ದಲಿತ ಮಹಿಳೆ ತಯಾರಿಸಿದ ಆಹಾರ ನಿರಾಕರಿಸಿದ ಯುವಕರು ಎಂಬ ಟೈಟಲ್‌ನಲ್ಲಿ ಜನರನ್ನು ದಿಕ್ಕುತಪ್ಪಿಸಲು ಸಂಬಂಧವಿಲ್ಲದ 2 ಕ್ವಾರಂಟೈನ್ ಸೆಂಟರ್ ಗಳ ಘಟನೆಗಳನ್ನು ಜೋಡಿಸಿರುವ ಸುದ್ದಿ ಇದಾಗಿದೆ.
ಯುವಕನೊಬ್ಬ ಊಟ ಇಟ್ಟಿರುವ ಟೇಬಲ್ ಒಂದನ್ನು ಕಾಲಿನಿದ್ದು ಒದ್ದು ಬೀಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, “ಉತ್ತರ ಪ್ರದೇಶದ ಕ್ವಾರಂಟೈನ್ ಸೆಂಟರ್ ಒಂದರಲ್ಲಿ ಅಡುಗೆ ಮಾಡಿದ್ದು ದಲಿತ ಮಹಿಳೆ ಎಂಬ ಕಾರಣದಿಂದ ಅನ್ನವನ್ನು ಕಾಲಿನಿಂದ ಒದ್ದ ಸಿರಾಜ್ ಅಹ್ಮದ್ ಮತ್ತು ಬುಜೌಲಿ ಕುರ್ದ್ ಎಂಬ ನಾಲಾಯಕ್ಕುಗಳಿಗೆ ಕಾನೂನು ರೀತ್ಯ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಲಾಗಿದೆ. ಈ ಸಂಗತಿ ನಿಜವೇ ಪರಿಶೀಲಿಸೋಣ ಬನ್ನಿ.
ಈ ಪೋಸ್ಟ್ ನ ಆರ್ಕೈವ್ ಆವೃತ್ತಿ ಇಲ್ಲಿದೆ.
ಈ ಪೋಸ್ಟ್ ನ ಆರ್ಕೈವ್ ಆವೃತ್ತಿ ಇಲ್ಲಿದೆ.
ಮಂಡನೆ: ದಲಿತ ಮಹಿಳೆ ಊಟ ತಯಾರಿಸಿದ ಕಾರಣಕ್ಕೆ ಊಟ ನಿರಾಕರಿಸಿದ ಉತ್ತರ ಪ್ರದೇಶ ಮೇಲ್ಜಾತಿ ಯುವಕರು
ನಿಜಾಂಶ: ಈ ವಿಡಿಯೋವನ್ನು ಬಿಹಾರದಲ್ಲಿ ಸೆರೆಹಿಡಿಯಲಾಗಿದೆ. ವಿಡಿಯೋದಲ್ಲಿ ಕಾಣುವ ಯುವಕರು ಅಡುಗೆ ಮಾಡುವ ಮಹಿಳೆಗೆ ಹತ್ತಿರದಿಂದ ಊಟ ಬಡಿಸುವಂತೆ ತಾಕೀತು ಮಾಡಿದ್ದಾರೆ. ಆದರೆ ಅಡುಗೆ ಮಹಿಳೆಯು ಬೇಡಿಕೆಯನ್ನು ನಿರಾಕರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಊಟ ಬಡಿಸುವುದಾಗಿ ತಿಳಿಸಿದ್ದಾಳೆ. ಆಗ ಯುವಕರು ಊಟದ ಟೇಬಲ್ ಅನ್ನು ಕಾಲಿನಿಂದ ಒದ್ದಿದ್ದಾರೆ. ಇದರಲ್ಲಿ ದಲಿತ ದೃಷ್ಟೀಕೋನವಿಲ್ಲ. ಇದಕ್ಕಾಗಿ ಪಂಕಜ್, ಮನೋಜ್ ಮತ್ತು ಅಶೋಕ್ ಎಂಬ ಮೂವರ ಮೇಲೆ ಎಫ್.ಐ.ಆರ್ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸಿರಾಜ್ ಅಹ್ಮದ್, ಉತ್ತರ ಪ್ರದೇಶದ ಬುಜೌಲಿ ಗ್ರಾಮದ ನಿವಾಸಿಯಾಗಿದ್ದು ಅಲ್ಲಿನ ಕ್ವಾರಂಟೈನ್ ಸೆಂಟರ್ ನಲ್ಲಿ ದಲಿತ ಮಹಿಳೆ ಅಡುಗೆ ತಯಾರಿಸಿದ ಕಾರಣಕ್ಕೆ ತಿರಸ್ಕರಿಸಿದ್ದನು. ಹಾಗಾಗಿ ಬಿಹಾರದಲ್ಲಿ ನಡೆದ ಘಟನೆಯ ವಿಡಿಯೋವನ್ನು ಉತ್ತರ ಪ್ರದೇಶದಲ್ಲಿ ನಡೆದಿದ್ದು ಎಂದು ಹಂಚಿಕೊಳ್ಳಲಾಗಿದೆ. ಆದರೂ ಮಂಡನೆಯನ್ನು ಜನರನ್ನು ದಾರಿತಪ್ಪಿಸುತ್ತದೆ.
ಘಟನೆ -1
ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಗೂಗಲ್ ಇಮೇಜ್ ರಿವರ್ಸ್ ಸರ್ಚ್ ಮಾಡಿದಾಗ ಹಲವು ಪತ್ರಿಕಾ ವರದಿಗಳು ತೆರೆದುಕೊಳ್ಳುತ್ತವೆ. ದೈನಿಕ್ ಭಾಸ್ಕರ್ ವರದಿಯಂತೆ ಈ ವಿಡಿಯೋವು ಬಿಹಾರದಲ್ಲಿ ನಡೆದಿದ್ದು, ಮಹಿಳೆಯು ಊಟ ಬಡಿಸುವಾಗ ದೈಹಿಕ ದೂರ ಕಾಪಾಡಿಕೊಂಡಿದ್ದಾರೆ. ವಲಸೆ ಕಾರ್ಮಿಕನಾದ ಪಂಕಜ್ ಕುಮಾರ್ ರೈ, ಮನೋಜ್ ಕುಮಾರ್ ರೈ ಮತ್ತು ಅಶೋಕ್ ಸಾನೆ ಹತ್ತಿರದಿಂದ ಊಟ ಬಡಿಸಲು ಕೇಳಿದ್ದಾರೆ. ಮಹಿಳೆ ನಿರಾಕರಿಸಿದಾಗ ಕೋಪಗೊಂಡ ಯುವಕರು ಊಟದ ಟೇಬಲ್ ಅನ್ನು ಕಾಲಿನಿಂದ ಒದ್ದು ಬೀಳಿಸಿದ್ದಾರೆ. ಜಾಗರಣ್ ಪತ್ರಿಕೆಯ ಲೇಖನದಲ್ಲಿ ಇದು ವರದಿಯಾಗಿದೆ.
ಮತ್ತೊಂದು ಎಬಿಪಿ ಬಿಹಾರ್ ಪತ್ರಿಕೆಯ ಲೇಖನವು ‘ಕಳಪೆ ಗುಣಮಟ್ಟದ ಆಹಾರ’ ಕೊಡುವುದನ್ನು ವಿರೋಧಿಸಿ ಯುವಕ ಊಟದ ಟೇಬಲ್ ಒದ್ದಿದ್ದಾನೆ ಎಂದು ವರದಿ ಮಾಡಿದೆ. ಒಟ್ಟಿನಲ್ಲಿ ಯಾವ ಪತ್ರಿಕೆಗಳು ಸಹ ದಲಿತ ದೃಷ್ಟಿಕೋನವನ್ನು ಉಲ್ಲೇಖಿಸಿಲ್ಲ.
ಘಟನೆ-2
ದಲಿತ ಮಹಿಳೆ ಹಲ್ಲೆ ಎಂಬ ಕೀವರ್ಡ್ ಗಳನ್ನು ಬಳಸಿ ಹುಡುಕಿದಾಗ ಹಲವು ಪತ್ರಿಕಾ ವರದಿಗಳು ಕಂಡುಬಂದಿವೆ. ಔಟ್ ಲುಕ್ ಲೇಖನದಂತೆ, ಕ್ವಾಂರಟೈನ್ ಸೆಂಟರ್ ನಲ್ಲಿ ದಲಿತ ಮಹಿಳೆ ಆಹಾರದ ತಯಾರಿಸಿದ್ದಾರೆ ಎಂಬ ಕಾರಣಕ್ಕೆ ಊಟ ನಿರಾಕರಿಸಿದ 35 ವರ್ಷ ವಯಸ್ಸಿನ ಸಿರಾಜ್ ಅಹ್ಮದ್ ಎಂಬುವವರ ಮೇಲೆ ಖಾಡ್ಡ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಈತ ಉತ್ತರ ಪ್ರದೇಶದ ಖುಷಿ ನಗರ್ ಜಿಲ್ಲೆಯ ಭುಜೌಲಿ ಖುರ್ದ್ ನಿವಾಸಿಯಾಗಿದ್ದು, ದೆಹಲಿಯಿಂದ ಮಾರ್ಚ್ 29 ರಂದು ನಗರಕ್ಕೆ ಹಿಂತಿರುಗಿದ್ದು, ಅಲ್ಲಿನ ಸರ್ಕಾರಿ ಶಾಲೆಯ ಕ್ವಾರಂಟೈನ್ ಸೆಂಟರ್ ನಲ್ಲಿ ನಾಲ್ಕು ಜನರೊಂದಿಗೆ ತಂಗಿದ್ದರು ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದ ಎಫ್.ಐ.ಆರ್ ಪ್ರತಿ ಇಲ್ಲಿದೆ.
ಒಟ್ಟಿನಲ್ಲಿ ಆಹಾರಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಕ್ವಾರಂಟೈನ್ ಸೆಂಟರ್ ನ ಘಟನೆಗಳು ಮಿಶ್ರಿತವಾಗಿ ಜನರನ್ನು ದಾರಿ ತಪ್ಪಿಸಿವೆ.
ಕೃಪೆ: ಫ್ಯಾಕ್ಟ್ಲಿ
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ತಾಯಿ ಕಳೆದುಕೊಂಡ ಚಿರತೆ ಮರಿಗೆ ಅಮ್ಮನ ಪ್ರೀತಿ ನೀಡಿದ ಸಾಕಿದ ಹಸು?