ಬಿಜೆಪಿ ಸದಸ್ಯ ಮೇಜರ್ ಸುರೇಂದ್ರ ಪೂನಿಯಾ ಅವರು “ಸೈಬರಾಬಾದ್ ಪೊಲೀಸರು ನಗರದಲ್ಲಿ ಆರೆಂಜ್ ಮಾರಾಟವನ್ನು ನಿಷೇಧಿಸಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ “ರಾಜ್ಯದಲ್ಲಿ ಪೋಲಿಸರು ಶರಿಯ ವಿಧಿಸಲು ಪ್ರಾರಂಭಿಸಿದ್ದಾರೆ, ಮುಂದಕ್ಕೆ ಸಿಂಧೂರ, ಮಂಗಳಸೂತ್ರ, ಬಿಂದಿ ಹಾಗೂ ಓಂ ಅನ್ನು ಕೂಡಾ ನಿಷೇಧ ಮಾಡುವ ದಿನ ದೂರವಿಲ್ಲ, ಜಾತ್ಯಾತೀತತೆ ಜಿಂದಾಬಾದ್” ಎಂದು ಪತ್ರಿಕೆಯೊಂದರ ಮೊದಲ ಪುಟದ ಚಿತ್ರವನ್ನು ಟ್ವಿಟ್ಟರಿನಲ್ಲಿ (ಆರ್ಕೈವ್ ನೋಡಿ) ಹಂಚಿಕೊಂಡಿದ್ದಾರೆ.
ಅವರ ಈ ಟ್ವೀಟನ್ನು ತಗೆದು ಹಾಕುವ ಮೊದಲು ಸುಮಾರು 14,000 ಲೈಕ್‌ಗಳು ಹಾಗೂ 4,000 ರಿಟ್ವೀಟ್‌ಗಳನ್ನು ಗಳಿಸಿತ್ತು.
ಇತರ ಕೆಲವು ಟ್ವಿಟ್ಟರ್ ಬಳಕೆದಾರರು ಕೂಡಾ ಇದನ್ನು ನಂಬಿ ಹಂಚಿಕೊಂಡಿದ್ದರು.
@theskindoctor13 ಎಂಬ ಟ್ವಿಟರ್ ಹ್ಯಾಂಡಲ್ ಇದನ್ನು ಸೈಬರಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿತ್ತು ಟ್ವೀಟ್ ಮಾಡಿತ್ತು.

ನಿಜವಾಗಿಯೂ ನಡೆದದ್ದೇನು?
ಪತ್ರಿಕೆಯ ಚಿತ್ರವೂ ಕಂಪ್ಯೂಟರ್ ರಚಿತ ಸ್ಪೂಫ್ ಪತ್ರಿಕೆ ಎಂಬ ಅಂಶವನ್ನು ಪೂನಿಯಾ ಗಮನಿಸದೆ ಇದ್ದುದರಿಂದ ಇಷ್ಟೆಲ್ಲ ರಾದ್ದಾಂತಗಳಾಗಿವೆ. ಪತ್ರಿಕೆಯ ಹೆಸರು ‘ಡೆಕ್ಕನ್ ಕ್ರೊನಿಕಲ್’ ಮತ್ತು ‘ವಿಡಂಬನೆ ಮಾಡಿದವರು @theskindoctor13’ ಎಂದು ಪತ್ರಿಕೆಯ ಬಲಗಡೆ ಕೊನೆಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ.
ಇದನ್ನೂ ಓದಿ: Fact Check: ಸುಳ್ಳು ಹೇಳಿದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್
ಆದರೆ ಪೂನಿಯಾ ಶರಿಯಾ ಮತ್ತು ಜಾತ್ಯಾತೀತತೆಯನ್ನು ಉಲ್ಲೇಖಿಸುವ ಆತುರದಲ್ಲಿ ಪತ್ರಿಕೆಯಲ್ಲಿದ್ದ ವಿಡಂಬನೆಯನ್ನು ಗಮನಿಸಿರಲಿಲ್ಲ. ಪತ್ರಿಕೆಯೂ ‘ಯುನೆಸ್ಕೋ ಸೈಬರಾಬಾದ್ ಪೊಲೀಸರನ್ನು ವಿಶ್ವದ ಅತ್ಯಂತ ಜಾತ್ಯತೀತ ಪೊಲೀಸ್ ಎಂದು ಘೋಷಿಸಿದೆ’ ಎಂದು ಬರೆದಿದೆ.

ನೀಲಂ ಸಿಂಗ್ ಎಂಬ ಟ್ವಿಟ್ಟರ್ ಬಳಕೆದಾರ @theskindoctor ಹೆಸರಿನೊಂದಿಗೆ ‘ಹಿಂದೂ ಹಣ್ಣಿನ ಅಂಗಡಿ’ ಎಂದು ಹೋರ್ಡಿಂಗ್ ಅನ್ನು ಹಾಕಿದ್ದಕ್ಕೆ ಜಾರ್ಖಂಡ್‌ನಲ್ಲಿ ಪೋಲಿಸರು ಮಾರಾಟಗಾರನ ವಿರುದ್ದ ಪ್ರಕರಣ ದಾಖಲಿಸಿದ್ದರಿಂದ ಅದಕ್ಕೆ ಪ್ರತಿಕ್ರಿಯೆಯಾಗಿ ವಿಡಂಬನಾತ್ಮಕ ಕ್ಲಿಪಿಂಗ್ ಮಾಡಿದ್ದರು. ತೆಲಂಗಾಣದಲ್ಲಿ ಕೂಡಾ ಇದೇ ರೀತಿಯ ಪ್ರಕರಣಗಳು ವರದಿಯಾಗಿತ್ತು. ಟ್ವಿಟ್ಟರ್ ಬಳಕೆದಾರರೊಬ್ಬರು ಪೊಲೀಸರನ್ನು ಟ್ಯಾಗ್ ಮಾಡಿ ಅತ್ತಾಪುರದಲ್ಲಿ ತರಕಾರಿ ಮಾರಾಟಗಾರರೊಬ್ಬರು ತಮ್ಮ ಗಾಡಿಗಳಲ್ಲಿ ಕೇಸರಿ ಧ್ವಜಗಳನ್ನು ಅಳವಡಿಸಿದ್ದಾರೆ ಎಂದು ಆರೋಪಿಸಿ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸೈಬದರಾಬಾದ್ ಪೊಲೀಸರು ರಾಜೇಂದ್ರ ನಗರ ಪೊಲೀಸ್ ಠಾಣೆಯನ್ನು ಟ್ಯಾಗ್ ಮಾಡಿದ್ದಾರೆ. ಇದರಿಂದಾಗಿ ಶಾಸಕ ಅರವಿಂದ್ ಧರ್ಮಪುರಿ ಸೇರಿದಂತೆ ಹಲವಾರು ಬಿಜೆಪಿ ಸದಸ್ಯರು ಪೊಲೀಸ್ ಠಾಣೆಯನ್ನು ಏಕೆ ಟ್ಯಾಗ್ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
— Cyberabad Police (@cyberabadpolice) April 26, 2020
ಇದಕ್ಕಾಗಿ @ theskindoctor13 ಎಂಬ ಬಳಕೆದಾರ ವಿಡಂಬನಾತ್ಮಕ ವೃತ್ತಪತ್ರಿಕೆ ಕ್ಲಿಪಿಂಗ್ ತಯಾರಿಸಿ ಅದನ್ನು ಪ್ರಶ್ನಿಸಿದ್ದರು. ಈಗ ಪೊಲೀಸರು ವಿಡಂಬನೆ ಮಾಡಿದ್ದಕ್ಕೆ ಅವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
A person from north-India circulates fake news stating Cyberabad police banned sale of oranges in Hyderabad. He used masthead of a city-based English daily to make it look that paper published 'orange sale ban' news. Case is registered. @MARRIRAMU @cpcybd @TelanganaDGP
— The Hindu-Hyderabad (@THHyderabad) April 27, 2020
ಇದನ್ನೂ ಓದಿ: ಅಮಿತ್ ಷಾ ಸುಳ್ಳು ಹೇಳಿದ್ದೇಕೆ ?


