Homeನಿಜವೋ ಸುಳ್ಳೋFact Check: ಸ್ವಿಟ್ಜರ್‌ಲ್ಯಾಂಡ್‌ ಪರ್ವತದಲ್ಲಿ ಭಾರತದ ತ್ರಿವರ್ಣ ಧ್ವಜ! ಬಿ.ಎಲ್‌ ಸಂತೋಷ್‌ ಸುಳ್ಳು ಹೇಳಿದರೆ?

Fact Check: ಸ್ವಿಟ್ಜರ್‌ಲ್ಯಾಂಡ್‌ ಪರ್ವತದಲ್ಲಿ ಭಾರತದ ತ್ರಿವರ್ಣ ಧ್ವಜ! ಬಿ.ಎಲ್‌ ಸಂತೋಷ್‌ ಸುಳ್ಳು ಹೇಳಿದರೆ?

- Advertisement -
- Advertisement -

ಭಾರತದ ಪ್ರಧಾನಿ ಮೋದಿಯವರು ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನು ಹಲವು ದೇಶಗಳಿಗೆ ರಫ್ತು ಮಾಡಿದ ನಂತರ ಭಾರತದ ಈ ಮಹಾನ್ ಕಾರ್ಯಕ್ಕಾಗಿ ಸ್ವಿಟ್ಜರ್‌ಲ್ಯಾಂಡ್‌ ದೇಶವು ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸುವ ಮೂಲಕ ಗೌರವ ಸಲ್ಲಿಸಿದೆ ಎಂಬ ಸುದ್ದಿಯು ಶರವೇಗದಲ್ಲಿ ವೈರಲ್‌ ಆಗಿದೆ.

ಏಪ್ರಿಲ್ 18 ರಂದು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು “ಸ್ವಿಟ್ಜರ್ಲೆಂಡ್‌ನ ಮ್ಯಾಟರ್‌ಹಾರ್ನ್ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜ ಹರಿಬಿಟ್ಟಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನು ರಫ್ತು ಮಾಡಿದ್ದಕ್ಕಾಗಿ ಸ್ವಿಜ್ಟರ್‌ಲ್ಯಾಂಡ್‌ ದೇಶವು ಈ ಗೌರವ ಸಲ್ಲಿಸಿದೆ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಸಂದೇಶವನ್ನು ಪ್ರಸಾರಭಾರತಿ ನ್ಯೂಸ್‌ ಸರ್ವಿಸ್‌ ಸಹ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.

ಟ್ವಿಟ್ಟರ್‌, ಫೇಸ್‌ಬುಕ್‌ ಮತ್ತು ವಾಟ್ಸಾಪ್‌ಗಳಲ್ಲಿ ಈ ಚಿತ್ರ ಸಾಕಷ್ಟು ಬಾರಿ ಹರಿದಾಡಿದೆ. ಇದರೊಂದಿಗೆ ನರೇಂದ್ರ ಮೋದಿಯವರ ಗುಣಗಾನವೂ ಸಹ ಮುಂದುವರೆದಿದೆ.

ಫ್ಯಾಕ್ಟ್‌ ಚೆಕ್‌:

ಸ್ವಿಟ್ಜರ್ಲೆಂಡ್‌ನ ಮ್ಯಾಟರ್‌ಹಾರ್ನ್ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಪ್ರೊಜೆಕ್ಟ್‌ ಮಾಡಿರುವುದು ನಿಜವಾಗಿದೆ. ಆದರೆ ಮೋದಿಯವರು ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನು ರಫ್ತು ಮಾಡಿದ್ದಕ್ಕೆ ಈ ಕ್ರಮ ಎಂಬುದು ಸುಳ್ಳಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಇಂಡಿಯನ್‌ ಎಂಬೆಸ್ಸಿ ಸಹ ಈ ಚಿತ್ರವನ್ನು ಟ್ವೀಟ್‌ ಮಾಡಿದ್ದು ವಿವರಣೆಯನ್ನು ಬರೆದಿದೆ.


ಇದನ್ನೂ ಓದಿ: ಕೊರೊನಾ ಹರಡಲು ನೋಟುಗಳಿಗೆ ಎಂಜಲು ಸವರಿ ರಸ್ತೆಯಲ್ಲಿ ಎಸೆದಿದ್ದಾರೆಯೇ? ವಿಡಿಯೋದ ಅಸಲಿ ಸತ್ಯವೇನು? 


ಕೋವಿಡ್‌ ವಿರುದ್ಧ ಹೋರಾಟುತ್ತಿರುವ ಭಾರತೀಯರಿಗೆ ಸಾಲಿಡಾರಿಟಿ ತೋರಿಸಲು ಈ ಚಿತ್ರವನ್ನು ಪ್ರೊಜೆಕ್ಟ್‌ ಮಾಡಲಾಗಿತು ಎಂದು ಎಂಬೆಸ್ಸಿಯು ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಸ್ಪಷ್ಟವಾಗಿ ಬರೆದಿದೆ.

ಅಲ್ಲಿನ ಪ್ರವಾಸೋಧ್ಯಮ ಇಲಾಖೆಯ ಇನ್ಸಟ್ರಗ್ರಾಂ ಅಕೌಂಟ್‌ನಿಂದಲೂ ಸಹ ಈ ಚಿತ್ರವನ್ನು ಪ್ರಸಾರ ಮಾಡಲಾಗಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಭಾರತಕ್ಕೆ ಧನ್ಯವಾದ ತಿಳಿಸಿದೆ.

ಅಷ್ಟು ಮಾತ್ರವಲ್ಲದೇ ಜೆರ್ಮಾಟ್ ಮ್ಯಾಟರ್‌ಹಾರ್ನ್‌ನ ಪ್ರವಾಸೋದ್ಯಮ ವೆಬ್‌ಸೈಟ್‌ನ ಪ್ರಕಾರ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಹಲವಾರು ದೇಶಗಳ ಧ್ವಜಗಳನ್ನು ಪರ್ವತದ ಮೇಲೆ ಪ್ರೊಜೆಕ್ಟ್‌ ಮಾಡಲಾಗಿದೆ. ಅಂದರೆ ಅಲ್ಲಿ ಕೇವಲ ಭಾರತೀಯ ತ್ರಿವರ್ಣ ಮಾತ್ರವಲ್ಲದೇ ಚೀನಾ, ಅಮೆರಿಕ, ಜಪಾನ್, ಜರ್ಮನಿ, ಬ್ರಿಟನ್, ಸ್ಪೇನ್, ಫ್ರಾನ್ಸ್ ಮತ್ತು ಇಟಲಿಯ ರಾಷ್ಟ್ರೀಯ ಧ್ವಜಗಳೊಂದಿಗೆ ಬೆಳಗಿದ ಪರ್ವತದ ಚಿತ್ರಗಳನ್ನು ನೀವು ನೋಡಬಹುದು.

ಎಲ್ಲಾ ದೇಶಗಳಿಗೂ ಗೌರವ ಸಲ್ಲಿಸಲು ಆ ದೇಶಗಳ ಧ್ವಜಗಳನ್ನು ಪ್ರೊಜೆಕ್ಟ್‌ ಮಾಡಿದಾಗ ನಮ್ಮ ಭಾರತದಲ್ಲಿ ಮಾತ್ರ ನರೇಂದ್ರ ಮೋದಿಯವರ ಆಡಳಿತಕ್ಕೆ, ಅವರು ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನು ಕಳಿಸಿಕೊಟ್ಟಿದ್ದಕ್ಕೆ ಗೌರವ ಸೂಚಿಸಲಾಯಿತು ಎಂಬ ಸುಳ್ಳನ್ನು ಸಹ ಸೇರಿಸಿಕೊಂಡು ಪ್ರಸಾರ ಮಾಡಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್‌


ಇದನ್ನೂ ಓದಿ: ಪ್ರಧಾನಿ ಪರಿಹಾರ ನಿಧಿಯಿಂದ ಹಣ ತೆಗೆಯಲು ಸೋನಿಯಾ ಒಪ್ಪಿಗೆ ಬೇಕೆ? ಅದಕ್ಕಾಗಿ ಮೋದಿ PM CARES ಶುರು ಮಾಡಿದರೆ? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಸುಳ್ಳು ಹೇಳುವುದನ್ನು ಮನುವಾದಿಗಳು ಜನ್ಮಸಿದ್ದ ಹಕ್ಕನ್ನಾಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಲೊಕೇಶನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರುತ್ತದೆ: ಸುಪ್ರೀಂ...

0
ಆರೋಪಿ ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಮೌಖಿಕವಾಗಿ  ಹೇಳಿದೆ. ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಲು...