Homeನಿಜವೋ ಸುಳ್ಳೋಫ್ಯಾಕ್ಟ್‌ಚೆಕ್‌: ನಾಳೆಯಿಂದ ಮತ್ತೆ ಲಾಕ್‌ಡೌನ್‌! ಈ ಸುದ್ದಿ ನಿಜವೇ?

ಫ್ಯಾಕ್ಟ್‌ಚೆಕ್‌: ನಾಳೆಯಿಂದ ಮತ್ತೆ ಲಾಕ್‌ಡೌನ್‌! ಈ ಸುದ್ದಿ ನಿಜವೇ?

- Advertisement -
- Advertisement -

ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಪ್ರತಿ ದಿನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಮತ್ತೆ ಲಾಕ್‌ಡೌನ್‌ ಹೇರಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಭಾರತದಲ್ಲಿ ಸದ್ಯಕ್ಕೆ ಪ್ರಕರಣಗಳ ಸಂಖ್ಯೆ 3ಲಕ್ಷದ 32 ಸಾವಿರಕ್ಕೆ ತಲುಪಿದೆ. ಕಳೆದ ಮೂರು ದಿನಗಳಿಂದಲೂ 11 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜನ ಭಯಭೀತರಾಗಿದ್ದು ಮತ್ತೆ ಲಾಕ್‌ಡೌನ್‌ ಹೇರಬಹುದು ಎಂದು ನಂಬಿದ್ದಾರೆ.

ಕನ್ನಡ ಫ್ಲಾಶ್‌ ನ್ಯೂಸ್‌ ಎನ್ನುವ ಫೇಸ್‌ಬುಕ್‌ ಮತ್ತು ಹೆಲೊ ಆಪ್‌ ಅಕೌಂಟ್‌ನಿಂದ “ಬ್ರೆಕಿಂಗ್‌ ನ್ಯೂಸ್‌’ ನಾಳೆಯಿಂದ ಮತ್ತೆ ಲಾಕ್‌ಡೌನ್‌ ಎಂಬ ಪೋಸ್ಟರ್‌ ಹಂಚಿಕೊಳ್ಳಲಾಗಿದೆ. ಕೊರೊನಾ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ನಾಳೆಯಿಂದ ಲಾಕ್‌ಡೌನ್‌ ಎಂದು ಬರೆಯಲಾಗಿದೆ.

ಕೊರೋನಾ ಸೋಂಕು ಹತೋಟಿಗೆ ಬಾರದ ಹಿನ್ನಲೆಯಲ್ಲಿ ನಾಳೆಯಿಂದ ಲಾಕ್ ಡೌನ್‌ ಜಾರಿಯಾಗಲಿದ್ಯಾ ಎನ್ನುವ ಪ್ರಶ್ನೆ ಕಾಡ್ತಿದೆ.ಈ ಹಿನ್ನಲೆಯಲ್ಲಿ ಇಂದು…

Posted by Kannada Flash News – ಕನ್ನಡ ಫ್ಲಾಶ್ ನ್ಯೂಸ್ on Saturday, June 13, 2020

ಫ್ಯಾಕ್ಟ್‌ಚೆಕ್‌

ದೇಶದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಳವಾಗುತ್ತಿರುವುದು ನಿಜವಾಗಿದೆ. ಅಲ್ಲದೇ ಭಾರತದಾದ್ಯಂತ ಈಗಾಗಲೇ ಲಾಕ್‌ಡೌನ್‌ ಜಾರಿಯಲ್ಲಿದೆ. ಲಾಕ್‌ಡೌನ್‌ ನಿಯಮಾವಳಿಗಳಲ್ಲಿ ಕೆಲವು ಸಡಿಲಿಕೆ ಆಗಿದೆಯೇ ಹೊರತು ಐದನೇ ಹಂತದ ಲಾಕ್‌ಡೌನ್‌ ಈಗ ಜಾರಿಯಲ್ಲಿದೆ. ಇನ್ನು ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿರು ದೆಹಲಿ ರಾಜ್ಯದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರವರು ಈ ಕುರಿತು ಸ್ಪಷ್ಟನೆ ನೀಡಿದ್ದು ನಾಳೆಯಿಂದ ಮತ್ತೆ ಲಾಕ್‌ಡೌನ್‌ ಅನ್ನುವುದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು “ಬಹಳಷ್ಟು ಜನರು ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್‌ ಎಂಬ ವದಂತಿಗಳನ್ನು ಹರಡುತ್ತಿದ್ದಾರೆ. ಅಂತಹ ಯಾವುದೇ ಯೋಜನೆಗಳಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಜೊತೆಗೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಯಾವುದೇ ವಿಶೇಷ ಲಾಕ್‌ಡೌನ್‌ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾರವರು ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಸಿದ್ದಾರೆ. ಅಲ್ಲಿಯೂ ಕೂಡ ಮತ್ತೆ ಲಾಕ್‌ಡೌನ್‌ ಎಂಬ ಯಾವುದೇ ಚರ್ಚೆ ನಡೆಸಿಲ್ಲ. ಗೃಹ ಸಚಿವಾಲಯವು ಈ ಕುರಿತು ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಹಾಗಾಗಿ ಮತ್ತೆ ಲಾಕ್‌ಡೌನ್‌ ಎಂಬುದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ತಾಯಿ ಕಳೆದುಕೊಂಡ ಚಿರತೆ ಮರಿಗೆ ಅಮ್ಮನ ಪ್ರೀತಿ ನೀಡಿದ ಸಾಕಿದ ಹಸು? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...