Homeಮುಖಪುಟಪಕ್ಷದ ಕುರಿತು ವಿಮರ್ಶಾತ್ಮಕ ಲೇಖನ: ಕಾಂಗ್ರೆಸ್‌ ವಕ್ತಾರ ಸಂಜಯ್‌ ಜಾ ವಜಾ!

ಪಕ್ಷದ ಕುರಿತು ವಿಮರ್ಶಾತ್ಮಕ ಲೇಖನ: ಕಾಂಗ್ರೆಸ್‌ ವಕ್ತಾರ ಸಂಜಯ್‌ ಜಾ ವಜಾ!

- Advertisement -
- Advertisement -

ಪಕ್ಷವನ್ನು ಟೀಕಿಸಿ ಪತ್ರಿಕೆಯೊಂದಕ್ಕೆ ಲೇಖನ ಬರೆದ ಕೆಲ ದಿನಗಳ ನಂತರ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಜಯ್ ಜಾ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ತೆಗೆದುಹಾಕಿದ್ದಾರೆ. ಜೊತೆಗೆ ಅಭಿಷೇಕ್ ದತ್ ಮತ್ತು ಸಾಧನಾ ಭಾರತಿ ಅವರನ್ನು ಕಾಂಗ್ರೆಸ್ ಪರ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್ ಆಗಿ ನೇಮಕ ಮಾಡಲು ಅವರು ಅನುಮೋದನೆ ನೀಡಿದ್ದಾರೆ.

“ಸಂಜಯ್ ಜಾ ಅವರನ್ನು ಎಐಸಿಸಿ ವಕ್ತಾರ ಹುದ್ದೆಯಿಂದ ವಜಾಗೊಳಿಸಲು ತಕ್ಷಣದಿಂದ ಜಾರಿಗೆ ತರಲು ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ” ಎಂದು ಪಕ್ಷದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೆಲವು ದಿನಗಳ ಹಿಂದೆ ಪ್ರಕಟವಾದ ಲೇಖನದಲ್ಲಿ ಜಾ, ಪಕ್ಷವನ್ನು ಹುರಿದುಂಬಿಸಲು ಮತ್ತು ಯಾವುದೇ ತುರ್ತು ಪ್ರಜ್ಞೆಯೊಂದಿಗೆ ಮುನ್ನೆಲೆಗೆ ತರಲು ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ” ಎಂದು ಬರೆದಿದ್ದರು.

“ಈ ನಿರ್ದಾಕ್ಷಿಣ್ಯತೆಯನ್ನು ಗ್ರಹಿಸಲು ಸಾಧ್ಯವಾಗದ ಅನೇಕರು ಪಕ್ಷದಲ್ಲಿದ್ದಾರೆ. ಉದಾಹರಣೆಗೆ, ನನ್ನಂತಹ ಯಾರಾದರೂ ಕಾಂಗ್ರೆಸ್‌ ಅನ್ನು ಗಾಂಧಿ ತತ್ವಶಾಸ್ತ್ರ ಮತ್ತು ನೆಹರೂವಿಯನ್ ದೃಷ್ಟಿಕೋನಕ್ಕೆ ಶಾಶ್ವತವಾಗಿ ಗಂಟುಬಿದ್ದದ್ದರೆ ಅದರ ನೋವಿನ ವಿಘಟನೆಯನ್ನು ನೋಡುವುದರಲ್ಲಿ ಬೇಸರವಿದೆ” ಎಂದು ಅವರು ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರ ಹುದ್ದೆಯಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: 9 ಶಾಸಕರ ಬಂಡಾಯ: ಮಣಿಪುರದಲ್ಲಿ ಬಿಜೆಪಿ ಸರ್ಕಾರ ಪತನಕ್ಕೆ ಕ್ಷಣಗಣನೆ! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...