನುಷ್ಯನ ದೇಹದಿಂದ ಹೊರಗ ಬಂದ ವೈರಸ್ಸು ಇನ್ನೊಬ್ಬನ ದೇಹದಾಗ ಹೋಗತದ. ಹಂಗ ಆಗೋವಾಗ ಮೊದಲಿನವನ ದೇಹದ ಜೊತೆ ಜಗಳ ಆಡಿ, ತನ್ನ ಶಕ್ತಿ ಕಳಕೊಂಡು ದುರ್ಬಲ ಆಗಿರತದ. ಹಂಗ ಒಬ್ಬರಿಂದ ಒಬ್ಬರಿಗೆ ಹೋಗಿ ಹೋಗಿ ಕಡೀಕೆ ಅದು ನಮ್ಮ ದೇಹದಾಗ ಇದ್ದರೂ ಸಹ ನಮಗ ಏನೂ ಮಾಡಲಾರದ ಹಂಗ ಆಗಿ ಬಿಡತದ. ಆಗ ಅದಕ್ಕ ಯಾವ ಲಸಿಕೆನೂ ಬ್ಯಾಡ. ಇಡೀ ಸಮಾಜ ಅದರ ವಿರುದ್ಧ ಸ್ವಾಭಾವಿಕ ನಿರೋಧಕ ಶಕ್ತಿ ಬೆಳಿಸಕೊತದ.

ಇಂಥಾ ಪ್ರಯೋಗ ಈಗಾಗಲೇ ನಡದು ಬಿಟ್ಟಾವು . ಇಂಗ್ಲಂಡದಾಗ ರೋಗ ಹರಡಿದರ ಚಿಂತಿಲ್ಲ. ಹಬ್ಬಿದವರಿಗೆಲ್ಲ ಔಷಧಿ ಸಿಗಬೇಕು, ಸಿಗೋಹಂಗ ನಾವು ಮಾಡತೇವಿ ಅಂತ ಅವರು ಅಂತಾರು. ಕೇವಲ ಮುಂಜಾಗೃತೆ ಕ್ರಮ ಕೈಕೊಳ್ಳಲಿಕ್ಕೆ ಹತ್ಯಾರು.

ನೆದರಲ್ಯಾಂಡ್ಸದವರು ʻಬಾರದು ಬಪ್ಪುದು, ಬಪ್ಪುದು ತಪ್ಪುದುʼ ಅಂತ ಸುಮ್ಮನಿದ್ದು ಬಿಟ್ಟಾರ. ಎಷ್ಟು ಜನಾ ರೋಗಿಗಳಾದರೂ ಸರಿ ನಮ್ಮಲ್ಲೆ ಆಸ್ಪತ್ರೆ ಅದಾವು. ವೆಂಟಿಲೇಟರ ಅದಾವು. ನಾವು ಯಾರನ್ನೂ ಸಾಯಲಿಕ್ಕೆ ಬಿಡಂಗಿಲ್ಲ ಅಂತ ಹೇಳಿ ಸುಮ್ಮನೇ ಇದ್ದು ಬಿಟ್ಟಾರ.

ಆದರ ಭಾರತ ಹಿಂಗ ಮಾಡಲಿಕ್ಕೆ ಸಾಧ್ಯ ಅದ ಏನು? ನಮ್ಮ ಆರೋಗ್ಯ ವ್ಯವಸ್ಥೆ ಎಲ್ಲಾರನ್ನೂ ಕಾಳಜಿ ಮಾಡುವಂಥಾದ್ದು ಅದ ಏನು? ಒಂದು ನೂರಾ ಮೂವತ್ತು ಕೋಟಿ ಜನಸಂಖ್ಯೆಯ ಈ ದೇಶದಾಗ ಬರೇ 40,000 ವೆಂಟಿಲೇಟರ ಅವ ಅಂತ. ಮಹಾಮಹಿಮರ ಮೇಕಿನ್ ಇಂಡಿಯಾ ಆಗಲಿ, ಆಮದು – ರಫ್ತು ನೀತಿ ಆಗಲಿ ಅದನ್ನು ಹೆಚ್ಚು ಮಾಡಲಿಕ್ಕೆ ಆಗಿಲ್ಲ. ದೇಶದ ನಲವತ್ತು ಶೇಕಡಾ ಜನ ಅಂದರ ಸುಮಾರು 50 ಕೋಟಿ ಜನರಿಗೆ ಈ ರೋಗ ಬಂತಂತಂದರ ಏನು ಆಗಬಹುದು. ಈಗಿನ ಲೆಕ್ಕದಾಗ 100 ಜನರಿಗೆ ರೋಗ ಬಂದರ ಐದು ಜನ ಸಾಯತಾರ. ಆ ಲೆಕ್ಕದಾಗ ಸುಮಾರು 2.5 ಕೋಟಿ ಜನ ಸಾಯಬೇಕು. ಅದರಾಗ ಬರೇ 40,000 ಮಂದಿನ್ನ ನಾವು ಉಳಿಸಿಕೊಳ್ಳಬಹುದು. ಅದರಾಗ 25,000 ಶಾಸಕರು, ಅವರ ಕುಟುಂಬದವರು, 800 ಸಂಸತ್ತು ಸದಸ್ಯರು ಹಾಗೂ ಕುಟುಂಬದವರು, 6,000 ಐಎಎಸ್ಸು ಅಧಿಕಾರಿಗಳು ಹಾಗೂ ಅವರ ಸ್ಟೆನೋ- ಡ್ರೈವರುಗಳು ಇತ್ಯಾದಿಗಳನ್ನು ಬಿಟ್ಟರ ಉಳಿದವರಿಗೆ ಚಾನ್ಸು ಸಿಗಲಿಕ್ಕೆ ಇಲ್ಲ.

ಹಿಂಡು ನಿರೋಧದ ಹೆಸರಿನ್ಯಾಗ ನಾವು 2 ಕೋಟಿ, 40 ಲಕ್ಷ, 96 ಸಾವಿರ ಜನರನ್ನು ಕಳದು ಕೊಳ್ಳಲಿಕ್ಕೆ ತಯಾರಿದ್ದೇವೇನು? ಈ ಪ್ರಶ್ನೆ ಸರಳ, ಉತ್ತರ ಕಠಿಣ.

ರಾಮಾಯಣದಿಂದ ಶುರು ಮಾಡಿದ ಕಥಿ ಮಹಾಭಾರತದಿಂದ ಮುಗಸೋಣು. ಭಾರತದ ಅತಿ ಜನಪ್ರಿಯ ಅಡ್ಡಕತಿಯೊಳಗ ಒಂದು ಬಕಾಸುರನ ಕಥಿ. ಇದರಿಂದ ಕನ್ನಡ ಹಾಗೂ ಇತರ ಭಾಷಾದಾಗ ಗಾದಿ ಮಾತು ಶುರು ಆದವು. ಬಕಾಸುರನ ಗತೆ ತಿನ್ನೊದು, ಬಕಾಸುರನ ಹೊಟ್ಟಿಗೆ ಅರ್ಧಾ ರುಪಾಯಿ ಮಜ್ಜಿಗಿ, ಬಕಾಸುರನ ಹಸಿವು, ಇತ್ಯಾದಿ.

ಇದರಾಗ ಊರ ಹೊರಗಿನ ರಾಕ್ಷಸ ಬಂದು ಎಲ್ಲಾರನೂ ಒಂದ ಕಾಲಕ್ಕೆ ನಾಶ ಮಾಡಬಾರದು ಅಂತ ಹೇಳಿ ಅಲ್ಲಿನ ಜನ ಅವನ ಸಂಗ್ತೆ ಒಂದು ಒಪ್ಪಂದ ಮಾಡಿಕೊಂಡಿದ್ದರು. ಅದೇನಪಾ ಅಂದರ ದಿನಾ ಒಬ್ಬ ಮನುಷಾನ್ನ, ಒಂದು ಬಂಡಿ ಅನ್ನದ ಜೊತೆ ಆ ರಾಕ್ಷಸನಿಗೆ ತಿನ್ನಲಿಕ್ಕೆ ಕಳಸೋದು. ಅವಾ ಒಂದು ವರ್ಷದಾಗ 365 ಜನರನ್ನ ತಿನಕೊಂಡು ಸುಮ್ಮನೇ ಇದ್ದ. ಆ ಊರಿನ ಕಡೆ ವಾಕಿಂಗ್ ಬರಲಿಲ್ಲ. ಕಡೀಕೆ ಒಂದು ದಿವಸ ಕುಂತಿ ಹಾಗೂ ಅಕಿ ಮಕ್ಕಳು ಆ ಊರಿಗೆ ಅಜ್ಞಾತವಾಸಕ್ಕ ಬಂದರು. ಆ ಕಥೀ ಕೇಳಿದರು. ತಾಯಿಗೆ ತಕ್ಕ ಮಗ ಭೀಮ ಗಿನೀ ಪಿಗ್ ಆಗಲಿಕ್ಕೆ ಒಪ್ಪಿದ. ಬಕಾಸುರನ ಕಥಿ ಮುಗಸಿದ.

ಮೂಲ ಭಾರತದಾಗ ಇದು ಬರೇ ಒಂದು ಪುಟದಷ್ಟು ಸಣ್ಣ ಕಥಿ. ಆದರ ಅದರಾಗ ಭಾಳ ದೊಡ್ಡ ದೊಡ್ಡ ಪಾಠ ಅದಾವು. ಬಕಾಸುರನಿಗೆ ಎಲ್ಲಾರನ್ನೂ ಒಂದೇ ಕಾಲಕ್ಕ ನಾಶ ಮಾಡಲಿಕ್ಕೆ ಬರತಿತ್ತೋ ಇಲ್ಲೋ, ಆದರ ಜನಾ ಹಂಗ ತಿಳಕೊಂಡಿದ್ದರು. ಇನ್ನು ತಮ್ಮ ಊರಾಗ ಇರೋ ಕೆಲವರನ್ನು ಕೊಂದು ಉಳಿದವರು ಬದಕೋದು ಎನು ತಪ್ಪಲ್ಲ ಅಂತ ಅವರು ನಂಬಿದ್ದರು. ಅದರ ಬಗ್ಗೆ ಅವರಿಗೆ ನೈತಿಕ ಹಿಂಜರಿಕೆ ಇರಲಿಲ್ಲ. ಮೊನ್ನೆ ನಮ್ಮ ಬಿಳೇಮನಿ ಟ್ರಂಪಣ್ಣನವರ್ ಅವರು ಇಂಥಾದ ಮಾತು ಆಡ್ಯಾರ. ಕೆಲವು ಜನ ಸಾಯಬಹುದು, ಆದರ ವಿಶ್ವದ ಆರ್ಥಿಕ ಸ್ಥಿತಿ ಅಮೇರಿಕದ ಮ್ಯಾಲೆ ನಿಂತದ. ನಮ್ಮ ವ್ಯವಸ್ಥೆ ಕುಸಿದು ಬಿದ್ದರ ಇಡೀ ಜಗತ್ತು ಕುಸಿತದ, ಇತ್ಯಾದಿ, ಇತ್ಯಾದಿ.

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು. ಇವತ್ತಿನ ನಮ್ಮ ದೇಶದ ಹಾಗೂ ಇತರ ದೇಶದ ನಾಯಕರು ಭಾಳ ಜನ ಹಿಂದ ಇದ್ದಾರ. ಅವರಿಗೆ ಸುಲಭವಾದ ಪರಿಹಾರ ಕಾಣತಾವ ಹೊರತು ಕಷ್ಟದ್ದವು ಕಾಣಂಗಿಲ್ಲ.

ಇವುಕುರ ಜೊತೆಗೆ ಚಾಣಕ್ಯ ಅಂತ ಇನ್ನೊಂದು ಸೀರಯಲ್ಲು ಬರತಿತ್ತು. ಅದರಾಗ ಒಂದು ಮಂತ್ರ ಇತ್ತು. ಸರ್ವೇ ಭವಂತು ಸುಖಿನಹ – ಸರ್ವೇ ಸಂತು ನಿರಾಮಯ ಅಂತ. ಅಂದರ ಸರ್ವೇ ಇಲಾಖೆ ಅವರು ಸುಖವಾಗಿರಲಿ, ನಿರೋಗಿಯಾಗಿರಲಿ ಅಂತ ಅಲ್ಲ. ಎಲ್ಲರೂ ಸುಖವಾಗಿರಲಿ, ಎಲ್ಲರೂ ನಿರೋಗಿಯಾಗಿರಲಿ ಅಂತ.

ನಮ್ಮ ಅಜ್ಜಾ- ಅಜ್ಜಿ ಕಡೆ ಕೇಳಿದ ಕಥಿ ನಾವು ಮರತಿರಬಹುದು. ಕನಿಷ್ಟ ಈಗ ಡೀಡೀ ಡಿಕ್ಕಿನ ಮಹಾಭಾರತ-ರಾಮಾಯಣ ನೋಡಿ ಚಾಣಕ್ಯನೂ ನೆನಪಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೆಹಲಿ ಮರಕಜ ಬಗ್ಗೆ ಬರಿರಿ. ಆವಾಗ ನಿಮ್ಮ ಪತ್ರಿಕೆ ನಿಸ್ಸಂದೇಹವಾಗಿ ಜಾತಾತಿತ ಪತ್ರಿಕೆ.

LEAVE A REPLY

Please enter your comment!
Please enter your name here

- Advertisment -

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...