Homeನಿಜವೋ ಸುಳ್ಳೋಅಮ್ಮ ಆರೋಗ್ಯವಾಗಿದ್ದಾರೆ; ಸುಳ್ಳು ಸುದ್ದಿ ಹಬ್ಬಿಸದಿರಿ: ಹಿನ್ನಲೆ ಗಾಯಕಿ ಎಸ್. ಜಾನಕಿ ಪುತ್ರ ಸ್ಪಷ್ಟನೆ

ಅಮ್ಮ ಆರೋಗ್ಯವಾಗಿದ್ದಾರೆ; ಸುಳ್ಳು ಸುದ್ದಿ ಹಬ್ಬಿಸದಿರಿ: ಹಿನ್ನಲೆ ಗಾಯಕಿ ಎಸ್. ಜಾನಕಿ ಪುತ್ರ ಸ್ಪಷ್ಟನೆ

- Advertisement -
- Advertisement -

ಜನಪ್ರಿಯ ಹಿನ್ನೆಲೆ ಗಾಯಕಿ ಎಸ್.ಜಾನಕಿ (82) ನಿಧನರಾದರು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು, ಇದು ಸುಳ್ಳು ಸುದ್ದಿ ಎಂದು ಅವರ ಮಗ ಮುರಳಿ ಕೃಷ್ಣ ಸ್ಪಷ್ಟ ಪಡಿಸಿದ್ದಾರೆ.

ಎಸ್. ಜಾನಕಿ ಅವರು ಸುಮಾರು 60 ವರ್ಷಗಳ ಕಾಲದಿಂದ ಚಿತ್ರರಂಗದಲ್ಲಿದ್ದು, 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ವಯಸ್ಸಾದ ಕಾರಣ ಅವರು ಹಾಡುವುದನ್ನು ನಿಲ್ಲಿಸಿದ್ದರು.

ಪ್ರಸ್ತುತ ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ಅವರ ಆರೋಗ್ಯದ ಬಗ್ಗೆ ಕಿಡಿಗೇಡಿಗಳು ಪದೇ ಪದೇ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ

ಜನಕಿಯ ಅವರು ಮಗ ಮುರಳಿ ಕೃಷ್ಣ ಮಾತನಾಡಿ “ತಾಯಿಗೆ ಸಣ್ಣ ಆಪರೇಷನ್ ಇದೆ. ಸದ್ಯ ಅವರು ಆರೋಗ್ಯವಾಗಿದ್ದಾರೆ. ದಯವಿಟ್ಟು ಕೆಟ್ಟ ಸುದ್ದಿ ಹರಡಬೇಡಿ, ಅಮ್ಮ ಚೆನ್ನಾಗಿಯೇ ಇದ್ದಾರೆ” ಎಂದು ಹೇಳಿದ್ದಾರೆ.

ಯುವ ಗಾಯಕರಿಗೆ ಸ್ಪೂರ್ತಿಯಾಗಿರುವ ಇವರನ್ನು “ಜಾನಕಿ ಅಮ್ಮ” ಎಂದೇ ಗೌರವದಿಂದ ಕರೆಯುತ್ತಾರೆ. 1957 ರಲ್ಲಿ ‘ಕೊಂಜುಮ್ ಸಲಂಗೈ’ ಚಿತ್ರದ “ಸಿಂಗರವೆಲೆನ್ ದೇವಾ” ಹಾಡಿನೊಂದಿಗೆ ತಮಿಳಿನ ಅತ್ಯಂತ ಪ್ರೀತಿಯ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದ ಜಾನಕಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 2017 ರಲ್ಲಿ ಅವರು ವಯಸ್ಸಿನ ಕಾರಣಕ್ಕೆ ಹಾಡುವುದನ್ನು ನಿಲ್ಲಿಸಿದ್ದರು.


ಓದಿ: ತಮಿಳುನಾಡು ಲಾಕಪ್ ಡೆತ್: ಪ್ರಕರಣವನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...