Homeಸಾಮಾಜಿಕಭಾರತೀಯ ಪುರಾತನ ವೈದ್ಯಶಾಸ್ತ್ರದಲ್ಲಿ ಮಾಂಸದ ಔಷಧಿಗಳು

ಭಾರತೀಯ ಪುರಾತನ ವೈದ್ಯಶಾಸ್ತ್ರದಲ್ಲಿ ಮಾಂಸದ ಔಷಧಿಗಳು

- Advertisement -
- Advertisement -

ಪರಿಮಳಾ ವಾರಿಯರ್ |

ಬಹುಸಂಖ್ಯಾತ ಮಾಂಸಾಹಾರಿಗಳ ದೇಶವಾಗಿರುವ ಭಾರತದಲ್ಲಿ ಮಾಂಸಾಹಾರವನ್ನು ಎರಡನೇ ದರ್ಜೆಯ ಆಹಾರಕ್ರಮವಾಗಿ ನೋಡುವ ರೋಗಪೀಡಿತ ಮನಸ್ಥಿತಿಯನ್ನು ನಿರ್ಮಿಸಲಾಗಿದೆ. ಭಾರತದ ಧಾರ್ಮಿಕತೆ, ನಂಬಿಕೆ, ಸಂಪ್ರದಾಯಗಳನ್ನು ಸಸ್ಯಾಹಾರದ ಮೂಲಕವೇ ಪ್ರಸ್ತುತಪಡಿಸುವ ಕಾಯಿಲೆ ಇವತ್ತು ನಿನ್ನೆಯದಲ್ಲ. ಸಸ್ಯಾಹಾರವೇ ಶ್ರೇಷ್ಠ, ಮಾಂಸಾಹಾರ ಕನಿಷ್ಠ ಎಂಬ ಸುಳ್ಳುಸಿದ್ಧಾಂತವನ್ನು ಜನಗಳ ಮೇಲೆ ಹೇರಿದ ಪರಿಣಾಮವಾಗಿ ಧಾರ್ಮಿಕ ಆಚರಣೆಗಳಲ್ಲಿ ಸಸ್ಯಾಹಾರದ ಶಿಫಾರಸು ಮತ್ತು ಕೆಲವೊಂದು ರಾಷ್ಟ್ರೀಯ ದಿನಾಚರಣೆಗಳು ಮತ್ತು ಹಬ್ಬಗಳಲ್ಲಿ ಮಾಂಸಾಹಾರವನ್ನು ಕಾನೂನಾತ್ಮಕ ವಾಗಿಯೇ ನಿಷೇಧಿಸುವ ಮಟ್ಟಕ್ಕೂ ಸಸ್ಯಾಹಾರದ ವಕಾಲತ್ತುದಾರರು ತಲುಪಿರುವುದು ಈ ದೇಶದ ದುರಂತ.

ದೇಶದ ಮುಕ್ಕಾಲುಪಾಲು ಜನಸಂಖ್ಯೆ ಹೊಂದಿರುವ ದಲಿತ, ಶೂದ್ರ ಮತ್ತು ಬುಡಕಟ್ಟು ವಾಸಿಗಳ ಸಂಪ್ರದಾಯಗಳು ಮಾಂಸಾಹಾರವನ್ನೇ ಅನುಸರಿಸುತ್ತ ಬಂದಿರುವುದು ಮೂಲನಿವಾಸಿ ಭಾರತೀಯರ ಸಂಸ್ಕೃತಿ. ಇದನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಭಾರತದ ಮೂಲಭೂತವಾದಿ ಸನಾತನಿಗಳು ಮೂಲತಃ ಮಾಂಸಾಹಾರಿಗಳ ದೇಶವಾಗಿದ್ದ ಭಾರತದಲ್ಲಿ ಸಸ್ಯಾಹಾರವೇ ಶ್ರೇಷ್ಠ ಎಂದು ಬಡಬಡಿಸುವ ಆತುರದಲ್ಲಿ ಈ ಸನಾತನ ಪರಂಪರೆಯವರು ತಮ್ಮ ಮೂಲ ಇತಿಹಾಸದಲ್ಲೇ ಮಾಂಸಾಹಾರ ಶ್ರೇಷ್ಠವಾಗಿದ್ದುದನ್ನು ಮುಚ್ಚಿಡುತ್ತಾರೆ. ಅವುಗಳನ್ನು ಒಂದೊಂದಾಗಿ ನಾವು ನೋಡಿದರೆ ಈ ಸಸ್ಯಾಹಾರಿ ವಕಾಲತ್ತುದಾರರ ಬಣ್ಣ ಬಯಲಾಗುತ್ತದೆ.

ಪ್ರಾಚೀನ ಭಾರತದ ಔಷಧಶಾಸ್ತ್ರದ ಪಿತಾಮಹನೆಂದು ಕರೆಯಲಾಗುವ ‘ಆಚಾರ್ಯ ಚರಕ’ನು ಬರೆದಿರುವ ಚರಕಸಂಹಿತೆ ವೈದ್ಯಗ್ರಂಥವು ಮನುಷ್ಯನನ್ನು ಕಾಡುವ ನಾನಾ ಬಗೆಯ ರೋಗರುಜಿನಗಳಿಗೆ ಮಾಂಸಾಧಾರಿತ ಔಷಧಿಗಳನ್ನು ಶಿಫಾರಸ್ಸು ಮಾಡುತ್ತದೆ. ಯಾವುದೇ ಬಗೆಯ ಪ್ರಾಣಿಯ ಮಾಂಸವನ್ನು ನೀರಿನಲ್ಲಿ ಕುದಿಸಿ ತಯಾರಿಸುವ ಮಾಂಸರಸ (ಸೂಪ್) ಅನ್ನು ಚರಕನು ಸರ್ವರೋಗ ಪ್ರಸ್ಥಾನಂ (ಎಲ್ಲ ಬಗೆಯ ರೋಗಗಳಿಗೂ ಉತ್ತಮ ಔಷಧಿ) ಎಂದು ಬಣ್ಣಿಸಿದ್ದ್ತಾನೆ. ಮುಂದುವರೆದು ಹೇಳುವ ಚರಕನು ಸೂತ್ರಸ್ಥಾನ ಅಧ್ಯಾಯದಲ್ಲಿ ಹಲವು ಬಗೆಯ ಪ್ರಾಣಿಪಕ್ಷಿಗಳ ಮಾಂಸವು ಹಲವು ಬಗೆಯ ಕಾಯಿಲೆಗಳನ್ನು ತಡೆಯುತ್ತದೆಂದು ಹೇಳುತ್ತಾನೆ. ಅದರಂತೆ ಕಣ್ಣಿನ ಆರೋಗ್ಯ, ಕಿವಿಯ ಆರೋಗ್ಯಕ್ಕಾಗಿ ನವಿಲಿನ ಮಾಂಸವನ್ನೂ, ಧ್ವನಿ ಉತ್ತಮತೆ ಮತ್ತು ದೇಹದ ಶಕ್ತಿವರ್ಧನೆಗಾಗಿ ಬಾತುಕೋಳಿಯ ಮಾಂಸವನ್ನೂ, ಪಿತ್ಥ, ಕಫ ನಿವಾರಣೆಗಾಗಿ ಮತ್ತು ರಕ್ತಶುದ್ಧಿಗಾಗಿ ಗೌಜುಗನಹಕ್ಕಿಯ ಮಾಂಸವನ್ನೂ, ಕೆಮ್ಮಿನ ಉಪಶಮನಕ್ಕಾಗಿ ಗಿಣಿಮಾಂಸವನ್ನೂ, ಪುರುಷರ ವೀರ್ಯವೃದ್ಧಿಗಾಗಿ ಗುಬ್ಬಿಯ ಮಾಂಸವನ್ನೂ ತಿನ್ನಬೇಕೆಂದು ಚರಕ ತನ್ನ ಚರಕಸಂಹಿತೆ ವೈದ್ಯಕೃತಿಯಲ್ಲಿ ಹೇಳುತ್ತಾನೆ.

ಚರಕ ಸಂಹಿತೆಯ ಚಿಕಿತ್ಸಾಸ್ಥಾನದ 11ನೇ ಅಧ್ಯಾಯದಲ್ಲಿ ಮನುಷ್ಯರ ಎದೆನೋವಿಗೆ ಮೇಕೆಯ ಚರ್ಬಿಯ ತೈಲವನ್ನು ಮದ್ಯದೊಡನೆ ಬೆರೆಸಿ ಸೇವಿಸಬೇಕೆಂದು ಹೇಳಲಾಗಿದೆ. ತನ್ನ ಸೂತ್ರಸ್ಥಾನ ಕೃತಿಯಲ್ಲಿ ಮೇಕೆಮಾಂಸದ ಆರೋಗ್ಯಕಾರಿ ಉಪಯೋಗಗಳನ್ನು ವಿವರಿಸುವ ಚರಕನು.. ಮೇಕೆ ಮಾಂಸವು ಸರ್ವಋತುಗಳಲ್ಲೂ ಸೇವಿಸಬಹುದಾದ ಶಕ್ತಿಪುಷ್ಟ ಆಹಾರವಾಗಿದೆ, ಮೇಕೆ ಮಾಂಸವು ಶೀತವೂ ಅಲ್ಲದ ಉಷ್ಣವೂ ಅಲ್ಲದ ಆಹಾರವಾಗಿರುವುದರಿಂದ ಮನುಷ್ಯರ ಆರೋಗ್ಯಕ್ಕೆ ಮೇಕೆಮಾಂಸ ಉಪಯೋಗಕಾರಿಯೆಂದು ಚರಕನು ಬಣ್ಣಿಸಿದ್ದಾನೆ.

ಆಯುರ್ವೇದ ಶಾಸ್ತ್ರವನ್ನು ಎಲ್ಲರೂ ಸಸ್ಯಕೇಂದ್ರಿತ ವೈದ್ಯವಿಜ್ಞಾನವೆಂದು ಇವತ್ತಿಗೂ ತಿಳಿದಿದ್ದಾರೆ. ಅದಕ್ಕೆ ವಿರುದ್ಧವಾಗಿ ಆಯುರ್ವೇದವು ಸಸ್ಯ-ಮಾಂಸ ಆಧರಿತ ಔಷಧಜ್ಞಾನವಾಗಿರುವುದಕ್ಕೆ ಪ್ರಾಚೀನ ಆಯುರ್ವೇದ ಕೃತಿಯಲ್ಲೇ ಸಾಕ್ಷಿಗಳಿವೆ. ಆಯುರ್ವೇದ ವೈದ್ಯಪದ್ಧತಿಯಲ್ಲಿ ಮೇಕೆಮಾಂಸದ ಚರ್ಬಿಯ ತೈಲವನ್ನು ‘ಮಹಾಮಾಂಸ ತೈಲ’ವೆಂದು ಗುರುತಿಸಲಾಗಿದೆ. ಈ ತೈಲವನ್ನು ಹಚ್ಚುವುದರಿಂದ ಲಕ್ವ, ಸ್ನಾಯು ಸೆಳೆತ, ತಲೆನೋವು ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಬಹುದೆಂದು ಆಯುರ್ವೇದ ವೈದ್ಯ ವಿಜ್ಞಾನವು ಪ್ರತಿಪಾದಿಸುತ್ತದೆ. ‘ಅಜಸ್ವಾಗಂಧ ಲೇಹ್ಯಂ’ ಎಂಬ ಮೇಕೆಮಾಂಸದಿಂದ ತಯಾರಿಸಿದ ತೈಲವನ್ನು ದೇಹದಾರ್ಢ್ಯತೆಯನ್ನು ಬೆಳೆಸಿಕೊಳ್ಳಲು ಅತ್ಯವಶ್ಯಕವಾಗಿ ಆಯುರ್ವೇದವು ಶಿಫಾರಸ್ಸು ಮಾಡುತ್ತದೆ. ಆಯುರ್ವೇದದ ‘ಭಾವಪ್ರಕಾಶ’ ಎಂಬ ಅಧ್ಯಾಯದಲ್ಲಿ ಪ್ರಾಣಿಗಳ ಮಾಂಸದ ರಸದ ಉಪಯೋಗಗಳನ್ನು ‘ಪುನರ್ವಾಧ್ಯಾರಿಷ್ಟ’ ಎಂಬ ಹೆಸರಿನಲ್ಲಿ ವಿವರಿಸಲಾಗಿದೆ. ಇದಲ್ಲದೇ ಆಯುರ್ವೇದದ ಬಹಳಷ್ಟು ಔಷಧಿಗಳಲ್ಲಿ ಪ್ರಾಣಿಗಳ ಮಾಂಸವನ್ನು ಬಳಸಿ ತಯಾರಿಸಬೇಕೆಂದು ಆಯುರ್ವೇದವು ಹೇಳುತ್ತದೆ.

‘ಅಮೃತಪ್ರಾತ ಘೃತ’ ಎಂಬ ತುಪ್ಪದ ತಯಾರಿಕೆಯಲ್ಲಿ ಮೇಕೆ ಮಾಂಸವನ್ನು, ರಸಾಯನ ತಯಾರಿಕೆಯಲ್ಲಿ ಹಸುವಿನ ಜಠರದ ಮಾಂಸವನ್ನು, ‘ಅಶ್ವಗಂಧಿ ಲೇಹ್ಯ’ ತಯಾರಿಕೆಯಲ್ಲಿ ಮೇಕೆಮಾಂಸವನ್ನೂ, ‘ಕಸ್ತೂರ್ಯಾದಿ ಗುಳಿಗೆ’, ಕಸ್ತೂರಿ ಭೈರವ ರಸ ಮತ್ತು ಗೋಪಾಲತೈಲ ತಯಾರಿಕೆಯಲ್ಲಿ ಕಸ್ತೂರಿ ಮೃಗದ ಮಾಂಸವನ್ನೂ, ‘ಕಾಮದೂಧ ರಸ’ ತಯಾರಿಕೆಯಲ್ಲಿ ಶಂಖು ಹುಳುವಿನ ಮಾಂಸವನ್ನೂ, ಶೃಂಗಭಸ್ಮ ತಯಾರಿಕೆಯಲ್ಲಿ ಜಿಂಕೆಯ ಕೊಂಬನ್ನೂ ಚುಕ್ಕುಂತಿಪಲ್ಯಾಡಿ ಗುಳಿಗೆ ತಯಾರಿಯಲ್ಲಿ ಕಾಡುಬೆಕ್ಕಿನ ವೀರ್ಯವನ್ನೂ ಬಳಸಬೇಕೆಂದು ಆಯುರ್ವೇದ ಹೇಳುತ್ತದೆ. ಜೊತೆಗೆ ಮಾಂಸಾಹಾರವನ್ನು ಬೆಳಗಿನ 11ರಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಸೇವಿಸಿದರೆ ಒಳ್ಳೆಯದೆಂದು ಮಾಂಸಾಹಾರವನ್ನು ಪ್ರೋತ್ಸಾಹಿಸುವ ಆಯುರ್ವೇದವು ಈ ಸಮಯದಲ್ಲಿ ಅಗ್ನಿದೇವನ ಶಕ್ತಿ ಹೆಚ್ಚಿರುವುದರಿಂದ ಜೀರ್ಣಶಕ್ತಿಗೆ ಅನುಕೂಲಕರವೆಂದು ಹೇಳುತ್ತದೆ. ಪ್ರಾಚೀನ ಆಯುರ್ವೇದವೇ ಹೇಳುವಂತೆ ಕೋಳಿ ಮತ್ತು ಮೀನಿನ ಸೇವನೆಯಿಂದ ವಾತದೋಷ ನಿವಾರಣೆಯಾಗುತ್ತದೆ, ಹಂದಿಮಾಂಸದ ಸೇವನೆಯಿಂದ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು, ಸ್ನಾಯು ಮತ್ತು ನರ ಸಂಬಂಧಿತ ಕಾಯಿಲೆಗಳಿಗೆ ಗೋಮಾಂಸ ಸೇವನೆ ಉಪಕಾರಿಯೆಂಬ ಆರೋಗ್ಯ ಸಲಹೆಗಳನ್ನು ಆಯುರ್ವೇದ ನೀಡುತ್ತದೆ.

ಪ್ರಾಚೀನ ಸಮಾಜದ ಕಾನೂನುಮಾಪನವಾಗಿ ಗುರುತಿಸಲ್ಪಟ್ಟಿದ್ದ ಮನುಧರ್ಮಶಾಸ್ತ್ರವು ಮಾಂಸಾಹಾರಕ್ಕೆ ವಿರೋಧಿಯಾಗಿಲ್ಲ. ಇದಕ್ಕೆ ಮನುಶಾಸ್ತ್ರದ ಕೆಲವೊಂದು ಶ್ಲೋಕಗಳೇ ಉದಾಹರಣೆಯಾಗಿವೆ. ಮನುಸ್ಮೃತಿಯ 5ನೇ ಅಧ್ಯಾಯದ 28ನೇ ಶ್ಲೋಕವು ‘ಜಗತ್ತಿನ ಸೃಷ್ಟಿಕರ್ತನಾದ ಪ್ರಜಾಪತಿಯು ಜೀವ ಇರುವ ಜೀವಗಳು ಆಹಾರವಾಗಿ ಬಳಸಲೆಂದು ಎಲ್ಲವನ್ನೂ ಸೃಷ್ಟಿಸಿದ್ದಾನೆ’ ಎನ್ನುತ್ತದೆ. ಇದೇ ಅಧ್ಯಾಯದ 32ನೇ ಶ್ಲೋಕವು ‘ದೇವರಿಗೆ ಪ್ರಸಾದವಾಗಿ ಅರ್ಪಿಸಿದ ಪ್ರಾಣಿಗಳ ಮಾಂಸವನ್ನು ಮನುಷ್ಯರು ತಿನ್ನುವುದು ತಪ್ಪಾಗುವುದಿಲ್ಲ’ ಎನ್ನುತ್ತದೆ. ಆ ಕಾಲಘಟ್ಟದಲ್ಲಿ ಸರ್ವೇ ಸಾಧಾರಣವಾಗಿದ್ದ ಮಾಂಸಾಹಾರವು ಆಹಾರಕ್ರಮದಲ್ಲಿ, ದೇವರಪೂಜೆಯಲ್ಲಿ, ಔಷಧಿಯ ರೂಪದಲ್ಲಿಯೂ ಬಳಕೆಯಾಗುತ್ತಿದ್ದವು ಎನ್ನುವುದಕ್ಕೆ ಮನುಸ್ಮೃತಿಯ ಈ ಉಲ್ಲೇಖಗಳೇ ಸಾಕ್ಷಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...