Homeಮುಖಪುಟ'ಯುದ್ಧ ಮತ್ತು ಮಕ್ಕಳು': ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

‘ಯುದ್ಧ ಮತ್ತು ಮಕ್ಕಳು’: ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ.

- Advertisement -
- Advertisement -

ಎರಡನೇ ವಿಶ್ವಯುದ್ಧದ ಕಾಲದಲ್ಲಿ ಆ್ಯನಿ ಫ್ರಾಯ್ಡ್ (ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಮಗಳು) ಮತ್ತು ಅವಳ ಆತ್ಮೀಯರಾದ ಡೊರೋಥಿ ಬರ್ಲಿಂಗ್ ಹ್ಯಾಮ್ ಇಬ್ಬರೂ ಕೂಡಿ ತಮ್ಮ ಸಾಂದರ್ಭಿಕ ಅಧ್ಯಯನದ ಫಲವಾಗಿ ‘ವಾರ್ ಆ್ಯಂಡ್ ಚಿಲ್ಡ್ರನ್’ ಪ್ರಕಟಿಸಿದರು. ನಾಜೀ ಜರ್ಮನಿಯ ಆಕ್ರಮಣಕ್ಕೆ ತುತ್ತಾದ ಇಂಗ್ಲೆಂಡಿನ ಮಕ್ಕಳು ತಮ್ಮ ಪೋಷಕರಿಂದ ಅಗಲಬೇಕಾದ ವ್ಯಥೆಯ ವಾಸ್ತವ ದಾಖಲೆ ಅದು. ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಯುದ್ಧ ಕಾಲದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತತ್ಕಾಲದ ಆಶ್ರಯವನ್ನು ನೀಡುವಂತಹ ವಾರ್ ನರ್ಸರಿಗಳಲ್ಲಿ ಕೆಲಸ ಮಾಡಿದ್ದರು. ಈ ಪುಸ್ತಕಕ್ಕೆ ಆ ಅನುಭವದ ಹಿನ್ನೆಲೆ ಇತ್ತು.

1936ರಲ್ಲಿ ಸ್ಪೇನ್ ದೇಶದ ಆಕ್ರಮಣಕ್ಕೆ ಮಕ್ಕಳು ತುತ್ತಾದಾಗಿನಿಂದ ಅಂತಹ ಮಹಾಯುದ್ಧಗಳ ಕಾಲದಲ್ಲಿ ಮಕ್ಕಳಿಗೆ ಪೋಷಣೆ ಮಾಡುವ ಸಾಕು ತಂದೆ ತಾಯಿಗಳನ್ನು ಗುರುತಿಸುವ ಮತ್ತು ಅವರಿಗೆ ಯೋಜನೆಗಳನ್ನು ರೂಪಿಸುವಂತಹ ಕೆಲಸಗಳು ನಡೆಯುತ್ತಿತ್ತು. ನಂತರ ಅದೇ ರೀತಿಯಲ್ಲಿ ಆ್ಯನಿ ಮತ್ತು ಬರ್ಲಿಂಗ್ ಹ್ಯಾಮ್ ಇಬ್ಬರೂ ಫ್ರೆಂಚ್, ಪೋಲಿಶ್, ಡಚ್ ಮತ್ತು ಬೆಲ್ಜಿಯನ್ ಮಕ್ಕಳ ಆರೈಕೆಗಾಗಿ ಫ್ರಾನ್ಸಿನಲ್ಲಿ ಕೆಲಸ ಮಾಡಿದರು. ಫ್ರಾನ್ಸಿನ ಪತನದ ನಂತರ ಅದೇ ಬಗೆಯ ಯುದ್ಧ ಕಾಲದ ಶಿಶುವಿಹಾರದ ಕೆಲಸವನ್ನು ಇಂಗ್ಲೆಂಡಿನಲ್ಲಿ ಮಾಡತೊಡಗಿದರು.

ವಾರ್ ನರ್ಸರಿಯಲ್ಲಿ 20,000ಕ್ಕೂ ಹೆಚ್ಚಿನ ಮಕ್ಕಳನ್ನು ಅಧ್ಯಯನ ಮಾಡಲಾಯಿತು. ಆ್ಯನಿಯ ಸಿಬ್ಬಂದಿಗಳಿಗೆಲ್ಲಾ ಇದೇ ಕೆಲಸ. ಆ್ಯನಿ ಮತ್ತು ಡೊರೋಥಿ ಇಂಗ್ಲೆಂಡಿನಲ್ಲಿ ಮೂರು ವಾರ್ ನರ್ಸರಿಗಳಿಗೆ ಮತ್ತು ಸಾಕು ಪೋಷಕರ ಯೋಜನೆಗೆ ನಿರ್ದೇಶಕರಾಗಿದ್ದರು.

ಯುದ್ಧ ಮತ್ತು ಮಕ್ಕಳು: ಈ ಕೃತಿ ಮನಶಾಸ್ತ್ರದಲ್ಲಿ ತುಂಬಾ ಗಮನೀಯವಾದ ಸ್ಥಾನವನ್ನು ಪಡೆಯುತ್ತದೆ. ಏಕೆಂದರೆ ಯುದ್ಧದ ಸಂಕಷ್ಟದಲ್ಲಿ ನೊಂದ ಮಕ್ಕಳ ಕಥನವನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ಇದರಲ್ಲಿ ದಾಖಲಿಸಲಾಗಿದೆ. ಮಕ್ಕಳ ಮೇಲಾಗುವ ಆಧುನಿಕ ಕಾಲದ ಯುದ್ಧದ ಪ್ರಭಾವಗಳನ್ನು ಮನಶಾಸ್ತ್ರೀಯ ಶಿಸ್ತಿನಲ್ಲಿ ಅಧ್ಯಯನ ಮಾಡಲಾಗಿದೆ.

ಯುದ್ಧಕ್ಕೆ ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕೃತಿಕ, ಪ್ರತೀಕಾರ ಮತ್ತು ವಾಣಿಜ್ಯ ಹೀಗೆ ಹಲವು ಕಾರಣಗಳಿವೆ. ಕಾರಣ ಯಾವುದೇ ಇದ್ದರೂ ಅದು ಹುಟ್ಟಿ ಹಾಕುವುದು ಹಿಂಸೆ, ನೋವು ಮತ್ತು ಹತಾಶೆ. ಇದು ಮಾನವ ಸಂಬಂಧದ ಬೆಸುಗೆಯನ್ನು ಅವಮಾನಿಸುವುದಲ್ಲದೇ, ಸಂಬಂಧಗಳ ಬೆಳವಣಿಗೆಗೆ ಮರ್ಮಾಘಾತವನ್ನು ನೀಡುತ್ತದೆ. ಹೂವಿನಂತೆ ಮನಸ್ಸು ಮತ್ತು ಮಾನುಷ ಸಂಬಂಧಗಳು ಅರಳುವ ಬದಲು ಕೆರಳುತ್ತವೆ ಮತ್ತು ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಯುದ್ಧದ ನಕಾರಾತ್ಮಕವಾದ ಪರಿಣಾಮವು, ನೇರವಾಗಿ ಅದರಲ್ಲಿ ಭಾಗಿಯಾಗುವವರ ಮೇಲಾಗುವುದಕ್ಕಿಂತ, ಸಮಾಜದ ಸೂಕ್ಷ್ಮ ಸಂವೇದನೆಯ ಸಮೂಹವಾದ ಮಹಿಳೆಯರ ಮತ್ತು ಮಕ್ಕಳ ಮೇಲೆ ಬಹಳ ಆಕ್ರಮಣಕಾರಿಯಾಗಿರುತ್ತದೆ. ಯಾವುದೇ ಸಮಾಜದ ಸಂತತಿ ಅಥವಾ ಪೀಳಿಗೆಯ ಸೃಷ್ಟಿ, ಉಳಿಕೆ, ಬಾಳಿಕೆ ಮತ್ತು ಮುಂದುವರಿಕೆಯು ಮಹಿಳೆಯರು ಮತ್ತು ಮಕ್ಕಳ ಮೇಲೆ ಅವಲಂಬಿತವಾಗಿರುವುದರಿಂದ ಅವರು ಯುದ್ಧದ ಪರಿಣಾಮವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಗಂಭೀರವಾಗಿ ಗಮನಿಸಬೇಕು ಎಂದು ಆ್ಯನಿ ಫ್ರಾಯ್ಡ್ ಒತ್ತಿ ಹೇಳುತ್ತಾರೆ. ಹಾಗಾಗಿ ಸಮಾಜದಲ್ಲಿ ಸೂಕ್ಷ್ಮವಾಗಿರುವ ಈ ಸಮೂಹದ ಭದ್ರತೆಗೆ ಮತ್ತು ಅವರ ಅಗತ್ಯಗಳಿಗೆ ಕೆಲಸ ಮಾಡುವವರ ಅವಶ್ಯಕತೆ ಯುದ್ಧಕಾಲದಲ್ಲಿ ಹೆಚ್ಚಿರುತ್ತದೆ.

ಯುದ್ಧ ಕಾಲದಲ್ಲಿ ತಂದೆ ಇಲ್ಲದ ಮಕ್ಕಳು ಹಾಸುಗೆ ಹಿಡಿದಿರುವ ತಾಯಂದಿರನ್ನು ನೋಡಿಕೊಳ್ಳಬೇಕಾದ ಅಗತ್ಯಗಳು ಬಂದಿದ್ದರಿಂದ ಅವರ ಮಾನಸಿಕ ಒತ್ತಡವು ಅನೇಕ ಕಾರಣಗಳಿಂದ ಹೆಚ್ಚಾಗುತ್ತಿತ್ತಿತ್ತು. ಪುನರಾವರ್ತಿತ ವೈಮಾನಿಕ ದಾಳಿಗಳಿರಬಹುದು, ಆರ್ಥಿಕ ಮುಗ್ಗಟ್ಟು, ಸಂಪರ್ಕ ಸಾಧಿಸಲಾಗದಂತಹ ಸಮಸ್ಯೆ, ಆಹಾರ ಮತ್ತು ವೈದ್ಯಕೀಯ ಅಗತ್ಯಗಳ ಕೊರತೆ, ಇತ್ಯಾದಿ ಸಮಸ್ಯೆಗಳು ಹಾಗೂ

ಆತ್ಮೀಯರನ್ನು ಮತ್ತು ಎಳೆವಯದಲ್ಲಿ ಆಧಾರವಾಗಿರುವವರನ್ನು ಕಳೆದುಕೊಳ್ಳುವ ಮಕ್ಕಳಿಗೆ ಮಾನಸಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಆಘಾತವನ್ನು ಉಂಟುಮಾಡುತ್ತಿತ್ತು.

ಆ್ಯನಿ ಹೇಳುವುದೇನೆಂದರೆ, ಯುದ್ಧ ಕಾಲದಲ್ಲಿ ಮಕ್ಕಳಿಗೆ ಉಂಟಾಗುವ ಆತಂಕ, ಒತ್ತಡ, ಸಮಸ್ಯೆ ಇತ್ಯಾದಿಗಳನ್ನು ವಿಶ್ಲೇಷಣೆ ಮಾಡುವ ಬದಲು ಮಕ್ಕಳ ಅಭಿವೃದ್ಧಿಗೆ, ಅವರ ಅಗತ್ಯಗಳ ಪೂರೈಗೆಗೆ ಮತ್ತು ಅವರ ರಕ್ಷಣೆಗೆ ಸತತವಾಗಿ ಕೆಲಸವನ್ನು ಮಾಡುವ, ಆ ಧ್ಯೇಯೋದ್ದೇಶಕ್ಕೆ ಬದ್ಧವಾಗಿರುವಂತಹ ಶಿಶು ಮತ್ತು ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆಗೆ ಆದ್ಯತೆ ಕೊಡಬೇಕು. ಅಥವಾ ಅಸ್ತಿತ್ವದಲ್ಲಿರುವ ಅಂತಹ ಕೇಂದ್ರಗಳ ಬಲ ಸಂವರ್ಧನೆಗೆ ಮುಂದಾಗಬೇಕು. ಅದಕ್ಕೆ ಹಣದ ಅಗತ್ಯವಿರುತ್ತದೆ. ಅದರ ಜೊತೆಗೆ ಬಹಳ ಮುಖ್ಯವಾಗಿ ಸೂಕ್ಷ್ಮ ಸಂವೇದನೆಯುಳ್ಳ, ವೃತ್ತಿಪರತೆಯುಳ್ಳ, ಸೂಕ್ಷ್ಮಗ್ರಾಹಿಗಳಾದ, ವೃತ್ತಿಯಲ್ಲಿ ಕೌಶಲ್ಯವುಳ್ಳಂತಹ ನಿಪುಣರು, ಮಕ್ಕಳನ್ನು ಪ್ರೀತಿಸುವವರು ಬೇಕಾಗಿರುತ್ತಾರೆ. ಸಮಾಜದ ವ್ಯವಸ್ಥೆಯಲ್ಲಿ ಎಂತಹುದೇ ಏರುಪೇರುಗಳಾದರೂ ಯಾವುದೇ ಕಾರಣಕ್ಕೂ ಮಕ್ಕಳ ಸಮೂಹವನ್ನು ನಿರ್ಲಕ್ಷಿಸಬಾರದು.

ನಿಗದಿತ ಅಥವಾ ಸೀಮಿತವಾದ ಆರ್ಥಿಕ ಮತ್ತು ಇತರ ಸಂಪನ್ಮೂಲಗಳಲ್ಲಿ ಇಂತಹ ಕೇಂದ್ರಗಳನ್ನು ಹೇಗೆ ನಿಭಾಯಿಸಬಹುದೆಂಬ ಕೌಶಲ್ಯವನ್ನೂ ಅಧ್ಯಯನ ಸೂಚಿಸುತ್ತದೆ. ಇವರ ಅಧ್ಯಯನದ ವ್ಯಾಪ್ತಿಗೆ ಒಳಪಟ್ಟ ಮಕ್ಕಳು ಒಂದು ವಾರದ ಮಗುವಿನಿಂದ ಹಿಡಿದು ಹದಿನಾಲ್ಕು ವರ್ಷದವರೆಗೂ ಇದ್ದರು.

ಓರ್ವ ದಾದಿ ಶೂ ರಿಪೇರಿ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳುವುದರಿಂದ ಹಿಡಿದು, ಮಗುವೊಂದು ಗೊಂಬೆಗಳನ್ನು ಮಾಡುವ ಯೋಜನೆಯವರೆಗೂ ಸಾಮೂಹಿಕ ಚಟುವಟಿಕೆಗಳು ವ್ಯವಸ್ಥಿತವಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಆರೋಗ್ಯ ಕಾರ್ಯಕ್ರಮ, ರೋಗ ನಿರೋಧಕ ಕಾರ್ಯಕ್ರಮಗಳು, ತರಕಾರಿಗಳ ತೋಟ, ದಾಖಲೆಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೆಲಸ, ಸಾರಿಗೆ ಮತ್ತು ಸಂಪರ್ಕ; ಇಂತಹವನ್ನೆಲ್ಲಾ ರೂಢಿಸುವುದರ ಜೊತೆಗೆ ವ್ಯಕ್ತಿಯು ಸಾಮಾಜಿಕವಾಗಿ ಬೆರೆಯುವ, ಸಮುದಾಯದ ಸೇವೆಯನ್ನು ತನ್ನ ಏಳ್ಗೆಗೂ, ತನ್ನ ಪ್ರತಿಭೆ ಮತ್ತು ಕೌಶಲ್ಯಗಳನ್ನು ಸಾಮುದಾಯಕ ಬೆಳವಣಿಗೆಗೆ ಸಲ್ಲಿಸುವುದನ್ನೂ ಕೂಡಾ ರೂಢಿಸಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಸಂಪೂರ್ಣ ಅನಾಥರಾಗಿರುವ ಮಕ್ಕಳನ್ನು ಒಳಗೊಳ್ಳುವಂತಹ ಕುಟುಂಬಗಳನ್ನು ರಚಿಸುವುದೂ ಕೂಡಾ ಅಲ್ಲಾಗಿತ್ತು. ಸಮಾಜದಲ್ಲಿ ಏನೇ ಏರುಪೇರಾದರೂ ತನ್ನನ್ನು ತಾನು ಮಾನಸಿಕವಾಗಿ, ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ಗುಣ ಪಡಿಸಿಕೊಳ್ಳುವ ಮತ್ತು ಸಶಕ್ತನನ್ನಾಗಿಸಿಕೊಳ್ಳುವ ಕುಶಲತೆಗೆ ಆ ಕೇಂದ್ರಗಳಲ್ಲಿ ಪ್ರಾಶಸ್ತ್ಯ ಕೊಡಲಾಗಿತ್ತು.

ಹಾಗಾಗಿ ಈ ಕೃತಿ ಆಗಿನ ಯುದ್ಧದ ಸಮಯದ್ದಾದರೂ ಅನೇಕ ವಿಷಯಗಳಲ್ಲಿ ಪ್ರಸ್ತುತಕ್ಕೂ ಅನ್ವಯವಾಗುತ್ತದೆ. ಬಹಳ ಮುಖ್ಯವಾಗಿ ಇದನ್ನು ಕೇಸ್ ಸ್ಟಡಿಗಳನ್ನು ಆಧರಿಸಿ ಬರೆದಿದ್ದು, ಮಗುವು ವ್ಯಕ್ತಿಯಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಅಗತ್ಯವಾದ ಮನಶಾಸ್ತ್ರೀಯ ಒಳನೋಟಗಳನ್ನು, ತಾತ್ವಿಕವಾದ ಸೂಕ್ಷ್ಮ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತದೆ.

  • ಯೋಗೇಶ್ ಮಾಸ್ಟರ್

ಇದನ್ನೂ ಓದಿ: ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...