Homeಮುಖಪುಟಶಾಹೀನ್‌ಬಾಗ್‌ ಪ್ರತಿಭಟನಾಕಾರರ ಕುರಿತು ಅಮಿತ್‌ ಶಾ ಸುಳ್ಳು ಹೇಳಿದ್ದೇಕೆ?

ಶಾಹೀನ್‌ಬಾಗ್‌ ಪ್ರತಿಭಟನಾಕಾರರ ಕುರಿತು ಅಮಿತ್‌ ಶಾ ಸುಳ್ಳು ಹೇಳಿದ್ದೇಕೆ?

- Advertisement -
- Advertisement -

ಶಹೀನ್ ಬಾಗ್‌ನಲ್ಲಿ ಪ್ರತಿಭಟನಾಕಾರರು ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಾರೆ ಎಂದು ಯಾವುದೇ ಬಿಜೆಪಿ ಮುಖಂಡರು ಹೇಳಿಲ್ಲ ಎಂದು ಅಮಿತ್ ಶಾ ಸುಳ್ಳು ಹೇಳಿಕೆ ನೀಡಿದ್ದಾರೆ.

ಫೆಬ್ರವರಿ 13 ರಂದು ಟೈಮ್ಸ್ ನೌ ಶೃಂಗಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಪತ್ರಕರ್ತೆ ನವಿಕಾ ಕುಮಾರ್ ಸಂದರ್ಶನ ಮಾಡಿದರು. ಆಗ ಸಿಎಎ ಪರ ರ್‍ಯಾಲಿಗಳಲ್ಲಿ ಬಿಜೆಪಿ ನಾಯಕರು ಎತ್ತುವ ಪ್ರಚೋದನಕಾರಿ ಘೋಷಣೆಗಳಾದ ‘ದೇಶದ ದೇಶದ್ರೋಹಿಗಳನ್ನು ಹೊಡೆದುರುಳಿಸಬೇಕು’. ದೆಹಲಿ ಚುನಾವಣೆಯನ್ನು ‘ಇಂಡಿಯಾ ವರ್ಸಸ್ ಪಾಕಿಸ್ತಾನ್’ ಎಂದು ಕರೆಯಲಾಯಿತು. ಮೂರನೇಯದಾಗಿ ಶಾಹೀನ್ ಬಾಗ್ ಪ್ರತಿಭಟನಾಕಾರರು ನಿಮ್ಮ ಮನೆಗಳಿಗೆ ಪ್ರವೇಶಿಸುತ್ತಾರೆ ಮತ್ತು ಮಹಿಳೆಯರು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಾರೆ ಎಂಬುದಾಗಿ ಬಿಜೆಪಿ ಮುಖಂಡರು ಹೇಳಿಕೆ ಕೊಟ್ಟಿದ್ದು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿತೆ ಎಂದು ಪ್ರಶ್ನಿಸಿದರು.

ಮೊದಲ ಎರಡು ಹೇಳಿಕೆಗಳನ್ನು ನೀಡಲಾಗಿದೆ ಎಂದು ಅಮಿತ್‌ ಶಾ ಒಪ್ಪಿಕೊಂಡರು. ಆದರೆ ಅವರ ಪಕ್ಷದ ಸದಸ್ಯರು ಶಾಹೀನ್ ಬಾಗ್ ಪ್ರತಿಭಟನಾಕಾರರ ಬಗ್ಗೆ ‘ಅತ್ಯಾಚಾರ’ ಹೇಳಿಕೆ ನೀಡಿದ್ದಾರೆ ಎಂಬುದನ್ನು ನಿರಾಕರಿಸಿ, ಯಾವುದೇ ಬಿಜೆಪಿ ಮುಖಂಡರು  ಹಾಗೆ ಹೇಳಿಲ್ಲ ಎಂದು ಶಾ ಹೇಳಿದರು.

ಅಮಿತ್ ಶಾ ಏನು ಹೇಳಿದರು?
ಬಿಜೆಪಿ ತನ್ನ ನಾಯಕರು ಮಾಡಿದ ದ್ವೇಷದ ಹೇಳಿಕೆಗಳನ್ನು ಖಂಡಿಸುತ್ತದೆ ಮತ್ತು ಅವುಗಳನ್ನು ಅನುಮೋದಿಸುವುದಿಲ್ಲ ಎಂದರು. ಆಗಮ ಮಧ್ಯ ಪ್ರವೇಶಿಸಿದ ನವೀಕಾ ಕುಮಾರ್‌ “ಶಹೀನ್ ಬಾಗ್‌ನಲ್ಲಿನ ಪ್ರತಿಭಟನಾಕಾರರು ಜನರ ಮನೆಗಳಿಗೆ ನುಸುಳುವ ಮೂಲಕ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುತ್ತಾರೆ… ಅಂತಹ ವಾಕ್ಯಗಳನ್ನು…” ನವೀಕಾ ಕುಮಾರ್ ತನ್ನ ಪ್ರಶ್ನೆಯನ್ನು ಮುಗಿಸುವ ಮೊದಲು, ಷಾ ಮಧ್ಯಪ್ರವೇಶಿಸಿ, “ಯಾರೂ ಅಂತಹ ಹೇಳಿಕೆಯನ್ನು ನೀಡಿಲ್ಲ” ಎಂದು ಅಮಿತ್‌ ಶಾ ಹೇಳಿದರು.

ಫ್ಯಾಕ್ಟ್‌ಚೆಕ್‌

ಇದನ್ನು ಪರಿಶೀಲಿಸಲು ನಾವು ಎಎನ್‌ಐ ಟ್ವಿಟ್ಟರ್‌ ಹ್ಯಾಂಡಲ್‌ನ ಆರ್ಕೈವ್‌ಗಳನ್ನು ಹುಡುಕಿದಾಗ ಬಿಜೆಪಿ ನಾಯಕ ಮತ್ತು ಸಂಸದ ಪರ್ವೇಶ್‌ ವರ್ಮಾ ಮಾಡಿದ ಭಾಷಣ ದೊರೆಯುತ್ತದೆ. 90 ಸೆಕೆಂಡ್‌ಗಳ ಆ ಭಾಷಣದಲ್ಲಿ ಅವರು “ಲಕ್ಷಾಂತರ ಜನರು ಶಾಹೀನ್ ಬಾಗ್‌ನಲ್ಲಿ ಸೇರುತ್ತಾರೆ.  ಅವರು ನಿಮ್ಮ ಮನೆಗಳಿಗೆ ಪ್ರವೇಶಿಸುತ್ತಾರೆ, ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುತ್ತಾರೆ, ಅವರನ್ನು ಕೊಲ್ಲುತ್ತಾರೆ. ಮೋದಿಜಿ ಮತ್ತು ಅಮಿತ್ ಶಾ ನಾಳೆ ನಿಮ್ಮನ್ನು ಉಳಿಸಲು ಬರುವುದಿಲ್ಲ… ಇಂದು ಸಮಯವಿದೆ ದೆಹಲಿಯ ಜನರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು” ಹೇಳಿರುವುದು ಸ್ಪಷ್ಟವಾಗಿದೆ.

ಆ ವಿಡಿಯೋ ನೋಡಿ..

ದೆಹಲಿ ವಿಧಾನಸಭಾ ಚುನಾವಣೆಗೆ ವಿಕಾಸ್ಪುರಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಮಾತನಾಡಿದ ಅವರು “ದೆಹಲಿಯ ಶಹೀನ್ ಬಾಗ್‌ನಲ್ಲಿನ ಪ್ರತಿಭಟನಾಕಾರರನ್ನು ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ಗಂಟೆಯಲ್ಲಿ ತೆರವುಗೊಳ್ಳಲಾಗುವುದು ಎಂದು ಸಹ  ಘೋಷಿಸಿದ್ದರು.”

ಈ ವಿಡಿಯೋ ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಾಗಲೇ, ಗೃಹಮಂತ್ರಿ ಅಮಿತ್‌ ಶಾ ನಮ್ಮ ನಾಯಕರು ಹಾಗೆ ಹೇಳಿಲ್ಲ ಎಂದು ಸುಳ್ಳು ಹೇಳಿ ಸಿಕ್ಕಬಿದ್ದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಸಂವಿಧಾನಕ್ಕೆ, ದೇಶದ ಏಕತೆಗೆ, ಸಾರ್ವಭೌಮತ್ವಕ್ಕೆ ಮತ್ತು ದೇಶದ ಪ್ರಜೆಗಳಿಗೆ ವಿರುದ್ಧವಾದ ಕಾನೂನನ್ನು ಜಾರಿಗೆ ತಂದವರು ದೇಶದ್ರೋಹಿಗಳು. ಇಂತಹ ದೇಶದ್ರೋಹಿಗಳು ಮಾಡುವ ಕೆಲಸಗಳನ್ನು ನೋಡಿಕೊಂಡು ನ್ಯಾಯಾಂಗ ಯಾಕೆ ಸುಮ್ಮನಿದೆ ಅಂತ ಗೊತ್ತಾಗುತ್ತಾ ಇಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...