Homeಮುಖಪುಟಸುಶಾಂತ್‌ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು

ಸುಶಾಂತ್‌ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು

ಸುಶಾಂತ್‌ಸಿಂಗ್ ರಜಪೂತ್ ಸಾವು, ಕೇವಲ ಒಂದು ತಿಂಗಳಲ್ಲಿ ಬಾಲಿವುಡ್‌ಅನ್ನು ಬೆಚ್ಚಿಬೀಳಿಸಿದ ಐದನೇ ಘಟನೆ. ತೆರೆಮೇಲೆ ಮಿಂಚಬೇಕಿದ್ದ ನಾಲ್ಕು ಪ್ರತಿಭೆಗಳು, ನೋಡ ನೋಡುತ್ತಿದ್ದಂತೆಯೇ ಆಗಸಕ್ಕೆ ಚಿಮ್ಮಿ ನಕ್ಷತ್ರಗಳಾಗಿ ಮಿನುಗುತ್ತಿವೆ.

- Advertisement -
- Advertisement -

ಸಮಸ್ಯೆ ಎದುರಾದಾಗ ಅದನ್ನ ಎದುರಿಸಿ ನಿಲ್ಲಬೇಕು.. ಗೆಲ್ಲಬೇಕು.. ಅದನ್ನ ಹೊರತು ಸಾವಿಗೆ ಶರಣಾಗೋದು ಪರಿಹಾರವಲ್ಲ.. ಹೀಗಂತ ಛಿಚ್ಚೋರೆ ಸಿನಿಮಾದ ತನ್ನ ಪಾತ್ರದ ಮೂಲಕ ಲಕ್ಷಾಂತರ ಜನರಿಗೆ ಸಂದೇಶ ಸಾರಿದ ಬಾಲಿವುಡ್ ನಟ ಸುಶಾಂತ್‌ಸಿಂಗ್  ರಜಪೂತ್. ಆದರೆ ಅವರೇ ನಿಜಜೀವನದಲ್ಲಿ ಕಷ್ಟಗಳನ್ನು ಎದುರಿಸಲಾಗದೇ, ಸೋಲನ್ನು ಒಪ್ಪಿಕೊಳ್ಳಲಾಗದೇ, ಭವಿಷ್ಯದ ಭಯದಲ್ಲಿ ನೇಣಿಗೆ ಶರಣಾಗಿದ್ದಾರೆ.

ಕೊರೊನಾ ಕಾಲ ನಿಜಕ್ಕೂ ದುರಂತಮಯ. ಬದುಕಿ ಬಾಳಬೇಕಿದ್ದವರನ್ನೆಲ್ಲಾ ಬಲಿ ಪಡೆಯುತ್ತಿದೆ.. ಕಳೆದ ಭಾನುವಾರ ಕನ್ನಡದ ಚಿರಂಜೀವಿ ಸರ್ಜಾ.. ವಯಸ್ಸಲ್ಲದ ವಯಸ್ಸಲ್ಲಿ ವಿಧಿಯಾಟಕ್ಕೆ ಸೋತು ಉಸಿರು ಚೆಲ್ಲಿದರು.. ಈ ವಾರ ಅದೇ ಸಮಯಕ್ಕೆ ಸುಶಾಂತ್‌ಸಿಂಗ್ ರಜಪೂತ್ ಬಾಲಿವುಡ್‌ನ ಸ್ಫುರದ್ರೂಪಿ.. 34 ವರ್ಷದ ಯುವ ನಟ ಬಿ-ಟೌನ್‌ನ ಎಮರ್ಜಿಂಗ್ ಸ್ಟಾರ್. ಇಂತಹ ಈ ನಟ ವಯಸ್ಸಲ್ಲದ ವಯಸ್ಸಲ್ಲಿ ಸಾವಿನ ಮನೆಯ ಬಾಗಿಲು ತಟ್ಟಿದ್ದಾನೆ. ಬಾಳಿ ಬೆಳಗಬೇಕಾದವನು ಪಯಣದ ಅರ್ಧಕ್ಕೇ ಸಾಕೆಂದು ಹೊರಟಿದ್ದಾನೆ.

ಸುಶಾಂತ್‌ಸಿಂಗ್ ರಜಪೂತ್ ಬಿಹಾರದ ಪಾಟ್ನಾ ಮೂಲದವನು. ಕಲಾವಿದನಾಗಬೇಕು ಅಂತ ಮಾಯನಗರಿ ಮುಂಬೈಗೆ ಕಾಲಿಟ್ಟು, ಕಿರುತೆರೆ ಧಾರಾವಾಹಿ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡನು.. ಪವಿತ್ರ ರಿಶ್ತಾ ಧಾರಾವಾಹಿ ಸುಶಾಂತ್‌ನನ್ನ ಭಾರತದಾದ್ಯಂತ ಮನೆ ಮನೆಗೂ ತಲುಪಿಸಿತ್ತು. ಕೆಲವೇ ವರ್ಷಗಳಲ್ಲಿ ಕಿರುತೆರೆಯಲ್ಲಿ ಸೂಪರ್ ಸ್ಟ್ಟಾರ್ ಆದ್ರು ಸುಶಾಂತ್. ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವಾಗಲೇ, ಕಿರುತೆರೆ ರಿಯಾಲಿಟಿ ಶೋಗಳ ನಿರೂಪಕನಾಗಿಯೂ ಜನಮನ ಸೆಳೆದ ಸುಶಾಂತ್, ಅದ್ಭುತ ಡ್ಯಾನ್ಸರ್ ಸಹ ಆಗಿದ್ದರು. ಇನ್ನು ನೋಡಿದ ತಕ್ಷಣ ಹೀರೋ ಮೆಟೆರಿಯಲ್ಲು ಅನಿಸಿಕೊಳ್ಳೋ ಸ್ಫುರದ್ರೂಪ, ಅದ್ಭುತ ಮೈಕಟ್ಟು ಸುಶಾಂತ್‌ಗೆ ಬಾಲಿವುಡ್ ಚಿತ್ರರಂಗ ರೆಡ್ ಕಾರ್ಪೆಟ್ ಹಾಸಿ ಕರೆಯುವಂತೆ ಮಾಡ್ತು. ಅದರಂತೆ 2013ರಲ್ಲಿ ಕಾಯ್ ಪೋಚೆ ಸಿನಿಮಾ ಮೂಲಕ ನಾಯಕ ನಟನಾಗಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.

ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ ಸುಶಾಂತ್, ಅದ್ಭುತ ನಟನೆಯನ್ನ ನೀಡಿದ್ದ. ಆ ನಂತರ ಈ ಚೆಲುವ ಹಿಂತಿರುಗಿ ನೋಡಲೇ ಇಲ್ಲ.. ಸಾಲು ಸಾಲು ಸಿನಿಮಾಗಳು ಸುಶಾಂತ್‌ನನ್ನ ಅರಸಿಬಂದವು.. ಅದರಲ್ಲೂ ಧೋನಿ ಜೀವನಾಧರಿತ ಎಂ.ಎಸ್.ಧೋನಿ ಅನ್ ಟೋಲ್ಡ್ ಸ್ಟೋರಿ ಸುಶಾಂತ್ ಕೆರಿಯರ್‌ನ ಟರ್ನಿಂಗ್ ಪಾಯಿಂಟ್. ಎಂ.ಎಸ್.ಧೋನಿಯಾಗಿ ಮನೋಜ್ಞ ಅಭಿನಯ ನೀಡಿದ್ದ ಸುಶಾಂತ್, ಧೋನಿ ಸಿನಿಮಾದಲ್ಲಿನ ಆತನ ನಟನೆ ನೋಡುವಾಗ, ನಿಜವಾಗಿಯೂ ಧೋನಿಯನ್ನೇ ತೆರೆಮೇಲೆ ನೋಡ್ತಿದ್ದಿವೆನೋ ಎಂಬಂತೆ ಪಾತ್ರವನ್ನ ಆವರಿಸಿಕೊಂಡಿದ್ದ.. ತನ್ನದೇ ಆದ ಸ್ಟೈಲ್‌ನಲ್ಲಿ ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೇಜ್, ಮ್ಯಾನರಿಸಂನಿಂದ ದಿನ ಬೆಳಗಾಗೋ ಅಷ್ಟರಲ್ಲಿ ಸುಶಾಂತ್ ಸೂಪರ್ ಸ್ಟಾರ್ ಆಗಿ ಹೋಗಿದ್ದ.. ಎಷ್ಟೋ ಅಭಿಮಾನಿಗಳು ಸುಶಾಂತ್‌ನನ್ನ ಧೋನಿ ಪಾತ್ರದ ಮೂಲಕವೇ ಗುರುತಿಸುವಂತೆ ಛಾಪು ಮೂಡಿಸಿದ್ದ..

ಧೋನಿ ಸಿನಿಮಾದ ನಂತರ ಸುಶಾಂತ್ ಬದುಕು ಬದಲಾಗಿ ಹೋಗಿತ್ತು.. ದೊಡ್ಡ ದೊಡ್ಡ ಬಜೆಟ್‌ನ ಕಮರ್ಷಿಯಲ್ ಸಿನಿಮಾಗಳು ಸುಶಾಂತ್‌ನ ಆಧರಿಸಿ ನಿರ್ಮಾಣವಾದವು.. ತೆಲುಗಿನ ದೊಡ್ಡ ಸಿನಿಮಾ ಮಗಧೀರ ಬಾಲಿವುಡ್‌ಗೆ ಸುಶಾಂತ್ ನಟನೆಯಲ್ಲಿ ರಿಮೇಕ್ ಆಯ್ತು. ರಾಬ್ತಾ ದೊಡ್ಡ ಮಟ್ಟದ ಯಶಸ್ಸು ಗಳಿಸದಿದ್ದರೂ, ಬಿಡುಗಡೆಗೂ ಮುಂಚೆ ಸಾಕಷ್ಟು ಸೌಂಡ್ ಮಾಡ್ತು.. ಹಾಗೆ ಸುಶಾಂತ್‌ಗೆ ಕೇದಾರ್ನಾಥ್ ಸಿನಿಮಾ ಸಹ ದೊಡ್ಡ ಹೆಸರು ತಂದುಕೊಡ್ತು… ಬಾಕ್ಸಾಫಿಸ್‌ನಲ್ಲಿ ಈ ಸಿನಿಮಾ ಅನಿರೀಕ್ಷಿತ ಯಶಸ್ಸು ಗಳಿಸ್ತು. ಕಳೆದ ವರ್ಷ ಸುಶಾಂತ್ ನಟನೆಯಲ್ಲಿ ಛಿಚ್ಚೋರೆ ಸಿನಿಮಾ ಬಿಡುಗಡೆಯಾಯ್ತು.. ಈ ಸಿನಿಮಾ ಸಹ ಸೂಪರ್‌ ಹಿಟ್ ಎನಿಸಿಕೊಳ್ತು.. ಬಾಕ್ಸಾಫಿಸ್‌ನಲ್ಲಿ ನೂರು ಕೋಟಿ ಹಣ ಗಳಿಸೋ ಮೂಲಕ ಸುಶಾಂತ್‌ಗೆ ಸ್ಟಾರ್ ಪಟ್ಟ ತಂದುಕೊಡ್ತು.. ಸುಶಾಂತ್ ಒಬ್ಬ ಅದ್ಭುತ ನಟ ಅನ್ನೋದ್ರಲ್ಲಿ ಅನುಮಾನನೇ ಇಲ್ಲ.. ಯಾವುದೇ ಪಾತ್ರಕ್ಕೂ ನ್ಯಾಯ ಸಲ್ಲಿಸಬಲ್ಲ ಛಾತಿ ಸುಶಾಂತ್‌ರಲ್ಲಿತ್ತು.. ಆದರೆ ರಿಯಲ್ ಲೈಫ್ ಕ್ಯಾರೆಕ್ಟರ್‌ನ ಅದ್ಬುತ ಮಾಡೋದ್ರಲ್ಲಿ ಸುಶಾಂತ್ ವಿಫಲನಾಗಿದ್ದ..

ಈ ಸಾವು ನ್ಯಾಯವೇ?

ಸಿನಿಮಾ ಸೆಲೆಬ್ರಿಟಿಗಳಿಗೆ, ಅದ್ರಲ್ಲೂ ಸ್ಟಾರ್ ಪಟ್ಟಕ್ಕೇರಿರುವ ಹೀರೋಗಳಿಗೆ ಎಂತಹಾ ಸಮಸ್ಯೆ ಇರಲು ಸಾಧ್ಯ. ಕೈತುಂಬಾ ದುಡ್ಡು, ನೇಮ್, ಫೇಮ್ ಎಲ್ಲವೂ ಇರುತ್ತಲ್ಲಾ ಅನ್ನೋರೇ ಹೆಚ್ಚು. ಆದ್ರೆ ಈ ಸೆಲೆಬ್ರಿಟಿ ಸ್ಟೇಟಸ್, ಸ್ಟಾರ್ ಪಟ್ಟವೇ ಕೆಲವೊಮ್ಮೆ ಜೀವಕ್ಕೆ, ಜೀವನಕ್ಕೆ ಮುಳುವಾಗುತ್ತವೆ. ಬಾಲಿವುಡ್‌ನಲ್ಲಿ ಭವ್ಯ ಭವಿಷ್ಯ ನಿರ್ಮಿಸಿಕೊಳ್ಳುತ್ತಿದ್ದಾಗ, 34ನೇ ವಯಸ್ಸಿನಲ್ಲೇ ಸ್ಟಾರ್ ಪಟ್ಟಕ್ಕೇರಿದಾತ, ಏಳು ವರ್ಷಗಳಲ್ಲಿ 11 ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದಾತ, ತನ್ನ ನಟನೆಯ ಮೂಲಕವೇ ಭಾರತದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾತ, ಒಬ್ಬ ನಟನಿಗೆ ಇನ್ನೆಂತಹಾ ಸಮಸ್ಯೆ ಇರಬಹುದು? ಕೋಟ್ಯಂತರ ಜನರ ಕನಸನ್ನು, ತಾನು ನನಸು ಮಾಡಿಕೊಂಡು ಜೀವಿಸುತ್ತಿದ್ದಾತ ನಟನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಸಂಕಷ್ಟ ಎದುರಾಗಿರಬಹುದು?

ಬಾಲಿವುಡ್ ನಟ ಸುಶಾಂತ್‌ಸಿಂಗ್  ರಜಪೂತ್ ಸಾವು ಇಂತಹ ನೂರೆಂಟು ಪ್ರಶ್ನೆಗಳನ್ನು ಮೂಡಿಸಿದೆ. ಆದರೆ ಕೊರೊನಾ ಕಾಲದಲ್ಲೇ ಯಾರಿಗೇನೂ ಹೇಳದೇ, ತಮ್ಮ ಪಾಡಿಗೆ ತಾವು ಹೊರಟ ಸುಶಾಂತ್‌ರಿAದ ಮಾತ್ರ ಯಾವುದಕ್ಕೂ ಉತ್ತರವಿಲ್ಲ. ಉತ್ತರ ಅಂದ್ರೆ ಅದೊಂದೇ, ಹಾಸಿಗೆ ಮೇಲೆ ಮಲಗಿರುವ ಅವರ ನಿಶ್ಚಲ ದೇಹ. ಬಾಲಿವುಡ್ ಮೂಲಗಳ ಪ್ರಕಾರ ಸುಶಾಂತ್‌ಸಿಂಗ್  ರಜಪೂತ್ ಕೆಲ ತಿಂಗಳಿನಿAದ ಮಾನಸಿಕ ಖಿನ್ನತೆ, ಅರ್ಥಾತ್ ಡಿಪ್ರೆಷನ್ನಿಂದ ಬಳಲುತ್ತಿದ್ದರಂತೆ. ಅದಕ್ಕೆ ಪ್ರಮುಖ ಕಾರಣ ಕಳೆದ ವರ್ಷ ಛಿಛೋರೆ ಹಾಗೂ ಸೋನ್ಚಿಡಿಯಾ ಸಿನಿಮಾಗಳಲ್ಲಿ ಮಿಂಚಿದ್ದ ಅವರ ಬಳಿ ಈಗ ಅವಕಾಶಗಳೇ ಇರಲಿಲ್ಲ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಪ್ರತಿಭಾನ್ವಿತ ನಟ, ಬಾಲಿವುಡ್‌ನಲ್ಲಿ ದೊಡ್ಡ ಸೂಪರ್‌ಸ್ಟಾರ್ ಆಗುವ ಕನಸು ಕಂಡಿದ್ದ ಆಕ್ಟರ್ ಸುಶಾಂತ್. ಅವರು ನಟಿಸಬೇಕಿದ್ದ ಡ್ರೈವ್ ಎಂಬ ಸಿನಿಮಾ ಬಜೆಟ್ ಕಾರಣದಿಂದಾಗಿ ಅರ್ಧಕ್ಕೇ ನಿಂತಿತ್ತು. ಚಂದಾಮಾಮಾ ದೂರ್ ಕೇ ಎಂಬ ಅನೌನ್ಸ್ ಆಗಿದ್ದ ಮತ್ತೊಂದು ಸಿನಿಮಾ ಶುರುನೇ ಆಗಲಿಲ್ಲ. ದಿಲ್ ಬೇಚಾರಾ ಎಂಬ ಚಿತ್ರವನ್ನು ಹೊರತುಪಡಿಸಿದ್ರೆ ಸುಶಾಂತ್‌ಗೆ ಮುಂದೇನು ಅನ್ನೋ ಪ್ರಶ್ನೆಗೆ ಉತ್ತರವಿರಲಿಲ್ಲ.

ಇನ್ನು ನನ್ನ ಕರಿಯರ್ ಮುಗಿದೇಹೋಯ್ತು ಎಂಬ ಆತಂಕದಲ್ಲಿದ್ದ ಅದೇ ಯೋಚನೆಯಲ್ಲಿ ಸುಶಾಂತ್ ಕೆಲ ತಿಂಗಳಿನಿಂದ ಡಿಪ್ರೆಷನ್‌ಗೂ ಜಾರಿದ್ದರು ಎನ್ನಲಾಗಿದೆ. ವಿನಾಕಾರಣ ಸಿಟ್ಟಾಗಿಬಿಡುತ್ತಿದ್ದ ಅವರು ಕೆಲ ಚಿತ್ರತಂಡದವರ ಜತೆ ಜಗಳ ಕೂಡ ಆಡಿದ್ದರಂತೆ. ಇನ್ನು ಚಾಲ್ತಿಯಲ್ಲಿಲ್ಲ ಅನ್ನೋ ಕಾರಣಕ್ಕೆ ಬಾಲಿವುಡ್ ಸೆಲೆಬ್ರಿಟಿಗಳೂ ಸಹ ಸುಶಾಂತ್‌ಗೆ ನಾಟ್ ರೀಚೆಬಲ್ ಆಗಿದ್ದರು ಎನ್ನಲಾಗಿದೆ. ಈ ಎಲ್ಲಾ ಹತಾಶೆಗಳಿಂದ ಸಾಕಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರು ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರಂತೆ.

ಇಷ್ಟು ಸಾಲದು ಎಂಬಂತೆ ಕಳೆದ ಎರಡೂವರೆ ತಿಂಗಳಿನಿಂದ ಕರೊನಾದಿಂದಾಗಿ ಲಾಕ್‌ಡೌನ್ ಘೋಷಿಸಿದ್ದು ಗೊತ್ತೇಯಿದೆ. ಅಲ್ಲಿಗೆ ಮನೆಯಲ್ಲೇ ಮತ್ತಷ್ಟು ಒಂಟಿಯಾಗಿದ್ದಾರೆ. ಅಪ್ಪ ದೂರದ ಪಾಟ್ನಾದಲ್ಲಿದ್ದರೆ, ಮುಂಬೈನ ಮನೆಯಲ್ಲಿ ಸುಶಾಂತ್ ಒಬ್ಬರೇ ಆಗಿದ್ದಾರೆ. ಮೊದಲೇ ಕೆಲಸವಿಲ್ಲ ಎಂಬ ಡಿಪ್ರೆಷನ್ ಅದರ ಜತೆಗೆ ಒಂಟಿತನ, ಅವರನ್ನು ಮತ್ತಷ್ಟು ಘಾಸಿಯಾಗಿಸಿದೆ. ಇನ್ನು ಸುಶಾಂತ್ ಅವರು ತುಂಬಾ ಡಿಸ್ಟರ್ಬ್ ಆಗಿದ್ದರು ಅನ್ನೋಕೆ ಅವರ ಸೋಷಿಯಲ್ ಮೀಡಿಯಾದಲ್ಲಿ ಅವರ ಅನುಪಸ್ಥಿತಿಯೇ ಸಾಕ್ಷಿ. ಲಾಕ್ಡೌನ್ ಸಮಯದಲ್ಲಿ ಎಲ್ಲ ಸೆಲೆಬ್ರಿಟಿಗಳೂ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆದರೆ ಸುಶಾಂತ್ ಅಲ್ಲೂ ಮೌನವಾಗಿದ್ದರು. ಅವರು ಟ್ವಿಟರ್‌ನಲ್ಲಿ ಕೊನೆಯ ಬಾರಿಗೆ ಪೋಸ್ಟ್ ಮಾಡಿರೋದು 6 ತಿಂಗಳ ಹಿಂದೆ. ಅದೂ 2019ರ ಡಿಸೆಂಬರ್‌ನಲ್ಲಿ. ಇನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದ ಕೊನೆಯ ಪೋಸ್ಟ್ ಇದೇ ಜೂನ್ 3ರಂದು. 2002ರಲ್ಲಿ ಮರಣವನ್ನಪ್ಪಿದ್ದ ತಮ್ಮ ತಾಯಿಯನ್ನು ನೆನೆದು ಅವರ ಫೋಟೋ ಶೇರ್ ಮಾಡಿದ್ದರು ಸುಶಾಂತ್.

ಸುಶಾಂತ್‌ಸಿಂಗ್ ರಜಪೂತ್ ಸಾವು, ಕೇವಲ ಒಂದು ತಿಂಗಳಲ್ಲಿ ಬಾಲಿವುಡ್‌ಅನ್ನು ಬೆಚ್ಚಿಬೀಳಿಸಿದ ಐದನೇ ಘಟನೆ. ತೆರೆಮೇಲೆ ಮಿಂಚಬೇಕಿದ್ದ ನಾಲ್ಕು ಪ್ರತಿಭೆಗಳು, ನೋಡ ನೋಡುತ್ತಿದ್ದಂತೆಯೇ ಆಗಸಕ್ಕೆ ಚಿಮ್ಮಿ ನಕ್ಷತ್ರಗಳಾಗಿ ಮಿನುಗುತ್ತಿವೆ. ಅದರಲ್ಲಂತೂ ಸುಶಾಂತ್ ಅಕಾಲಿಕ ಮರಣ ಈ ಸಾವು ನ್ಯಾಯವೇ ಎಂಬ ಉತ್ತರವಿಲ್ಲದ ಪ್ರಶ್ನೆಯನ್ನು ಪದೇ ಪದೇ ಕೇಳುವಂತೆ ಮಾಡಿದೆ.

ಕಳೆದ ಒಂದು ತಿಂಗಳಲ್ಲಿ ನಟ ಇರ್ಫಾನ್ ಖಾನ್, ರಿಶಿ ಕಪೂರ್, ಸಂಗೀತ ನಿರ್ದೇಶಕ ವಾಜಿದ್ ಖಾನ್ ಸಾವುಗಳು ಬಾಲಿವುಡ್‌ಗೆ ಬಿರುಗಾಳಿಯಂತೆ ಅಪ್ಪಳಿಸಿದ್ದವು. ಅದರ ಬೆನ್ನಲ್ಲೇ ಇದೇ ಜೂನ್ 9ರಂದು ಸುಶಾಂತ್ರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಮುಂಬೈನಲ್ಲೇ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಸಹ ಸುಶಾಂತ್ ಕೂಡ ಮೌನವಹಿಸಿದ್ದರು.

ಸೆಲೆಬ್ರಿಟಿಗಳ ಆತ್ಮಹತ್ಯೆಗೆ ಕಾರಣ ಹಲವು?

ಕೆಲ ದಿನಗಳ ಹಿಂದಷ್ಟೇ ಲಾಕ್‌ಡೌನ್‌ನಿಂದಾಗಿ ಕೆಲಸ ಸಿಗದೇ ಇಬ್ಬರು ಬಾಲಿವುಡ್ ನಟ, ನಟಿಯರು ಆತ್ಮಹತ್ಯೆಗೆ ಶರಣಾಗಿದ್ದರು. ಮನ್ಮೀತ್ ಗ್ರೇವಾಲ್ ಹಾಗೂ ಪ್ರೇಕ್ಷಾ ಮೆಹ್ತಾ, ಮುಂದೆ ನಮ್ಮ ಕಥೆ ಮುಗಿದೇ ಹೋಯ್ತು ಅನ್ನೋ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಬಾಲಿವುಡ್‌ನ ಲೆಜೆಂಡರಿ ನಟ ಗುರುದತ್ 1964ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾದಕ ಚೆಲುವೆ ಐಟಂ ಸ್ಪೆಷಲಿಸ್ಟ್ ಸಿಲ್ಕ್ ಸ್ಮಿತಾ ಕೂಡ ನೇಣಿಗೆ ಶರಣಾಗಿದ್ದರು. ಅದೇ ರೀತಿ ಹಲವಾರು ಕಾರಣಗಳಿಗೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು ಬಲಿಯಾಗಿದ್ದಾರೆ. 2019ರಲ್ಲಿ ಬಾಲಿವುಡ್ ನಟ ಕುಶಾಲಿ ಪಂಜಾಬ್ ಕೂಡ ಡಿಪ್ರೆಷನ್ನಿಂದ ಆತ್ಮಹತ್ಯೆಗೆ ಶರಣಾಗಿದ್ದ. ಬಾಲಿವುಡ್ ಹಿರಿಯ ನಟ ಜೀತೇಂದ್ರರ ಸಂಬಂಧಿ ನಿತಿನ್ ಕಪೂರ್ 2017ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕನ್ನಡದಲ್ಲಿ ಮಂಜುಳಾ, ಕಲ್ಪನಾರಂತಹ ದೊಡ್ಡ ನಟಿಯರಿಂದ ಇತ್ತೀಚೆಗೆ ಪ್ರಾಣ ಕಳೆದುಕೊಂಡ ಕಿರುತೆರೆ ನಟಿ ಚಂದನಾವರೆಗೆ ಹಲವರು, ಪ್ರತ್ಯುಷಾ ಬ್ಯಾನರ್ಜೀ, ಸಾಯಿ ಪ್ರಶಾಂತ್, ಶಿಖಾ ಜೋಷಿ, ತಮಿಳು ನಟ ರಂಗನಾಥ್, ಜಿಯಾ ಖಾನ್, ಮಲಯಾಳಂ ನಟರಾದ ಶ್ರೀನಾಥ್ ಮತ್ತು ಸಂತೋಷ್ ಜೋಗಿ, ಕುಣಾಲ್ ಸಿಂಗ್, ಮಯೂರಿ, ಮೋಣಲ್ ನವಲ್.. ಹೀಗೆ ಸಾಗುತ್ತದೆ ಲಿಸ್ಟ್.


ಇದನ್ನೂ ಓದಿ: ಪತ್ರಿಕಾ ನೀತಿ ಧಿಕ್ಕರಿಸಿ ಸುಶಾಂತ್ ಮೃತದೇಹದ ಚಿತ್ರ ಪ್ರಕಟಣೆ ಸಮರ್ಥಿಸಿಕೊಂಡ ’ಗುಜರಾತ್ ಸಮಾಚಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...